Demo image Demo image Demo image Demo image Demo image Demo image Demo image Demo image

ಗೆಳೆಯಾ ಬರುತೇನಿ ಮನದಾಗ ಇಡೋ ನೀನು!

  • ಸೋಮವಾರ, ಜುಲೈ 27, 2009
  • ಬಿಸಿಲ ಹನಿ
  • ಗೆಳೆಯಾ,
    ಈಗಷ್ಟೆ ಪಾಠ, ಪ್ರವಚನ, ಪರೀಕ್ಷೆ, ಮೌಲ್ಯಮಾಪನ ಅಂತೆಲ್ಲಾ ವರ್ಷಾಂತ್ಯದ ವೃತ್ತಿ ಬದುಕಿನ ಜಂಜಾಟಗಳನ್ನು ಮುಗಿಸಿ ಒಂದು ತಿಂಗಳ ಕಾಲ ನೆಮ್ಮದಿಯಾಗಿ ನಿಮ್ಮ ದೇಶದಲ್ಲಿದ್ದು ಬಾ ಎಂದು ಇಲ್ಲಿನ ನಮ್ಮ ವಿಶ್ವ ವಿದ್ಯಾನಿಲಯವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಬಳ ಸಮೇತ ನಮ್ಮನ್ನು ಸ್ವದೇಶಕ್ಕೆ ಕಳಿಸಿಕೊಡುತ್ತಿದೆ. ನಿಮಗೆ ತಿಳಿದಂತೆ ಈ ಬ್ಲಾಗ್ ಲೋಕ ನನಗೆ ನನ್ನದೇ ಆದಂತ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ವಲಯವನ್ನು ನಿರ್ಮಿಸಿಕೊಟ್ಟಿದೆ. ಕಳೆದ ಸಾರಿ ಬಂದಾಗ ಹೆಂಡತಿ, ಮಗಳೊಂದಿಗೆ ಕಾಲ ಕಳೆದಿದ್ದಲ್ಲದೆ ನನ್ನ ಜೀವದ ಗೆಳೆಯ ಮಂಜುನನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿದ್ದಾಯಿತು. ಆದರೆ ಈ ಸಾರಿ ನಾನಿರುವಷ್ಟು ಸಮಯವನ್ನು ನನ್ನ ಬ್ಲಾಗ್ ಗೆಳೆಯರೊಂದಿಗೆ, ಮೇ ಫ್ಲಾವರ್ ಮಿಡಿಯಾದವರೊಂದಿಗೆ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಕಳೆಯಬೇಕೆಂದುಕೊಂಡಿರುವೆ. ನಾನು ಸಧ್ಯದಲ್ಲಿ ಅಂದರೆ ಇನ್ನೆರಡು ಮೂರು ದಿವಸದಲ್ಲಿ ಬೆಂಗಳೂರಿಗೆ ಬರುವವನಿದ್ದೇನೆ. ಬಂದ ಮೇಲೆ ನನ್ನ ಬ್ಲಾಗ್ ಗೆಳೆಯ/ಗೆಳತಿಯರನ್ನು ಭೇಟಿ ಆಗಬೇಕೆಂದಿರುವೆ. ಆದ್ದರಿಂದ ತಾವು ತಮ್ಮ ಫೋನ್ ನಂಬರ್ ಕೊಟ್ಟರೆ ಒಳಿತು. ಬಂದ ಮೇಲೆ ನಿಮ್ಮನ್ನು contact ಮಾಡೆತ್ತೇನೆ. ನಿಮಗೆಲ್ಲ ಸಮಯವಿದ್ದರೆ ಒಂದುಕಡೆ ಭೇಟಿಯಾಗಿ ಮನತುಂಬಿ ಮಾತಾಡೋಣ, ನಕ್ಕು ನಲಿಯೋಣ. ನಾನು ನಾಳೆ ಅಂದರೆ ಜುಲೈ 27 ರಂದು ಇಲ್ಲಿಂದ ಸಂಜೆ ಐದಕ್ಕೆ ಹೊರಟು ಬೆಳಿಗ್ಗೆ 1 ಗಂಟೆಗೆ ದುಬೈ ತಲುಪಿ ಅಲ್ಲಿಂದ ಬೆಳಿಗ್ಗೆ 3.30 ರ ಬೆಂಗಳೂರಿನ ಕನೆಕ್ಟಿಂಗ್ ಫ್ಲೈಟ್ ಹಿಡಿದು ಬೆಳಿಗ್ಗೆ 9 ಕ್ಕೆ ಬೆಂಗಳೂರನ್ನು ಜುಲೈ 28 ರಂದು ತಲುಪುವೆ. ಅಲ್ಲಿಂದಾಚೆ ನನ್ನ ಮೊಬೈಲ್ ನಂಬರ್ 98445 49386/87 ರಲ್ಲಿ ನಾನು ಸದಾ ಲಭ್ಯ. ಅದರಿಂದಾಚೆ ಬರಿ ಮಾತು! ಮಾತು! ಮಾತು! ನಡುನಡುವೆ ಒಂದಿಷ್ಟು ಹರಟೆ, ಖುಶಿ ಅಂತೆಲ್ಲಾ ಕಾಲ ಕಳೆಯುವದೇ ಕೆಲಸ. ಹೊರಡುವಾಗ ಒಂದಿಷ್ಟು ಹಸಿ ಹಸಿ ನೆನಪುಗಳನ್ನು ಹಾಗೂ ನಿಮ್ಮ ಭೇಟಿಯ ಕ್ಷಣಗಳನ್ನು ಮನದ ತುಂಬಾ ಹೊತ್ತು ಹೊರಡುತ್ತೇನೆ. ಆಗಬಹುದಲ್ಲವೆ?

    ಇದಲ್ಲದೆ ಇದೆ ಅವಧಿಯಲ್ಲಿ ತಂಗಿಯ ಸೀಮಂತ ಕಾರಣಕ್ಕೆ ಊರಿಗೆ ತೆರಳಬೇಕಾಗಿದೆ. ನನಗೆ ಬದುಕು ನೀಡಿದ ಬೆಂಗಳೂರನ್ನು ನೋಡಿ ಮನದಣಿಯಬೇಕಿದೆ. ಅದರಲ್ಲೂ ನನಗಿಷ್ಟವಾದ ಜಯನಗರ 4th ಬ್ಲಾಕ್‍ನ ಮೂಲೆ ಮೂಲೆ ಸುತ್ತಾಡಬೇಕಿದೆ. ಜೀವದ ಗೆಳೆಯ ಮಂಜುವಿನೊಂದಿಗೆ ಮನೆಗೆ ಹತ್ತಿರವಾದ ಯಡಿಯೂರು ಸರ್ಕ‌ಲ್‍ನಲ್ಲಿ ಸಿಗುವ ಮಿರ್ಚಿ, ಬೋಂಡಾ, ಪಾನಿಪೂರಿ, ಇಡ್ಲಿ ತಿನ್ನಬೇಕಿದೆ. ಸಾಧ್ಯವಾದರೆ ಸುರಿವ ಮಳೆಯ ಮಧ್ಯ ಗೆಳೆಯ ರಾಘು, ಮಂಜುವಿನೊಂದಿಗೆ ಹಿತಮಿತವಾಗಿ ಒಂದಿಷ್ಟು ಗುಂಡು ಹಾಕುತ್ತಾ ನಾವು ನಾವೇ ಕಾಲೆಳೆದುಕೊಳ್ಳಬೇಕಾಗಿದೆ, ರೇಗಿಸಿಕೊಳ್ಳಬೇಕಿದೆ. ಜೊತೆಗೆ ಮನದ ಮಾತುಗಳನ್ನು ಬಿಚ್ಚಿಡುತ್ತಾ ಬದುಕಲ್ಲಿ ಇನ್ನಷ್ಟು ಮುಂದೆ ಬರಲು ಏನು ಮಾಡಬಹುದು ಎಂಬುದನ್ನು ಯೋಚಿಸುತ್ತಾ ಸುಂದರ ಸಂಜೆಗಳನ್ನು ಕಳೆಯಬೇಕಿದೆ. ಮದುವೆಯೇ ಬೇಡ ಎನ್ನುತ್ತಿರುವ ಗೆಳೆಯ ಮಂಜುವಿನ ಮನಸ್ಸು ಬದಲಾಯಿಸಬೇಕಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮೂರಾಬಟ್ಟಿಯಾದ ಕೆಲವರ ಬದುಕನ್ನು ಸರಿಪಡಿಸಬೇಕಾಗಿದೆ. ಬೆಂಗಳೂರಲ್ಲಿ ಸ್ವಂತಕ್ಕೆ ಮನೆ/ಸೈಟೊಂದನ್ನು ಖರೀದಿಸಬೇಕಿದೆ. ಕಾಲೇಜು ಗೆಳೆಯ ರಾಜೀವನ ಮಗಳನ್ನು ನೋಡಲು ಮಂಡ್ಯಕ್ಕೆ ಹೋಗಬೇಕಿದೆ. ಇನ್ನೋರ್ವ ಕಾಲೇಜು ಗೆಳೆಯ ಶರತ್‍ನನ್ನು ಭೇಟಿ ಮಾಡಿ ಅವನ ಸುಧಾರಿಸುತ್ತಿರುವ ಆರೋಗ್ಯದ ಬಗ್ಗೆ ವಿಚಾರಿಸಬೇಕಾಗಿದೆ. ಇಷ್ಟೆಲ್ಲವನ್ನು ಒಂದು ತಿಂಗಳ ಅವಧಿಯಲ್ಲಿ ಮಾಡುತ್ತೇನೆಯೇ? ಗೊತ್ತಿಲ್ಲ. ಹೀಗೆಲ್ಲಾ ಯೋಚಿಸುತ್ತಿರುವಂತೆಯೇ ರಾಬರ್ಟ್ ಫ್ರಾಸ್ಟನ ಸಾಲುಗಳು ನೆನಪಾಗುತ್ತವೆ.
    “The woods are lovely, dark, and deep,
    But I have promises to keep,
    And miles to go before I sleep,
    And miles to go before I sleep.”
    ಮನಸ್ಸು ಮತ್ತೆ ಕಾರ್ಯೋನ್ಮುಖವಾಗುತ್ತದೆ. ಇನ್ನು ಒಂದು ತಿಂಗಳು ನನ್ನ ಕೆಲಸದಲ್ಲಿ ಬಿಜಿಯಾಗಿರುವದರಿಂದ ನಿಮ್ಮ ಬ್ಲಾಗುಗಳಿಗೆ ಭೇಟಿ ನೀಡಿ ಪ್ರತಿಕ್ರಿಯಿಸುವದು ಆಗದೆ ಇರಬಹುದು. ಅದಕ್ಕಾಗಿ ತಮ್ಮ ಕ್ಷಮೆಯಿರಲಿ. ಹಾಗೆಯೇ “ಬಿಸಿಲ ಹನಿ”ಯು ಕೂಡ ಒಂದು ತಿಂಗಳು ಕಾಲ ವಿರಾಮ ತೆಗೆದುಕೊಳ್ಳುತ್ತಿದೆ. ಹೆಚ್ಚಿಗೆ ಏನೂ ಇಲ್ಲ. ಎಲ್ಲ ಅಲ್ಲಿ ಬಂದ ಮೇಲೆ.
    -ಉದಯ ಇಟಗಿ

    5 ಕಾಮೆಂಟ್‌(ಗಳು):

    shivu.k ಹೇಳಿದರು...

    ಉದಯ ಸರ್,

    ತಗೊಳ್ಳಿ ನನ್ನ ಮೊಬೈಲ್ ನಂ:9845147695. ಇನ್ನುಳಿದಂತೆ ಬೆಂಗಳೂರಿನಲ್ಲಿ ಸಿಗೋಣ. ಮನತುಂಬಿ ಮಾತಾಡೋಣ. ನಿಮ್ಮ ನಿರೀಕ್ಷೆಯಲ್ಲಿ...

    ಶಿವು.ಕೆ

    Unknown ಹೇಳಿದರು...

    (ನ)ನಿಮ್ಮ ಊರಿಗೆ ನಿಮಗೆ ಸ್ವಾಗತ.
    9916915446

    Unknown ಹೇಳಿದರು...

    ಅಂದ ಹಾಗೆ ಈ ಪೋಸ್ಟಿಗೆ ನೀವು ಕೊಟ್ಟಿರುವ ಟೈಟಲ್ ಸಖತ್ತಾಗಿದೆ, ಸೃಜನಾತ್ಮಕವಾಗಿದೆ

    Unknown ಹೇಳಿದರು...

    Welcome back sir,

    Nimage time sikkare bengaloorinalli sigona...

    ಚಂದಿನ ಹೇಳಿದರು...

    ಸುಸ್ವಾಗತ ಉದಯ್ ಅವರೆ,

    ಒಂದು ವೇಳೆ ಹೈದರಾಬಾದಿಗೇನಾದರೂ ಬರುವ ಯೋಜನೆಗಳಿದ್ದರೆ ತಿಳಿಸಿ.
    ಖಂಡಿತ ಭೇಟಿಯಾಗೋಣ.
    ನಾನೇನಾದರೂ ಬೆಂಗಳೂರಿಗೆ ಬಂದರೆ ಕಾಂಟ್ಯಾಕ್ಟ್ ಮಾಡ್ತೇನೆ.
    ನಿಮ್ಮಾಸೆಯಂತೆಯೇ ಎಲ್ಲವೂ ಸುಗಮವಾಗಿ ಸಾಗಲಿ ಎಂದು ಹರಸುವೆ.

    ಧನ್ಯವಾದಗಳೊಂದಿಗೆ,
    ಚಂದಿನ
    email:chandinais@gmail.com