Demo image Demo image Demo image Demo image Demo image Demo image Demo image Demo image

ಎಂದಿಗೂ ಸತ್ಯವನ್ನು ಹೇಳಬೇಡ....

 • ಭಾನುವಾರ, ಫೆಬ್ರವರಿ 28, 2010
 • ಬಿಸಿಲ ಹನಿ
 • ನೀನು ಸತ್ಯವನ್ನು ಹೇಳಿದರೆ, ಜನ ಕೋಪಗೊಳ್ಳುತ್ತಾರೆ
  ಇನ್ನುಮುಂದೆ ಸತ್ಯವನ್ನು ಹೇಳಲೇಬೇಡ
  ಈ ಕಾಲ ಗೆಲಿಲಿಯೋನ ಕಾಲವಲ್ಲ.
  ಇದು ಇಪ್ಪತ್ತೊಂದನೇ ಶತಮಾನ,
  ಆದರೂ ಈ ಸಮಾಜ ನಿನ್ನ ಬಹಿಷ್ಕರಿಸುತ್ತದೆ,
  ನಿನು ಸತ್ಯವನ್ನು ಹೇಳಿದರೆ.
  ನಿನ್ನ ದೇಶ ನಿನ್ನ ಗಡಿಪಾರು ಮಾಡುತ್ತದೆ,
  ಬಂದಿಖಾನೆಯಲ್ಲಿ ಇಡುತ್ತದೆ,
  ಇಲ್ಲವೇ ಹಿಂಸಿಸುತ್ತದೆ
  ಹಾಗಾಗಿ ಸತ್ಯವನ್ನು ಹೇಳಲೇಬೇಡ
  ಬದಲಾಗಿ ಸುಳ್ಳನ್ನೇ ಹೇಳು.

  ಸೂರ್ಯ ಭೂಮಿಯ ಸುತ್ತ ತಿರುಗುತ್ತಾನೆ ಎಂದು ಹೇಳು
  ಚಂದ್ರನಿಗೂ ಕೂಡಾ ಸೂರ್ಯನಂತೆ ತನ್ನದೇ ಆದಂತ ಸ್ವಂತ ಬೆಳಕಿದೆ ಎಂದು ಹೇಳು
  ಬೆಟ್ಟಗುಡ್ಡಗಳನ್ನು ಭೂಮಿಗೆ ಮೊಳೆ ಹೊಡೆದು ನಿಲ್ಲಿಸಿದ್ದಾರೆ,
  ಆದ್ದರಿಂದಲೇ ಭೂಮಿ ಖಾಲಿ ಜಾಗದೆಡೆಗೆ ಜಾರುವದಿಲ್ಲ ಎಂದು ಹೇಳು
  ಹೆಂಗಸರು ಗಂಡಸರ ತೋಳಿನಿಂದ ಜನಿಸಿದ್ದಾರೆ ಎಂದು ಹೇಳು
  ತಾರೆಗಳು, ಗೃಹಗಳು, ಉಪಗೃಹಗಳು, ಗುರುತ್ವಾಕರ್ಷಣೆ ಮತ್ತು ಈ ವಿಶ್ವ
  ಎಲ್ಲವೂ ಬರಿ ಬೊಗಳೆ ಎಂದು ಹೇಳು
  ಮಾನವ ಚಂದ್ರನ ಮೇಲೆ ಕಾಲೇ ಇಡಲಿಲ್ಲ ಎಂದು ಸಹ ಹೇಳು
  ಏನಾದರು ಹೇಳು ಸುಮ್ಮನೆ ಸುಳ್ಳನ್ನೇ ಹೇಳು
  ಸದಾ ಸುಳ್ಳನ್ನೇ ಹೇಳುತ್ತಿರು.......

  ನೀನು ಸುಳ್ಳನ್ನು ಹೇಳಿದರೆ,
  ನಿನಗೆ ವನವಾಸದಲ್ಲಿರುವ ಪ್ರಸಂಗ ಬರುವದಿಲ್ಲ
  ನಿನಗೆ ನಿನ್ನದೇ ಅಂತ ಒಂದು ದೇಶವಿರುತ್ತದೆ, ಗೆಳೆಯರಿರುತ್ತಾರೆ
  ನಿನಗೆ ನಿನ್ನ ಬಂಧನಗಳಿಂದ ಬಿಡುಗಡೆಯಾಗುತ್ತದೆ
  ಆಗ ದಿನವೂ ನೀನು ಬೆಳಕು ಮತ್ತು ನೀಲಾಕಾಶವನ್ನು ನೋಡುತ್ತಿ
  ಯಾರೂ ನಿನ್ನನ್ನು ಕತ್ತಲು ಕೋಣೆಯೊಳಗೆ ಕೂಡಿಹಾಕಲಾರರು,
  ಅಮಾನುಷವಾಗಿ ನಡೆಸಿಕೊಳ್ಳಲಾರರು, ಮೃತ್ಯುಕೂಪಕ್ಕೆ ತಳ್ಳಲಾರರು......

  ಹಾಗಾಗಿ ಎಂದಿಗೂ ಸತ್ಯವನ್ನು ಹೇಳಬೇಡ
  ಉಳಿದವರಂತೆ ಸುಳ್ಳನ್ನೇ ಹೇಳುತ್ತಾ ಬದುಕಿಬಿಡು.....

  ಬಂಗಾಳಿ ಮೂಲ: ತಸ್ಲಿಮಾ ನಜ್ರಿನ್
  ಕನ್ನಡಕ್ಕೆ: ಉದಯ್ ಇಟಗಿ

  4 ಕಾಮೆಂಟ್‌(ಗಳು):

  shivu.k ಹೇಳಿದರು...

  ಸರ್,

  ಮತ್ತೊಂದು ತಸ್ಲೀಮ ನಜ್ರೀನ್ ಕವನದ ಅನುವಾದ. ಓದಿದೆ ಖುಷಿಕೊಟ್ಟರೂ ಒಂಥರ ಎನೋ ಒಂಥರ ವಿಭಿನ್ನವೆನಿಸುವುದು ಸಹಜ.

  Dr. B.R. Satynarayana ಹೇಳಿದರು...

  ಉದಯ್ ಕವನದ ಲಯ ಇಷ್ಟವಾಯಿತು. ಚೆನ್ನಾಗಿ ಓದಿಸಿಕೊಳ್ಳುತ್ತದೆ. ಸಹಸ್ರ ಸಹಸ್ರಮಾನಗಳೇ ಕಳೆದು ಹೋದರೂ ಈ ಮನುಷ್ಯನ ಬುದ್ದಿ ಬದಲಾಗುವುದೇ ಇಲ್ಲ. ಸತ್ಯ ಹೇಳುವವನಿಗೆ ತತ್ಕಾಲೀನ ವನವಾಸ ತಪ್ಪಿದ್ದಲ್ಲವೇನೋ ಅನ್ನಿಸುತ್ತಿದೆ. ಸತ್ಯ ಹೇಳಲೇ ಬೇಡ ಎಂದು ಕವನ ಹೇಳುತ್ತಿದ್ದರೂ ಅದು ನನಗೆ ಋಣಾತ್ಮಕವಾಗಿ ತಟ್ಟಲೇ ಇಲ್ಲಾ. ಇದು ಈ ಕವಿತೆಯ ವೈಶಿಷ್ಟ್ಯವೂ ಹೌದು ಎನ್ನಿಸುತ್ತಿದೆ. ಧನ್ಯವಾದಗಳು

  ಸಾಗರದಾಚೆಯ ಇಂಚರ ಹೇಳಿದರು...

  ಸರ್
  ಇನ್ನೊಂದು ತಸ್ಲೀಮ ಅವರ ಕವನ ಓದಿ ಖುಷಿಯಾಯಿತು
  ಎಷ್ಟೊಂದು ತಿಳಿದುಕೊಳ್ಳುವುದು ಇದೆ ಕವನದಲ್ಲಿ

  ರವಿಕಾಂತ ಗೋರೆ ಹೇಳಿದರು...

  Chennaagide.. (Naanu heliddu Sullu!!!!)