ಆತ್ಮೀಯರೆ,
ಹಿಂದೆ ಜೀವದ ಗೆಳೆಯ ಮಂಜು “ನಿನ್ನ ಓರಗೆಯವರೆಲ್ಲಾ ಪುಸ್ತಕ ಹೊರತರುತ್ತಿದ್ದಾರೆ. ನೀನ್ಯಾವಾಗ ತರೋದು”? ಎಂದು ಕೇಳಿದ್ದಾಗ ನಾನು ನಕ್ಕು “ಮುಂದೆ ನೋಡಿದರಾಯಿತು” ಎಂದು ಸುಮ್ಮನಾಗಿದ್ದೆ. ಇದೀಗ ನನ್ನ ಬಹಳಷ್ಟು ಆತ್ಮೀಯ ಸ್ನೇಹಿತರು, ಬ್ಲಾಗ್ ಮಿತ್ರರು ಹಾಗು ನನ್ನನ್ನು ಹತ್ತಿರದಿಂದ ಬಲ್ಲವರೆಲ್ಲರ ಒತ್ತಾಸೆಯ ಮೇರೆಗೆ ನಾನು ಇದುವರೆಗೆ ಅನುವಾದಿಸಿದ ಕವನಗಳನೆಲ್ಲ ಸೇರಿಸಿ ಒಂದು ಪುಸ್ತಕವನ್ನು ಹೊರತರಬೇಕೆಂದೆರುವೆ. ಇದು ನನ್ನ ಬಹುದಿನದ ಕನಸು ಕೂಡ ಆಗಿದೆ! ಇದು ನನ್ನ ಚೊಚ್ಚಲ ಪುಸ್ತಕವಾದ್ದರಿಂದ ಅದನ್ನು ಹೊರತರುವ ರೂಪರೇಷೆಗಳಾಗಲಿ ಅಥವಾ ಅದರ ಹಿಂದೆ ಇರುವ ಶ್ರಮದ ತಿಳುವಳಿಕೆಯಾಗಲಿ ನನ್ನಲ್ಲಿಲ್ಲ. ಅಂದರೆ ಪುಸ್ತಕ ತರಲು ಯಾವ ಪ್ರಕಾಶಕರನ್ನು ಭೇಟಿ ಮಾಡಬೇಕು? ಅವರು ಪ್ರಕಟಿಸಲು ಮುಂದಾಗುತ್ತಾರೆಯೆ? ಪ್ರಕಟಿಸಲು ಎಷ್ಟು ದಿನ ತೆಗೆದುಕೊಳ್ಳಬಹುದು? ಇತ್ಯಾದಿಗಳ ಬಗ್ಗೆ ನನ್ನಲ್ಲಿ ಆಳವಾದ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಪುಸ್ತಕ ಹೊರತಂದಿರುವ ಬ್ಲಾಗ್ ಮಿತ್ರರು ನನಗೆ ಪ್ರಕಾಶಕರ ವಿಳಾಸ, ಫೋನ್ ನಂಬರ್ ಹಾಗೂ ಈಮೇಲ್ ವಿಳಾಸಗಳನ್ನು ಕೊಡುವದರೊಂದಿಗೆ ಅದರ ಒಟ್ಟಾರೆ ಕಾರ್ಯವೈಖರಿಯನ್ನು ದಯವಿಟ್ಟು ವಿವರಿಸಿ ಹೇಳಿದರೆ ಅನುಕೂಲ. ಬ್ಲಾಗ್ ಮಿತ್ರರಾದ ಸತ್ಯನಾರಾಯಣವರು, ಚಂದಿನವರು, ತೇಜಸ್ವಿನಿ ಹೆಗಡೆಯವರು, ಕಲಿಗಣನಾಥ್ ಗುಡುದೂರವರು ಈಗಾಗಲೆ ಪುಸ್ತಕ ಹೊರತಂದವರ ಪೈಕಿಯಲ್ಲಿದ್ದಾರೆ. ಬೇರೆಯವರು ಸಹ ತಂದಿರಬಹುದು. ಆದರೆ ನನಗೆ ಅವರ ಬಗ್ಗೆ ಗೊತ್ತಿಲ್ಲ. ತಂದಿದ್ದರೆ ನನ್ನ ಅಲ್ಪಜ್ಞಾನಕ್ಕಾಗಿ ದಯವಿಟ್ಟು ಕ್ಷಮಿಸಿ.
ದೂರದ ಲಿಬಿಯಾದಿಂದ ನಾನು ಈ ಜುಲೈ ಕೊನೆವಾರದಲ್ಲಿ ಒಂದು ತಿಂಗಳ ವಾರ್ಷಿಕ ರಜೆಯ ಮೇರೆಗೆ ಬೆಂಗಳೂರಿಗೆ ಬರುವವನಿದ್ದೇನೆ. ಈ ಒಂದು ತಿಂಗಳ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಜೊತೆಗೆ ಅದರ ಬಿಡುಗಡೆಯ ಕಾರ್ಯಕ್ರಮವೂ ಸಹ ನಡೆದುಹೋಗಬೇಕೆಂದುಕೊಂಡಿದ್ದೇನೆ. ಇದು ಸಾಧ್ಯವಾ? ಸಾಧ್ಯವಾದರೆ ಮೊದಲು ಪ್ರಕಟಣೆಯ ಹಂತಗಳನ್ನು ನಂತರ ಬಿಡುಗಡೆಯ ಹಂತಗಳನ್ನು ವಿವರಿಸಿ ಹೇಳಿ. ಪ್ರಕಟಣೆ ಸಾಧ್ಯವಾದರೆ ನಾನು ಇಲ್ಲಿಂದಾನೆ ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಹೆಂಡತಿ ಹಾಗೂ ಸ್ನೇಹಿತನ ಮೂಲಕ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೇನೆ. ಅಲ್ಲಿಗೆ ಬಂದಾಗ ಬರಿ ಪ್ರಕಟಿಸಿ ಬಿಡುಗಡೆಗೊಳಿಸುವದಷ್ಟೆ ಕೆಲಸವಾಗಲಿ. ನನಗೆ ಗೊತ್ತು ಸಮಯಾವಕಾಶ ತುಂಬಾ ಕಡಿಮೆಯಿದೆಯೆಂದು. ಆದರೆ ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ ಅಲ್ಲವೆ? ಈ ಮಾರ್ಗದಲ್ಲಿ ನೀವೂ ನನ್ನ ಕೈ ಹಿಡಿದು ನಡೆಸುತ್ತೀರಲ್ಲವೆ? ನನ್ನ ಪುಸ್ತಕ ತರುವ ಕನಸನ್ನು ನನಸು ಮಾಡುತ್ತೀರಲ್ಲವೆ? ದಯವಿಟ್ಟು ಮಾಹಿತಿ ನೀಡಿ.
ನಿಮ್ಮವ
ಉದಯ ಇಟಗಿ
ಆಚಾರ್ಯರ ಪುಣ್ಯಾರಾಧನೆ
18 ಗಂಟೆಗಳ ಹಿಂದೆ
14 ಕಾಮೆಂಟ್(ಗಳು):
ನಿಮ್ಮ ಆಲೋಚನೆ ಚೆನ್ನಾಗಿದೆ... ಪುಸ್ತಕ ಪ್ರಕಾಶನ ಮತ್ತು ಇತರೆ ವಿಷಯಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲದಿರೋದರಿಂದ ಸದ್ಯಕ್ಕೆ ಏನೂ ಹೇಳಲಾರೆ... ನಿಮ್ಮ ಕಾರ್ಯದಲ್ಲಿ ಜಯಶೀಲರಾಗಿ ಎಂದು ಹಾರೈಸುವೆ... ಬಹುಶ ಬ್ಲಾಗ್ ಬರೆಯೋರಲ್ಲಿ ತುಂಬಾ ಜನ ಪುಸ್ತಕಾನೂ ಬರ್ದಿರೋದ್ರಿಂದ (ನನ್ನ ಅನಿಸಿಕೆ ಪ್ರಕಾರ) ನಿಮಗೆ ಈ ವಿಷಯದಲ್ಲಿ ಜಯ ಖಂಡಿತ... ನಾವು ನಿಮ್ಮೊಂದಿಗಿದ್ದೇವೆ... ಮುಂದುವರೆಯಿರಿ... Wish you all success..
ಉದಯ್
ನನಗೂ ಈ ಬಗ್ಗೆ ಮಾಹಿತಿ ಬೇಕಿದೆ. ಸದ್ಯ ನಾನು ಈ ವಿಚಾರದ ಬಗ್ಗೆ ಅಲ್ಪಜ್ಞ. ನನಗೂ ನಿಮ್ಮ೦ತೆಯೇ ಒ೦ದು ಸ೦ಕಲನ ಹ೦ರ ತರಬೇಕೆ೦ಬ ಆಸೆ ಇದೆ. ಮಾಹಿತಿ ಸಿಕ್ಕ ಕೂಡಲೇ ಅದನ್ನು ನಿಮಗೂ ತಿಳಿಸುವೆ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎ೦ದು ಆತ್ಮೀಯವಾಗಿ ಹಾರೈಸುವೆ.
ಶುಭವಾಗಲಿ
all the best uday...
ಈ ವಿಷಯದಲ್ಲಿ ನನಗೂ ಮಾಹಿತಿ ಇಲ್ಲ.
ನಿಮಗೆ ಶುಭ ಹಾರೈಸುತ್ತೇನೆ.
udaya avre,
all the best. book release functionge kariyodu maribEDi.. :)
ನೀವು ಜುಲ್ಯ್ ಕೊನೆವಾರದಲ್ಲಿ ಬೆಂಗಳೂರಿಗೆ ಬರುವವರಾಗಿರುವುದರಿಂದ ನಿಮ್ಮ ಕೆಲಸ ಈಗಲೇ ಆರಂಭಿಸಬೇಕು. ನಿಮ್ಮ ಕವನಗಳ ಹಸ್ತಪ್ರತಿಯನ್ನು (ಸಾಪ್ಟ್ ಕಾಪಿ)ಪ್ರಕಾಶಕರಿಗೆ ಕಳುಹಿಸಬೇಕು. ಯಾರು ಆ ಪ್ರಕಾಶಕರು. ನಿಮ್ಮನ್ನು ಬಲ್ಲವರಾಗಿದ್ದರೆ ಚೆನ್ನ. ನಿಮ್ಮ ಕವನಗಳು ಮಾರುಕಟ್ಟೆಯಲ್ಲಿ ಮಾರಾಟವಾಗಬಹುದೆಂಬ ಭರವಸೆ ಇದ್ದರೆ ಒಳ್ಳೆಯ ಪ್ರಕಾಶಕರು ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿ ನಿಮಗೆ ಯಾರಾದರೂ ಸಾಹಿತ್ಯದವರು ಪರಿಚಯವಿದ್ದರೆ ಅವರ ಜತೆ ಸಂಪರ್ಕಿಸಿ ಪುಸ್ತಕ ಪ್ರಕಾಶನದ ಕುರಿತು ಹೇಳಿ.
ಪುಸ್ತಕ ಪ್ರಕಾಶನದ ಕೆಲವು ಹಂತಗಳು: ಹಸ್ತಪ್ರತಿಯನ್ನು ಪ್ರಕಾಶಕರಿಗೆ ಕೊಡುವುದು. ಅವರು ಸ್ವತ: ಅಥವಾ ಇನ್ನೊಬ್ಬ (ಒಳ್ಳೆಯ ಬರಹಗಾರ/ಸಂಪಾದಕ)ರಿಂದ ಅದನ್ನು ಓದಿಸುತ್ತಾರೆ. ನಂತರ ಅದಕ್ಕೆ ಬೇಕಾಗುವ ಮುನ್ನುಡಿ, ಲೇಖಕನ ಮಾತು, ಅರ್ಪಣೆ, ಬ್ಲರ್ಬ್ ಇತ್ಯಾದಿ ಬರೆಸುವುದು, ಮುಖಪುಟ ರಚನೆ, ಮುದ್ರಣ, ಬಿಡುಗಡೆ, ಮಾರಾಟ, ಸರಕಾರದ ಸಂಸ್ಥೆಗಳಿಂದ ಸಗಟು ಖರೀದಿ (೩೦೦ ಪ್ರತಿ)ಇತ್ಯಾದಿ. ಕವನಗಳನ್ನು ಪ್ರಕಟಿಸುವ ನಿಮಗೆ ಯಾವುದೇ ಪ್ರಕಾಶಕ ರಾಯಲ್ಟಿ ಕೊಟ್ಟರೆ ಅದು ಭಾಗ್ಯ. ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕೆಲವು ಪ್ರಕಾಶನ ಸಂಸ್ಥೆಗಳು: ಅಂಕಿತ, ಛಂದ, ಸೃಷ್ಟಿ, ಸಪ್ನಾ, ನವ ಕರ್ನಾಟಕ, ಸಿವಿಜಿ, ಅಭಿನವ,ಧಾರಿಣಿ, ಸುಮುಖ, ಇತ್ಯಾದಿ. ಇನ್ನು ಮಾಹಿತಿಇದ್ದರೆ ಖಾಸಗಿಯಾಗಿ ತಿಳಿಸುವೆ.
ಶುಭವಾಗಲಿ
ಒಲವಿನಿಂದ
ಬಾನಾಡಿ
Prakasha Kambathalli
Ankitha Pusthaka
No.53, Shamsingh Complex
Gandhi Bazar, Basavanagudi
Bengaluru-560004
Ph:080-26617100 (O)
ಬೆಂಗಳೂರಿನಲ್ಲಿರುವ ಪ್ರಕಾಶ್ ಕಂಬತ್ತಳ್ಳಿ ಬಹಳಷ್ಟು ಯುವ ಬರಹಗಾರರ ಬರಹಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ನೀವು ಒಂದು ಸಲ ಫೋನಾಯಿಸಿ ನೋಡಿ.
ಶುಭವಾಗಲೀ
-ಧರಿತ್ರಿ
ಬಾನಾಡಿ ಹಾಗೂ ಧರಿತ್ರಿಯವರಿಗೆ,
ನಿಮ್ಮ ಪ್ರೀತಿ ಹಾಗೂ ಕಳಕಳಿಗೆ ತುಂಬಾ ಧನ್ಯವಾದಗಳು. ನಿಮ್ಮ ಮಾಹಿತಿಯಂತೆ ಮುಂದುವರೆಯುತ್ತೇನೆ. ಧನ್ಯವಾದಗಳು.
ಬಾನಾಡಿಯವರೆ,
ನಿಮ್ಮದು ನನ್ನ ಬ್ಲಾಗಿಗೆ ಮೊದಲ ಭೇಟಿ. ನಿಮಗೆ ಅಭೂತಪೂರ್ವ ಸ್ವಾಗತವನ್ನು ಕೋರುವೆ. ಆಗಾಗ್ಗೆ ಬೇಟಿ ಕೊಡುತ್ತಿರಿ.
ಉದಯ್ ಸರ್,
ಕೆಲ ದಿನ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿದ್ದೆ. ನಿಮ್ಮ ಈ ಪುಟ್ಟ ಲೇಖನ ಓದಿದಾಗ ನನಗೆ ಖುಷಿಯಾಯಿತು. ನೀವು ಈ ವಿಚಾರವಾಗಿ ಮೇಪ್ಲವರ್ ಮೀಡಿಯಾದ ಜಿ.ಎನ್. ಮೋಹನ್ ಅವರನ್ನು ಯಾಕೆ ಸಂಪರ್ಕಿಸಬಾರದು.? ಅವರದೇ ಆದ ಪುಸ್ತಕ ಪ್ರಕಾಶನವಿದೆ.
ಒಳ್ಳೆಯದಾಗಲಿ...all the best...
ಶಿವು,
ನಿಮ್ಮ ಪ್ರೀತಿಗೆ ಹಾಗೂ ಕಾಳಜಿಗೆ ಥ್ಯಾಂಕ್ಸ್. ದಯವಿಟ್ಟು ಮೋಹನ್‍ವರ ಫೋನ್ ನಂಬರ್ ಅಥವಾ ಈಮೇಲ್ ಇದ್ದರೆ ಕೊಡುತ್ತೀರಾ?
ಉದಯ್ ಸರ್,
ಜಿ.ಎನ್.ಮೋಹನ್ ರವರ email id:
gnmohann@gmail.com
mayflowermh@gmail.com
phone no:9449865390
all the best...
ಪ್ರಿಯ ಮಿತ್ರರೆ,
ನೀವು ಕೊಟ್ಟ ಸಲಹೆಗಳೊಂದಿಗೆ ಮುಂದುವರೆಯುವೆ. ನೋಡುವಾ ಅದೆಷ್ಟರಮಟ್ಟಿಗೆ ಫಲಿಸುತ್ತದೆಂದು. ನಿಮ್ಮ ಈ ಪ್ರೀತಿ ಹಾಗೂ ಕಾಳಜಿ ಹೀಗೆ ಮುಂದುವರೆಯಲಿ. ನಿಮ್ಮ ಅಮೂಲ್ಯ ಸಲಹೆ ಹಾಗೂ ಶುಭಕಾಮನೆಗಳಿಗೆ ವಂದನೆಗಳು.
ನಿಮ್ಮವ
ಉದಯ ಇಟಗಿ
ಕಾಮೆಂಟ್ ಪೋಸ್ಟ್ ಮಾಡಿ