Demo image Demo image Demo image Demo image Demo image Demo image Demo image Demo image

ಪ್ರೀತಿ Vs ಮದುವೆ

 • ಶನಿವಾರ, ಸೆಪ್ಟೆಂಬರ್ 05, 2009
 • ಬಿಸಿಲ ಹನಿ

 • ಆತ್ಮೀಯರೆ,
  “Love Vs Marriage” ಎನ್ನುವ ಇಂಗ್ಲೀಷ ಕವನವೊಂದು ಈಗ್ಗೆ ಸುಮಾರು ಏಳು ವರ್ಷಗಳ ಹಿಂದೆ “Deccan Herald” ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಕತ್ತರಿಸಿ ನನ್ನ ಸಂಗ್ರಹದಲ್ಲಿಟ್ಟುಕೊಂಡಿದ್ದೆ. ಆದರೆ ಅದರಲ್ಲಿ ಬರೆದವರ ಹೆಸರು ನಮೂದಿತವಾಗಿರಲಿಲ್ಲ. ಮೊನ್ನೆ ಹೀಗೆ ಏನನ್ನೋ ಹುಡುಕುವಾಗ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಅದರ ಕನ್ನಡ ಅನುವಾದವನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನವೊಂದು ಇಲ್ಲಿದೆ. ಒಪ್ಪಿಸಿಕೊಳ್ಳಿ.

  ಪ್ರೀತಿ Vs ಮದುವೆ

  ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಲಲ್ಲೆಗೆರೆಯುತ್ತಾ ಕೈ ಕೈ ಹಿಡಿದು ನಡೆದಾಡುವದು
  ಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ಕಿತ್ತಾಡುವದು

  ಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್ನರಲ್ಲಿ ತಮಗಿಷ್ಟ ಬಂದುದನ್ನು ಊಟ ಮಾಡುವದು
  ಮದುವೆ ಎಂದರೆ ಇಬ್ಬರೂ ತಮಗಿಷ್ಟವಾದುದನ್ನು ತಮಗಿಷ್ಟ ಬಂದ ಕಡೆ ತಿನ್ನುವದು

  ಪ್ರೀತಿ ಎಂದರೆ ಸೋಫಾದ ಮೇಲೆ ಒಬ್ಬರೊನ್ನೊಬ್ಬರು ಬೆಚ್ಚಗೆ ತಬ್ಬಿಕೊಂಡು ಲಲ್ಲೆಗರೆಯುವದು
  ಮದುವೆ ಎಂದರೆ ಅದೇ ಸೋಫಾದ ಮೇಲೆ ಕುಳಿತು ವ್ಯಾಜ್ಯಗಳನ್ನು ಇತ್ಯರ್ಥ ಮಾಡುವದು

  ಪ್ರೀತಿ ಎಂದರೆ ನಮ್ಮ ಮಕ್ಕಳು ಹೇಗಿರಬೇಕೆಂದು ಕನಸು ಕಾಣುವದು
  ಮದುವೆ ಎಂದರೆ ಅವರಿಂದ ದೂರ ಓಡಿಹೋಗುವದು ಹೇಗೆಂದು ಯೋಚಿಸುವದು

  ಪ್ರೀತಿ ಎಂದರೆ ಬೇಗ ಬೇಗನೆ ಶೃಂಗಾರ ಶಯ್ಯೆಗೆ ತೆರಳುವದು
  ಮದುವೆ ಎಂದರೆ ಮಲಗುವ ಕೋಣೆಗೆ ಓಡುವದು

  ಪ್ರೀತಿ ಎಂದರೆ ಪ್ರಣಯದ ಸುತ್ತಾಟ
  ಮದುವೆ ಎಂದರೆ ಜಲ್ಲಿ ಕಲ್ಲುಗಳ ಮೇಲಿನ ನಡೆದಾಟ

  ಪ್ರೀತಿ ಎಂದರೆ ಎಲ್ಲವೂ ಇಂಪು ತಂಪು ನಾದ ನಿನಾದ ಮಧುರ
  ಮದುವೆ ಎಂದರೆ ಬ್ಯಾಂಕುಗಳಲ್ಲಿನ ಝಣ ಝಣ ಕಾಂಚಾಣವೇ ಸುಮಧುರ

  ಪ್ರೀತಿ ಎಂದರೆ ಒಂದೇ ಪೇಯ ಎರಡು ನಳಿಕೆಗಳು
  ಮದುವೆ ಎಂದರೆ ಪೇಯ ಹೀರಿದ್ದು ಸಾಕಲ್ಲವೇ ಎಂಬ ಭಾವ

  ಪ್ರೀತಿ ಎಂದರೆ ಕುರುಡು
  ಮದುವೆ ಎಂದರೆ ಕಣ್ಣು ತೆರೆಸುವಾಟ


  ಮೂಲ ಇಂಗ್ಲೀಷ: ಅನಾಮೇಧಯ
  ಕನ್ನಡಕ್ಕೆ ಉದಯ ಇಟಗಿ
  ಚಿತ್ರ ಕೃಪೆ: www.flickr.com by Graceish

  9 ಕಾಮೆಂಟ್‌(ಗಳು):

  sunaath ಹೇಳಿದರು...

  Hey ಉದಯ,
  ತುಂಬಾ ಚೆನ್ನಾಗಿದೆ ಪ್ರೀತಿ ಹಾಗು ಮದುವೆಗಳ ವರ್ಣನೆ!
  ಒಟ್ಟಿನಲ್ಲಿ ಪ್ರೀತಿ OK!
  ಮದುವೆ ಯಾಕೆ?

  ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

  ಸರ್, ಮದುವೆ ಅಂದರೆ ಮೊದಲು ಮಧು ಆಮೇಲೆ ವ್ಯಾ...!
  ದಂಪತಿ ಅಂದರೆ ಧಂ ಕಳೆದುಕೊಂಡ ಪತಿ!
  ಅನುವಾದ ಸೂಪರ್. ಧನ್ಯವಾದಗಳು.

  Dr. B.R. Satynarayana ಹೇಳಿದರು...

  ಹಲೋ ಉದಯ್
  ಹೇಗಿದ್ದೀರಾ? ನಾನು ನಿಮ್ಮ ಬ್ಲಾಗ್ ಪೋಸ್ಟ್ ನೀರೀಕ್ಷಿಸುತ್ತಿದ್ದೆ. ಕ್ಷೇಮವಾಗಿ ಲಿಬಿಯಾ ಸೇರಿಯಾಯಿತೆ?

  ಇನ್ನು ಈ ಅನುವಾದ ಕವಿತೆ. ನಾನಂತೂ ಎರಡು ಬಾರಿ ಓದಿಕೊಂಡೆ. ಅರ್ಥಪೂರ್ಣವೆನ್ನಿಸಿತು. ಮೂಲ ೋದಿರದ ನನಗೆ ಅದು ಅನುವಾದಿತ ಕವಿತೆಯಲ್ಲ!
  ಪ್ರೀತಿ ಕುರುಡು
  ಮದುವೆ ಕಣ್ಣು ತೆರೆಸುವಾಟ
  ಮದುವೆಯ ಮಹತ್ವವನ್ನು ಇದಕ್ಕಿಂತ ಸರಳವಾಗಿ ಹೇಳಲು ಸಾಧ್ಯವೆ?
  ಪ್ರೀತಿ ಎಂದರೆ ಪ್ರಣಯದ ಸುತ್ತಾಟ
  ಮದುವೆ ಎಂದರೆ ಜಲ್ಲಿ ಕಲ್ಲುಗಳ ಮೇಲೆ ನಡೆದಾಟ
  ವಾಹ್! ಸಖತ್ ಸಾಲುಗಳು. ಆ ಜಲ್ಲಿಕಲ್ಲುಗಳ ಮೇಲಿನ ನಡಿಗೆಯನ್ನು ಸಹ್ಯ ಸುಂದರವನ್ನಾಗಿಸಿಕೊಂಡವನು ನಿಜವಾದ ಻ರ್ಥದಲ್ಲಿ ಸಂಸಾರಿ!

  shivu ಹೇಳಿದರು...

  ಉದಯ್ ಸರ್,

  ಕಳೆದ ನಾಲ್ಕು ದಿನಗಳಿಂದ ನನ್ನ ಇಂಟರ್ನೆಟ್ ಲಿಂಕ್ ಇರಲಿಲ್ಲ. ಇವತ್ತು ಸರಿಯಾಯ್ತು..ನೀವು ಲಿಬಿಯಾ ಸೇಫ್ ಆಗಿ ಸೇರಿದ್ರಲ್ಲ...

  ಇನ್ನು ಕವನದ ಬಗ್ಗೆ.

  ಮೊದಲು ಓದಿದೆ ಒಂಥರ ಖುಷಿಯೆನಿಸಿತು. ಮತ್ತೆ ಮತ್ತೆ ಓದಿ ಇನ್ನಷ್ಟು ಖುಷಿಪಟ್ಟೆ...ಮದುವೆಯೆಂದರೆ...ಏನು ಅಂತ ನನಗೆ ಇತ್ತೀಚೆಗೆ ಆನುಭವವಾಗುತ್ತಿದೆ. ಅದನ್ನು ಇಲ್ಲಿ ಹೇಳಿಬಿಟ್ಟ್ರೆ ನನ್ನಾಕೆಗೆ ಕೋಪ ಬರಹುದು[ಯಾಕೆಂದರೆ ಅವಳು ಬ್ಲಾಗ್ ನೋಡುತ್ತಾಳೆ]

  ಕವನದ ಅನುವಾದ ಚೆನ್ನಾಗಿದೆ...

  Deepasmitha ಹೇಳಿದರು...

  ಪ್ರೀತಿ ಮತ್ತು ಮದುವೆ ಬಗ್ಗೆ ಕವನ ಚೆನ್ನಾಗಿ ವಿವರಿಸಿದೆ. ಯಾವುದೇ ಭಾಷೆಯಾಗಿರಲಿ, ದೇಶವಾಗಿರಲಿ, ಭಾವವೊಂದೆ. ಒಳ್ಳೆಯ ಅನುವಾದ

  ಸಿಮೆಂಟು ಮರಳಿನ ಮಧ್ಯೆ ಹೇಳಿದರು...

  ಉದಯ್...

  ಪ್ರೀತಿಯನ್ನು ಅದೆಷ್ಟು ಸೊಗಸಾಗಿ ಬಣ್ಣಿಸಿದ್ದಾರೆ..!
  ಎಷ್ಟು ವರ್ಣಿಸಿದರೂ ಬರಿದಾಗದ ಕಡಲು ಅದು..!

  ಒಂದು ಸುಂದರ ಕವಿತೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು..

  ಮತ್ತೆ ಯಾಂತ್ರಿಕ ಜೀವನಕ್ಕೆ ಮರಳಿದ್ದೀರಿ..
  ಹೇಗಿದೆ..?
  ಒಂದು ಸುಂದರ ಸಂಜೆಯನ್ನು ನಿಮ್ಮೊಡನೆ ಕಳೆದುದಕ್ಕೆ ಖುಷಿಯಾಗುತ್ತಿದೆ..

  ಥ್ಯಾಂಕ್ಸ್ .. ಉದಯ್..!

  ಧರಿತ್ರಿ ಹೇಳಿದರು...

  ಚೆನ್ನಾಗಿದೆ ಸರ್
  -ಧರಿತ್ರಿ

  ರವಿಕಾಂತ ಗೋರೆ ಹೇಳಿದರು...

  ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓದಲು , ಕೊನೆಗೆ ಕೆರೆದುಕೊಳ್ಳ ಲೂ ಸಮಯವೇ ಸಿಗಲಿಲ್ಲ... ಕವನ ಸೂಪರ್... ಎಲ್ಲ ಓಕೆ.. ಮದುವೆ ಯಾಕೆ??

  Mandar Trupti ಹೇಳಿದರು...

  channgide