Demo image Demo image Demo image Demo image Demo image Demo image Demo image Demo image

ಅನುಯಾಯಿಗಳು

  • ಮಂಗಳವಾರ, ಜನವರಿ 02, 2018
  • ಬಿಸಿಲ ಹನಿ
  • ನಾವು ಅವಾಸ್ತವಿಕ ಪ್ರೀತಿಯನ್ನು ಹಂಚಿಕೊಳ್ಳುತ್ತಾ ನಮ್ಮ ಯೌವನವನ್ನು
    ಕೆಲವು ಸೌಮ್ಯ ಪಾಪಕೃತ್ಯಗಳನ್ನು ಮಾಡುವದರಲ್ಲಿ ಕಳೆದಿದ್ದೇವೆ
    ಮತ್ತು ಅದಕ್ಕಾಗಿ ಬಹಳ ಸಲ ಇಬ್ಬರೂ ನೊಂದಿದ್ದೇವೆಂದು ಇಬ್ಬರಿಗೂ ಅನಿಸಿದೆ
    ಆದರೂ ಒಂದೇ ಒಂದು ನೋವು ನಮ್ಮಲ್ಲಿ ಉಳಿಯಲಿಲ್ಲ
    ಒಂದೇ ಒಂದು ಮೂಗೇಟು ಗಾಯದ ಗುರುತುಗಳನ್ನು ಮೂಡಿಸಲಿಲ್ಲ
    ಅಥವಾ ಸಣ್ಣದಾಗಿಯೂ ಸಹ ನಮ್ಮ ಪ್ರೀತಿಯ ಸೊಗಡನ್ನು ಹಾಳುಗೆಡುವಲಿಲ್ಲ.
    ನಾವು ಎಲ್ಲ ಋತುಮಾನಗಳಲ್ಲಿ
    ಸದಾ ಮೆತ್ತನೆಯ ಹಾಸಿಗೆಗಳಿಗೆ ಮೊಳೆ ಹೊಡೆದುಕೊಂಡವರಂತೆ ಎಲ್ಲ ಭಂಗಿಳಲ್ಲಿ ಮಲಗಿದ್ದೇವೆ
    ಏದುಸಿರು ಬಿಡುತ್ತಾ, ಹೊರಳಾಡುತ್ತಾ
    ಅರ್ಧ-ಮುಸ್ಸಂಜೆ, ಅರ್ಧ-ಮುಂಜಾವಿನಲ್ಲಿ
    ಮತ್ತು ಅರ್ಧ-ಕನಸು, ಅರ್ಧ-ಅರೆಪ್ರಜ್ಞಾವಸ್ಥೆಯಲ್ಲಿ
    ಒಬ್ಬರಿಗೊಬ್ಬರನ್ನು ಅರ್ಪಿಸುತ್ತಾ ಸಮಯ ಸರಿಸಿದ್ದೇವೆ.
    ನಾವು ಒಬ್ಬರಿಗೊಬ್ಬರು ಶರಣಾಗಿದ್ದೆವು
    ಒಬ್ಬರೊಬ್ಬರ ವಶವಾಗಿದ್ದೆವು
    ನೆನಪುಗಳಿಗಾಗಿ ನಾವು ಬಸಿರನ್ನು ಬಗೆದು ನೋಡಬೇಕಾಗಿಲ್ಲ
    ಆದರೆ ಮಗು ಸದಾ ತನ್ನ ಅಮ್ಮನತ್ತ ತೋಳುಗಳನ್ನು ಚಾಚುವಂತೆ
    ನಾವು ಬೆಂಕಿಯತ್ತ ಕೈಚಾಚಬೇಕು
    ಇಲ್ಲವೇ ಹಸಿದ ಭೂತಾಯಿಯ ಗರ್ಭದೊಳಗೆ ಸೇರಿಕೊಂಡು
    ಭಕ್ಷಣೆಗೊಳಗಾಗಬೇಕು
    ಯಾರೂ ನಮ್ಮನ್ನು ತಡೆಯಲಾರರು
    ಅಥವಾ ಘಾಸಿಗೊಳಿಸಲಾರರು
    ಮೌನಕ್ಕೆ ಶರಣಾದ ಯಾವ ದೇವರೂ ಮತ್ತೆ ಮಾತನಾಡಲಾರ
    ಕಳೆದುಹೊದ ಯಾವ ಪ್ರೀತಿಯೂ ನಮ್ಮೊಟ್ಟಿಗೆ ಗುರುತಿಸಿಕೊಳ್ಳಲಾರದು
    ಏಕೆಂದರೆ ನಾವು ಮತ್ತೆ ಪ್ರೀತಿಸುವದಿಲ್ಲ
    ಅಥವಾ ಮತ್ತೆ ಪ್ರೇಮಿಗಳಾಗಿ ಹುಟ್ಟುವದಿಲ್ಲ.......

    ಮೂಲ ಇಂಗ್ಲೀಷ್: ಕಮಲಾ ದಾಸ್
    ಕನ್ನಡಕ್ಕೆ: ಉದಯ್ ಇಟಗಿ