ಅಷ್ಟೇನೂ ರಮ್ಯ ಕಲ್ಪನೆಗಳು ಬೇಡ
ನಲವತ್ತರ ಹೆಂಗಸರ ಬಗ್ಗೆ
ಬಹುಪಾಲು ಬದುಕು
ಬಿಸಿಲ ಹಣ್ಣು
ಕೆಲವರಿಗೆ.
ಕೂದಲಿಗೆ ಕಪ್ಪು
ತೀಡುವುದೇ ಕೆಲಸವಲ್ಲ ಎಲ್ಲರಿಗೂ
ಕಣ್ಣ ಕಾಡಿಗೆ ಬಸಿದಿಳಿದು
ಕೆನ್ನೆ ರಾಡಿ ಸಂಭಾಳಿಸುವ ಸಮಾಧಾನ
ಇರೋದಿಲ್ಲ ಎಲ್ಲರಿಗೂ.
ಎಐ ಮಾರುಕಟ್ಟೆ ತೆರೆ ತೆರೆದು ತೋರುವಂತೆ
ಎಲ್ಲೆಲ್ಲಿಯದೋ ಕರಿ ಮುಚ್ಚಲು,
ತೊಡೆ ಮೇಲಿನ, ಹೊಟ್ಟೆ ಮೇಲಿನ
ಹೆಬ್ಬಾವು ಹರಿದಂಥ ಗುರುತು ಮುಚ್ಚಲು,
ನೆರಿಗೆ ಸಪಾಟು ಮಾಡಲು,
ಜೋತು ಬೀಳುತ್ತಿರುವ ಮೊಲೆ
ಎತ್ತಿ ಕಟ್ಟಲು
ಹಪಹಪಿಸೋದಿಲ್ಲ ಎಲ್ಲರೂ.
ನಲವತ್ತರಲ್ಲಿ;
ಉಸಿರು ಬಿಗಿಯುವ ಬ್ರಾ ಕಳಚಿ ಬಿಸಾಡಿ
ಮಂಚದ ಮೇಲೆ ಅಂಗಾತ ಮಲಗಿ
ಫ್ಯಾನಿಗೆ ಮುಖವೊಡ್ಡುವ ಸುಖದ ಮುಂದೆ
ಇನಿಯರ ಅಪ್ಪುಗೆ ತೃಣ ಮಾತ್ರ
ಬಹಳಷ್ಟು ಜನಕ್ಕೆ.
ಬಾಯಿ ಬಿಟ್ಟು
ಹೇಳಿಕೊಳ್ಳೋದಿಲ್ಲ,
ಅಷ್ಟೇ.
ಚೇತನಾ ತರ್ಥಹಳ್ಳಿ
One needn’t have too many romantic notions
about the women who are in their forties
as most of their life
for some
is already like a ripened fruit
Dying the hair
is not the job of everyone
no one will have the patience
to console
the sludge of eyes
that trickles down the cheeks
The AI market seems to open up
to cover the blackness everywhere,
and also to cover the marks of the python’s movements on the thighs and stomach
not that everyone craves
to straighten the plates,
and tries to hold a falling breast up
in bras
In the forties;
for many
before
the pleasure of
lying down on the couch
by keeping the face to the fan
and throwing the constricting bra away
the hug of a lover is worthless.
They just don’t express it
that's it.
From Kannada: Chetana Tirthahalli
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ