ನನಗೂ ಕೊಲೆ ಮಾಡಲು ಬರುತ್ತದೆ
ನನ್ನ ಕೈಗೂ ಅಧಿಕಾರ ಕೊಡಿ
ಸತ್ತವನು ಹೇಗೆ ಪೂರ್ವಜನ್ಮದ ಕರ್ಮಗಳಿಂದ
ಸತ್ತ ಎಂದು ಕತೆ ಕಟ್ಟುವುದು ನನಗೆ ಗೊತ್ತು
ಹೊಸ ಕರ್ಮಗಳಿಗೆ ಹೊಸ ಕೊಲೆಗಳನ್ನು
ಹೇಗೆ ಮಾಡಿಸುವುದು ಎಂಬುದೂ ನನಗೆ ಗೊತ್ತು
ಸತ್ತವನೇಕೆ ಬಡವನಾಗಿರಬೇಕಿತ್ತು ?
ಅದು ಅವನ ತಪ್ಪು ಎಂದು ನಾನು ಸಾಧಿಸಬಲ್ಲೆ
ಉಳ್ಳವನಾಗಿರದಿದ್ದರೆ ಅವನು ಸಾಯಲಿಕ್ಕೇ
ಲಾಯಕ್ಕು ಬಿಡು ಎಂದು ನಾನು ವಾದಿಸಬಲ್ಲೆ
ಸತ್ತವನು ದೇಶಕ್ಕೆ ಎಂತಾ ಅಪಾಯಕಾರಿ
ಅಂತ ನಾನು ವಿವರಿಸಬಲ್ಲೆ
ಆತ ಸತ್ತದ್ದಕ್ಕಾಗಿ ಜನ ಸಂಭ್ರಮಿಸುವಂತೆ
ಹಬ್ಬ ಹುಟ್ಟುಹಾಕಬಲ್ಲೆ
ಸಾಯಸಿದ ಮೇಲೆ ಇದು ಕೊಲೆಯಲ್ಲ
ಇದು ಆಡಳಿತ ಅಂತ ಬ್ರಮೆ ಹುಟ್ಟಿಸಬಲ್ಲೆ
ಸಾಯಿಸಲು ಸುಲಭವಾದ ಆಳ್ವಿಕೆಯನ್ನು
ಬಲವಾಗಿ ಬೆಳೆಸಬಲ್ಲೆ
ನಾನು ಹೇಳಬಲ್ಲೆ ಅವನ ಸೊಕ್ಕು ಅವನನ್ನು ಸಾಯಿಸಿತು
ಅವನ ಅಭಿಮಾನ ಅವನನ್ನು ಸಾಯಿಸಿತು
ನನ್ನ ಅಭಿವೃದ್ಧಿ ಅವನನ್ನು ಸಾಯಿಸಿದ್ದನ್ನು ನಾನು
ಅಪ್ಪಿ ತಪ್ಪಿಯೂ ಹೇಳಲಾರೆ
ಸಾಯಿಸುವವರಿಗಾಗಿ ಸಂಬಳ ನೀಡಬಲ್ಲೆ
ತುಳಿಯುವವರಿಗಾಗಿ ಹಾವುಗೆಯ ಹೊಲಿಯಬಲ್ಲೆ
ಮತ್ತಷ್ಟು ಕತ್ತಿ ಬಾಂಬುಗಳನ್ನು ಉತ್ಪಾದಿಸಬಲ್ಲೆ
ಸತ್ತವನಿಗಾಗಿ ಎರಡು ಸಾಲುಗಳ ಕಂಬನಿಯನ್ನೂ ಮಿಡಿಯಬಲ್ಲೆ
ನನಗೂ ಕೊಲೆ ಮಾಡಲು ಬರುತ್ತದೆ
ನನಗೂ ಅಧಿಕಾರ ಕೊಡಿ.
If you get me power
I too can kill
If you get me power
I know how to weave a story
About the dead who died because his previous birth karmas
I also know how to get new murders done
For new karmas
Why should the deceased be poor?
I can only prove that it was his fault
I can argue that If he is not rich,
he is worth dying.
I can defend that
How dangerous the dead person was to the country
I can create a festival of celebration
for his death
After killing I can create an illusion that
It is not murder
But it is all for the sake of administration
I can grow the reign strong
that can be used to kill
I can tell his pride only killed him
And his arrogance only swallowed him
I can’t say even for the sake of saying
That my development only killed him
I can pay salaries for those who kill
I can sew sandals for treaders
Can produce more swords and bombs
I can also express two lined obituary
for the deceased
I too can kill
If you get me power
From Kannada: Sriharsha Salimath
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ