ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಗರಬಡಿದಂತೆ ಕಾಣುತ್ತಿದೆ. ವರ್ಷಾಂತ್ಯದ ಕೊನೆಯಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ ಗಣ್ಯಾತಿಗಣ್ಯರನ್ನು ಕಳೆದುಕೊಳ್ಳುತ್ತಿದ್ದೇವೆ. ನಿನ್ನೆಯಷ್ಟೆ ಅಶ್ವತ್ಥ್ ಹೋದರು. ಇಂದು ಕನ್ನಡದ ಮೇರು ನಟ ವಿಷ್ಣುವರ್ಧನ. ಯಾಕೋ ಮಾತೇ ಹೊರಡುತ್ತಿಲ್ಲ. ಒಂದಾದ ಮೇಲೊಂದರಂತೆ ಬರಸಿಡಿಲು ಬಂದು ಬಡಿಯುತ್ತಿದ್ದರೆ ಮಾತು ಹೊರಡುವದಾದರು ಹೇಗೆ? ಹೆಪ್ಪುಗಟ್ಟಿದ ಎದೆಯೊಳಗಿನ ನೋವನ್ನು ಹೊರಹಾಕುವದಾದರೂ ಹೇಗೆ?
‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಾಗರ ಹಾವಿನ ರಾಮಾಚಾರಿಯಾಗಿ ಮೆರೆದು, ಕನ್ನಡಿಗರ ಮನದ ಬಂಧನದಲ್ಲಿ ಸಿಲುಕಿ, ಮುತ್ತಿನಹಾರ ಹಾಕಿಕೊಂಡು ಕನ್ನಡ ಚಿತ್ರರಂಗದ ಯಜಮಾನನಾಗಿ, ಕನ್ನಡಿಗರ ಆಪ್ತಮಿತ್ರನಾಗಿ ಬೆಳೆದ ಈ ಕೋಟಿಗೊಬ್ಬನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ.
ಓ ದೇವರೆ! ನಾಳೆ ಬೆಳಿಗ್ಗೆ ಮತ್ತೆ ಇಂಥದೇ ಕೆಟ್ಟ ಸುದ್ದಿಯನ್ನು ಕರುಣಿಸದಿರು.
1 ಕಾಮೆಂಟ್(ಗಳು):
houdu sir naaLe beLLige intaha visya namma kade baradirali anta bayasbeku...
kannada lokha mahaan diggajarannu kaLEdukonditu..
ಕಾಮೆಂಟ್ ಪೋಸ್ಟ್ ಮಾಡಿ