Demo image Demo image Demo image Demo image Demo image Demo image Demo image Demo image

If there is a song within you, sing it out

  • ಭಾನುವಾರ, ಜನವರಿ 26, 2025
  • ಬಿಸಿಲ ಹನಿ
  • Do not wait for others to declare your words as poetry
    They are yours, not theirs!
    Write them down.

    Do not let someone else Make your shaky path steady,
    It is yours, not theirs! Walk it through!

    Don't wait for someone to connect your inner light to the stars,
    It is yours, not theirs!
    Let it shine bright.

    If there is a song within you,
    Do not wait for someone to tune it,
    It is yours, not theirs! Sing it out loud.

    *Kannada Original: M. R. Kamala*
    *English Translation: Uday Itagi*

    ನಿಮ್ಮೊಳಗೆ ಹಾಡುಗಳಿದ್ದರೆ ಹಾಡಿಬಿಡಿ 

    ನಿಮ್ಮೊಳಗಿನ ಪದಗಳಿಗೆ ಯಾರೋ 
    ಕವಿತೆಯ ಮುದ್ರೆ ಒತ್ತಲೆಂದು ಕಾಯಬೇಡಿ 
    ಅದು ನಿಮ್ಮದೇ, ಅವರದಲ್ಲ! ಬರೆದುಬಿಡಿ  

    ನಿಮ್ಮೊಳಗಿನ ತೂಗುಹಾದಿಯ ಯಾರೋ  
    ಗಟ್ಟಿ ನಿಲ್ಲಿಸಿ ಬೀಗಲೆಂದು ಬಿಡಬೇಡಿ 
    ಅದು ನಿಮ್ಮದೇ, ಅವರದಲ್ಲ, ನಡೆದುಬಿಡಿ 

    ನಿಮ್ಮೊಳಗಿನ ನಕ್ಷತ್ರದುರಿಗೆ ಯಾರೋ 
    ಬೆಳಕಿನ ಪಟ್ಟ  ಕಟ್ಟಲೆಂದು  ನಿರೀಕ್ಷಿಸಬೇಡಿ 
    ಅದು ನಿಮ್ಮದೇ, ಅವರದಲ್ಲ, ಬೆಳಗಿಬಿಡಿ    

    ನಿಮ್ಮೊಳಗೊಂದು ಹಾಡಿದ್ದರೆ ಯಾರೋ 
    ರಾಗ ಹಾಕಲೆಂದು ಕಾದು ಕೂರಬೇಡಿ 
    ಅದು ನಿಮ್ಮದೇ, ಅವರದಲ್ಲ, ಹಾಡಿಬಿಡಿ