Demo image Demo image Demo image Demo image Demo image Demo image Demo image Demo image

Who Will Listen?

  • ಬುಧವಾರ, ಮಾರ್ಚ್ 26, 2025
  • ಬಿಸಿಲ ಹನಿ
  • ಕೇಳುವವರು ಯಾರು? ಸಾಗರವೇ ಮೇರೆ ಮೀರಿ ಧರೆಯೇ ಬಿರಿಯುತಿರುವಾಗ ತಾರೆಗಳ ಹಾಡು ಕೇಳುವವರು ಯಾರು? ಹರಿದ ಅರಿವೆ ಉಟ್ಟ ಹುಡುಗ ಇರುಳ ಚಳಿಗೆ ಹೊರಳುವಾಗ ಚಂದಿರನ ಹಾಡು ಕೇಳುವವರು ಯಾರು? ಜಾತಿ ಮತದ ಬೆಂಕಿಯಲ್ಲಿ ಜಗವೇ ಹೊತ್ತು ಉರಿಯುವಾಗ ನೇಸರನ ಹಾಡು ಕೇಳುವವರು ಯಾರು ಹಸಿದವರ ಕಣ್ಣಿನಲ್ಲಿ ಕಂಬನಿಯು ಹರಿಯುವಾಗ ಕವಿ ಎದೆಯ ಹಾಡು ಕೇಳುವವರು ಯಾರು? -ಎಂ ಆರ್. ಕಮಲ Who Will Listen? When the ocean crosses its limits, When the earth begins to crack, Who will listen to the song of the stars? When a boy clad in ragged clothes, And trembles in the biting cold of the night, Who will listen to the song of the moon? When the world burns In the fire of caste and creed Who will listen to the song of the sun? When tears flow From the eyes of the hungry, Who will listen to the poet’s song? Kannada Original: M. R. Kamala English Translation: Uday Itagi