Demo image Demo image Demo image Demo image Demo image Demo image Demo image Demo image

In my love poems

  • ಮಂಗಳವಾರ, ಅಕ್ಟೋಬರ್ 17, 2023
  • ಬಿಸಿಲ ಹನಿ
  • ನನ್ನ ಪ್ರೇಮಪದ್ಯಗಳಲ್ಲಿ ಯಾವ ಗಂಡಸನ್ನೂ ಹುಡುಕಬೇಡಿ ನನಗೆ ನನ್ನನ್ನು ಪ್ರೀತಿಸಿಕೊಳ್ಳಲು ಗೊತ್ತಿದೆ ನನ್ನ ಕಣ್ಣ ಹೊಳಪಿನಲ್ಲಿ ಯಾವ ಗಂಡಸಿನ ಚಹರೆಯನ್ನೂ ಹುಡುಕಬೇಡಿ ಕತ್ತಲು ಕುಡಿಯುವ ನಾನು ಬೆಳಕಿನ ಕಿಡಿ ಹೊತ್ತಿರುವೆ ನನ್ನ ಬ್ರಾಂಡೆಡ್ ಬಟ್ಟೆಗಳಿಗೆ ನನ್ನ ಬೆವರಿನ ರಸೀತಿ ಇದೆ ಬಿಯರ್ ಗ್ಲಾಸಿನ ಕೆಳಗೆ ನಾನೇ ತೆತ್ತ ಬಿಲ್ ಇದೆ ಊರೂರು ಸುತ್ತಿದ ಬೀದಿಗಳಲ್ಲಿ ಜೊತೆ ನಡೆದ ಹೆಜ್ಜೆಗಳಿವೆ; ಆ ಹೆಜ್ಜೆಗಳಲ್ಲಿ ಗಂಡಸಿನ ಗುರುತು ಕೆದಕಬೇಡಿ, ಕೆದಕಿದಷ್ಟೂ ನಿಮ್ಮಾಳದ ಸುಪ್ತ ವಾಂಛೆಗಳೇ ಎದ್ದೆದ್ದು ಬರುವವು ಅದುಮಿಟ್ಟ ಬಯಕೆ, ಕೈಗೆಟುಕದ ಜಿದ್ದು ನಿಮ್ಮಷ್ಟೂ ಹೊಟ್ಟೆಕೆಳಗಿನ ನೋವು ಗುಡ್ಡೆಯಾಗುವವು. ಒಂಟಿಹೆಣ್ಣೆಂಬ ಕಣ್ಣಲ್ಲ ನಿಮಗೆ, ಗೊತ್ತಿದೆ; ಮಾತಿನ ಹೆಣ್ಣೆಂಬ ಕಿನಿಸು. ನನ್ನ ಮಾತುಗಳಲ್ಲಿ ಸಂಚು ಹುಡುಕಬೇಡಿ, ಬೆತ್ತಲೆಗಣ್ಣ ಮುಂದೆ ಕನ್ನಡಿ ಇಟ್ಟುಕೊಳ್ಳಿ; ಸಾಕು. ~ ಚೇತನಾ ತೀರ್ಥಹಳ್ಳಿ 2021 In my love poems Don't look for any man I know how to love myself In the twinkle of my eye Don't look for any man's face I who drink darkness carry a spark of light For my branded clothes I have the receipt of my own sweat Under every beer glass, there is a bill that I paid myself. There are some footsteps that walked with me in the streets around the town; Don't search for a man's mark in those footsteps, The more you dig, the more your hidden desires will spring up An unattainable desire and an unreachable revenge Will always haunt you as piles of pain in the lower abdomen. I know Your botheration is not about I am living a single life But it’s about I talk too much Do not look for intrigue in my words, Instead, keep a mirror in front of your naked eyes; that’s enough. From Kannada: Chetana Teerthahalli To English: Uday Itagi