ನಿನ್ನೆ ರಾತ್ರಿಯ ತುಂತುರು ಮಳೆಯಲ್ಲಿ ನೆನೆದುಕೊಂಡೇ ಬಂದು ನಿನ್ನ ಮನೆಯ ಬಾಗಿಲು ಬಡಿದೆ
ನಿದ್ದೆಗಣ್ಣಲ್ಲೊಮ್ಮೆ ನನ್ನ ನೋಡಿ ಕರುಣಾಜನಕವಾಗಿ ನಕ್ಕು ಒಳಗೆ ಬರ ಹೇಳಿದೆ
ಮಬ್ಬುಗತ್ತಲೆಯ ಚಂದಿರ ಕತ್ತಲನ್ನು ಸೀಳಿಕೊಂಡುಬಂದು ನನ್ನ ಕಣ್ಣೊಳಗೆ ಮಿನುಗಿದ
ಹೂ ಮೇಲಿನ ಪರಾಗವೊಂದು ಹಾರಿಬಂದು ನನ್ನೆದೆಗೆ ಬಡಿದು ಕೆಳಗೆಬಿತ್ತು
ನಾಚಿಕೆಯಿಂದ ತಲೆತಗ್ಗಿಸಿದೆ ನಿನ್ನತ್ತ ನೋಡಲಿಲ್ಲ
ಅವಸರವಸರವಾಗಿ ಕೋಣೆಯೊಳಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ
ಆ ಕತ್ತಲ ರಾತ್ರಿಯ ಏಕಾಂತದಲ್ಲಿ ಎತ್ತೆಂದೆರತ್ತ ಒಬ್ಬಂಟಿಯಾಗಿ ಓಡಾಡಿದೆ
ಎಷ್ಟೊಂದು ನೋವುಗಳು! ಎಷ್ಟೊಂದು ನಿಟ್ಟುಸಿರುಗಳು!
ಥಟ್ಟನೆ ನನ್ನೊಳಗಿನ ನಿನಾದ ನಿಂತುಹೋಯಿತು
ಆ ರಾತ್ರಿ ನನ್ನ ಅಖಂಡ ಪ್ರೀತಿಯನ್ನು ಸಾದರಪಡಿಸಲೆಂದೇ
ಸುಮಧುರ ಗೀತೆಗಳ ಗುಚ್ಚವೊಂದನ್ನು ಉಡುಗೊರೆಯಾಗಿ ಕೊಡಲು ತಂದಿದ್ದೆ
ಊಹೂಂ, ಕೊಡಲಾಗಲಿಲ್ಲ ಹಾಗೆ ಹೊರಟುಹೋದೆ
ಊರೂರು ಅಲೆಯುತ್ತಾ ಕಾಡು-ಮೆಡುಗಳನ್ನು ದಾಟುತ್ತಾ
ನಭದ ನಕ್ಷತ್ರಗಳಿಗೆ ರಾಗ ಹಾಕುತ್ತಾ ಅನಂತಾನಂತ ಜಗದ ಗಡಿಗಳನ್ನು ಹುಡುಕುತ್ತಾ
ಅತ್ತ ಇತ್ತ ಒಬ್ಬಂಟಿಯಾಗಿ ಅಲೆದಾಡಿದೆ ಆ ಕತ್ತಲ ರಾತ್ರಿಯ ಏಕಾಂತದಲ್ಲಿ
ಎಲ್ಲಿ ನೋಡಿದರಲ್ಲಿ ಶೋಚನೀಯ ಕಣ್ಣುಗಳ ಪ್ರಶ್ನೆಗಳು
ಮೂಕ ವೇದನೆಗಳ ಕರೆಗಳು ಗೋಳಿಡುವ ಪ್ರಲಾಪನೆಗಳು
ನೋವಿನ ಬೇಗೆಯಲ್ಲಿ ಬೆಂದುಹೋದ ಜೀವಗಳು
ಬರಿ ಇಂಥವೇ ದೃಶ್ಯಗಳು ಕಾಣಿಸಿದವು!
ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ
ಇಂಗ್ಲೀಷಗೆ: ಜೆ. ಸತ್ಯಾನಂದ ಕುಮಾರ
ಕನ್ನಡಕ್ಕೆ: ಉದಯ ಇಟಗಿ
4 ಕಾಮೆಂಟ್(ಗಳು):
ಉದಯ್ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯೋ ಮಳೆ! ಆದ್ದರಿಂದ ೀಗ ಬೆಂಗಳೂರು ಮಳೆಯೂರು ಆಗಿದೆ. ಹೊರಗೆ ಮಳೆ ಸುರಿಯುತ್ತಿರುವಾಗಲೇ ಇಲ್ಲಿ ನಿಮ್ಮ ಬ್ಲಾಗಲ್ಲಿ ಮಳೆ ಕವಿತೆ ಓದಿದೆ. ಅಂದ ಹಾಗೆ ನಿಮಗೆ ತೆಲಗು ಕೂಡಾ ಬರುತ್ತದೆ. ಒಟ್ಟು ಎಷ್ಟು ಭಾಷೆ ಬರುತ್ತವೆ ನಿಮಗೆ!
ಇಲ್ಲಿ ಧಾರವಾಡದಲ್ಲಿ ಸಹ ಮಳೆ ಬೀಳುತ್ತಿದೆ. ಮಳೆಯ ಈ backdropನಲ್ಲಿ ನಿಮ್ಮ ಕವಿತೆ ತುಂಬ ಅರ್ಥಪೂರ್ಣವೆನಿಸಿತು.
ಉದಯ್ ಸರ್,
ನೀವು ಚೆನ್ನಾಗಿ ಅನುವಾದ ಮಾಡುತ್ತಿದ್ದೀರಿ...ಈಗ ಮದುವೆ ಫೋಟೊ ಕೆಲಸ ಮುಗಿಸಿ ಮಳೆಯಲ್ಲಿ ನೆನೆದುಕೊಂಡೆ ಮನೆಗೆ ಬಂದೆ. ಓದಿದಾಗ ಮತ್ತದೇ ಅನುಭವ...ಚೆನ್ನಾಗಿದೆ.
ಒ೦ದು ಉತ್ತಮ ಕವನ, ಮಳೆಯ ಹಿನ್ನೆಲೆಯಲ್ಲಿ ಬೆಚ್ಚಗಿನ ಅನುಭವ ನೀಡಿತು
ಕಾಮೆಂಟ್ ಪೋಸ್ಟ್ ಮಾಡಿ