ಕೆಂಪಾದವು ಹಾಲು
ತಿಂಗಳೆರಡರ ಪುಟ್ಟ ಕೂಸು ನಾನಾಗ
ಹಾಲು ಬೆಳ್ಳಗಿರುತ್ತದೆಂದುಕೊಂಡಿದ್ದೆ.
ನನಗೊಬ್ಬಳು-
ಬಂಗಾರದ ತಾಯಿ ವಜ್ರಗಳ ಅಕ್ಕ ಇದ್ದರು
ಕತ್ತಲ ರಾತ್ರಿಗಳಲ್ಲಿ ಅಮ್ಮ ದುಡ್ಡು ದುಡಿಯಲು
ಹೋದಾಗಲೆಲ್ಲಾ, ನಾನು ಕನವರಿಸಿ ಅತ್ತಾಗಲೆಲ್ಲಾ
ಅಕ್ಕ ಚುಕ್ಕು ತಟ್ಟಿ ಮಲಗಿಸುತ್ತಿದ್ದಳು.
ಆಗಸ ಅತ್ತರೂ ಮೋಡ ಉಗುಳಿದರೂ
ಅಮ್ಮ ಅತ್ತಿದ್ದು ನಾನೆಂದೂ ನೋಡಿರಲಿಲ್ಲ
ಅಕ್ಕ ಬೇಸತ್ತಿದ್ದು ನನಗೆಂದೂ ಗೊತ್ತಿಲ್ಲ.
ಆ ಕಾಳರಾತ್ರಿಯಲ್ಲಿ ಮಾತ್ರ ಅಮ್ಮ
ನೋವಿಗೆ ಅತ್ತಳೋ ಅಪ್ಪನ ನೆನಪಿಗೆ ಅತ್ತಳೋ
ಹಾಲೂಡಿಸದೆ ಅಳುತ್ತಾ ಕುಳಿತಿದ್ದಳು.
ಅಮ್ಮ ಅತ್ತಿದ್ದು ಕಂಡು ನಾನೂ ಅತ್ತಿದ್ದೆ
ಅತ್ತೂ ಅತ್ತೂ ಮೆತ್ತಗೆ ನಿದ್ದೆಗೆ ಹತ್ತಿದ್ದೆ
ಅಮ್ಮ ಹೂ ಮುಡಿದುಕೊಂಡು ಎದ್ದು ಹೋಗಿದ್ದಳು.
ಮತ್ತೆ ಕಣ್ಬಿಟ್ಟಾಗ ಸುತ್ತಲೂ ಮೆತ್ತಗೆ
ಅಮ್ಮನ ಕೈಗಳು! ಅವಳ ಒತ್ತಾದ ಒಡಲಲ್ಲಿ ನಾನು
ಅವಳ ಕಣ್ಣಲ್ಲಿ ಮತ್ತೆ ನೀರು
ನನ್ನ ಹೊಟ್ಟೆ ತುಂಬಾ ಹಸಿವು
ಸೀರೆ ಕುಪ್ಪಸ ಸರಿಸಿ ಕಾಲಲ್ಲಿ ಒಡಲೊತ್ತಿ
ಇನ್ನು ಬದುಕಲಾರೆನೆಂಬಂತೆ ಬಲು ಅವಸರದಿ
ಅಮ್ಮನ ಮೊಲೆತೊಟ್ಟು ಬಾಯಿಗಿಟ್ಟುಕೊಂಡೆ.
ಕಣ್ಮುಚ್ಚಿಕೊಂಡೆ
ಹಾಲು ಸುರಿದಾವೆಂದು ಒಡಲು ತುಂಬೀತೆಂದು
ಚಿಮ್ಮಿದಾ ಮೊಲೆತೊಟ್ಟು ಜೇನು ಹನಿಸೀತೆಂದು
ಬಲು ಆಸೆಯಲಿ ತುಟಿ ಬಿಚ್ಚಿಕೊಂಡೆ.
ಅಂದವಳ ಮೊಲೆತೊಟ್ಟು ಕೈಗೆ ಸಿಗಲಿಲ್ಲ
ಕಣ್ತೆರೆದು ತಟುಕಿದರೂ ತುಟಿಗೆಟುಕಲಿಲ್ಲ
ಅದು......ಮೊಲೆತೊಟ್ಟು ಹರಿದು ನೇತಾಡಿತ್ತು!
ಕೂಳಿಲ್ಲದವಳೆಂದು
ಕಾಸಿಗೆ ಸಿಕ್ಕವಳೆಂದು
ಯಾವ ಒಡೆಯನ ಹಲ್ಲು ಜಿಗಿದು ಕಿತ್ತಿತ್ತೋ
ಯಾವ ಧಣಿಯ ಕೈಯ್ಯುಗುರು ಹರಿದು ಚೆಲ್ಲಿತ್ತೋ?
ಅಮ್ಮನ ಮೊಲೆತೊಟ್ಟು ಹರಿದುಬಿದ್ದಿತ್ತು.
ಅಮ್ಮನ ಕಣ್ಣ್ತುಂಬಾ ನೀರು
ನನ್ನ ಬಾಯ್ತುಂಬಾ ನೆತ್ತರು
ಅಂದೇ ನನಗಾ ಸತ್ಯ ತಿಳಿದಿತ್ತು
ನನ್ನಂತಹವರ ಅಮ್ಮಂದಿರ ಮೊಲೆಹಾಲು
ಬೆಳ್ಳಗಲ್ಲ....
ಕೆಂಪಗಿರುತ್ತವೆ ಅಂತ!
ಮೂಲ ತೆಲುಗು: ನಗ್ನಮುನಿ
ಕನ್ನಡ ಅನುವಾದ: ರವಿ ಬೆಳಗೆರೆ
|
Red Milk
I was a baby of two months then
I thought that the milk would be white
I had a golden mother and a diamond sister
Whenever mom went out for work on dark nights
I cried in longing for her
And my sister crooned and made me sleep Though the sky wept,
And the cloud spat
Never did I see mom crying
Nor did I feel sister getting tired
Only on that dark
night
I don’t know what
happened
And why my
mom cried
Whether she cried
in pain
Or wept for
the fond memories of my father
I still don’t
know the reason
She sat
weeping
Without feeding
me.
Seeing her
crying
I too cried
And fell
asleep gradually
Later mom left
out for her work
With flowers
worn in her hair
The next
morning when I woke up
I felt mom’s
hands cuddling me!
I was in her serried
stomach
And again there
were tears in her eyes
I was so
hungry that
I moved her blouse
aside and
Hurriedly
took her nipple into my mouth
As if I was
not going to live any longer
I pushed my
legs against her belly
And closed my
eyes
Thinking that
milk would flow from her nipple
And my
stomach would be filled
I widened my
lips with a great hope that
The opened
nipple
Would fall in
drops with honey
On that day
my hands did not find her nipple
So I groped
for it with my eyes open
Even my lips couldn’t
reach it
For it was
already torn down!
“Foodless
woman
Availed for money”
Thinking as
such
Which lord's
tooth had slit
Which master’s
nails had torn away
My mom's
nipple
I don’t know
It was totally
torn off
And hanging
down
Tears filled
up in mom’s eyes
And blood in
my mouth
That day
itself
I came to
know the truth that
Moms’ breast
milk of the children like me
Will not be
white…..
But red!
From Telugu: Nagnamuni
To Kannada: Ravi Belagere
To English: Uday Itagi
|