ಕೆಲವು ಪ್ರಶ್ನೆಗಳು
Some questions
ಈ ಪವಿತ್ರ ಭಾರತದಲ್ಲಿ
ಹಿಂದುಗಳಿದ್ದಾರೆ ಮುಸ್ಲಿಮರಿದ್ದಾರೆ
ಕ್ರೈಸ್ತರಿದ್ದಾರೆ ಸಿಖ್ಖರಿದ್ದಾರೆ
ಜೈನರಿದ್ದಾರೆ ಬೌದ್ಧರಿದ್ದಾರೆ
ಬ್ರಾಹ್ಮಣರಿದ್ದಾರೆ ಲಿಂಗಾಯತರಿದ್ದಾರೆ
ಒಕ್ಕಲಿಗರಿದ್ದಾರೆ ಅಸ್ಪೃಶ್ಯರಿದ್ದಾರೆ
ಆದ್ರೆ ನಾನು ಹುಡುಕುತ್ತಿರುವುದು ಮನುಷ್ಯರನ್ನು
ದಯಮಾಡಿ ಹೇಳಿ ಅವರೆಲ್ಲಿದ್ದಾರೆ?
ಈಗ ದೇಶದ ಉದ್ದಗಲಕ್ಕೂ
ಅಸಂಖ್ಯಾತ ಗುಡಿಗಳಿದ್ದಾವೆ
ಮಸೀದಿಗಳಿದ್ದಾವೆ ಮಂದಿರಗಳಿದ್ದಾವೆ
ಚರ್ಚುಗಳಿದ್ದಾವೆ ಮಠಗಳಿದ್ದಾವೆ
ಆದರೆ ನಾನು ಹುಡುಕುತ್ತಿರುವುದು
ಅವುಗಳೊಳಗೆ ಇರಬೇಕಾದ ದೇವರನ್ನು
ದಯಮಾಡಿ ಹೇಳಿ ಅವನೆಲ್ಲಿದ್ದಾನೆ?
ಈ ದೇಶದ ಹಿಂದೂಗಳಿಗೆ
ಭಗವದ್ಗೀತೆ ವೇದ ಶಾಸ್ತ್ರ ಪುರಾಣ ಆಗಮಗಳೇ
ಮುಸ್ಲಿಮರಿಗೆ ಕುರಾನ್ ಇದೆ
ಕ್ರೈಸ್ತರಿಗೆ ಬೈಬಲ್ ಲಿದೆ
ಸಿಖ್ಖರಿಗೆ ಗ್ರಂಥ್ ಸಾಹೇಬ್
ಲಿಂಗಾಯತರಿಗೆ ವಚನಗಳಿವೆ
ಆದ್ರೆ ನಾನು ಹುಡುಕುತ್ತಿರುವುದು ಪ್ರೀತಿಗಾಗಿ
ದಯಮಾಡಿ ಹೇಳಿ ಅದೆಲ್ಲಿದೆ?
-ಡಾ.ಜಿ.ಎಸ್. ಶಿವರುದ್ರಪ್ಪ
In this holy India
There are Hindus and Muslims
There are Christians and Sikhs
There are Jains and Buddhists
There are Brahmins and Lingayaths
There are Vokkaligas and untouchables
But what I'm looking for is humans
Please tell me where are they all?
Now across the country
There are innumerable borders
There are mosques and temples
There are Churches and Matths
But I'm looking for the God
Who is supposed to be inside all of them
Please tell me where is he?
In this country
For the Hindus
There is Bhagavad Gita
And there are Vedas, Shastras,
Puranas and Agamas
Muslims have the Koran
Christians have the Bible
Sikhs have the Grantha Saheb
Lingayats have Vachanas
But what I'm looking for is love
Please tell me where that is.
From Kannada: Dr. G.S. Shivarudrappa
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ