tag:blogger.com,1999:blog-2802103225554897449.post2287847728364231323..comments2023-03-20T11:34:12.640+01:00Comments on ಬಿಸಿಲ ಹನಿ: ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ?ಬಿಸಿಲ ಹನಿhttp://www.blogger.com/profile/10676488826070757159noreply@blogger.comBlogger6125tag:blogger.com,1999:blog-2802103225554897449.post-87000932252908688442009-02-08T11:57:00.000+01:002009-02-08T11:57:00.000+01:00ಸುನಾಥ್ ಸರ್,ನೀವು ಹೇಳಿದಂತೆ ವಿಷಯ ಜ್ಞಾನವಿದ್ದರೆ ಸಾಲದು ಅ...ಸುನಾಥ್ ಸರ್,
ನೀವು ಹೇಳಿದಂತೆ ವಿಷಯ ಜ್ಞಾನವಿದ್ದರೆ ಸಾಲದು ಅದನ್ನು ಪ್ರಸ್ತುತ ಪಡಿಸುವ ಕಲೆಯೂ ಇರಬೇಕಾಗುತ್ತದೆ. ಎಂದಿನಂತೆ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-34929953288143794442009-02-08T11:52:00.000+01:002009-02-08T11:52:00.000+01:00ಚಂದ್ರಕಾಂತ ಮೇಡಂ,ಹೌದು,ನೀವು ಹೇಳಿದಂತೆ ನನ್ನ ಬ್ಲಾಗನ್ನು ಕ...ಚಂದ್ರಕಾಂತ ಮೇಡಂ,
ಹೌದು,ನೀವು ಹೇಳಿದಂತೆ ನನ್ನ ಬ್ಲಾಗನ್ನು ಕೆಂಡಸಂಪಿಗೆಯಲ್ಲಿ ಚನ್ನಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಅದಕ್ಕೆ ಕೆಂಡಸಂಪಿಗೆಯ ಸಂಪಾದಕರಿಗೂ ಹಾಗೂ ಅದನ್ನು ಪರಿಚಯಿಸಿದ ಜಿತೇಂದ್ರ ಅವರಿಗೂ ನಾನು ಆಭಾರಿಯಾಗಿದ್ದೇನೆ. ನಾನು ಬ್ಲಾಗು ಶುರು ಮಾಡಿ ಇನ್ನೂ ಎರಡು ತಿಂಗಳಾಗಿಲ್ಲ ಆಗಲೆ ಇಷ್ಟು ಬೇಗನೆ ಪರಿಚಯಸುತ್ತಾರೆ ಎಂದು ನಾನು ನಿರೀಕ್ಷಿಸರಿಲಿಲ್ಲ.
ಇತ್ತೀಚಿಗೆ ಪಿಎಚ್.ಡಿ ತನ್ನ ಮೌಲ್ಯವನ್ನು ಹಾಗೂ ಅರ್ಥವನ್ನು ಕಳೆದುಕೊಳ್ಳುತ್ತಿರುವದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ! ಏಕೆಂದರೆ ನೇಮಕಾತಿ ಸಂದರ್ಭದಲ್ಲಿ ಅದನ್ನು ಖಡ್ಡಾಯಗೊಳಿಸುತ್ತಿರುವದರಿಂದ ಎಲ್ಲರೂ ಪಿಎಚ್.ಡಿ ಮಾಡುವಂತಾಗಿ ಅದೊಂದು ಬಿಕರಿಗಿಟ್ಟ ಮಾಲಾಗುತ್ತಿದೆ. ನನ್ನ ಪ್ರಕಾರ ಕ್ರಿಯಾಶೀಲ ಕಾರ್ಯಕ್ಷೇತ್ರದಲ್ಲಿ ಕ್ರಿಯಾಶೀಲತೆಯೇ ಮಾನದಂಡವಾಗಬೇಕು ಹೊರತು ಪರ್ಸೆಂಟೇಜಾಗಲಿ, ಡಿಗ್ರಿಗಳಾಗಲಿ, ಸರ್ಟಿಫಿಕೇಟ್ಗಳಾಗಲಿ ಅಲ್ಲ. ಕೌಶಲ್ಯ, ಸಾಮರ್ಥ್ಯಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭವಾಗಬೇಕಿದೆ. Anyway,ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-80042748014740368312009-02-08T09:59:00.000+01:002009-02-08T09:59:00.000+01:00ಉದಯ,ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ನಿಜ ಹೇಳಬೇಕೆಂದರೆ...ಉದಯ,
ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ. ನಿಜ ಹೇಳಬೇಕೆಂದರೆ, ಮಾಧ್ಯಮಿಕ ಶಾಲೆಯಲ್ಲಿ
ನಮ್ಮ ಗುರುಗಳು ಕಲಿಸಿದಷ್ಟು ಚೆನ್ನಾಗಿ, ಕಾಲೇಜಿನಲ್ಲಿ ಕಲಿಸಲಿಲ್ಲ! ಮುಖ್ಯವೆಂದರೆ,
ಕಲಿಸುವವರಿಗೆ ವಿಷಯದಲ್ಲಿ ಪಾಂಡಿತ್ಯವಿದ್ದರೆ ಸಾಲದು, ಕಲಿಸುವದರಲ್ಲೂ ಆಸಕ್ತಿ ಇರಬೇಕು, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-2802103225554897449.post-40116180024848645002009-02-08T09:25:00.000+01:002009-02-08T09:25:00.000+01:00ಉದಯ್ ಅವರೆ ಈ ದಿನ ಕೆಂಡಸಂಪಿಗೆಯಲ್ಲಿ ನಿಮ್ಮ ಬ್ಲಾಗ್ ಪರಿಚಯ...ಉದಯ್ ಅವರೆ ಈ ದಿನ ಕೆಂಡಸಂಪಿಗೆಯಲ್ಲಿ ನಿಮ್ಮ ಬ್ಲಾಗ್ ಪರಿಚಯಿಸಿದ್ದನ್ನು ನೋಡಿದೆ. ಬಹಳ ಚೆನ್ನಾಗಿ ನಿಮ್ಮ ಬ್ಲಾಗ್ ಪರಿಚಯ ಮಾಡಿಕೊಟ್ಟಿದ್ದರೆ. ನೋಡಿ ಖುಷಿಯಾಯಿತು.

ಈ ಲೇಖನ ಅರ್ಥಪೂರ್ಣವಾಗಿದೆ. ನಿಮಗೆ ಗೊತ್ತಿರುವಂತೆ ಹಳೆಯ ತಲೆಮಾರಿನವರಾರೂ ಎಂ. ಫಿಲ್., ಪಿಎಚ್.ಡಿ ಮಾಡುತ್ತಿರಲಿಲ್ಲ. ಮಾಡಿದವರೂ ಸಂಶೋಧನೆಯನ್ನು ಇಷ್ಟಪಟ್ಟು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಮಾತ್ರ ಈ ಪಿಡುಗು ವೈಯಕ್ತಿಕ ಲಾಭಕ್ಕಾಗಿ ಹುಟ್ಟಿಕೊಂಡಿದೆ. ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಇಂದಿನ ಪಿಎಚ್.ಡಿಯ ಎಲ್ಲಾ ಅಕ್ರಮಗಳನ್ನೂ , ಅದು ಬಿಕರಿಗಿಟ್ಟ ಡಿಗ್ರಿ ಎಂಬುದನ್ನು ಸವಿವರವಾಗಿ ಪ್ರಕಟಿಸಿದ್ದರು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-2802103225554897449.post-78393121642704542262009-02-07T13:06:00.000+01:002009-02-07T13:06:00.000+01:00ಸತ್ಯನಾರಾಯಣ ಸರ್,ನೀವು ನನ್ನ ಲೇಖನದ ಒಳಾರ್ಥವನ್ನು ಸರಿಯಾಗಿ...ಸತ್ಯನಾರಾಯಣ ಸರ್,
ನೀವು ನನ್ನ ಲೇಖನದ ಒಳಾರ್ಥವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅಂತ ಕಾಣಿಸುತ್ತೆ. ನಾನು ಎಲ್ಲೂ ಪಿಎಚ್.ಡಿ ಮಾಡಿದವರು ಸರಿಯಾಗಿ ಪಾಠ ಮಾಡುವದಿಲ್ಲ ಎಂದು ಹೇಳಿಲ್ಲ. ನನ್ನ ಲೇಖನದ ಉದ್ದೇಶವೂ ಅದಲ್ಲ. ಬದಲಾಗಿ ಪಿಎಚ್.ಡಿ ಮಾಡಿದವರ ಪಾಠದಿಂದ ವಿದಾರ್ಥಿಗಳಿಗೆ ಅಂಥ ವಿಶೇಷವಾದ ಲಾಭವೇನೂ ಆಗುತ್ತಿಲ್ಲ. ಆ ಕಾರಣಕ್ಕೆ ಅದನ್ನು ನೇಮಕಾತಿ ಸಂದರ್ಭದಲ್ಲಿ ಖಡ್ಡಾಯಗೊಳಿಸಬಾರದು ಹಾಗೂ ಅದನ್ನು ಪರಿಗಣಿಸಬಾರದು ಎಂದು ಹೇಳಿದ್ದೇನೆ ಅಷ್ಟೆ. ಪಿಎಚ್.ಡಿ ಮಾಡಿದವರಲ್ಲೂ ಸಹ ತುಂಬಾ ಚನ್ನಾಗಿ ಪಾಠ ಮಾಡುವವರಿದ್ದಾರೆ. ಆದರೆ ಅವರ ಪಿಎಚ್.ಡಿಯಿಂದ ಕಲಿಸುವಿಕೆಯಲ್ಲಿ ಯಾವ ರೀತಿಯ ಅನುಕೂಲವಾಗಲಾರದು ಎಂದಷ್ಟೆ ಹೇಳಿದ್ದೇನೆ.
ಇನ್ನು ನಾನು "Ph.D" ಶಬ್ದವು ಕನ್ನಡದಲ್ಲಿ ಪಿ.ಎಚ್.ಡಿ.ಯಾಗಿರಬಹುದೆಂದುಕೊಂಡಿದ್ದೆ. Anyway, ನನ್ನ ತಪ್ಪನ್ನು ತಿದ್ದಿದುಕ್ಕೆ ವಂದನೆಗಳು. ಅದರಂತೆ ಲೇಖನದಲ್ಲಿ ಬದಲಾಯಿಸಿದ್ದೇನೆ. ನನ್ನ ತಪ್ಪನ್ನು ಗಮನಕ್ಕೆ ತಂದಿದುಕ್ಕೆ ಹಾಗೂ ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2802103225554897449.post-70337623660594584632009-02-07T04:59:00.000+01:002009-02-07T04:59:00.000+01:00ನಿಮ್ಮ ಲೇಖನದ ಕೆಲವೊಂದು ಅಂಶಗಳಲ್ಲಿ ಸತ್ಯಾಂಶವಿದೆ. ಲೇಖನದ ...ನಿಮ್ಮ ಲೇಖನದ ಕೆಲವೊಂದು ಅಂಶಗಳಲ್ಲಿ ಸತ್ಯಾಂಶವಿದೆ. ಲೇಖನದ ಕೊನೆಯ ಪಿ.ಹೆಚ್.ಡಿ ಮಾಡುವದನ್ನು ಆಯಾ ಅಧ್ಯಾಪಕನ ಆಸಕ್ತಿಗೆ ಬಿಡಲಾಗುತ್ತಿದೆಯೆ ಹೊರತು ಖಡ್ಡಾಯಗೊಳಿಸುವದಾಗಲಿ ಹಾಗೂ ಅದನ್ನೇ ಮಾನದಂಡವಾಗಿಸಿ ಕೆಲಸಕ್ಕೆ ತೆಗೆದುಕೊಳ್ಳುವದನ್ನಾಗಲಿ ಮಾಡುತ್ತಿಲ್ಲ. ಭಾರತದಲ್ಲೂ ಇದೆ ಪರಿಪಾಠವನ್ನು ಅನುಸರಿಸಲು ಆಗುವದಿಲ್ಲವೆ? ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಪಿಎಚ್.ಡಿ. ಮಾಡಿದವರಲ್ಲೂ ಚೆನ್ನಾಗಿ ಪಾಠ ಮಾಡುವವರಿರುತ್ತಾರೆ ಎಂಬುದನ್ನು ನಿಮ್ಮ ಲೇಖನ ಲಕ್ಷಿಸಿಲ್ಲ. ಇನ್ನು ಪಿ.ಎಚ್.ಡಿ. ಎಂದು ಬರೆಯುವ ಬದಲು ಪಿಎಚ್.ಡಿ. ಎಂದು ಬರೆಯುವುದು ಸೂಕ್ತವಲ್ಲವೆ?Anonymousnoreply@blogger.com