ಒಬ್ಬರಿಗೊಬ್ಬರು ಸ್ವರ್ಗ ಕಾಣಿಸಿದ ಬಳಿಕ
ಒಬ್ಬರಲೊಬ್ಬರು ನರಕ ಕಂಡುಕೊಂಡೆವು.
"ನಿನಗೇನು ಬೇಕು?" ಕೇಳಿದೆ.
ವಿರಹದ ಮುಳ್ಳು ಹಾಸು, ನೆನಪಿನ ರಝಾಯಿ - ಅಂದ.
"ತೊಲಗಿಹೋಗು" ಅನ್ನೋದನ್ನ
ಅದೆಷ್ಟು ಕಾವ್ಯಮಯವಾಗಿ ಹೇಳಿದ್ದ!
"ನನಗೇನು ಕೊಡ್ತೀ?" ಕೇಳಿದೆ.
ಜಗದ ಹೆಣ್ಣುಗಳೆಲ್ಲ ಕರಬುವ ಹಾಗೆ ಮಾಡ್ತೀನಿ - ಅಂದ.
ಅಂವ ನನ್ನ ನೆನಪಲ್ಲಿ ನೊಂದು
ರಾಶಿ ಪದ್ಯ ಬರೀತಾನಂತೆ!
"ಕೊನೆಯದಾಗೊಮ್ಮೆ ಜಗಳಾಡೋಣವಾ?" ಕೇಳಿದ.
ವಾಚಾಮಗೋಚರ ಬೈದುಕೊಂಡೆವು.
ಮಾತು, ಮುತ್ತುಗಳಡಿ ಹುದುಗಿದ್ದ ಹೊಲಸೆಲ್ಲ
ಉಕ್ಕಿ ರಾಚಿತು; ಒಬ್ಬರೊಳಗೊಬ್ಬರು
ಇರುವ ಬಗೆ ನಿಚ್ಚಳ ತೋರಿ ಬಂತು.
*
ಈಡನ್ನಿನಲ್ಲಿ ಸೈತಾನ ಹಾವು ಕೇಕೆ ಹಾಕಿ ಕೇಳುತ್ತಿದೆ;
- ಹೆಣ್ಣೇ!
ನಿಷೇಧಿತ ಹಣ್ಣು ತಿನ್ನಲಷ್ಟೆ ಹೇಳಿದ್ದು ನಾನು.
ಭೂಮಿ ತುಂಬ ಅದರ ಬೀಜ ಬಿತ್ತಿದ್ದೇಕೆ ನೀನು?
- ಚೇತನಾ ತೀರ್ಥಹಳ್ಳಿ After sharing the heavenly pleasure with each other
We found the hell in each other.
"What do you want?" I asked him
“A thorn bed of wrench and a quilt of your beautiful memories”
Instead of saying "Get lost”
How poetically he had put it across and asked me to quit myself!
"What do you give me?" I asked him
He said,
“Out of pain in your memory I will write thousands of poems on you
And thereby make all the women of the world feel envy about you.”
"Shall we quarrel for the last time?” he asked me
As a result we fell foul on each other
All the dirt hidden under
Our words and kisses
Spilled all over the surface
And it seemed obvious to both of us about our being inside each other
A Satan snake in the Eden garden is asking me by laughing boisterously,
“Oh, woman!
I just told you to eat the forbidden fruit only
But why did you sow its seeds on the earth?”
From Kannada: Chetana Theerthahalli
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ