Demo image Demo image Demo image Demo image Demo image Demo image Demo image Demo image

If there is a song within you, sing it out

  • ಭಾನುವಾರ, ಜನವರಿ 26, 2025
  • ಬಿಸಿಲ ಹನಿ
  • Do not wait for others to declare your words as poetry
    They are yours, not theirs!
    Write them down.

    Do not let someone else Make your shaky path steady,
    It is yours, not theirs! Walk it through!

    Don't wait for someone to connect your inner light to the stars,
    It is yours, not theirs!
    Let it shine bright.

    If there is a song within you,
    Do not wait for someone to tune it,
    It is yours, not theirs! Sing it out loud.

    *Kannada Original: M. R. Kamala*
    *English Translation: Uday Itagi*

    ನಿಮ್ಮೊಳಗೆ ಹಾಡುಗಳಿದ್ದರೆ ಹಾಡಿಬಿಡಿ 

    ನಿಮ್ಮೊಳಗಿನ ಪದಗಳಿಗೆ ಯಾರೋ 
    ಕವಿತೆಯ ಮುದ್ರೆ ಒತ್ತಲೆಂದು ಕಾಯಬೇಡಿ 
    ಅದು ನಿಮ್ಮದೇ, ಅವರದಲ್ಲ! ಬರೆದುಬಿಡಿ  

    ನಿಮ್ಮೊಳಗಿನ ತೂಗುಹಾದಿಯ ಯಾರೋ  
    ಗಟ್ಟಿ ನಿಲ್ಲಿಸಿ ಬೀಗಲೆಂದು ಬಿಡಬೇಡಿ 
    ಅದು ನಿಮ್ಮದೇ, ಅವರದಲ್ಲ, ನಡೆದುಬಿಡಿ 

    ನಿಮ್ಮೊಳಗಿನ ನಕ್ಷತ್ರದುರಿಗೆ ಯಾರೋ 
    ಬೆಳಕಿನ ಪಟ್ಟ  ಕಟ್ಟಲೆಂದು  ನಿರೀಕ್ಷಿಸಬೇಡಿ 
    ಅದು ನಿಮ್ಮದೇ, ಅವರದಲ್ಲ, ಬೆಳಗಿಬಿಡಿ    

    ನಿಮ್ಮೊಳಗೊಂದು ಹಾಡಿದ್ದರೆ ಯಾರೋ 
    ರಾಗ ಹಾಕಲೆಂದು ಕಾದು ಕೂರಬೇಡಿ 
    ಅದು ನಿಮ್ಮದೇ, ಅವರದಲ್ಲ, ಹಾಡಿಬಿಡಿ

    Letting go is not out of love or compassion for others

  • ಮಂಗಳವಾರ, ಜನವರಿ 21, 2025
  • ಬಿಸಿಲ ಹನಿ
  • Letting go is not out of love or compassion for others, but for us to feel lighter. If we keep holding on, it might be a bond for them... but our hands will tire too Kannada Original: Chethana Teerthahalli English Translation: Uday Itagi ಬಿಟ್ಟುಕೊಡುವುದು ಮತ್ತೊಬ್ಬರ ಮೇಲಿನ ಪ್ರೀತಿಯಿಂದಲೋ ಅನುಕಂಪದಿಂದಲೋ ಅಲ್ಲ, ನಾವು ಹಗುರಾಗಲಿಕ್ಕೆ. ಹಿಡಿದುಕೊಂಡೇ ಇದ್ದರೆ, ಅವರಿಗೇನೋ ಬಂಧನ... ನಮ್ಮ ಕೈಯೂ ಸೋಲುವುದು.

    Let’s love simply, my friend

  • ಬಿಸಿಲ ಹನಿ
  • Let’s love simply, my friend. No excessive drama, No intense emotions, No endless promises, No far-fetched plans, No gifts given after too much thought – None of these are necessary. Clear communication, understanding, Time that feels entirely ours when we're together, A warm hug, An unspoken connection through our eyes, Mutual compassion – that's all we need. Life is already complex enough. Let’s love as simply as we can. Kannada Original: Kusuma Ayarahalli English Translation: Uday Itagi ಸರಳವಾಗಿ ಪ್ರೇಮಿಸೋಣ ಗೆಳೆಯ ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ ಒಂದು ಗಾಢ ಅಪ್ಪುಗೆ. ಕಣ್ಣ ಮಾತು. ಪರಸ್ಪರ ಕಾರುಣ್ಯ! ಸಾಕಿಷ್ಟು. ಬದುಕು ಆಗಲೇ ಸಾಕಷ್ಟು ಸಂಕೀರ್ಣವಾಗಿದೆ. ನಾವು ಆದಷ್ಟೂ ಸರಳವಾಗಿಯೇ ಪ್ರೀತಿಸೋಣ! - ಕುಸುಮ ಆಯರಹಳ್ಳಿ (ಈ ಫೊಟೋ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಳೆಂದು ಸುದ್ದಿಯಾಗುತ್ತಿರುವ ಸುಂದರಿ ಮೊನಾಲಿಸಾಳದು. ಎಂತಾ ಕಣ್ಣು! ಒಂದು ಪದ್ಯ ಹುಟ್ಟಿಸಿಬಿಟ್ಟಿತು.)

    Oh Uma, is it really so?

  • ಬಿಸಿಲ ಹನಿ
  • Oh Uma, is it really so? Is what people say true? They say Shiva wanders far and wide, Covered his body in ashes from the cremation ground Devoid of food and clothes, He roams from village to village Yet, you too adorn your golden body With that same ash, they say. For the mistake of being your mother, Must I endure this humiliation? And when Shiva comes calling for you again, I shall tell him, "Uma is not at home"? Kannada Original: Dr. G. S. Shivarudrappa English Translation: Uday Itagi ಹೌದೇನೇ ಉಮಾ ಹೌದೇನೇ. ಜನವೆನ್ನುವುದಿದು ನಿಜವೇನೇ ?- ಮಸಣದ ಬೂದಿಯ ಮೈಗೆ ಬಳಿದು ಶಿವ ಎಲ್ಲೆಲ್ಲೋ ತಿರುಗುವನಂತೆ ! ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು ಊರೂರಲು ತಿರಿದುಂಬುವನಂತೆ ! ನೀನು ಕೂಡ ಬಂಗಾರದ ಮೈಯಿಗೆ ಆ ಬೂದಿಯನೇ ಬಳಿಯುವೆಯಂತೆ. ನಿನ್ನ ತಾಯಿ ನಾನಾಗಿಹ ತಪ್ಪಿಗೆ ಸಹಿಸಬೇಕೆ? ಅವಮಾನವನು? ಮತ್ತೆ ನಿನ್ನ ಶಿವ ಕರೆಯಲು ಬರಲಿ ‘ಮನೆಯೊಳಿಲ್ಲ ಉಮೆ’- ಎನ್ನುವೆನು. -ಡಾ|| ಜಿ ಎಸ್ ಶಿವರುದ್ರಪ್ಪ