ಹೌದು, ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ! ಹಾಗಂತ ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಹೆಮ್ಮೆ ಯಾಕೆಂದರೆ ನನಗೆ ದುಡ್ಡಿನ ಬೆಲೆ ಚನ್ನಾಗಿ ಅರ್ಥವಾಗಿದೆಯೆಂದರ್ಥ. ಅದಕ್ಕೆ ಹೇಗೆ ಮರ್ಯಾದೆ, ಗೌರವಗಳನ್ನು ಕೊಡಬೇಕೆಂದು ಚನ್ನಾಗಿ ಮನನವಾಗಿದೆಯೆಂದರ್ಥ. ಮೊದಲು ನನಗೆ ದುಡ್ಡಿನ ಬೆಲೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅಷ್ಟಾಗಿ ಗೊತ್ತಿರಲಿಲ್ಲ. ಹೀಗಾಗಿ ಅವರಿವರಿಗೆ ಕೊಟ್ಟು ಕಳೆದುಕೊಂಡೆ. ಅನೇಕ ಕಡೆ ಕೈ ಸುಟ್ಟುಕೊಂಡೆ. ಮೊದಲು ದುಡ್ಡಿನ ವಿಷಯದಲ್ಲಿ ಭಾವುಕನಾಗಿ ಯೋಚನೆ ಮಾಡುತ್ತಿದ್ದೆ. ಆದರೆ ಈಗ ಪಕ್ಕಾ ವ್ಯವಹಾರಸ್ಥನಾಗಿ ಬದಲಾಗಿದ್ದೇನೆ. ಮೊದಲೆಲ್ಲಾ ಸ್ನೇಹಿತರಿಗೆ, ಬಂಧುಗಳಿಗೆ ಸುಲಭವಾಗಿ ಹಣ ಕೊಡುತ್ತಿದ್ದೆ. ಕೊಟ್ಟಮೇಲೆ ಅದನ್ನು ವಾಪಾಸು ಕೇಳಲು ಹಿಂದೆಮುಂದೆ ನೋಡುತ್ತಿದ್ದೆ. ಒಂದುವೇಳೆ ಕೊಡದಿದ್ದರೂ ಸುಮ್ಮನಾಗುತ್ತಿದ್ದೆ. ಆದರೆ ಈಗ ಹಾಗಲ್ಲ. ಇದಕ್ಕೆ ತದ್ವಿರುದ್ಧವಾಗಿ ಬದಲಾಗಿದ್ದೇನೆ. ಬಹಳಷ್ಟು ಬದಲಾಗಿದ್ದೇನೆ.
ಇದೀಗ ಯಾರಾದರೂ ಹಣ ಕೇಳಲು ಬಂದರೆ ಮೊದಲು “ಇಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತೇನೆ. ನಾನು ಕೊಡದಿದ್ದರೆ ಅವನೇನೆಂದುಕೊಳ್ಳುತ್ತಾನೋ? ಎಲ್ಲಿ ದೂರವಾಗುತ್ತಾನೋ? ಎಂದು ಭಯಪಡುವದಿಲ್ಲ. ಸಂಬಂಧಗಳಲ್ಲಿ, ಹತ್ತಿರದವರಲ್ಲಂತೂ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವದಿಲ್ಲ. ಏಕೆಂದರೆ ಒಂದುವೇಳೆ ಅವರು ವಾಪಾಸು ಕೊಡದೇಹೋದಾಗ ತೀರಾ ನಿಕೃಷ್ಟವಾಗಿ ಕೊಡಿ ಎಂದು ಕೇಳಲಾಗದು. ಹೋಗಲಿ ಅವರ ಸಂಬಂಧವನ್ನಾದರು ಹರಿದುಕೊಳ್ಳೋಣವೆಂದರೆ ಅದೂ ಸಾಧ್ಯವಾಗದು. ಮೇಲಾಗಿ ಆಗಾಗ ಅವರ ಮುಖವನ್ನು ನೋಡಬೇಕಾಗುವದು ಮತ್ತು ನೋಡಿದಾಗಲೆಲ್ಲಾ ಅವರು ಮಾಡಿದ ಮೋಸ ನೆನಪಾಗಿ ಮನಸ್ಸಿಗೆ ಒಂಥರಾ ಹಿಂಸೆ ಅನಿಸುತ್ತದೆ. ಅದೇ ದೂರದವರಾದರೆ ವಾಪಾಸು ಕೊಡದಿದ್ದರೂ ಪರ್ವಾಗಿಲ್ಲ ಪೀಡೆ ಹೋಯ್ತು ಎಂದು ಸುಮ್ಮನಿರಬಹುದು.
ಹಾಗೆ ಒಂದುವೇಳೆ ಕೊಡಲೇಬೇಕಿನಿಸಿದರೆ ಮೊದಲು ಹಣ ತೆಗೆದುಕೊಳ್ಳುವವನ ಹಿನ್ನೆಲೆ ವಿಚಾರಿಸುತ್ತೇನೆ. ಏನು ಕೆಲಸದಲ್ಲಿದ್ದಾನೆ? ಎಷ್ಟು ಸಂಬಳ ಇದೆ? ಆ ಸಂಬಳದಲ್ಲಿ ಅವನು ತನ್ನ ಮನೆಗೆ ಅಂತಾ ಖರ್ಚುಮಾಡಿ ಅದರಲ್ಲಿ ಎಷ್ಟು ಉಳಿಸುತ್ತಾನೆ? ಉಳಿಸುವ ಹಣದಿಂದ ಅವನಿಗೆ ಹಿಂತಿರುಗಿಸುವ ಸಾಮರ್ಥ್ಯ ಇದೆಯಾ? ಇಲ್ವಾ? ಎಂದೆಲ್ಲಾ ಮುಲಾಜಿಲ್ಲದೆ ಬ್ಯಾಂಕುಗಳಲ್ಲಿ ಸಾಲ ಕೊಡುವ ಮುನ್ನ ಹೇಗೆ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾನು ಸಹ ಕೇಳಿ ತಿಳಿದುಕೊಳ್ಳುತ್ತೇನೆ. ಇಷ್ಟಕ್ಕೂ ಅವನ ಉತ್ತರಗಳಿಂದ ಸಂತೃಪ್ತನಾದರೆ ಮಾತ್ರ ಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮುಖಕ್ಕೆ ಹೊಡೆದಹಾಗೆ ಹೇಳಿಬಿಡುತ್ತೇನೆ.
ಹಾಗೇನೆ, ನಾನು ಹಣವಿದೆ ಎಂದು ಸಿಕ್ಕ ಸಿಕ್ಕಹಾಗೆ ಖರ್ಚು ಮಾಡುವದಿಲ್ಲ. ತೀರಾ ಅನಿವಾರ್ಯ, ಅಗತ್ಯ ಮತ್ತು ಅವಶ್ಯಕತೆ ಎನಿಸಿದರೆ ಮಾತ್ರ ಖರ್ಚು ಮಾಡುತ್ತೇನೆ. ನಾನು ಏನಾದರು ಕೊಂಡುಕೊಳ್ಳಬೇಕಾದರೆ ಧಿಡೀರೆಂದು ಸುಮ್ಮನೆ ಹಾಗೆ ಹೋಗಿ ಕೊಳ್ಳುವದಿಲ್ಲ. ಮೊದಲು ಆ ವಸ್ತುಗಳ ಬೆಲೆಯನ್ನು ಇಂಟರ್ನೆಟ್‍ನಲ್ಲಿ ಹುಡುಕಿ ತಿಳಿದುಕೊಳ್ಳುತ್ತೇನೆ. ಆನಂತರ ನಾಲ್ಕೈದು ಕಡೆ ವಿಚಾರಿಸಿ ಎಲ್ಲಿ ಕಡಿಮೆಯಿರುತ್ತದೋ ಅಲ್ಲಿ ತೆಗೆದುಕೊಳ್ಳುತ್ತೇನೆ. ಹಾಗೇನೆ, ನಾನು ಐಷಾರಾಮಿ ಹೋಟೆಲ್‍ಗಳಿಗೆ ಹೋಗುವದಾಗಲಿ, ಅಲ್ಲಿ ತಂಗುವದಾಗಲಿ ಯಾವತ್ತೂ ಮಾಡಿಲ್ಲ. ಅಷ್ಟೊಂದು ಐಷಾರಾಮಿ ಮನಸಿಗೆ ಹಿಡಿಸದು ಹಾಗೂ ಒಗ್ಗದು. ಸಾಧ್ಯವಾದಷ್ಟು ಖರ್ಚನ್ನು ಕಡಿಮೆ ಮಾಡಲು ನೋಡುತ್ತೇನೆ. ಈ ವಿಷಯದಲ್ಲಿ ಬೇರೆಯವರು ನನ್ನನ್ನು “ಜುಗ್ಗ” ಎಂದರೂ ಪರ್ವಾಗಿಲ್ಲ. ನಾನದನ್ನು ತಲೆಗೆ ಹಚ್ಚಿಕೊಳ್ಳುವದಿಲ್ಲ.
ಅಂದಹಾಗೆ ನನ್ನ ಇಷ್ಟು ವರ್ಷದ ಜೀವಿತಾವಧಿಯಲ್ಲಿ ಹಣದ ವಿಷಯದಲ್ಲಿ ನನಗೆ ಎರಡು ಸತ್ಯಗಳು ಗೊತ್ತಾಗಿವೆ:
1. ನಾವು ಗಳಿಸಿದ ಹಣಕ್ಕಿಂತ ಉಳಿಸಿದ ಹಣ ಹೆಚ್ಚುಕಾಲ ಬರುತ್ತದೆ.
2. ನಮ್ಮಲ್ಲಿರುವ ಹಣದಿಂದ ನಾವು ಶ್ರೀಮಂತರಾಗುವದಿಲ್ಲ. ಆದರೆ ನಾವು ಅದಕ್ಕೆ ಕೊಡುವ ಮರ್ಯಾದೆ ಮತ್ತು ಗೌರವಗಳಿಂದ ಶ್ರೀಮಂತರಾಗುತ್ತೇವೆ.
ಅನಾಮೇಧಯನೊಬ್ಬನ ಡೈರಿಯ ಒಂದಷ್ಟು ಪುಟಗಳು-ನಾನೀಗ ಪಕ್ಕಾ ವ್ಯವಹಾರಸ್ಥನಾಗಿದ್ದೇನೆ!
ಕಾಡಿಗೆ ಎದುರಾಗಿ ನಿಂತ ಹುಡುಗಿ (ಕೊನೆಯ ಭಾಗ)
ಅಲ್ಲಿ ದೋಣಿಯಿದ್ದ ಮೇಲೆ ಹತ್ತಿರದಲ್ಲೆಲ್ಲೋ ಮನುಷ್ಯರು ಇರಲೇಬೇಕೆಂದು ಖಾತ್ರಿಯಾಯಿತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ! ಕುಣಿದು ಕುಪ್ಪಳಿಸಿದೆ!
ಆ ದೋಣಿಯನ್ನು ನದಿ ದಂಡೆಯ ಮೇಲೆ ಹಗ್ಗದಿಂದ ಕಟ್ಟಲಾಗಿತ್ತು. ಅದರ ಪಕ್ಕದಲ್ಲಿಯೇ ಒಂದು ಸಣ್ಣ ಕಾಲ್ದಾರಿ ಹೋಗಿರುವದು ಕಾಣಿಸಿತು. ನಾನು ಆ ದಾರಿಯಗುಂಟ ಸುಮ್ಮನೆ ಒಮ್ಮೆ ಕಣ್ಣು ಹಾಯಿಸಿದೆ. ಸಮೀಪದಲ್ಲಿ ತಾಳೆ ಗರಿಗಳಿಂದ ಕಟ್ಟಿದ ಗುಡಿಸಲೊಂದು ಇರುವದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಅದನ್ನು ಹೊಸದಾಗಿ ನಿರ್ಮಿಸಿದ್ದಂತೆ ಕಂಡಿತು.ಅದರ ಒಳಗಡೆ ಒಂದು ಪ್ಲಾಸ್ಟಿಕ್ ಹಾಳೆಯಿತ್ತು. ಅದರ ಕೆಳಗಡೆ ಒಂದು ಪೆಟ್ರೋಲ್ ತುಂಬಿದ ಕ್ಯಾನು ಹಾಗೂ ಒಂದು ಔಟ್‍ಬೋರ್ಡ್ ಮೋಟಾರು ಇತ್ತು.
ಆ ಗುಡಿಲದ ನೆಲ ಒರಟೊರಟಾಗಿತ್ತು. ಕತ್ತಲಾದ ಮೇಲೆ ನಾನು ಅಲ್ಲೇ ಮಲಗಿದೆ. ಈ ಒಂಬತ್ತು ದಿನಗಳಲ್ಲಿ ಮೊಟ್ಟಮೊದಲ ಬಾರಿಗೆ ನನಗೊಂದು ಚಾವಣಿ ಸಿಕ್ಕಿತ್ತು. ಆದರೆ ಅಲ್ಲಿ ತುಂಬಾ ಸೊಳ್ಳೆಗಳಿದ್ದುದರಿಂದ ಸರಿಯಾಗಿ ನಿದ್ರೆ ಹತ್ತಲಿಲ್ಲ. ಮೇಲಾಗಿ ಆ ಕಾಡಿನ ಮಧ್ಯದಿಂದ ಯಾವುದದರೂ ಮಾನವ ದನಿಗಳು ತೇಲಿಬರುತ್ತಾವೇನೋ ಎಂಬ ದೂರದ ಆಸೆಯಿಂದ ರಾತ್ರಿಯೆಲ್ಲಾ ಕಿವಿ ತೆರೆದು ಕುಳಿತೆ. ಹಾಗೆ ಕಾಯುವದು ದಡ್ಡತನವೆಂದು ನನಗೆ ಗೊತ್ತಿತ್ತು. ಆದರೂ ಕಾಯ್ದೆ; ಯಾರಾದರೂ ಬಂದಾರೆಂಬ ನಿರೀಕ್ಷೆಯಲ್ಲಿ! ಅಂಥ ದಟ್ಟ ಕಾಡಿನಲ್ಲಿ ಅದೂ ಅಂಥ ಅಪರಾತ್ರಿಯಲ್ಲಿ ಯಾರು ತಾನೆ ಓಡಾಡಿಯಾರು?
ಮರುದಿವಸ ಮುಂಜಾನೆ ಯಾರಾದರೂ ದೋಣಿಯನ್ನು ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆಂಬ ಒಂದು ಸಣ್ಣ ಆಸೆಯಿತ್ತು. ಅವರಿಗಾಗಿ ಕಾಯುತ್ತಾ ಕುಳಿತೆ. ಅವರು ಈಗಲೇ ಬರುತ್ತಾರೋ? ಇವತ್ತೇ ಬರುತ್ತಾರೋ? ಇನ್ನೆರೆಡು ದಿನ ಬಿಟ್ಟು ಬರುತ್ತಾರೋ? ಅಥವಾ ವಾರ ಬಿಟ್ಟು ಬರುತ್ತಾರೋ? ಒಂದೂ ಗೊತ್ತಿರಲಿಲ್ಲ. ಅಥವಾ ಬರದೇನೂ ಇರಬಹುದು! ಯಾರಿಗೆ ಗೊತ್ತು? ಕಾಡು ಅವರನ್ನು ನುಂಗಿಹಾಕಿದ್ದರು ಹಾಕಿರಬಹುದು!
ನನಗೆ ಅವರು ತಕ್ಷಣಕ್ಕೆ ಬರುತ್ತಾರೆಂಬ ನಂಬಿಕೆ ಇರಲಿಲ್ಲ. ಅವರಿಗಾಗಿ ಕಾಯುತ್ತಾ ಕುಳಿತುಕೊಳ್ಳುವದು ಮೂರ್ಖತನ ಎನಿಸಿತು. ನಾನು ನನ್ನ ಪ್ರಯಾಣವನ್ನು ಮುಂದುವರಿಸಲೇಬೇಕಿತ್ತು. ಆ ದೋಣಿಯನ್ನು ತೆಗೆದುಕೊಂಡು ಹೊರಡಲೇ? ಎಂದು ಒಂದು ಕ್ಷಣ ಯೋಚಿಸಿದೆ. ಆದರದನ್ನು ನಡೆಸುವದು ಹೇಗೆಂದು ನನಗೆ ಸರಿಯಾಗಿ ಗೊತ್ತಿರಲಿಲ್ಲವಾದ್ದರಿಂದ ಆ ಯೋಚನೆಯನ್ನು ಕೈ ಬಿಟ್ಟೆ. ಮೇಲಾಗಿ ಕಳ್ಳತನ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಮೊದಲಿನಂತೆ ನಡೆಯುತ್ತಾ ಈಜುತ್ತಾ ಹೋಗುವದೇ ವಾಸಿ ಎನಿಸಿತು!
ಮಳೆ ಜೋರಾಗಿ ಸುರಿಯತ್ತಿತ್ತು. ನದಿ ಉಕ್ಕೇರುತ್ತಿತ್ತು. ಈ ಜೋರು ಮಳೆ ನನ್ನ ಮೈಗೆ ಅಂಟಿಕೊಂಡಿದ್ದ ಸಣ್ಣ ಸಣ್ಣ ಕ್ರಿಮಿಗಳನ್ನೆಲ್ಲಾ ಸಂಪೂರ್ಣವಾಗಿ ಕೊಚ್ಚಿಹಾಕಿತ್ತು. ಸಧ್ಯ, ನಾನು ಬದುಕಿಕೊಂಡೆ!
ಆ ಗುಡಿಸಲಲ್ಲಿ ಒಂದು ವ್ಯಾಸಲೀನ್ ಟ್ಯೂಬು ಇತ್ತು. ಅದರಿಂದ ಸೊಳ್ಳೆಗಳನ್ನು ದೂರವಿಡಬಹುದೆಂದು ಯೋಚಿಸಿ ಅದನ್ನು ಮೈಗೆ ಹಚ್ಚಿಕೊಂಡೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮೈಗೆ ಸಾಕಷ್ಟು ಮ್ಯಾಗಟ್‍ಗಳು* ಬೇರೆ ಅಂಟಿಕೊಂಡಿದ್ದವು. ಅಲ್ಲೇ ಇದ್ದ ತಾಳೆ ಗರಿಯೊಂದರಿಂದ ಚೂಪಾದ ಕಡ್ಡಿಯೊಂದನ್ನು ಮಾಡಿ ಮೈಗೆ ಅಂಟಿಕೊಂಡಿದ್ದ ಮ್ಯಾಗಟ್‍ಗಳನ್ನು ಕಿತ್ತುಹಾಕಿದೆ. ಹೀಗೆ ಸುಮಾರು 25 ಮ್ಯಾಗಟ್ಗಳನ್ನು ಕಿತ್ತುಹಾಕಿದೆ. ಇನ್ನು ಕೆಲವನ್ನು ಹಲ್ಲಿನಿಂದ ಕಿತ್ತೆಸೆದೆ.
ನನ್ನ ಬಲಗೈ ತೋಳಲ್ಲಿ ಸಣ್ಣದಾಗಿ ಆರಂಭವಾಗಿದ್ದ ನೋವು ಇದೀಗ ಹೆಚ್ಚಿತ್ತು. ಅದನ್ನು ಕತ್ತರಿಸಿ ಹಾಕಿಬಿಡಲೋ ಎನ್ನುವಷ್ಟರ ಮಟ್ಟಿಗೆ ನೋವು ಹೆಚ್ಚಾಗಿತ್ತು.
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆ ಕಾಡಿನಲ್ಲಿ ಮನುಷ್ಯರು ಮಾತನಾಡುವದು ಕೇಳಿಸಿತು. ಅವರು ನಾನಿರುವ ಗುಡಿಸಲಿನತ್ತಲೇ ಬರುತ್ತಿದ್ದರು. ಅವರು ಒಟ್ಟು ಮೂರು ಜನ. ಚಡ್ಡಿ ಹಾಕಿದ್ದರು, ಬರಿಗಾಲಲ್ಲಿದ್ದರು, ಸ್ಪ್ಯಾನಿಷ್‍ನಲ್ಲಿ ಮಾತಾಡುತ್ತಿದ್ದರು. ಅವರಲ್ಲೊಬ್ಬ ನನ್ನ ನೋಡಿದವನೆ “ಹೇ, ಯಾರಲ್ಲಿ? ಇಲ್ಲೇನು ಮಾಡುತ್ತಿರುವೆ?” ಎಂದು ಕೇಳಿದ. ವಿಮಾನ ಅಪಘಾತಕ್ಕೀಡಾಗಿ ಹತ್ತೂವರೆ ದಿವಸಗಳ ಮೇಲೆ ಮೊಟ್ಟಮೊದಲಬಾರಿಗೆ ಮನುಷ್ಯರ ದನಿಯನ್ನು ಕೇಳಿದ್ದೆ.
ಅಲ್ಲಿಯವರೆಗೂ ನಾನೊಬ್ಬಳೇ ಕಾಡಿಗೆ ಎದುರಾಗಿ ನಿಂತಿದ್ದೆ ಒಂಟಿಯಾಗಿ. ಆದರೆ ಇದೀಗ ಒಂಟಿ ಎನಿಸಲಿಲ್ಲ. ನನ್ನ ಜೊತೆಗೆ ಈ ಮೂವರಿದ್ದರು ಭರವಸೆಯ ಬೆಳಕಾಗಿ, ಸಹಾಯ ನೀಡುವ ಹಸ್ತವಾಗಿ, ದಾರಿ ತೋರುವ ಕೈಮರವಾಗಿ.
ನಾನು ಅದೃಷ್ಟ ಮಾಡಿದ್ದೆ; ಒಂದಲ್ಲ, ಎರಡೆರೆಡು ಸಾರಿ! ಮೊದಲನೆಯದಾಗಿ ನಾನು ಈ ಜಾಗದಲ್ಲಿ ದೋಣಿಯನ್ನು ನೋಡಿದ ಮೇಲೂ ಅದರ ಹತ್ತಿರ ಬಾರದೆ ಹಾಗೆ ಹೊರಟು ಹೋಗಿದ್ದರೆ ಅದಕ್ಕಂಟಿಕೊಂಡಿರುವ ಗುಡಿಸಲನ್ನು ಸಹ ನೋಡುವ ಅದೃಷ್ಟ ಸಿಗುತ್ತಿರಲಿಲ್ಲವೇನೋ! ಅಥವಾ ಒಂದುವೇಳೆ ಅಕಸ್ಮಾತ್ ನಾನು ಈಜಿಕೊಂಡು ಹೋಗಿದ್ದರೆ ಆ ಗುಡಿಸಲನ್ನು ನೋಡದೆ ಹಾಗೆ ಹೊರಟು ಹೋಗುತ್ತಿದ್ದನೇನೋ!
ಎರಡನೆಯದಾಗಿ ಈ ಮೂರು ಜನ ಈ ಗುಡಿಸಲಿಗೆ ವಾರಕ್ಕೊಂದು ಸಾರಿ ಮಾತ್ರ ಬಂದು ಒಂದು ರಾತ್ರಿ ಕಳೆದು ಹೋಗುತ್ತಿದ್ದರು. ಅಕಸ್ಮಾತಾಗಿ ನಾನು ಈ ಸ್ಥಳಕ್ಕೆ ಒಂದು ದಿನ ತಡವಾಗಿ ಬಂದಿದ್ದರೂ ನನಗೆ ಅವರು ಸಿಗುತ್ತಿರಲಿಲ್ಲ. ಏಕೆಂದರೆ ಮಾರನೆಯ ದಿನ ಬೆಳಿಗ್ಗೆ ಅವರು ಇಲ್ಲಿಂದ ಅದಾಗಲೇ ಹೋಗುವವರಿದ್ದರು!
*ನಮ್ಮಲ್ಲಿನ ಜಿಗಣೆ ತರದ ಒಂದು ಜಾತಿಯ ಕೀಟ.
ಮೂಲ ಇಂಗ್ಲೀಷ್: ಜ್ಯೂಲಿಯನ್ ಕೆಫ್ಕೆ
ಕನ್ನಡಕ್ಕೆ: ಉದಯ್ ಇಟಗಿ
ಭಾಗ-೧ http://bisilahani.blogspot.com/2011/10/1.html
ಭಾಗ -೨ http://bisilahani.blogspot.com/2011/10/2.html

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಅರ್ಬುದನ ಡೈರಿ – ಹೊಸ ಪುಸ್ತಕ1 ವಾರದ ಹಿಂದೆ
-
ದಾವಣಗೆರೆಯಲ್ಲಿ ಸಿಟಿ ಬಸ್ ಹಿಡಿದು...2 ತಿಂಗಳುಗಳ ಹಿಂದೆ
-
Hello world!4 ತಿಂಗಳುಗಳ ಹಿಂದೆ
-
ಮಾತು ಮರೆತವರೇ ಜಗತ್ತನ್ನಾಳುತ್ತಾರೆ6 ತಿಂಗಳುಗಳ ಹಿಂದೆ
-
Sawanna @167 ತಿಂಗಳುಗಳ ಹಿಂದೆ
-
-
-
ತರಚೀ ಪುಷ್ಪೋಪಾಖ್ಯಾನ11 ತಿಂಗಳುಗಳ ಹಿಂದೆ
-
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ1 ವರ್ಷದ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!2 ವರ್ಷಗಳ ಹಿಂದೆ
-
-
ತಪ್ಪು ಬಿಗಿದಪ್ಪು6 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?6 ವರ್ಷಗಳ ಹಿಂದೆ
-
ದ್ವಿಪದಿಗಳು6 ವರ್ಷಗಳ ಹಿಂದೆ
-
ಹೊಸ ದಿನ6 ವರ್ಷಗಳ ಹಿಂದೆ
-
The story of telling a story!6 ವರ್ಷಗಳ ಹಿಂದೆ
-
-
-
ಆಸೆ....!!!7 ವರ್ಷಗಳ ಹಿಂದೆ
-
ಡ್ರಾಫ್ಟ್ ಸೇರಿದ ಮೊದಲ ಪತ್ರ : Draft Mail – 27 ವರ್ಷಗಳ ಹಿಂದೆ
-
ಮಿ ಟೂ ಅಭಿಯಾನ ಮತ್ತು ಉನ್ಮಾದದ ಸಾಹಿತ್ಯ!7 ವರ್ಷಗಳ ಹಿಂದೆ
-
ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ7 ವರ್ಷಗಳ ಹಿಂದೆ
-
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?8 ವರ್ಷಗಳ ಹಿಂದೆ
-
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!8 ವರ್ಷಗಳ ಹಿಂದೆ
-
ದಿ ಥಿಯರಿ ಆಫ್ ಎವೆರಿಥಿಂಗ್8 ವರ್ಷಗಳ ಹಿಂದೆ
-
ಮಾಯೆ9 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ9 ವರ್ಷಗಳ ಹಿಂದೆ
-
ಗಂಜಿ ಗಿರಾಕಿಗಳು !!9 ವರ್ಷಗಳ ಹಿಂದೆ
-
ನಿತ್ಯಸ್ಥಾಯಿ ಚಿತ್ರ9 ವರ್ಷಗಳ ಹಿಂದೆ
-
ಅತಿಕ್ರಮಣವಾಗಿದೆ ಮಲೆನಾಡಿನ ಬದುಕು9 ವರ್ಷಗಳ ಹಿಂದೆ
-
-
ಚಳಿಗಾಲದ ತೀವ್ರತೆ..!10 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:10 ವರ್ಷಗಳ ಹಿಂದೆ
-
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ10 ವರ್ಷಗಳ ಹಿಂದೆ
-
ಹೋಗಿ ಬನ್ನಿ ಕಲಾಂ ಸಾರ್10 ವರ್ಷಗಳ ಹಿಂದೆ
-
ಕತ್ತಲೆ.................10 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..10 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ11 ವರ್ಷಗಳ ಹಿಂದೆ
-
ಸಾವು ಬದುಕಿನ ಆಟ11 ವರ್ಷಗಳ ಹಿಂದೆ
-
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು11 ವರ್ಷಗಳ ಹಿಂದೆ
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!11 ವರ್ಷಗಳ ಹಿಂದೆ
-
-
ಗಾಜಿನ ಲೋಟದಲ್ಲಿ ರಸ್ನಾ12 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ12 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ12 ವರ್ಷಗಳ ಹಿಂದೆ
-
ನಿನ್ನೊಳಗಿರಲು ನಾ ಯಾರೇ...?12 ವರ್ಷಗಳ ಹಿಂದೆ
-
ತೀರ....12 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ13 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?13 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ13 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು13 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ13 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)13 ವರ್ಷಗಳ ಹಿಂದೆ
-
(ಮಹಿಳಾ)ವಾದ:14 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ14 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…14 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ14 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ14 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್15 ವರ್ಷಗಳ ಹಿಂದೆ
-
ಕಫನ್15 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …15 ವರ್ಷಗಳ ಹಿಂದೆ
-
ನನ್ನ ಜಡೆ15 ವರ್ಷಗಳ ಹಿಂದೆ
-
ಕೇಳಿ-೫15 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು15 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು16 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧16 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ16 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ16 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು16 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು16 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?17 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !17 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...18 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.