*Amrapali*
She was the only one Amrapali...
A seductive courtesan with a mesmerising walk...
So enchanting that
Even the low mentalities of the world
Would envy in disgust
At her beauty...
If she had bewitched
The so called Purushottama,
Be it Rama,
Or Lakshmana,
She would have been branded a demon today.
Her beautiful breasts
Would have been cut by the sword's edge...
Her charming nose disfigured,
And her long locks cut off mercilessly...
But now...
She has bewitched,
And stood firm
Not before a deity,
But before
My Buddha
A true human being...
In the pages of history,
A courtesan
Chose to live as a monk by her own will,
And the true compassion of this Buddha's land
Is not not a mere sinister thing...
*Kannada Original: Manjula Hulikunte*
*English Translation: Uday Itagi*
*ಅಮ್ರಪಾಲಿ*
ಅವಳೊಬ್ಬಳಿದ್ದಳೆಲ್ಲಾ ಅಮ್ರಪಾಲಿ...
ಮೋಹಕ ನಡೆಯ ವೇಶ್ಯೆ...!
ಜಗತ್ತಿನ ಸಣ್ಣತನದ
ಕರುಳೊಮ್ಮೆ ಕಿವುಚಿ
ಅಸೂಹ್ಯೆ ಪಡುವಷ್ಟು ಸೊಗಸುಗಾತಿ..!
ಅವಳು ...
ಪುರುಷೋತ್ತಮ (ಎನಿಸಿಕೊಂಡ)
ಶ್ರೀರಾಮನನ್ನೋ
ಲಕ್ಷ್ಮಣನನ್ನೋ ಮೋಹಿಸಿದ್ದರೆ
ಇಂದು ರಾಕ್ಷಸಿಯಾಗಿಬಿಡುತ್ತಿದ್ದಳು
ಅವಳ ಸುಂದರ ಮೊಲೆ
ಕತ್ತಿಯ ಮೊನಚಿನಲ್ಲಿ ತುಂಡಾಗಿರುತ್ತಿತ್ತು...
ಮೋಹಕ ಮೂಗು ಮೊಂಡಾಗಿ
ನೀಳಕೇಶರಾಶಿಗೂ ಕತ್ತರಿ ಬಿದ್ದಿರುತ್ತಿತ್ತು..
ಸದ್ಯ....
ಅವಳು ಮೋಹಿಸಿದ್ದು,
ಟೊಂಕಕಟ್ಟಿ ನಿಂತಿದ್ದು
ಅಪ್ಪಟ ಮನುಷ್ಯನಾಗಿದ್ದ
ನನ್ನ ಬುದ್ಧನೆದುರು...
ಚರಿತ್ರೆಯ ಪುಟಗಳಲ್ಲಿ ಸೂಳೆಯೊಬ್ಬಳು
ಸನ್ಯಾಸಿಯಾಗಿ ತನ್ನಿಷ್ಟದಂತೆ ಬದುಕಿದ್ದು,
ಈ ಬುದ್ಧಭೂಮಿಯ
ನಿಜದ ಕಾರುಣ್ಯವೆಂದರೆ ಸೂಜಿಗವೇನಲ್ಲ ..
*ಮಂಜುಳಾ ಹುಲಿಕುಂಟೆ*
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ