ನಾನು ನೀನಲ್ಲ
ಆದರೆ ನೀನು
ನಾನು ನಾನಾಗಿರಲು
ಸಮಯವನ್ನಾಗಲಿ ಅವಕಾಶವನ್ನಾಗಲಿ
ಕೊಡುವದೇ ಇಲ್ಲ !
“ನಾನು ನೀನಾಗಿದ್ದಿದ್ದರೆ”
ನಿನಗೆ ಗೊತ್ತು
ಅದು ಸಾಧ್ಯವಿಲ್ಲವೆಂದು!
ಆದರೂ ನೀನು ಬಿಡುವದಿಲ್ಲ
ನನ್ನ ನಾನು ನಾನಾಗಿರಲು
ನೀನು ನಾನೇನೋ ಎಂಬಂತೆ
ಆಗಾಗ ನನ್ನ ವಿಷಯಗಳಲ್ಲಿ ಅನವಶ್ಯಕವಾಗಿ
ತಲೆಹಾಕುತ್ತಿ ಮೂಗುತೂರಿಸುತ್ತಿ
ಅವು ನಿನ್ನವೇನೋ ಎಂಬಂತೆ!
ನೀನೊಬ್ಬ ಮೂರ್ಖ
ಪದೆ ಪದೆ ನಾನು
ನೀನಾಗಿರುವಂತೆ ನಿರೀಕ್ಷಿಸುತ್ತಿ
ನಿನ್ನ ಹಾಗೆಯೇ ನಡೆಯಬೇಕೆಂದು
ನುಡಿಯಬೇಕೆಂದು ಬಯಸುತ್ತಿ
ನಿನಗೆ ಹೇಗೆ ತಿಳಿಹೇಳುವದು
ನಾನು ನೀನಲ್ಲವೆಂದು?
ಆ ದೇವರು ನನ್ನನ್ನು ನನ್ನನ್ನಾಗಿ ಮಾಡಿದ
ನಿನ್ನನ್ನು ನಿನ್ನನ್ನಾಗಿ ಮಾಡಿದ
ಆ ದೇವರಿಗೋಸ್ಕರಲಾದರೂ
ನನ್ನ ನಾನಾಗಿರಲು ಬಿಡು
ನೀನು ನೀನಾಗಿರು!
ಆಫ್ರಿಕನ್ ಕವಿ: ರೋಲ್ಯಾಂಡ್ ಟೊಂಬೆಕೈ ಡೆಂಪೆಸ್ಟರ್
ಕನ್ನಡಕ್ಕೆ: ಉದಯ ಇಟಗಿ
Do you want to listen to Gazals?
1 ದಿನದ ಹಿಂದೆ
7 ಕಾಮೆಂಟ್(ಗಳು):
ಸರ್,
"ನೀನು ನೀನೆ... ಇಲ್ಲಿ ನಾನು ನಾನೆ.." ನೆನಪಾಯ್ತು. ಚೆನ್ನಾಗಿದೆ.
ತುಂಬಾ ಸುಂದರ ಕವನ, ನೀನು ನಾನು ಗಳ ನಡುವಿನ ದ್ವಂದ್ವ ತುಂಬಾ ನಾಜೂಕಾಗಿ ಸೆರೆ ಹಿಡಿದಿದ್ದಿರ,
ಒಳ್ಳೆಯ ಭಾವನೆ ತುಂಬಿದ ಕವನ
ಸ್ವಂತಿಕೆಯನ್ನು ತಿಳಿಸುವ ಸುಂದರ ಕವನ.ಮೂಲಕವನ ಹೇಗಿದೆಯೋ ತಿಳಿಯದು; ಅದರೆ ಅನುವಾದವು ಅನುವಾದದಂತೆ ಅನ್ನಿಸದೇ ಮೂಲಕವನವೆಂದೇ ಭಾಸವಾಗುತ್ತದೆ. ಅಭಿನಂದನೆಗಳು.
ಮತ್ತೊಂದು ಸುಂದರ ಕವನ. ಚೆನ್ನಾಗಿದೆ.
ಅತ್ಯಂತ ಅರ್ಥವಂತಿಕೆಯ ಕವಿತೆ. ಅದರ ಸರಳ ನಿರೂಪಣೆಯಿಂದ ಮನಸೆಳೆಯುತ್ತದೆ.
ಉದಯ್ ಸರ್,
ತನ್ನತನವನ್ನು ಉಳಿಸಿಕೊಳ್ಳಲಾರದವನ ಕೊರಗುವಿಕೆಯನ್ನು ಚೆನ್ನಾಗಿ ಬರೆದಿದ್ದೀರಿ...
ನಾನು ನೀನು ಅನ್ನುವ ಪದ ಪ್ರಯೋಗದಲ್ಲಿ ಸ್ವಲ್ಪ ವ್ಯತ್ಶಾಸವಾದರೂ ಗೊಂದಲವುಂಟಾಗುತ್ತಿದ್ದುದನ್ನು ನಾಜಾಕಾಗಿ ತಪ್ಪಿಸಿದ್ದೀರಿ...ಆಷ್ಟರಮಟ್ಟಿಗೆ ನಿಮ್ಮ ಕವನ ಯಶಸ್ವಿ..
ಧನ್ಯವಾದಗಳು.
ಉತ್ತಮ ಅನುವಾದ...
ಕಾಮೆಂಟ್ ಪೋಸ್ಟ್ ಮಾಡಿ