Demo image Demo image Demo image Demo image Demo image Demo image Demo image Demo image

ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!

  • ಭಾನುವಾರ, ಮಾರ್ಚ್ 10, 2024
  • ಬಿಸಿಲ ಹನಿ
  • ನನ್ನ ಕೆಂಗುಲಾಬಿಯೇ,
    ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ಆರಂಭವಾಗಿತ್ತು. ಇಂಥ ಚಳಿಗಾಲದಲ್ಲಿಯೇ ಒಟ್ಟಿಗಿರಬೇಕಾದ ನಾವು ಬೇರ್ಪಟ್ಟಿದ್ದೆವು. ಅಲ್ಲಲ್ಲ, ಬದುಕಿನ ಅವಶ್ಯಕತೆಗಳು, ಅನಿವಾರ್ಯತೆಗಳು ನಮ್ಮಿಬ್ಬರನ್ನು ಬೇರ್ಪಡಿಸಿದ್ದವು. ನನಗೆ ವಿದೇಶದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನು ಹೋಗಲೇಬೇಕಿತ್ತು. ಹೋಗದೇ ಬೇರೆ ದಾರಿಯಿರಲಿಲ್ಲ. ಏಕೆಂದರೆ ನಮ್ಮ ಆಗಿನ ಹಣಕಾಸಿನ ಸ್ಥಿತಿ ಹೇಳಿಕೊಳ್ಳುವಷ್ಟಿರಲಿಲ್ಲ. ನಾವಿಬ್ಬರು ತರುವ ಸಂಬಳ ಬೆಂಗಳೂರಂಥಾ ಊರಲ್ಲಿ ಮನೆ ಬಾಡಿಗೆ, ಗಾಡಿ ಲೋನ್, ಮನೆ ಖರ್ಚು, ಅದು ಇದು ಅಂತಾ ಅಲ್ಲಿಗಲ್ಲಿಗೆ ಸರಿಹೋಗಿ ತಿಂಗಳ ಕೊನೆಯಲ್ಲಿ ಕೈಯಲ್ಲಿ ಅಬ್ಬಬ್ಬಾ ಅಂದರೆ ಒಂದು ಸಾವಿರ ಉಳಿದರೆ ಹೆಚ್ಚು. ಹೀಗಾದರೆ ಮುಂದಿನ ಬದುಕು ಹೇಗೇ? ಮಗಳ ಭವಿಷ್ಯದ ಗತಿಯೇನು? ಬೆಂಗಳೂರಿನಲ್ಲಿ ನಾವೂ ಒಂದು ಸ್ವಂತ ಮನೆ ಅಂತಾ ಮಾಡಿಕೊಳ್ಳುವದು ಹೇಗೆ? ಎಲ್ಲರಂತೆ ನಾವು ಕಾರಲ್ಲಿ ಓಡಾಡುವದು ಯಾವಾಗ? ಈ ನಿಟ್ಟಿನಲ್ಲಿ ನಾನು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯಾಯಯುತವಾಗಿ ಹೇಗೆ ಸುಧಾರಿಸುವದು ಎಂದು ಯೋಚಿಸುತ್ತಿರುವಾಗಲೇ ನನಗೆ ಈ ಅವಕಾಶ ಒದಗಿಬಂದಿತ್ತು. ನಾನು ಹೊರಟು ನಿಂತೆ.
    ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ಪ್ರೀತಿಯಲ್ಲಿರುವಾಗ ಏನೆಲ್ಲಾ ಆಣೆ ಪ್ರಮಾಣಗಳನ್ನು ಮಾಡಿದ್ದೆವು! ನಾವಿಬ್ಬರು ಸದಾ ಕಾಲ ಒಟ್ಟಿಗಿರುತ್ತೇವೆ. ಒಬ್ಬರೊನ್ನೊಬ್ಬರು ಒಂದು ಘಳಿಗೆಯೂ ಬಿಟ್ಟಿರುವದಿಲ್ಲ. ಸತ್ತರೆ ಇಬ್ಬರೂ ಒಟ್ಟಿಗೆ ಸಾಯೋಣ. ಪ್ರೀತಿಯ ಲೋಕವೇ ಅಂಥದಲ್ಲವೇ? ಅಲ್ಲಿ ಎಲ್ಲವೂ ಇಂಪು-ತಂಪು, ನಾದ-ನಿನಾದ, ಮಧುರ-ಅಮರ. ಅದೊಂದು ಅದ್ಭುತ ಗಂಧರ್ವ ಲೋಕ. ಅಲ್ಲಿ ಬರೀ ಗಂಧರ್ವ ಕನ್ಯೆ, ಕಿನ್ನರ-ಕಿಂಪುರುಷರಿಗೆ ಮಾತ್ರ ಪ್ರವೇಶ. ಸ್ವರ್ಗಲೋಕದಲ್ಲಿ ಸುಖದಲೋಲಪತೆಗಳೇನು ಕೊರತೆಯೇ? ಈ ಸುಖದಲೋಲುಪತೆಗಳನ್ನು ಶಾಶ್ವತವಾಗಿ ನಮ್ಮದಾಗಿಸಿಕೊಳ್ಳೋಣವೆಂದೇ ನಾವು ಮದುವೆಯಾಗುತ್ತೇವೆ. ಆದರೆ ಮದುವೆಯೆಂಬ ಚೌಕಟ್ಟಿನಲ್ಲಿ ಅವೆಲ್ಲಾ ಬರೀ ಭ್ರಮೆಗಳು ಎಂದು ಗೊತ್ತಾಗಲು ಹೆಚ್ಚು ಕಾಲ ಬೇಕಾಗುವದಿಲ್ಲ. ಪ್ರೀತಿಯಲ್ಲಿನ ಬದುಕೇ ಬೇರೆ. ಮದುವೆ ನಂತರದ ಬದುಕೇ ಬೇರೆ ಎನ್ನುವ ವಾಸ್ತವ ಸತ್ಯದ ಜೊತೆಗೆ ಬದುಕಲು ಬರೀ ಪ್ರೀತಿಯೊಂದೇ ಸಾಲದು ಅದರ ಜೊತೆಗೆ ಹಣವೂ ಬೇಕಾಗುತ್ತದೆ ಎನ್ನುವ ಕಟುಸತ್ಯವೂ ಗೋಚರಿಸುತ್ತಾ ಹೋಗುತ್ತದೆ. ಅದಕ್ಕೇ ಇರಬೇಕು ದೊಡ್ದವರು ಹೇಳಿದ್ದು- ಪ್ರೀತಿ ಕುರುಡು, ಮದುವೆ ಕಣ್ಣು ತೆರೆಸುವ ಆಟ ಎಂದು. 

    ನಾನು ಕೂಡಾ ನಿನ್ನನ್ನು ಪ್ರೀತಿಸುವಾಗ ಒಮ್ಮೆ ನಿನಗೆ ಹೇಳಿದ್ದೆ; ‘ಉದಯ’ಗಳ ಊರೇ ನಾನಾಗಿ ಬೆಳಕಿಡುವೆ ನಿನಗಾಗಿ’ ಎಂದು. ಆದರೆ ದಾಂಪತ್ಯದಲ್ಲಿ ನಿನಗೆ ನಾನು, ನನಗೆ ನೀನು ಬರೀ ಬೆಳಕನ್ನೇ ಇಡುತ್ತಾ ಕೂರಲಾಗುವದಿಲ್ಲವಲ್ಲ? ಹಾಗಾಗಿ ನಾನು ಹೊರಟು ಬಂದೆ. ನಾನು ಹೊರಡುವ ದಿನ ನಿನ್ನ ಕಂಗಳ ತುಂಬಾ ಕಣ್ಣಿರು. ಮನಸ್ಸಿನ ತುಂಬಾ ದುಗುಡ. ನಾನು ಆ ಕ್ಷಣಕ್ಕೆ ಹೆಚ್ಚು-ಕಮ್ಮಿ ಖ್ಯಾತ ಇಂಗ್ಲೀಷ್ ಕವಿ ಜಾನ್ ಡನ್ ನಿಂತ ಜಾಗದಲ್ಲಿ ನಿಂತಿದ್ದೆ. ಜಾನ್ ಡನ್ ಇಂಗ್ಲೀಷಿನ ಅದ್ಭುತ ಪ್ರೇಮಕವಿ ನಿನಗೆ ಗೊತ್ತಲ್ಲ? ಪ್ರಿತಿಯನ್ನು ಲೌಕಿಕ ನೆಲಗಟ್ಟಿನಲ್ಲಿ ನಿಂತು ನೋಡುತ್ತಲೇ ಅಲೌಕಿಕ ಲೋಕದಲ್ಲಿ ಲೀನವಾದವ. ಆತ ವೃತ್ತಿಯಿಂದ ಒಬ್ಬ ವ್ಯಾಪಾರಿ. ಆದರೆ ಪ್ರವೃತ್ತಿಯಿಂದ ಕವಿ. ಅಗಾಧ ಪ್ರೇಮಿ! ಆತನ ಪ್ರೇಮಕಾವ್ಯದ ಕುಂಚ ಸದಾ ಅದ್ಭುತ ಕಲ್ಪನೆಗಳ ಬಣ್ಣಗಳಲ್ಲಿ ಅದ್ದಿ ತೆಗೆದಂತಿರುತ್ತಿತ್ತು. ಆದರವನ ಬದುಕು ವಾಸ್ತವದಲ್ಲಿ ನೆಲೆಯೂರಿರಿತ್ತಿತ್ತು.

    ಆತ ಒಂದು ಸಾರಿ ಈಗಾಗಲೇ ಇದ್ದ ಅಲ್ಪ-ಸ್ವಲ್ಪ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವದಕ್ಕಾಗಿ ತನ್ನ ಪ್ರಿಯತಮೆಯನ್ನು ತನ್ನೂರಿನಲ್ಲಿ ಬಿಟ್ಟು ದೂರದ ದೇಶವೊಂದಕ್ಕೆ ಹೋಗಬೇಕಾಗುತ್ತದೆ. ಹೋಗುವಾಗ ಅವನ ಪ್ರಿಯತಮೆ ನನ್ನೊಬ್ಬಳನ್ನೇ ಬಿಟ್ಟುಹೋಗಬೇಡ ಎಂದು ಕಂಬನಿಗರೆಯುತ್ತಾ ಅಕ್ಷರಶಃ ಆ ಸಮಯವನ್ನು ಸೂತಕದ ಸಮಯವನ್ನಾಗಿ ಮಾಡುತ್ತಾಳೆ. ಆದರೆ ಆತ ಇದ್ಯಾವುದನ್ನು ಲೆಕ್ಕಿಸದೇ ಹೊರಟು ನಿಲ್ಲುತ್ತಾನೆ. ಏಕೆಂದರೆ ಅವನಿಗೆ ಈಗಿನದಕ್ಕಿಂತ ಇನ್ನಷ್ಟು ಸುಂದರವಾದ ಬದುಕನ್ನು ಕಟ್ಟಿಕೊಳ್ಳುತವಕ. ಹೋಗುವಾಗ ಅವನ ಪ್ರಿಯತಮೆ ವಿರಹವೇದನೆಯಿಂದ ಬಳಲುತ್ತಾಳೆ. ಆಗವನು ಅವಳನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ; ಛೀ ಹುಚ್ಚಿ! ನೀನು ಅಳುವದಾದರೂ ಏಕೆ? ಹೀಗೆ ಅಳುತ್ತಾ ಕೂರಲು ನಾವೇನು ಶಾಶ್ವತವಾಗಿ ಅಗಲುತ್ತಿದ್ದೇವೆಯಾ? ಅಷ್ಟಕ್ಕೂ ನಾವಿಬ್ಬರೂ ಯಾವತ್ತೂ ಅಗಲುವದೇ ಇಲ್ಲ. ಏಕೆಂದರೆ ನಾವಿಬ್ಬರೂ ಒಂದು ಕೈವಾರವಿದ್ದಂತೆ. ಅದರ ಒಂದು ಕೈ ಹೇಗೆ ಇನ್ನೊಂದು ಕೈಯಿಲ್ಲದೆ ಚಲಿಸುವದಿಲ್ಲವೋ ಹಾಗೆಯೇ ನಾವು ಕೂಡಾ. ನೀನು ಕೇಂದ್ರಬಿಂದುವಾದರೆ ನಾನು ಅದರ ಸುತ್ತ ಸುತ್ತುವ ಒಂದು ವೃತ್ತ. ಒಂದು ಇಲ್ಲದೇ ಇನ್ನೊಂದಿಲ್ಲ.    
     
    ನಾನು ಹೊರಟು ನಿಂತ ದಿನ ನಿನ್ನ ಕಂಗಳ ತುಂಬಾ ಕಂಬನಿಗಳು. ನನ್ನ ಕಂಗಳ ತುಂಬಾ ಕನಸುಗಳು. ನೀನು ಒಂದೇ ಸಮನೆ ಅಳುತ್ತಲಿದ್ದೆ. ಹಾಗೆ ನೋಡಿದರೆ ನಿನಗಿಂತ ಹೆಚ್ಚಾಗಿ ನನಗೆ ಕಸಿವಿಸಿಯಾಗಿತ್ತು. ಆ ಕಸಿವಿಸಿಯ ಭಾರವನ್ನು ಹೊತ್ತುಕೊಂಡೇ ನಾನಿಲ್ಲಿಗೆ ಹಾರಿ ಬಂದೆ. ಇಲ್ಲಿಗೆ ಬಂದ ಮೇಲೆ ನನಗೆ ನಿನ್ನದೇ ಯೋಚನೆ! ನಾನಿಲ್ಲದೆ ಇಲ್ಲಿ ನೀನೊಬ್ಬಳೇ ಎಲ್ಲವನ್ನೂ ಹೇಗೆ ನಿಭಾಯಿಸುತ್ತಿರುವಿ ಎಂದು.  ಪ್ರತಿಸಾರಿ ನಿನ್ನ ನೆನಪಾದಾಗಲೆಲ್ಲಾ ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿರುವ ನನ್ನನ್ನು ಕಚ್ಚುವ ಸೊಳ್ಳೆಗಳಿಗೆ ಹೇಳಿಕಳಿಸುತ್ತೇನೆ; ಹೋಗಿ ದೂರದ ಇಂಡಿಯಾದಲ್ಲಿರುವ ನನ್ನವಳನ್ನು ಕಚ್ಚಿ ಅವಳ ರಕ್ತದಲ್ಲಿ ನನ್ನ ರಕ್ತವನ್ನು ಬೆರಸಿ ನಮ್ಮಿಬ್ಬರನ್ನು ಒಂದಾಗಿಸೆಂದು. ನನ್ನ ಹೃದಯ ನಿನಗಾಗಿ ಮಿಡಿದಾಗಲೆಲ್ಲಾ ಇಲ್ಲಿನ ನೊಣಗಳಿಗೆ ಹೇಳುತ್ತೇನೆ; ನನ್ನ ಸುತ್ತ ಸುತ್ತುವ ಬದಲು ಹೋಗಿ ನನ್ನವಳ ಕೆನ್ನೆಗೊಂದು ಮುತ್ತು ಕೊಡಿ ಎಂದು. ಸಹರಾ ಮರಳುಗಾಡಿನ ಗುಡ್ಡಗಳ ಹಿಂದೆ ಚಕ್ಕಂದ ಆಡುವ ಚಂದಿರನಿಗೆ ಹೇಳಿ ಕಳಿಸಿದ್ದೇನೆ; ಇಂಡಿಯಾದಲ್ಲಿರುವ ನನ್ನವಳೊಂದಿಗೆ ನನ್ನ ಪರವಾಗಿ ಪ್ರೀತಿಯ ಪಲಕುಗಳನ್ನಾಡಬಹುದೆಂದು. ಆಗಸದ ನಕ್ಷತ್ರಗಳನ್ನು ಬೇಡಿಕೊಂಡಿದ್ದೇನೆ; ಹೋಗಿ, ನನ್ನ ಕೊರಗಿನಲ್ಲಿರುವ ನನ್ನವಳ ಮನದಂಗಳದಲ್ಲಿ ನಿಮ್ಮ ಒಂದಷ್ಟು ಪ್ರಭೆಯನ್ನು ಚೆಲ್ಲಿ ಅವಳ ಮನವನ್ನು ಬೆಳಗಿಯೆಂದು. ಇಲ್ಲಿನ ತಂಗಾಳಿಯ ಕಿವಿಯಲ್ಲಿ ಉಸುರಿ ಕಳಿಸಿದ್ದೇನೆ; ಅವಳಿಗೆ ಲಾಲಿ ಹಾಡುತ್ತಾ ಅವಳನ್ನು ಕನಸಿನರಮನೆಯಲ್ಲಿ ಮಲಗಿಸೆಂದು. ಗಾಳಿಯಲ್ಲಿ ತೇಲಿ ಹೋಗುವ ಮರಳು ಕಣಗಳಿಗೆ ಹೇಳಿದ್ದೇನೆ; ಹಾರಿ ಹೋಗಿ ಇಂಡಿಯಾದಲ್ಲಿರುವ ನನ್ನವಳಿಗೆ ನನ್ನ ಬೆಚ್ಚಗಿನ ನೆನಪುಗಳ ಗೂಡೊಂದನ್ನು ಕಟ್ಟಿಕೊಡೆಂದು.  

    ಕೊರಗದಿರು, ಕರಗದಿರು ಕಳಕೊಂಡ ಪ್ರೀತಿಯ ಬಗ್ಗೆ. ನಾನು ಬಂದು ಬಿಡುವೆ ಬೇಗ. ಹೇಗಿದ್ದರೂ ನಮ್ಮ ಬದುಕು ಆರ್ಥಿಕವಾಗಿ ಭದ್ರವಾಯಿತಲ್ಲ? ಇನ್ನೇನಿದ್ದರೂ ಕಳಕೊಂಡ ಪ್ರೀತಿಯ ಕನಸುಗಳನ್ನು ಮತ್ತೆ ಕೂಡಿಟ್ಟು ನನಸಾಗಿಸಿಕೊಳ್ಳುವದಷ್ಟೇ ಕೆಲಸ. ನಾನಲ್ಲಿಗೆ ಬಂದ ಮೇಲೆ ಸಂಜೆ ಮಲ್ಲಿಗೆಯ ಸವಿಗಂಪಿನಲ್ಲಿ ನಾಳೆಗಳನ್ನು ಕುರಿತು ಹರಟೋಣ. ರಾತ್ರಿ ಆಗಸದ ನಕ್ಷತ್ರಗಳನ್ನು ಬಾಚಿ ತಬ್ಬಿಕೊಳ್ಳೋಣ. ನವಿಲು ಗರಿಯನ್ನು ಹೆಕ್ಕುತ್ತಾ ಸವಿನೆನಪುಗಳನ್ನು ಕಟ್ಟಿಕೊಳ್ಳೋಣ. ಇಬ್ಬರೂ ಸೇರಿ ಒಮ್ಮೆ ತಾಜ್‍ಮಹಲ್‍ಗೆ ಭೇಟಿಕೊಟ್ಟು ಬರೋಣ. ಅಲ್ಲಿ ಗೋರಿಯಲ್ಲಿರುವ ಮಮ್ತಾಜ್ ಮಹಲ್‍ಳಿಗೆ ಒಮ್ಮೆ ಕೂಗಿ ಹೇಳುವಿಯಂತೆ; ನಿನ್ನ ಗಂಡನೇನೋ ರಾಜ. ನಿನಗಾಗಿ ಮಹಲೊಂದನ್ನು ಕಟ್ಟಿಸಿದ. ಆದರೆ ನನ್ನ ಗಂಡ ಬಡಪಾಯಿ. ನನಗಾಗಿ ಒಂದು ಮನೆಯನ್ನೇ ಕಟ್ಟಿಸಿಕೊಟ್ಟ. ನಿಮ್ಮಿಬ್ಬರ ಪ್ರೀತಿಗಿಂತ ನಮ್ಮಬ್ಬಿರ ಪ್ರೀತಿಯೇ ಅಜರಾಮರವೆಂದು. ಆಗ ನಾನು ನಿನ್ನನ್ನು ಪ್ರೀತಿಸಿದ್ದು ಮತ್ತು ಆ ಪ್ರೀತಿಯನ್ನು ಭದ್ರ ಬುನಾದಿಯ ಮೇಲೆ ಕಟ್ಟಿದ್ದು ಸಾರ್ಥಕವೆನಿಸುತ್ತದೆ.

    ಮತ್ತೆ ಹೇಳುತ್ತಿದ್ದೇನೆ; ಇಷ್ಟು ದಿನಗಳನ್ನೇ ಕಾದಿರುವಿಯಂತೆ. ಇನ್ನಾರು ತಿಂಗಳು ಕಾದು ಬಿಡು. ಬೇಗ ಬಂದು ಬಿಡುವೆ. ಅಲ್ಲಿಯವರೆಗೆ ಬೈ….ಬೈ…..ಸ್ವೀಟ್ ಕಿಸ್ಸಸ್ ಡಾರ್ಲಿಂಗ್!
    ಇತಿ
    `ನಿನಗಷ್ಟೇ ಸೀಮಿತನಾದವನು’

    http://avadhimag.com/2015/02/14/%E0%B2%AE%E0%B2%A1%E0%B2%A6%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B3%8D%E0%B2%AF%E0%B2%BE%E0%B2%AA%E0%B2%BF-%E0%B2%B5%E0%B3%8D%E0%B2%AF%E0%B2%BE%E0%B2%B2%E0%B3%86%E0%B2%82/







    Objection

  • ಬಿಸಿಲ ಹನಿ
  • Objection I have inherited some of my father's qualities in me And I feel proud of it. However, I cannot blame him for any of my flaws! Similarly, I have noticed some of my qualities are found in my son And I am responsible for his mistakes too Even though he sometimes hurts me, I tend to pamper him a lot. Poor fellow my husband- the one who held my hand in marriage! He doubts if I am left behind Insults if I go ahead of him Feels primness to be together with me! He happens to be mine but still not mine Disputes when we spend time together. Why is it like this to deal with? From Kannada: Savitha Nagabhushan To English: Uday Itagi ತಕರಾರು ಒಂದಂಶ ಅಪ್ಪನದು ನನ್ನಲ್ಲಿದೆ ನನ್ನಲ್ಲಿರುವ ಗಂಡು ಗುಣ ಅವನದೆ ಹೆಮ್ಮೆ ನನಗೆ.... ಹಾಗೆ ಅವನ ದೂರಲಾರೆ! ಒಂದಂಶ ನನ್ನದು ಮಗನಲ್ಲಿದೆ ಅವನ ತಪ್ಪುಒಪ್ಪುಗಳಿಗೆ ನನ್ನದೂ ಕೊಡುಗೆ ಇದೆ ಅರೆ! ಒದ್ದರೂ ಮುದ್ದುಗರೆಯುವೆ! ಪಾಪ ಇವನು....ಕೈ ಹಿಡಿದವನು ಹಿಂದುಳಿದರೆ ಅನುಮಾನ? ಮುಂದೋಡಿದರೆ ಅವಮಾನ? ಜತೆಗಿರು ಎನ್ನಲು ಬಿಗುಮಾನ! ನನ್ನವನಾದರೂ ನನ್ನವನಲ್ಲವೆ? ಬೆರೆತರೂ ಕಲೆತರೂ ಭಿನ್ನಮತ, ಯಾಕೆ ಹೀಗೆ ? -ಸವಿತಾ ನಾಗಭೂಷಣ

    Let's talk a little about love

  • ಶನಿವಾರ, ಮಾರ್ಚ್ 02, 2024
  • ಬಿಸಿಲ ಹನಿ
  • ಸ್ವಲ್ಪ ಪ್ರೇಮದ ಬಗ್ಗೆ ಮಾತಾಡೋಣ ಅಂದ, ವಯಸಾಯ್ತು ಅಂದೆ. ಪ್ರೇಮಕ್ಕೆ ವಯಸಿಲ್ಲ ಅಂದ, ಮಾತಾಡುತ್ತ ಕೂರಲು ವಯಸಾಯ್ತು ಅಂದೆ. ಸರಿ, ಪ್ರೇಮಿಸೋಣ ಅಂದ. ನೀರು ಕುಡಿಯಲು ಮೀನಿಗೆ ಬಟ್ಟಲು ಬೇಕೇ? ನನ್ನ ಪ್ರಶ್ನೆ. ಪ್ರೇಮವನ್ನ ಉಸಿರೆಂದುಕೋ ಅಂದ. ಉಸಿರು ಹಿಡಿದಿಡಲಾಗದು, ಉಸಿರ ಗಾಳಿ ಪ್ರತಿಯೊಬ್ಬರದ್ದೂ; ನನ್ನ ಉತ್ತರ. ಪ್ರೇಮವೇ ಬದುಕೆಂದ. ಬದುಕು ಪ್ರೇಮವಷ್ಟೇ ಅಲ್ಲವೆಂದೆ. ಸ್ಪರ್ಶ ಕೊಡು, - ವಿಷಯಕ್ಕೆ ಬಂದ. ಇರು, ಸ್ವಲ್ಪ ಮಾತಾಡೋಣ ಅಂದೆ. ಪತ್ತೆ ಇಲ್ಲ! “Let's talk a little about love,” he said “I am getting older," I replied “Bye the bye, love knows no age limits,” he uttered. "I am too old to sit and talk” I murmured “Well, let's make love,” he expressed his inner feelings “Does a fish need a cup to drink water?” I threw a question at him “Think that love is breathing,” he said “Breathe can’t be held back, Breathing air is everyone's” I muttered “Love is life,” he opined “Life is not only love” I asserted “Give me a touch” - now he came to the point. “Wait, let's talk for a while” Since then no traces about his whereabouts! From Kannada: Chethana Teerthahalli To English: Uday Itagi

    ಡಾ. ಮಂಗಳಾ ಪ್ರಿಯದರ್ಶಿನಿ ಕಣ್ಣಲ್ಲಿ ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕದ ವಿಮರ್ಶೆ

  • ಬುಧವಾರ, ಫೆಬ್ರವರಿ 21, 2024
  • ಬಿಸಿಲ ಹನಿ
  • ನಾಲ್ಕು ದಿನಗಳ ಹಿಂದೆ ದಾವಣಗೆರೆಯಿಂದ ಉದಯ್ ಇಟಗಿಯವರು ತಮ್ಮ “ಶೇಕ್ಸ್ ಪಿಯರನ ಶ್ರೀಮತಿ” ನಾಟಕದ ಪ್ರಯೋಗವಾಗುತ್ತಿದ್ದು, ನಾನು ಬರಲೇಬೇಕೆಂಬ ಪ್ರೀತಿಯ ಒತ್ತಾಯವನ್ನು ಹೇರಿದ್ದೇ ಅಲ್ಲದೆ ಮನೆಗೇ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದರು. ಇದಕ್ಕೆ ಕಾರಣ, ಇಟಗಿಯವರ ಈ ಕೃತಿಯನ್ನು ಪ್ರಕಟಣೆಗೆ ಮೊದಲೇ ಪಿಡಿಎಫ್ನಲ್ಲಿಯೇ ಓದಿ ಮೆಚ್ಚಿದ್ದ ಮೊದಮೊದಲ ಓದುಗಳಾಗಿದ್ದೆ. ಈಗ ರಂಗ ಪ್ರದರ್ಶನವನ್ನು ನೋಡಬೇಕೆಂಬ ಆಸೆಯೂ ಇದ್ದು, ಅದಾಗಲೇ ರಂಗಶಂಕದಲ್ಲಿ ಪ್ರದರ್ಶನಗೊಂಡು ದಾವಣಗೆರೆಯನ್ನೂ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನ ಗೆದ್ದ ನಾಟಕವಾಗಿತ್ತು. ಇಟಗಿಯವರ ಈ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸುತ್ತ ಶನಿವಾರ ವರ್ಲ್ಡ್ ಕಲ್ಚರ್ಗೆ ಉತ್ಸಾಹದಿಂದಲೇ ಹೊರಟಿದ್ದೆ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು ನಾಯಕಿ, ಕನ್ನಡದ ಅಪ್ರತಿಮ ಅಭಿನೇತ್ರಿ ಶ್ರೀಮತಿ ಲಕ್ಷ್ಮಿ ಚಂದ್ರ ಶೇಖರ್ ಅವರು. ಯಾವ ಪಾತ್ರವನ್ನು ಕೊಟ್ಟರೂ ಪರಕಾಯ ಪ್ರವೇಶ ಮಾಡಿ ತಾವೇ ಆ ಪಾತ್ರವಾಗಿಬಿಡುವ ನಟಿ. ಗೃಹಭಂಗದ ಗಂಗಮ್ಮ, ಮಾಯಾಮೃಗದ ಶಾಸ್ತ್ರಿಗಳ ಮುಗ್ಧ ಹೆಂಡತಿ …. ಇಲ್ಲಿ ಅವರನ್ನು ಶೇಕ್ಸ್ಯರನ ಹೆಂಡತಿಯಾಗಿ ನೋಡುವ ಕೂತೂಹಲವಿತ್ತು . ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯೇ ಆಗಿದ್ದ ಲಕ್ಷ್ಮೀ ಅವರಿಗೆ ಶೇಕ್ಸ್ ಪಿಯರನ ಬಗೆಗೆ ಪ್ರವೇಶಿಕೆ ಇರುವುದರಿಂದ ಈ ಪಾತ್ರವನ್ನು ಅತ್ಯಂತ ನಿಖರವಾಗಿ ನಿರೂಪಿಸುವರೆಂಬ ನಿರೀಕ್ಷೆ ನನ್ನಂತೆ ತುಂಬಿದ ಗೃಹದಲ್ಲಿ ಕುಳಿತಿದ್ದ ಎಲ್ಲ ಪ್ರೇಕ್ಷಕರಿಗೂ ಇದ್ದದ್ದೆ. ಈ ನಾಟಕದಲ್ಲಿ ಇರುವುದು ಒಂದೇ ಪಾತ್ರ. ಅದು ಶೇಕ್ಸ ಪಿಯರನ ಹೆಂಡತಿ ಆನಾ ಹ್ಯಾಥ್ ವೇ ಳದು. ಒಂದೇ ಅಂಕದಲ್ಲಿ ಅಡೆ ತಡೆಯಿಲ್ಲದೆ, ಹೆಚ್ಚು ಪ್ರಸಾದನಗಳಿಲ್ಲದೆ, ಒಂದೇ ಓಘದಲ್ಲಿ ಓಡುವ ನಾಟಕದಲ್ಲಿ ಶೇ ಕ್ಸ್ ಪಿಯರನ ಹೆಂಡತಿಯ ಪಾತ್ರದಲ್ಲಿ ಅವನ ಬದುಕು, ಬರಹಗಳ ಬಗೆಗೆ ಬದುಕಿನ ಸಂಜೆಯಲ್ಲಿ ಬಹು ಹತ್ತಿರದಿಂದ ಕಂಡ ಆತನ ಹೆಂಡತಿಯ ಸ್ವಗತಗಳಲ್ಲಿಯೇ ನಾಟಕ ಪ್ರಾರಂಭವಾಗುತ್ತದೆ. ಇದು ಸ್ತ್ರೀ ವಾದೀ ನೆಲೆಯಿಂದ ಶೇಕ್ಸ್ ಪಿಯರ್ ನನ್ನು ವ್ಯಾಖ್ಯಾನಿಸುವ ನಾಟಕವೂ ಆಗಿದೆ. ಹದಿನೆಂಟು ವರ್ಷದ ಶೇಕ್ಸ್ ಪಿಯರ್ ಇಪ್ಪತ್ತಾರು ವರ್ಷದ ಆನೆ ಹ್ಯಾಥ್ ಳ ಪ್ರೇಮಕ್ಕೆ, ಅವಳೇ ಹೇಳಿಕೊಳ್ಳುವಂತೆ ಕಾಮಕ್ಕೆ ಬಿದ್ದು ಆಕೆ ಮದುವೆಗೆ ಮುಂಚೆ ಬಸಿರಾದದ್ದು, ಮನೆಯವರು ಪಂಚಾಯಿತಿ ಸೇರಿಸಿ ಮದುವೆ ಮಾಡಿದ್ದ್ದು, ಮೂರು ಮಕ್ಕಳು, ಈತ ಮನೆ ಬಿಟ್ಟು ಲಂಡನ್ನಿಗೆ ಬಂದದ್ದು, ಅಲ್ಲಿ ತೆರೆಯ ಹಿಂದೆ ಪಾತ್ರಗಳಿಗೆ ಮಾತು ಹೇಳಿಕೊಡುವ ಉದ್ಯೋಗ ಹಿಡಿದದ್ದು, ತಾನೇ ಕಷ್ಟ ಪಟ್ಟು ದುಡಿಯುತ್ತಾ ಮಕ್ಕಳಲ್ಲದೆ ಅತ್ತೆ, ಮಾವಂದಿರನ್ನೂ ಸಲಹಿದ್ದು, ಅವಳಿ ಮಕ್ಕಳಲ್ಲಿ ಒಬ್ಬ ಮಗ ಹನ್ನೊಂದು ವರ್ಷಕ್ಕೆ ತೀರಿಕೊಂಡದ್ದು, ಗಂಡನ ಸುಳಿವೇ ಇಲ್ಲದಂತೆ ಒಂಟಿಯಾಗಿ ಬದುಕಿದ್ದು, ಆಗೀಗ ಬರುವ ಪತ್ರಗಳೇ ಅವಳನ್ನು ಬದುಕಿಸಿದ್ದು, ಲಂಡನ್ನಿನಲ್ಲಿ ಅವನ ಇತರೆ ಹೆಣ್ಣುಗಳ ಸಹವಾಸ, ಅಲ್ಲೊಬ್ಬ ಗೆಳೆಯನ ಸಹವಾಸ, ಕೊನೆಗೆ ಖಾಯಿಲೆ ಅಂಟಿಸಿಕೊಂಡು ಮನೆಗೆ ಬಂದು ತನ್ನ ಐವ್ವತ್ತೆರಡನೆಯ ವಯಸ್ಸಿನಲ್ಲಿ ಸಾಯುವುದು …. ಈ ಎಲ್ಲ ವಿವರಗಳನ್ನು ಪ್ರೇಕ್ಷಕರ ಮುಂದೆ ಆತ್ಮೀಯವಾಗಿ ಹಂಚಿಕೊಳ್ಳುತ್ತಾಳೆ. ಶೇಕ್ಸ್ ಪಿಯರ್ ಜಗತ್ತಿನ ಅತ್ಯಂತ ಶ್ರೇಷ್ಠ, ಪ್ರಸಿದ್ಧ ನಾಟಕಕಾರ ಎಂದು ಬಗೆದ ಲೋಕಕ್ಕೆ, ಪರಿಚಯವಿಲ್ಲದ ಶೇಕ್ಸ್ ಪಿಯರನ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಾ ಹೋಗುವ ಆನಾ, ಮುಗ್ಧವಾಗಿ ತನ್ನನ್ನು ಅವನ ವ್ಯಕ್ತಿತ್ವದ ಪಕ್ಕ ಪಕ್ಕದಲ್ಲಿಟ್ಟು ಅವನಿಗೆ ತಕ್ಕ ಹೆಂಡತಿ ನಾನಾಗಿದ್ದೆನೆ? ಎಂದು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳುತ್ತಾಳೆ. ಗಂಡ ಪ್ರೇಮ ಕವನಗಳನ್ನು ಬರೆದಿದ್ದು ತನಗೆ ಎಂದು ಭಾವಿಸಿಕೊಂಡಿರುವಾಗಲೇ ಅದು ಬರೆದದ್ದು ಅವನ ಗೆಳೆಯನಿಗೆ ಎಂದು ಗೊತ್ತಾದಾಗ, ನನ್ನ ವೈರು ಕೂದಲನ್ನು ಯಾರು ಮೆಚ್ಚುತ್ತಾರೆ ಎಂದು ಸಮಾಧಾನವಾಗಿಯೇ ಕಟು ವಾಸ್ತವವನ್ನು ಸ್ವೀಕರಿಸುತ್ತಾಳೆ. ಅನಾಳಲ್ಲಿ ಗಂಡನ ಬಗೆಗೆ ಎಲ್ಲೂ ವಿಷಾದವಿಲ್ಲ, ಬೇಸರವಿಲ್ಲ. ಬದುಕನ್ನು ಬಂದ ಹಾಗೇ ಸ್ವೀಕರಿಸುವ ಮನೋಭಾವವಿದೆ. ಇದೆಲ್ಲದರ ನಡುವೆ ಪ್ರಖ್ಯಾತರ ಹೆಂಡಂದಿರ ಪಾಡೇ ಇಷ್ಟು, ಎಂಬ ತಾತ್ವಿಕ ನಿರ್ಲಿಪ್ತತೆ ಇದೆ. ಒಂದೂವರೆ ಗಂಟೆ ನಿರರ್ಗಳವಾಗಿ ಮಾತನಾಡುವ ನಟಿ ನಮಗೆ ಪರಿಚಯವಿಲ್ಲದ ಹಾಗೂ ಇರುವ ಶೇಕ್ಸ್ ಪಿಯರನನ್ನು ಅದ್ಭುತವಾಗಿ ವ್ಯಾಖ್ಯಾನಿಸುತ್ತಾರೆ. ವೇದಾಂತಿಯಂತೆ ಇಹದ ಬದುಕಿನ ಕಾಯಕದೊಳಗೆ ಒಬ್ಬಳೇ ದುಡಿಯುತ್ತ ಅದರೊಳಗೇ ತನ್ನ ದುಃಖಗಳನ್ನು ಮರೆಯುವ ಆನಾಳನ್ನು ಆಪ್ತವಾಗಿಸುತ್ತಾರೆ. ಎಲ್ಲೋ ಒಂದು ಕಡೆ ಅವಳ ಬಗ್ಗೆ ಕನಿಕರ ಉಂಟಾಗದೆ ಇರುವುದಿಲ್ಲ. ಲಕ್ಷ್ಮಿ ಅವರ ಅಭಿನಯ ನಾಟಕಕ್ಕೆ ಜೀವ ತುಂಬುವಂತಹದು. ಶೇಕ್ಸ್ ಪಿಯರನ ಹಸಿರು ಕೋಟಿನೊಂದಿಗೆ ಮಾತನಾಡುವುದು, ‘ಅವನ ತಲೆ ಮೇಲೆ ಮೊಟುಕಿದೆ’ ಎಂದು ಹೇಳುತ್ತಾ ಆತ ಎಷ್ಟಾದರೂ ತನಗಿಂತ ಚಿಕ್ಕವನು ಎಂದು ಹೆಮ್ಮೆ ಪಡುವ ಭಾವವನ್ನು ಹೇಳುವಲ್ಲಿ ಲಕ್ಷ್ಮಿ ಅವರ ಅಭಿನಯ ಪರಕಾಷ್ಠತೆಯನ್ನು ಮುಟ್ಟುತ್ತದೆ . ಶೇಕ್ಸ್ ಪಿಯರನ ಕಾಲದ ಹಿನ್ನೆಲೆ ಸಂಗೀತ , ವಸ್ತ್ರ ವಿನ್ಯಾಸ , ರಂಗ ಸಜ್ಜಿಕೆ , ಪ್ರಾಪ್ಸ್ - ಬಕೆಟ್ಟಿನಿಂದ ಹಿಡಿದು ಲಂಡನ್ ಬ್ರಿಡ್ಜ್ ವರೆಗೆ ತುಂಬ ಅಥೆಂಟಿಕ್ ಆಗಿದೆ. ಲಕ್ಷ್ಮೀ ಚಂದ್ರ ಶೇಖರ್ ಅಂತಹ ಅಮೋಘ ನಟಿ , ನಮ್ಮ ಕನ್ನಡದ ನಟಿ ಎಂದು ಗರ್ವದಿಂದ ಹೇಳುವಲ್ಲಿ ಹೆಮ್ಮೆಯ ಕೋಡು ಮೂಡುತ್ತದೆ. ಲಕ್ಷ್ಮಿಯವರ ಮತ್ತೊಂದು ಸಾಧನೆ ಎಂದರೆ ಇದೇ ನಾಟಕದ ಇಂಗ್ಲೀಷ್ ಅವತರಣಿಕೆಯಲ್ಲೂ ಅಷ್ಟೇ ನಿರ್ಗಳವಾಗಿ ಅಭಿನಯಿಸುವುದು, ಅದೂ ಕನ್ನಡ ನಾಟಕ ಪ್ರದರ್ಶನವಾದ ಅರ್ಧ ಗಂಟೆಯಲ್ಲೇ. ಅವರ ಅಸಾಧಾರಣ ನೆನಪಿನ ಶಕ್ತಿ, ರಂಗ ನಿರ್ವಹಣೆ ಅನನ್ಯವಾದುದು. ಇಂಥ ಆಕರ್ಷಕ ವಸ್ತುವನ್ನು ಕನ್ನಡಕ್ಕೆ ತಂದುಕೊಟ್ಟ ಉದಯ್ ಇಟಗಿಯವರಿಗೆ ಹಾರ್ದಿಕ ಅಭಿನಂದನೆಗಳು. ಈ ನಾಟಕವನ್ನು ಹೆಚ್ಚು ಹೆಚ್ಚು ಅಭಿಮಾನಿಗಳು ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. - ಡಾ ಮಂಗಳಾ ಪ್ರಿಯದರ್ಶಿನಿ

    In my love poems

  • ಮಂಗಳವಾರ, ಅಕ್ಟೋಬರ್ 17, 2023
  • ಬಿಸಿಲ ಹನಿ
  • ನನ್ನ ಪ್ರೇಮಪದ್ಯಗಳಲ್ಲಿ ಯಾವ ಗಂಡಸನ್ನೂ ಹುಡುಕಬೇಡಿ ನನಗೆ ನನ್ನನ್ನು ಪ್ರೀತಿಸಿಕೊಳ್ಳಲು ಗೊತ್ತಿದೆ ನನ್ನ ಕಣ್ಣ ಹೊಳಪಿನಲ್ಲಿ ಯಾವ ಗಂಡಸಿನ ಚಹರೆಯನ್ನೂ ಹುಡುಕಬೇಡಿ ಕತ್ತಲು ಕುಡಿಯುವ ನಾನು ಬೆಳಕಿನ ಕಿಡಿ ಹೊತ್ತಿರುವೆ ನನ್ನ ಬ್ರಾಂಡೆಡ್ ಬಟ್ಟೆಗಳಿಗೆ ನನ್ನ ಬೆವರಿನ ರಸೀತಿ ಇದೆ ಬಿಯರ್ ಗ್ಲಾಸಿನ ಕೆಳಗೆ ನಾನೇ ತೆತ್ತ ಬಿಲ್ ಇದೆ ಊರೂರು ಸುತ್ತಿದ ಬೀದಿಗಳಲ್ಲಿ ಜೊತೆ ನಡೆದ ಹೆಜ್ಜೆಗಳಿವೆ; ಆ ಹೆಜ್ಜೆಗಳಲ್ಲಿ ಗಂಡಸಿನ ಗುರುತು ಕೆದಕಬೇಡಿ, ಕೆದಕಿದಷ್ಟೂ ನಿಮ್ಮಾಳದ ಸುಪ್ತ ವಾಂಛೆಗಳೇ ಎದ್ದೆದ್ದು ಬರುವವು ಅದುಮಿಟ್ಟ ಬಯಕೆ, ಕೈಗೆಟುಕದ ಜಿದ್ದು ನಿಮ್ಮಷ್ಟೂ ಹೊಟ್ಟೆಕೆಳಗಿನ ನೋವು ಗುಡ್ಡೆಯಾಗುವವು. ಒಂಟಿಹೆಣ್ಣೆಂಬ ಕಣ್ಣಲ್ಲ ನಿಮಗೆ, ಗೊತ್ತಿದೆ; ಮಾತಿನ ಹೆಣ್ಣೆಂಬ ಕಿನಿಸು. ನನ್ನ ಮಾತುಗಳಲ್ಲಿ ಸಂಚು ಹುಡುಕಬೇಡಿ, ಬೆತ್ತಲೆಗಣ್ಣ ಮುಂದೆ ಕನ್ನಡಿ ಇಟ್ಟುಕೊಳ್ಳಿ; ಸಾಕು. ~ ಚೇತನಾ ತೀರ್ಥಹಳ್ಳಿ 2021 In my love poems Don't look for any man I know how to love myself In the twinkle of my eye Don't look for any man's face I who drink darkness carry a spark of light For my branded clothes I have the receipt of my own sweat Under every beer glass, there is a bill that I paid myself. There are some footsteps that walked with me in the streets around the town; Don't search for a man's mark in those footsteps, The more you dig, the more your hidden desires will spring up An unattainable desire and an unreachable revenge Will always haunt you as piles of pain in the lower abdomen. I know Your botheration is not about I am living a single life But it’s about I talk too much Do not look for intrigue in my words, Instead, keep a mirror in front of your naked eyes; that’s enough. From Kannada: Chetana Teerthahalli To English: Uday Itagi

    Today's Top News Bulletins

  • ಗುರುವಾರ, ಸೆಪ್ಟೆಂಬರ್ 07, 2023
  • ಬಿಸಿಲ ಹನಿ

  • "Having raped a woman
    The lechers got her burnt"
    He read this bulletin 
    putting a cigarette on his lips and told his wife-
    "Get me the matchbox
    from my shirt pocket!!”


    "Lovers' naked parade
    is the moral responsibility of police"
    He read this bulletin touching his shoulder
    and told his daughter-
    “Get me my shawl
    and put it on my shoulder
    Then only I feel more courageous."


    “We also have the right to live”
    Tribals protested 
    Having read this line he rubbed his feet against the ground and told his son, 
    "Get me the D.D.T.
    The ants have come in too!”


    "We also have a right to education”
    A Dalit Student made a speech
    He stopped reading halfway, got excited, went running, and said to the housemaid-
    "While cleaning up the library
    Just wipe the floor
    But don't touch the books at all! "

    From Kannada: Wilson Kateel
    To English: Uday Itagi

    It is just a visual poetry of Shakespeare's as well as his wife Anna Hathway's life.

  • ಮಂಗಳವಾರ, ಆಗಸ್ಟ್ 22, 2023
  • ಬಿಸಿಲ ಹನಿ
  • Here is my teacher friend N.Sahitya's review on my play Shakespearana Srimathi.
    Being literature students we have read many of Shakespeare's works and have truly admired him and his work of art. There is always a curiosity to know the other side of the great personalities of everyone in general. Your write-up has showcased Mrs. Shakespeare's perspective towards her husband. With minimum sources, your write-up tries to cover the major feelings of Mrs. Shakespeare which is truly commendable. I understand that it's not that easy to portray the character with such flawlessness. This shows how interested you are and how much pain you might have taken to shape it so beautifully. The ease in the language and the innovative Idea to see the other side of Mr. The Great Shakespeare has added a creative touch to your write-up. Each and every line of yours got wings through Madam Lakshmi's acting. 🙏🌷🙏 Her flawless acting and the grace she portrayed while enacting were very promising and entertaining. The set, sound, background, backdrop, direction, and lighting was perfect and in harmony with the acting. It was a spellbound performance which has surely left all of us to be in the world of Mrs. Shakespeare. Every line lingers in the minds of viewers of the pain and suffering which Mrs. Shakespeare had passed through. Take a bow to the lady who happens to be the protagonist of the play. 🔅🔅🔅 N. Sahitya Lecturer, Dept of English, Sir M.V. P.U.College, Davangere.

    I was drawing pictures

  • ಸೋಮವಾರ, ಜುಲೈ 17, 2023
  • ಬಿಸಿಲ ಹನಿ
  • ಚಿತ್ರ ಬಿಡಿಸುತ್ತಿದ್ದೆ, ‘ಹಾದಿ ಬೀದಿ ಚಿತ್ರ ಬಿಡಿಸುತ್ತೀಯ, ನಮ್ಮದು ಮಾತ್ರ ಬಿಡಿಸಿಲ್ಲ.’ ಕೆಲವರು ದೂರಿದರು. ಅವರು ಕೊಟ್ಟ ಪಟ್ಟಿ, ಪರಿಕರವಿಟ್ಟುಕೊಂಡು ಹೊರಟೆ ಅವರೆದುರು ಕುಳಿತು ಸಿದ್ದಪಡಿಸಿದೆ. ಚಿತ್ರ ನೋಡಿದ ಅವರು ಬೆಚ್ಚಿದರು ಬೊಬ್ಬೆ ಹೊಡೆದರು, ಭೀಕರವಾಗಿದೆಯೆಂದು ಬೈದರು ಬೇಕಂತಲೇ ವಿಕೃತವಾಗಿ ಚಿತ್ರಿಸಿದ್ದೀಯ ಅಂತೆಲ್ಲಾ ನಿಂದಿಸಿದರು ನಾನು ಅವರೆದುರು ಕನ್ನಡಿಯನ್ನಷ್ಟೇ ಇಟ್ಟಿದ್ದೆ. -ಚೇತನಾ ತೀರ್ಥಹಳ್ಳಿ I was drawing pictures ‘You draw a picture of the roads and streets, ‘Only ours you have not drawn.' Some complained. I left with the list and tools they gave me I sat in front of them and prepared. They were shocked when they saw their picture, Shouted, They said it was terrible ‘You have deliberately depicted it in an abnormal way’ They all abused me. In front them I had just kept only the mirror. From Kannada: Chetana Tirthahalli To English: Uday Itagi

    Some questions

  • ಭಾನುವಾರ, ಮೇ 07, 2023
  • ಬಿಸಿಲ ಹನಿ
  • ಕೆಲವು ಪ್ರಶ್ನೆಗಳು Some questions ಈ ಪವಿತ್ರ ಭಾರತದಲ್ಲಿ ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ ಕ್ರೈಸ್ತರಿದ್ದಾರೆ ಸಿಖ್ಖರಿದ್ದಾರೆ ಜೈನರಿದ್ದಾರೆ ಬೌದ್ಧರಿದ್ದಾರೆ ಬ್ರಾಹ್ಮಣರಿದ್ದಾರೆ ಲಿಂಗಾಯತರಿದ್ದಾರೆ ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ ಆದ್ರೆ ನಾನು ಹುಡುಕುತ್ತಿರುವುದು ಮನುಷ್ಯರನ್ನು ದಯಮಾಡಿ ಹೇಳಿ ಅವರೆಲ್ಲಿದ್ದಾರೆ? ಈಗ ದೇಶದ ಉದ್ದಗಲಕ್ಕೂ ಅಸಂಖ್ಯಾತ ಗುಡಿಗಳಿದ್ದಾವೆ ಮಸೀದಿಗಳಿದ್ದಾವೆ ಮಂದಿರಗಳಿದ್ದಾವೆ ಚರ್ಚುಗಳಿದ್ದಾವೆ ಮಠಗಳಿದ್ದಾವೆ ಆದರೆ ನಾನು ಹುಡುಕುತ್ತಿರುವುದು ಅವುಗಳೊಳಗೆ ಇರಬೇಕಾದ ದೇವರನ್ನು ದಯಮಾಡಿ ಹೇಳಿ ಅವನೆಲ್ಲಿದ್ದಾನೆ? ಈ ದೇಶದ ಹಿಂದೂಗಳಿಗೆ ಭಗವದ್ಗೀತೆ ವೇದ ಶಾಸ್ತ್ರ ಪುರಾಣ ಆಗಮಗಳೇ ಮುಸ್ಲಿಮರಿಗೆ ಕುರಾನ್ ಇದೆ ಕ್ರೈಸ್ತರಿಗೆ ಬೈಬಲ್ ಲಿದೆ ಸಿಖ್ಖರಿಗೆ ಗ್ರಂಥ್ ಸಾಹೇಬ್ ಲಿಂಗಾಯತರಿಗೆ ವಚನಗಳಿವೆ ಆದ್ರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ ದಯಮಾಡಿ ಹೇಳಿ ಅದೆಲ್ಲಿದೆ? -ಡಾ.ಜಿ.ಎಸ್. ಶಿವರುದ್ರಪ್ಪ In this holy India There are Hindus and Muslims There are Christians and Sikhs There are Jains and Buddhists There are Brahmins and Lingayaths There are Vokkaligas and untouchables But what I'm looking for is humans Please tell me where are they all? Now across the country There are innumerable borders There are mosques and temples There are Churches and Matths But I'm looking for the God Who is supposed to be inside all of them Please tell me where is he? In this country For the Hindus There is Bhagavad Gita And there are Vedas, Shastras, Puranas and Agamas Muslims have the Koran Christians have the Bible Sikhs have the Grantha Saheb Lingayats have Vachanas But what I'm looking for is love Please tell me where that is. From Kannada: Dr. G.S. Shivarudrappa To English: Uday Itagi

    My play is now in English

  • ಸೋಮವಾರ, ಏಪ್ರಿಲ್ 24, 2023
  • ಬಿಸಿಲ ಹನಿ
  • In prison cells...

  • ಭಾನುವಾರ, ಏಪ್ರಿಲ್ 02, 2023
  • ಬಿಸಿಲ ಹನಿ
  • ಜೈಲಿನ ಕೋಣೆಗಳಲ್ಲಿ... ** ಕೋಣೆ ಒ೦ದು : ಈ ಕೋಣೆಯೊಳಗೆ ಒಂದು ಪುಸ್ತಕವಿತ್ತು. ಕೇಳಿದೆ ನಾನು - "ಏನಿದು ಕೋಣೆಯೊಳಗೆ ಪುಸ್ತಕ? ಯಾರೋ ಕೈದಿ ಓದಿ ಮರೆತು ಹೋಗಿರಬೇಕು..” ಜೈಲಧಿಕಾರಿ ಉತ್ತರಿಸಿದ - "ಇಲ್ಲ.. ಈ ಪುಸ್ತಕ ಬರೆದ ಮಹಾನ್ ಸಾಹಿತಿಗೆ ಆಯ್ಕೆ ಕೊಡಲಾಗಿತ್ತು - ’ಒಂದೋ ನೀನು ಜೈಲಲ್ಲಿರಬೇಕು ಅಥವಾ ನೀನು ಬರೆದ ಈ ಪುಸ್ತಕ’ ಸಾಹಿತಿ ಪುಸ್ತಕವನ್ನು ನಮಗೆ ಒಪ್ಪಿಸಿದ ನಿಮಗೂ ಗೊತ್ತಲ್ವಾ - ಸಾಹಿತಿಗಳು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ” ** ಕೋಣೆ ಎರಡು : ಈ ಕೋಣೆಯೊಳಗೊಂದು ಪಂಜರ ಅದರೊಳಗೊಂದು ಕಾಗೆ! ಕೇಳಿದೆ ನಾನು - “ಅರೆ ಈ ಕಾಗೆಯನ್ಯಾಕೆ ಬಂಧಿಸಿದ್ದೀರಿ? ಯಾರನ್ನಾದರೂ ಕುಕ್ಕಿ ಕುಕ್ಕಿ ಕೊಲೆ ಮಾಡಿತೆ?” ಜೈಲಧಿಕಾರಿ ಉತ್ತರಿಸಿದ - “ಇಲ್ಲ, ನಮ್ಮ ನಾಯಕ ಸುಖದ ನಶೆಯಲ್ಲಿ ತೇಲುತ್ತಿದ್ದಾಗ ತನ್ನ ಒಡೆದು ಹೋದ ಮೊಟ್ಟೆಗಾಗಿ ಈ ಕಾಗೆ ಕರ್ಕಶವಾಗಿ ಕೂಗುತ್ತಿತ್ತು ಅದಕ್ಕಾಗಿ ಬಂಧಿಸಿದ್ದೇವೆ...” ನಿಮಗೀಗ ಅರ್ಥ ಆಗಿರಬಹುದು ಈ ದುರಂತದ ಕಾಲದಲ್ಲೂ ಊರಿನ ಕೋಗಿಲೆಗಳೆಲ್ಲಾ ಏಕೆ ಇಷ್ಟೊಂದು ಮಧುರವಾಗಿ ಹಾಡುತ್ತಿವೆ ಎಂದು! ** ಕೋಣೆ ಮೂರು : ಈ ಕೋಣೆ ಇನ್ನೂ ವಿಚಿತ್ರ! ಒಂದು ವೇಷಭೂಷಣವನ್ನು ಹ್ಯಾಂಗರಿಗೆ ಜೋತು ಹಾಕಲಾಗಿತ್ತು ಕೇಳಿದೆ ನಾನು - “ಏನಿದರ ವಿಷಯ?” ಜೈಲಧಿಕಾರಿ ಉತ್ತರಿಸಿದ - "ನಮ್ಮ ನಾಯಕನ ಭಾಷಣದಲ್ಲಿ ದ್ವೇಷವಿದೆ ಎಂದು ಯಾರೋ ದಾವೆ ಹೂಡಿದ್ದರು. ನಮ್ಮ ಪರ ವಕೀಲ ’ಆ ಭಾಷಣವೆಲ್ಲಾ ಈ ವೇಷದ ಪ್ರಭಾವ. ಆದ್ದರಿಂದ ಈ ವೇಷಕ್ಕಷ್ಟೆ ಶಿಕ್ಷೆಯಾಗಬೇಕು’ ಎಂದು ವಾದಿಸಿ ಗೆದ್ದಿದ್ದರಿಂದ ಈ ವೇಷ ಈಗ ಶಿಕ್ಷೆಯನ್ನು ಅನುಭವಿಸುತ್ತಿದೆ! ** ಕೋಣೆ ನಾಲ್ಕು : ಈ ಕೋಣೆಯ ಗೋಡೆಯ ಮೇಲೆ ಕೆಲವೊಂದು ಅಂಕೆ ಸಂಖ್ಯೆಗಳನ್ನು ಗೀಚಲಾಗಿತ್ತು. ಕುತೂಹಲದಿಂದ ಕೇಳಿದೆ – “ಏನಿದರ ಮರ್ಮ?” ಜೈಲಧಿಕಾರಿ ಉತ್ತರಿಸಿದ - “ಇವು ಬರೀ ಸಂಖ್ಯೆಗಳಲ್ಲ ಸಂವಿಧಾನದ ಕಲಮ್ಮುಗಳು ನಿಮಗೆ ಗೊತ್ತಲ್ಲ.. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧವೆಂದು. ಅದಕ್ಕಾಗಿಯೇ ಜನರ ಕೈಗೆ ಸಿಗದಂತೆ ಕೆಲವು ಕಾನೂನುಗಳನ್ನು ಬಂಧಿಸಿಟ್ಟಿದ್ದೇವೆ!" ** ಕೊನೆಯ ಕೋಣೆ : ಅರೆ ಈ ಕೋಣೆ ಖಾಲಿ! ದಿಗ್ಭ್ರಮೆಯಿಂದ ಕೇಳಿದೆ ನಾನು - "ಈ ಕೋಣೆಯಲ್ಲಿರಬೇಕಿದ್ದ ಅತಿ ಕ್ರೂರಿ ಕೊಲೆಗಡುಕ ಅಪರಾಧಿ ಎಲ್ಲಿ?” ಜೈಲಧಿಕಾರಿ ನಗುತ್ತಾ ಉತ್ತರಿಸಿದ - “ನಿನಗೆ ಗೊತ್ತಿಲ್ವಾ? ಅವನು ಈಗಗಲೇ ಬಿಡುಗಡೆಗೊಂಡು ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿದ್ದಾನೆ.. ನೀನು ಆತನನ್ನು ಜೈಲೊಳಗೆ ಹುಡುಕಿ ಬಂದ ಈ ಹೊತ್ತು ಆತ ಮತಕ್ಕಾಗಿ ನಿನ್ನ ಮನೆಯ ಬಾಗಿಲು ತಟ್ಟುತ್ತಿರಬಹುದು.. *** ವಿಲ್ಸನ್ ಕಟೀಲ್ In prison cells... *** Cell one: A book was lying inside the room I asked - "Why is this book lying over here? Some prisoner must have read and forgotten to take it with him.” The jailer replied – "No. To the great writer who wrote this book A choice was given – You should either be in jail Or this book you wrote” The writer handed over this book to us You know very well ‘Litterateur always likes freedom.’ *** Cell two: Inside this room there is a cage And a crow in it! I asked - “Why did you put this crow over here? Has it murdered someone?” The jailer replied – “No, when our leader was floating in the intoxication of happiness This crow was crowing hoarsely For its cracked egg So it was arrested...” You may have understood now Why are the cuckoos in the town Singing so sweetly even in this bad time! *** Cell three: This cell is still strange! A dress was hung on a hanger I asked - "What’s the news about this dress?" The jailer replied – "There was hatred in our leader's speech And someone had filed a case against him. Our lawyer advocated ‘All that speech is because of the influence of this dress. So it should be punished” Just because he argued and won the case This costume is now being punished. *** Cell four: On the wall of this cell Some numbers were scratched. I curiously asked – "What is the secret of this?" The jailer replied – “These are not just numbers but articles of the constitution. You know that Taking the law into one's hands is a crime. So only we have jailed some laws over here To ensure that they are not reachable for the common people!" *** Last cell: Oh, this room is empty! Bewildered I asked - “Where is the most brutal murderous criminal who was supposed to be in this cell?” The jailer smiled and replied - “You know? He is now released He is currently in the election campaign. The time when you come to find him in the prison He might be knocking on your door for votes.” *** From Kannada: Wilson Kateel To English: Uday Itagi