ಮೊಟ್ಟ ಮೊದಲಿಗೆ ನಿಮಗೊಂದು ಸಂತಸದ ವಿಚಾರವನ್ನು ಹೇಳುತ್ತೇನೆ. ಇಂದಿಗೆ ಅಂದರೆ ಡಿಸೆಂಬರ್ 24 ಕ್ಕೆ ನಾನು ಬ್ಲಾಗ್ ಆರಂಭಿಸಿ ಒಂದು ವರ್ಷವಾಯಿತು. ಹ್ಯಾಪಿ ಬರ್ಥಡೇ ಟು ಯೂ ‘ಬಿಸಿಲ ಹನಿ’. ನೋಡ ನೋಡುತ್ತಿದ್ದಂತೆಯೇ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ನನಗೆ ಸಾಕಷ್ಟು ಬ್ಲಾಗ್ ಗೆಳೆಯರನ್ನು ಹಾಗೂ ನನ್ನದೇ ಆದಂಥ ಸಾಂಸ್ಕೃತಿಕ ವಲಯವೊಂದನ್ನು ತಂದುಕೊಟ್ಟಿದೆ.
ನಾನು ಈ ಮೊದಲು ಬ್ಲಾಗ್ ಬಗ್ಗೆ ಕೇಳಿದ್ದೆನಾದರು ಅದನ್ನು ಹೇಗೆ ಓಪನ್ ಮಾಡುವದೆಂದು ಗೊತ್ತಿರಲಿಲ್ಲ. ನಿಧಾನವಾಗಿ ಬ್ರೌಸ್ ಮಾಡುತ್ತಾ ಮಾಡುತ್ತಾ ಎಲ್ಲವನ್ನೂ ಕಲಿತುಕೊಂಡು ಡಿಸೆಂಬರ್ 24. 2008ರಂದು ನನ್ನದೇ ಒಂದು ಬ್ಲಾಗ್ ಓಪನ್ ಮಾಡಿದೆ. ಅಂದೇ ಜೀವದ ಗೆಳೆಯ ಮಂಜುವಿನ ಹುಟ್ಟು ಹಬ್ಬವಾಗಿದ್ದರಿಂದ ಈ ಹಿಂದೆ ಅವನ ಹುಟ್ಟು ಹಬ್ಬಕ್ಕೆಂದು ಉಡುಗೊರೆಯಾಗಿ ಕೊಟ್ಟ ಕವನವನ್ನೇ ಪ್ರಕಟಿಸುವದರ ಮೂಲಕ ಬ್ಲಾಗ್ ಲೋಕಕ್ಕೆ ಕಾಲಿಟ್ಟೆ. ಅದರಿಂದಾಚೆ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ. ಒಬ್ಬೊಬ್ಬರಾಗಿ ಬ್ಲಾಗ್ ಗೆಳೆಯರು ಪರಿಚಯವಾಯಿತು. ಅವರ ಬ್ಲಾಗಿಗೆ ಭೇಟಿ ಕೊಟ್ಟು ಅವರ ಲೇಖನಗಳನ್ನು ಓದಿದೆ. ಸ್ಪೂರ್ತಿಗೊಂಡು ನಾನೂ ಯಾಕೆ ಲೇಖನಗಳನ್ನು ಬರೆದು ನೋಡಬಾರದು ಎನಿಸಿ ಆರಂಭಿಸಿಯೇ ಬಿಟ್ಟೆ. ಅಲ್ಲಿಯವರೆಗೆ ಬರಿ ಕವನಕ್ಕಷ್ಟೆ ಸೀಮಿತವಾಗಿದ್ದ ನನ್ನ ಬರವಣಿಗೆ ನಿಧಾನವಾಗಿ ಲೇಖನಗಳಿಗೂ ವಿಸ್ತಾರಗೊಂಡಿತು.
ಯಾರ ಹಂಗಿಗೊಳಗಾಗದೆ, ಯಾವುದೇ ಮುಲಾಜಿಲ್ಲದೆ ನಮಗನಿಸಿದ್ದನ್ನು ಬರೆಯಲು ಹುಟ್ಟಿಕೊಂಡ ಬ್ಲಾಗಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು. ನಾನು ಈಗಾಗಲೆ ಹೇಳಿದಂತೆ ಅದು ನನ್ನೊಳಗಿನ ಬರಹಗಾರನನ್ನು ಬಡಿದೆಬ್ಬಿಸಿದೆ. ನನಗೆ ನನ್ನದೆ ಆದ ಬರಹಗಾರರ ವಲಯವನ್ನು ನಿರ್ಮಿಸಿಕೊಟ್ಟಿದೆ. ಸಮಾನ ಆಸಕ್ತರು, ಸಮಾನ ದುಃಖಿಗಳು, ಒಳ್ಳೊಳ್ಳೆ ಸ್ನೇಹಿತರನ್ನು ಕಟ್ಟಿಕೊಟ್ಟಿದೆ. ಇದೀಗ ಬರಹಕ್ಕೂ ನನಗೂ ಎಂಥ ಗಾಢ ಸಂಬಂಧ ಬೆಳೆದಿದೆಯೆಂದರೆ ಬರೆಯದೆ ಹೋದರೆ ನಾನಿಲ್ಲ, ನಾನಿಲ್ಲದೆ ಹೋದರೆ ಬರಹವಿಲ್ಲ ಎಂದೆನಿಸಿಬಿಟ್ಟಿದೆ. ಬರೆಯದೆ ಹೋದರೆ ಏನನ್ನೋ ಕಳೆದುಕೊಂಡಂಥ ಚಡಪಡಿಕೆ. ಈ ನಿಟ್ಟಿನಲ್ಲಿ ನಾನು ಇಷ್ಟರಮಟ್ಟಿಗೆ ಬೆಳೆಯಲು ಪ್ರೋತ್ಸಾಹಿಸಿದ ನನ್ನ ಸಹ ಬ್ಲಾಗಿಗರಿಗೆ, ಸ್ನೇಹಿತರಿಗೆ, ಹಾಗೂ ಹಿತೈಷಿಗಳಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಹಾಗೆ ನೋಡಿದರೆ ನಾನು ಇದನ್ನು ಬರೆಯಬೇಕೋ ಬೇಡವೋ ಎನ್ನುವ ಗೊಂದಲದೊಳಗೆ ಅಂಥ ಗಟ್ಟಿಯಾದದ್ದೇನೂ ಬರೆದಿಲ್ಲ. ಇನ್ನು ಮುಂದೆ ಅನುವಾದದ ಜೊತೆಗೆ ಸ್ವಂತದ್ದೇನಾದರು ಬರೆಯಬೇಕೆಂದು ನಿರ್ಧರಿಸುವೆ. ಆದರೆ ಬರೆಯಬೇಕೋ ಬೇಡವೂ ಎನ್ನುವ ಗೊಂದಲ ಇದ್ದೇ ಇರುತ್ತದೆ. ಅದು ನನ್ನೊಬ್ಬನನ್ನು ಮಾತ್ರವಲ್ಲ ಎಲ್ಲ ಬರಹಗಾರರನ್ನು ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ಗೊಂದಲಗಳೊಂದಿಗೆ ಸದಾ ಬದುಕುತ್ತಲೇ ಇರುತ್ತೇವೆ. ಆ ಗೊಂದಲಗಳನ್ನು ಸೀಳಿಕೊಂಡು ನಮ್ಮ ಬರಹದಲ್ಲಿ ಸ್ಪಷ್ಟವಾಗುತ್ತಾ ಹೋಗಬೇಕು. ಹಾಗಾಗಲು ಸಾಧ್ಯವೇ? ಹಾಗಾಗುತ್ತೇನೆಯೇ? ಗೊತ್ತಿಲ್ಲ.
ನಿಮ್ಮೆಲ್ಲ ಪ್ರೀತಿ, ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ ಎಂದು ಆಶಿಸುತ್ತಾ ನನ್ನ ಮುಂದಿನ ಬರಹದೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬೈ, ಬೈ.
-ಉದಯ್ ಇಟಗಿ
ಕಲಾವಿದರು ಬೇಕಾಗಿದ್ದಾರೆ
20 ಗಂಟೆಗಳ ಹಿಂದೆ
4 ಕಾಮೆಂಟ್(ಗಳು):
ಉದಯ್ ನನ್ನ ಬ್ಲಾಗ್ ಓಪೆನ್ ಆಗಿದ್ದು 2008 ರ ಡಿಸೆಂಬರ್ 10 ರಂದು. ಅದು ಮರೆತೇ ಹೋಗಿತ್ತು. ನಿಮ್ಮ ಬಿಸಿಲಹನಿಯನ್ನು ನೋಡಿದ ಮೇಲೆ ನೆನಪು ಬಂದು ತೆಗೆದು ನೋಡಿದೆ. ಇರಲಿ. ಬಿಸಿಲಹನಿ ಗೆ ಹುಟ್ಟಿದ ಹಬ್ಬದ ಶುಭಾಶಯಗಳು. ಇನ್ನೂ ಹೆಚ್ಚು ಹೆಚ್ಚು ಮೌಲಿಕ ಕವಿತೆಗಳು, ಲೇಖನಗಳು, ಅನುವಾದಗಳು ಬಿಸಿಲಹನಿಯಲ್ಲಿ ಬೆಳಕು ಕಾಣಲಿ. ಆದಷ್ಟು ಬೇಗ ಬಿಸಿಲಹನಿಯಲ್ಲಿ ಬಂದಿರುವ ೊಳ್ಳೊಳ್ಳೆಯ ನುವಾದಿತ ಕವಿತೆಗಳು ಪುಸ್ತಕ ರೂಪದಲ್ಲಿ (ಸಾಧ್ಯವಾದರೆ ಬಿಸಿಲಹನಿ ಎಂಬ ಹೆಸರಿನಲ್ಲೇ) ಪ್ರಕಟವಾಗಲಿ ಎಂದು ಹಾರೈಸುತ್ತೇನೆ.
ಉದಯ ಸರ್,
ನಿಮ್ಮ ಬ್ಲಾಗಿಗೆ ಒಂದು ವರ್ಷವಾಗಿದೆ. ಅದಕ್ಕೆ ಶುಭಾಶಯಗಳು. ತುಂಬಾ ಒಳ್ಳೇ ದಿನ ನಿಮ್ಮ ಬ್ಲಾಗ್ ಪ್ರಾರಂಭಿಸಿದ್ದೀರಿ....ಯಾಕೆ ಇವತ್ತು ಒಳ್ಳೇ ದಿನ ಅಂತ ನಿಮಗೆ ಮೇಲ್ ಮಾಡಿದ್ದೇನೆ. ನೋಡಿ...
ನಿಮ್ಮ ಬ್ಲಾಗ್ ಅಭಿಯಾನ ಹೀಗೆ ಅನೇಕ ವರ್ಷಗಳನ್ನು ಆಚರಿಸಲಿ....ಶುಭಾಶಯಗಳು.
ಉದಯ,
ಹುಟ್ಟುಹಬ್ಬದ ಶುಭಾಶಯಗಳು.
Many Happy Returns of the Day!
Happy Birthday to "ಬಿಸಿಲ ಹನಿ" :)
ಕಾಮೆಂಟ್ ಪೋಸ್ಟ್ ಮಾಡಿ