ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟತೇವ ನಾವು
ಕಟ್ಟೇ ಕಟ್ಟತೇವ
ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟತೇವ
ನಾವು ಕನಸು ಕಟ್ಟತೇವ
ನಾವು ಮನಸು ಕಟ್ಟತೇವ
ಜಾತಿ ಇಲ್ಲದ
ಭೀತಿ ಇಲ್ಲದ
ಬಾಳ ಕಟ್ಟತೇವ
ಕುಲವೆನ್ನದ
ಮನುಕುಲವ
ನಾವು ಕಟ್ಟುತೇವ
ನಾವು ನಾಡ ಕಟ್ಟುತೇವ
ಗೋಳಿಲ್ಲದ, ಗುಂಡಿಲ್ಲದ
ನಾಡ ಕಟ್ಟುತೇವ
ನೂರು ಮನಸಿನ
ಕೋಟಿ ಕನಸಿನ
ಹಾಡ ಕಟ್ಟುತೇವ
ನಾವು ನಾಡ ಕಟ್ಟತೇವ
ಕ್ರಾಂತಿ ಕೆಂಡದ
ಕುಂಡ ಹೊತ್ತು ನಾವು
ಮುಳ್ಳು ತುಳಿಯತೇವ
ರಕ್ತಕಾಲಿನ ನಮ್ಮ ಪಾಲಿನ
ಹಾಡ ಬರೆಯತೇವ
ನೆಲಕ ಹಾಡ ಬರೆಯತೇವ
ದೇವರಿಲ್ಲದ, ದೈವವಿಲ್ಲದ
ದಾರಿ ತುಳಿಯತೇವ
ನಮ್ಮ ಮನಸಿಂದ
ನಿಮ್ಮ ಮನಸಿಗೆ
ಸೇತು ಕಟ್ಟುತೇವ
ನಾವು ಮಾತು ಕಟ್ಟುತೇವ
ಕನ್ನಡ ಒರಿಜಿನಲ್: ಸತೀಶ್ ಕುಲಕರ್ಣಿ
ಇಂಗ್ಲಿಷ್ ಟ್ರಾನ್ಸ್ಲೇಷನ್: ಉದಯ ಇಟಗಿ We construct
We construct, we construct,
We continuously keep constructing.
We build broken hearts,
We build shattered dreams
We continue to keep building
A life free of social hierarchy,
A life without fear,
We construct
A humanity beyond divisions,
We construct a world,
We construct a nation.
A nation free of suffering,
A land without weapons,
We construct
A chorus of countless hearts,
A vision of innumerable souls
We create
We build a nation.
Carrying the flames of revolution,
Traversing through obstacles,
We march onwards.
With feet stained by blood,
We compose songs
On the very ground we walk on.
Without deities,
Without holy paths,
We forge ahead.
From our hearts to yours,
We construct a bridge.
We craft words.
Kannada Original: Satish Kulkarni
English Translation: Uday Itagi