ಹುಡುಗಿ, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ!
ಅವರು ಹೇಳುತ್ತಾರೆ-ಎಲ್ಲವನ್ನೂ ಹಗುರಾಗಿ ತೆಗೆದುಕೋ
ಸುಮ್ಮನಿರು, ಮಾತನಾಡಬೇಡ,
ಬಾಯಿಮುಚ್ಚಿಕೊಂಡಿದ್ದರೆ ಒಳಿತು.
ಕುಳಿತುಕೊಂಡಿರು, ತಲೆ ತಗ್ಗಿಸಿ ನಡೆ,
ಸದಾ ಅಳುತ್ತಿರು, ಕಣ್ಣೀರು ಬತ್ತಿಹೋಗಲಿ.........
ಆದರೆ ಇವಕ್ಕೆಲ್ಲಾ ನೀನು ಹೇಗೆ ಪ್ರತಿಕ್ರಿಯಿಸಬೇಕು?
ನೀನು ಎದ್ದು ನಿಲ್ಲಬೇಕು
ಈಗಿಂದೀಗಲೇ ಎದ್ದು ನಿಲ್ಲಬೇಕು
ನಿನ್ನ ಬೆನ್ನನ್ನು, ತಲೆಯನ್ನು ಎತ್ತರಿಸಿ ನಡೆಯಬೇಕು
ನೀನೀಗ ಮಾತನಾಡಬೇಕು
ನಿನ್ನ ಮನದ ಮಾತುಗಳನ್ನು ಹೊರಗೆಡವಬೇಕು
ಜೋರಾಗಿ ಮಾತಾಡು
ಸಾಧ್ಯವಾದರೆ ಕಿರುಚಿಬಿಡು!
ನೀನು ಕಿರುಚಿದ್ದು ಕೇಳಿ ಅವರೆಲ್ಲಾ ಹೆದರಿ ಓಡಿಹೋಗಲಿ….
ಅವರು ಹೇಳುತ್ತಾರೆ – ‘ನೀನು ನಾಚಿಕೆಗೆಟ್ಟವಳು!’
ನೀನದನ್ನು ಕೇಳಿಸಿಕೊಂಡರೆ ಸುಮ್ಮನೆ ನಕ್ಕು ಬಿಡು...
ಅವರು ಹೇಳುತ್ತಾರೆ – ‘ನೀನು ನಡತೆಗೆಟ್ಟವಳು’
ನೀನದನ್ನು ಕೇಳಿಸಿಕೊಂಡರೆ ಜೋರಾಗಿ ನಕ್ಕು ಬಿಡು...
ಅವರು ಹೇಳುತ್ತಾರೆ – ‘ನೀನು ಕೆಟ್ಟುಹೋಗಿದ್ದೀಯ’
ನೀನದನ್ನು ಕೇಳಿಸಿಕೊಂಡರೆ ಇನ್ನೂ ಜೋರಾಗಿ ನಕ್ಕು ಬಿಡು...
ನೀನು ನಗುವದನ್ನು ಕೇಳಿ ಅವರು ಕೂಗಿ ಹೇಳುತ್ತಾರೆ-
‘ನೀನು ಹಾದರಗಿತ್ತಿ!’
ಅವರು ಹಾಗೆ ಹೇಳಿದಾಗ
ನಿನ್ನ ಎರಡೂ ಕೈಗಳನ್ನು ನಿನ್ನ ಕುಂಡಿಯ ಮೇಲಿಟ್ಟುಕೊಂಡು
ದೃಡವಾಗಿ ನಿಂತು ಕೂಗಿ ಹೇಳು
‘ಹೌದು, ನಾನು ಹಾದರಗಿತ್ತಿ!’
ಆಗವರು ಆಘಾತಕ್ಕೊಳಗಾಗುತ್ತಾರೆ
ನಂಬಲಾಗದೆ ನಿನ್ನ ಒಮ್ಮೆ ಕೆಕ್ಕರಿಸಿ ನೋಡುತ್ತಾರೆ
ಆದರೆ ನೀನು ಹೇಳುವದನ್ನು, ಇನ್ನಷ್ಟು ಹೇಳುವದನ್ನು ಕೇಳಲು ಕಾಯುತ್ತಾರೆ...
ಆಗ ಗಂಡಸರು ತಮ್ಮೊಳಗೆ ತಾವೇ ಕುದಿದು ಬೆವರುತ್ತಾರೆ
ಹೆಂಗಸರು ತಮ್ಮೊಳಗೆ ತಾವೇ ನಿನ್ನಂತೆ ಹಾದರಗಿತ್ತಿಯಾಗಲು ಬಯಸುತ್ತಾರೆ...
ಬಂಗಾಳಿ ಮೂಲ: ತಸ್ಲಿಮಾ ನಜ್ರೀನ್
ಕನ್ನಡಕ್ಕೆ: ಉದಯ್ ಇಟಗಿ
ಕಥನ ಮಥನ
1 ವಾರದ ಹಿಂದೆ
4 ಕಾಮೆಂಟ್(ಗಳು):
ಎಷ್ಟು ವಾಸ್ತವ ಸರ್,
ಹೆಣ್ಣಿನ ಮೇಲಿನ ಕ್ರೌರ್ಯಕ್ಕೆ ತಸ್ಲೀಮ ಬರೆದ ಕವನ ಉದಾಹರಣೆ
ಉದಯ್ ಸರ್,
ಕವನ ಇಷ್ಟು ಬೋಲ್ಡ್ ಆಗಿರುವುದು ನೋಡಿ ಆಶ್ಚರ್ಯವಾಯಿತು.
ಕವನ ತುಂಬ ಚೆನ್ನಾಗಿದೆ.
Chennaagide.... Aadare haagavalu helidre aakeyannu badukalu biduttaara aa morkharu??
ಕಾಮೆಂಟ್ ಪೋಸ್ಟ್ ಮಾಡಿ