Demo image Demo image Demo image Demo image Demo image Demo image Demo image Demo image

ಹುಚ್ಚರು

  • ಸೋಮವಾರ, ಏಪ್ರಿಲ್ 06, 2009
  • ಬಿಸಿಲ ಹನಿ

  • ಹುಚ್ಚರಿಗೆ
    ಜಾತಿಯಿಲ್ಲ, ಧರ್ಮವಿಲ್ಲ
    ತೄತಿಯಲಿಂಗಿಗಳು ಇವರು
    ಸದಾ ಸಿದ್ಧಾಂತಗಳ ಹೊರಗೆ ಬದುಕುತ್ತಾರೆ
    ಇವರ ಮುಗ್ಧತೆಗೆ ನಾವು ಪಾತ್ರರಲ್ಲ

    ಇವರಾಡುವ ಭಾಷೆ
    ಕನಸಿನ ಭಾಷೆಯಲ್ಲ
    ದು ಕಟುವಾಸ್ತವ ಸತ್ಯ
    ಇವರ ಪ್ರೀತಿ
    ತಿಂಗಳ ಬೆಳಕಿನಂಥ ಪ್ರೀತಿ
    ಉಕ್ಕಿ ಹರಿಯುವದದು
    ಬೆಳದಿಂಗಳ ಹಾಲಾಗಿ
    ಹುಣ್ಣಿಮೆಯ ದಿನ

     ಇವರು
    ಮುಗಿಲಿನತ್ತ ನೋಡುತ್ತಾ
    ನಾವು ಕೇಳಿರದ ದೇವರನ್ನು ನೋಡುತ್ತಾರೆ
    ಆ ದೇವತೆಗಳ ರೆಕ್ಕೆಗಳನ್ನು ಸಹ ಅಲುಗಾಡಿಸುತ್ತಾರೆ.
    ನಾವು ಕಲ್ಪನಾ ಲೋಕದಲ್ಲಿ ವಿಹರಿಸುವಾಗ
    ನಮ್ಮನ್ನು ಪರಿಹಾಸ ಮಾಡುತ್ತಾರೆ
    ಅವರು ಹೇಳುತ್ತಾರೆ ನೊಣಗಳಿಗೂ ಸಹ ಆತ್ಮವಿದೆ ಎಂದು..

    ಒಂದೊಂದು ಸಾರಿ
    ಗಿಡಮರಗಳು ರಕ್ತ ಕಾರುವದನ್ನು ಕಾಣುತ್ತಾರೆ
    ಮಗದೊಮ್ಮೆ ಬೀದಿಗಳಲ್ಲಿ
    ಸಿಂಹಗಳು ಘರ್ಜಿಸುತ್ತಿವೆಯೆಂದು ಹೇಳುತ್ತಾರೆ
    ಅವರೂ ಸಹ ನಮ್ಮಂತೆ
    ಬೆಕ್ಕಿನ ಕಂಗಳಲ್ಲಿ ಸ್ವರ್ಗ ಹೊಳೆಯುವದನ್ನು ಕಂಡು
    ಖುಶಿಪಡುತ್ತಾರೆ.
    ಆದರೆ ಇರುವೆಗಳು
    ಹಿಮ್ಮೇಳದಲ್ಲಿ ಹಾಡುವದನ್ನು
    ಅವರು ಮಾತ್ರ ಕೇಳಬಲ್ಲರು!

    ಗಾಳಿಯನ್ನು ತಟ್ಟಿ ಮಲಗಿಸುವಾಗ
    ಅವರು ಮೆಡಿಟೇರಿಯನ್ ಸಮುದ್ರದಲ್ಲಿನ
    ಸುಂಟರಗಾಳಿಯನ್ನು ದಮನಮಾಡುತ್ತಾರೆ
    ಮತ್ತು ತಮ್ಮ ದೊಡ್ಡದಾದ ಹೆಜ್ಜೆಗಳಿಂದ
    ಸಿಡಿಯುವ ಜ್ವಾಲಾಮುಖಿಗಳನ್ನು ಮೆಟ್ಟಿನಿಲ್ಲುತ್ತಾರೆ

    ಇವರಿಗೆ ತಮ್ಮದೇ ಆದ
    ಕಾಲ ಮಾಪನಗಳಿವೆ
    ಕಾಲದಾಚೆಯ ಕಾಲವಾಗಿ
    ಬದುಕುವ ಇವರಿಗೆ
    ನಮ್ಮ ಮೊದಲ ಶತಮಾನ
    ಅವರಿಗದು ಎರಡನೆಯದು.
    ಇಪ್ಪತ್ತೇ ಸೆಕೆಂಡುಗಳಲ್ಲಿ
    ಅವರು ಕ್ರಿಸ್ತನನ್ನು ತಲುಪುತ್ತಾರೆ
    ಇನ್ನಾರೇ ಆರು ಸೆಕೆಂಡುಗಳಲ್ಲಿ ಬುದ್ಧನೊಂದಿಗೆ ಇರುತ್ತಾರೆ


    ಒಂದೇ ದಿನದಲ್ಲಿ ಬಿಗ್ ಬ್ಯಾಂಗ್
    ವಿಶ್ವ ಸೃಷ್ಟಿಯನ್ನು ಗ್ರಹಿಸುತ್ತಾರೆ

    ಏನನ್ನೋ ಚಡಪಡಿಸುತ್ತಾ ಶತಪಥ ತಿರುಗಾಡುತ್ತಾರೆ
    ಹಾಗೂ ತಮ್ಮ ಭೂಮಿಯಿನ್ನೂ ಕುದಿಯುತ್ತಿದೆ ಎಂದು ಭಾವಿಸುತ್ತಾರೆ,

    ಒಟ್ಟಿನಲ್ಲಿ
    ಹುಚ್ಚರು ನಮ್ಮಂತೆ ಹುಚ್ಚರಲ್ಲ ಬಿಡಿ!

    ಮಲಯಾಳಂ ಮೂಲ: ಕೆ. ಸಚ್ಚಿದಾನಂದ
    ಇಂಗ್ಲೀಷಿಗೆ: ಕೆ. ಸಚ್ಚಿದಾನಂದ
    ಕನ್ನಡಕ್ಕೆ: ಉದಯ್ ಇಟಗಿ


    18 ಕಾಮೆಂಟ್‌(ಗಳು):

    Unknown ಹೇಳಿದರು...

    ನಾನು ಈ ಬ್ಲಾಗುಗಳ ಲೋಕಕ್ಕೆ ಕಾಲಿಡದೇ ಹೋಗಿದ್ದರೆ, ಎಂತೆಂತಹ ಅನುವಾದಿತ ಕವಿತೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಅನ್ನಿಸುತ್ತಿದೆ. ಪತ್ರಿಕೆಗಳಲ್ಲಿ ಬರುವ ಅನುವಾದಿತ ಕವಿತೆಗಳನ್ನು ಆಗಾಗ ಕಣ್ಣಾಡಿಸುತ್ತಿದ್ದೆ ಅಷ್ಟೆ. ಈಗ ಬ್ಲಾಗುಗಳಲ್ಲಿ ಹೆಚ್ಚೆಚ್ಚು ಅನುವಾದಿತ ಕವಿತೆಗಳನ್ನು ಓದುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅದಕ್ಕೆ ನೀವೂ ಕಾರಣಕರ್ತರಾಗಿದ್ದಿರಿ. ಧನ್ಯವಾದಗಳು. ನಿಮ್ಮ ಅನುವಾದದ ಶೈಲಿ ಅದ್ಭುತವಾಗಿದೆ. ನಾನು ಕೆಲವು ಕವಿತೆಗಳನ್ನು ಮೊದಲಿಂದ ಓದುತ್ತಾ ಬಂದು, ಒಳ್ಳೆಯ ಕನ್ನಡ ಕವಿತೆ ಬರೆದಿದ್ದಾರೆ ಎಂದುಕೊಂಡಿರುತ್ತೇನೆ. ಅಷ್ಟರಲ್ಲಿ ಕೊನೆಯಲ್ಲಿ ಅನುವಾದ ಎಂದಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಅದೂ ಈ ಕವಿತೆಯ ವಿಷಯದಲ್ಲೂ ಹಾಗೇ ಆಯಿತು.

    sunaath ಹೇಳಿದರು...

    ಉತ್ತಮ ಕವನದ ಉತ್ತಮ ಅನುವಾದ. ಜೊತೆಗೇ ಸುಂದರವಾದ ಚಿತ್ರ ಬೇರೆ! ಅಭಿನಂದನೆಗಳು.

    ಬಿಸಿಲ ಹನಿ ಹೇಳಿದರು...

    ಸತ್ಯ ನಾರಾಯಣವರೆ,
    ತುಂಬಾ ಹೊಗಳಿಬಿಟ್ಟಿದ್ದೀರಿ!ನಿಜಕ್ಕೂ ನನ್ನ ಅನುವಾದ ಅಷ್ಟು ಚನ್ನಾಗಿದೆಯೆ? Any way ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್.

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    Thank you so much.

    PARAANJAPE K.N. ಹೇಳಿದರು...

    ಉದಯರೇ,
    "ಹುಚ್ಚರು" ಎ೦ಬ ಅನುವಾದಿತ ಕವನದ ಮೂಲಕ ಹುಚ್ಚರನ್ನು ನಾಗರಿಕ ಸಮಾಜದೊ೦ದಿಗೆ ತುಲನೆ ಮಾಡಿದ್ದಿರಿ. ಕವನ ಚೆನ್ನಾಗಿದೆ.

    shivu.k ಹೇಳಿದರು...

    ಉದಯ್ ಸರ್,

    ಹುಚ್ಚರ ಬಗೆಗಿನ ಕವನ ಅವರ ಅನೇಕ ಒಳಮನಸ್ಸಿನ ವಿಚಾರಗಳನ್ನು ಪ್ರತಿಬಿಂಬಿಸುತ್ತಿದೆ....ಅವರ ಬಗೆಗೆ ಜನಸಾಮಾನ್ಯರಿಗಿರುವ ಕಲ್ಪನೆಯನ್ನು ಈ ಕವನದ ಮೂಲಕ ಬದಲಾಯಿಸಿದ್ದೀರಿ...ಅಂತ ನನ್ನ ಭಾವನೆ...
    ಒಂದು ಸುಂದರ ಕವನವನ್ನು ಅನುವಾದಿಸಿದ್ದೀರಿ...
    ಧನ್ಯವಾದಗಳು...

    ಅಂತರ್ವಾಣಿ ಹೇಳಿದರು...

    ಉದಯ ಅವರೆ,
    ಹುಚ್ಚರ ಬಗ್ಗೆ ಕೂಡ ಕವನವಿದೆ ಎಂದು ಈಗ ತಿಳಿಯಿತು.
    ನಿಜ. ಸಮಾನ್ಯ ಮನುಷ್ಯರೂ ಕೂಡ ಕೆಲವೊಮ್ಮ ಹುಚ್ಚರಂತಾಡುತ್ತಾರೆ.

    ಬಿಸಿಲ ಹನಿ ಹೇಳಿದರು...

    ಶಿವು, ಪರಾಂಜಪೆ, ಜಯಶಂಕರ್,
    ನಿಮ್ಮ ಈ ನಿರಂತರ ಪ್ರೋತ್ಸಾಹದ ಮಾತುಗಳು ನನ್ನನ್ನು ಮತ್ತಷ್ಟು ಕವನಗಳನ್ನು ಅನುವಾದಿಸುವಂತೆ ಮಾಡಿದೆ. ನಿಮ್ಮ ಈ ಪ್ರೀತಿ ಹಾಗು ಪ್ರೋತ್ಸಾಹ ಹೀಗೆ ಮುಂದುವರೆಯಲಿ.

    shivu.k ಹೇಳಿದರು...

    ಉದಯ ಸರ್,

    ನಿಮ್ಮ ಹೊಸ ಕವನವನ್ನು "ಆವಧಿ" ಓದಿದೆ...ತುಂಬಾ ಚೆನ್ನಾಗಿದೆ....ಅಭಿನಂದನೆಗಳು...

    Ittigecement ಹೇಳಿದರು...

    ಉದಯ್....

    ಎಲ್ಲಿಂದ ಹುಡುಕುತ್ತೀರಿ...
    ಇಷ್ಟು ಒಳ್ಳೆಯ ಕವನಗಳನ್ನು...?

    ನಿಮ್ಮ ಅನುವಾದಗಳೂ..
    ಒರಿಜನಲ್ ಹಾಗೆ ಇರುತ್ತದೆ...

    ಅಭಿನಂದನೆಗಳು...

    ಬಿಸಿಲ ಹನಿ ಹೇಳಿದರು...

    ಥ್ಯಾಂಕ್ಸ್ ಶಿವು,
    ನನಗೆ ಗೊತ್ತೇ ಇರಲಿಲ್ಲ ನನ್ನ ಒಂದು ಕವನ "ಅವಧಿ"ಯಲ್ಲಿ ಪ್ರಕಟವಾಗಿದೆ ಎಂದು. ನೀವು ಹೇಳಿದ ಮೇಲೆ ನೋಡಿದೆ. ತುಂಬಾ ಖುಶಿಯಾಯಿತು. ಅಂದ ಹಾಗೆ ಅದು ಹೊಸ ಕವನವಲ್ಲ. ಹಳೆಯದು. ನನ್ನ ಬ್ಲಾಗಿನ ಹಳೆ ಪೋಸ್ಟಗಳಲ್ಲಿ ಇದೆ ನೋಡಿ. ಅದನ್ನು ಅಲ್ಲಿಂದ ಹೆಕ್ಕಿ ಹಾಕಿದ್ದಾರೆ ವಿನಃ ನಾನೇ ನಾನಾಗಿ ಕಳಿಸಿಲ್ಲ. Anyway ಅವರು ನನಗೆ ಹೆಚ್ಚು ತೃಪ್ತಿ ತಂದಕೊಟ್ಟ ಅನುವಾದಗಳಲ್ಲಿ ಒಂದನ್ನು ಆಯ್ದು ಹಾಕಿದ್ದ್ದಾರೆ. ಅದು ಇನ್ನಷ್ಟು ಖುಶಿ ಹಾಗು ತೃಪ್ತಿಯನ್ನು ತಂದುಕೊಟ್ಟಿದೆ.

    ಬಿಸಿಲ ಹನಿ ಹೇಳಿದರು...

    ಪ್ರಕಾಶ ಅವರೆ,
    ನನ್ನ ಬಿಡುವಿನ ಸಮಯದಲ್ಲಿ ಲೈಬ್ರೇರಿಯಲ್ಲಿ ಕಾಲ ಕಳೆಯುವಾಗ ನನಗಿಷ್ಟವಾದ ಕವನವನ್ನು ತಕ್ಷಣ ಡೈರಿಯಲ್ಲಿ ನೋಟ್ ಮಾಡಿಕೊಂಡು ಮನೆಗೆ ಬಂದ ಮೇಲೆ ಅನುವಾದಿಸುತ್ತೇನೆ.
    "ನಿಮ್ಮ ಅನುವಾದಗಳೂ..
    ಒರಿಜನಲ್ ಹಾಗೆ ಇರುತ್ತದೆ..." ನನ್ನನ್ನು ತೀರ ಮುಜುಗರಕ್ಕೆ ಈಡುಮಾಡಿವಿರಿ.
    Anyway ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು.
    ಅಂದ್ಹಾಗೆ ಕನ್ನಡ ಬ್ಲಾಗರ್ಸನಲ್ಲಿ ನಿಮ್ಮ ಬ್ಬ್ಲಾಗ್ ಪರಿಚಯ ನೋಡಿ ಖುಶಿಯಾಯಿತು.

    ಧರಿತ್ರಿ ಹೇಳಿದರು...

    ಉದಯ್ ಸರ್..ಯುವಕವಿಯಲ್ಲಿ ನಿಮ್ಮ ಭಾವಾನುವಾದ ಕವಿತೆಗಳು ನಿತ್ಯ ಕಲರವಗುಟ್ಟುತ್ತವೆ. ಓಡ್ತಾ ಇರ್ತೀನಿ. ಸಮಯ ಇದ್ರೆ..ಒಂದ್ಸಲ ನನ್ ಬ್ಲಾಗ್ ಕಡೆ ಬಂದು ಹೋಗಿ.
    ನಮಸ್ಕಾರ.
    -ಧರಿತ್ರಿ

    ಬಿಸಿಲ ಹನಿ ಹೇಳಿದರು...

    ಧರಿತ್ರಿಯವರೆ,
    ನನ್ನ ಬ್ಲಾಗಿಗೆ ಮೊದಲ ಬಾರಿಗೆ ಭೇಟಿಕೊಟ್ಟಿದ್ದೀರಿ.ನಿಮಗೆ ಅದ್ದೂರಿಯ ಸ್ವಾಗತ.
    ನೀವು ಹೇಳುವ ಮೊದಲೇ ನಾನದಾಗಲೆ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟು ಅವನ್ನು ಸೇವ್ ಮಾಡಿಕೊಂಡು ಓದ್ತಾ ಇದ್ದೇನೆ. ಮುಗಿದ ತಕ್ಷಣ ನನ್ನ ಅಭಿಪ್ರಾಯವನ್ನು ತಿಳಿಸುವೆ.
    ನನ್ನ ಬ್ಲಾಗಿಗೆ ಭೇಟಿ ಕೊಡುವಷ್ಟು ಉತ್ಸಾಹ ತೋರಿದ್ದಕ್ಕೆ ಥ್ಯಾಂಕ್ಸ್. ಆಗಾಗ ಭೇಟಿ ಕೊಡುತ್ತಿರಿ.

    ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

    ಹುಚ್ಚು,ಹುಚ್ಚರು-ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತೇವೆ. Inverse is true ಅನ್ನೋ ಹಾಗೆ ನಾವೇ ಆಂತರ್ಯದಲ್ಲಿ ಹುಚ್ಚರು ಎಂದನಿಸುತ್ತೆ. ಕವನ ಓದಿ ಏನೇನೋ ಆಲೋಚನೆಗಳು. ಅನುವಾದ ಅಂತನಿಸುವುದೇ ಇಲ್ಲ. ತುಂಬ ಚೆನ್ನಾಗಿದೆ.

    ಬಿಸಿಲ ಹನಿ ಹೇಳಿದರು...

    ಮಲ್ಲಿಕಾರ್ಜುನವರೆ,
    ನನ್ನ ಬ್ಲಾಗಿಗೆ ನಿಮಗೆ ಸ್ವಾಗತ ಹಾಗು ನಿಮ್ಮ ಪ್ರತಿಕ್ರಿಯೆಗೆ ಧನ್ಯವದಗಳು.

    ಚಂದಿನ ಹೇಳಿದರು...

    ತುಂಬ ಸೊಗಸಾಗಿ ಮೂಡಿಬಂದಿದೆ.

    - ಚಂದಿನ

    ಬಿಸಿಲ ಹನಿ ಹೇಳಿದರು...

    Thank you Chandin.