ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
ಅವನು ನಿನಗೆ ಮೋಡ ತಂದು ಕೊಟ್ಟರೆ
ನಾನು ನಿನಗೆ ಮಳೆ ಹನಿಯಾಗಿ ಸುರಿಯುವೆ
ಅವನು ನಿನಗೆ ಉರಿವ ದೀಪ ಕೊಟ್ಟರೆ
ನಾನು ನಿನಗೆ ಹೊಳೆವ ಚಂದಿರನನ್ನು ತರುವೆ
ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ
ನಾನು ನಿನಗೆ ಮರವಾಗಿ ನೆರಳನಿಡುವೆ
ಅವನು ನಿನಗೆ ಹಡಗನ್ನು ಕೊಟ್ಟರೆ
ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.
ಅರೇಬಿ ಮೂಲ: ನಿಜಾರ್ ಖಬ್ಬಾನಿ
ಕನ್ನಡಕ್ಕೆ: ಉದಯ ಇಟಗಿ
4 ಕಾಮೆಂಟ್(ಗಳು):
ಸುಂದರವಾದ ಕಲ್ಪನೆ, ಉದಯ.
ಹೊಸ ವರ್ಷವು ನಿಮಗೆ ಶುಭಕರವಾಗಲಿ.
ಉದಯ ಅವರೆ,
ಒಳ್ಳೆ ಕವನವನ್ನು ತರ್ಜುಮೆ ಮಾಡಿದ್ದೀರ.
ನಿಮಗೆ ಹೊಸ ವರ್ಷದ ಶುಭಾಶಯಗಳು
ಜಯಶಂಕರವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೂ ಅಷ್ಟೆ ನನ್ನ ಹೊಸ ವರ್ಷದ ಹಾರ್ಧಿಕ ಶುಭಾಯಗಳು.
ಸುನಾಥವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೂ ನನ್ನ ಹೊಸ ವರ್ಷದ ಶುಭಾಯಶಯಗಳು.
ಕಾಮೆಂಟ್ ಪೋಸ್ಟ್ ಮಾಡಿ