
ಮಂಜಿನೊಳಗೆ ಮಂಜಿನ ಹಾಗೆ
ನಡೆದು ಬಂದ.
ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ
ಅವನಾಗಲೇ ನನ್ನ ತಲೆಯೊಳಗಿದ್ದ.
ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ
"ಯಾರೀತ? ಎಂಥ ಹೂಗಳು?"
ನನ್ನ ಪಕ್ಕದಲ್ಲಿ ಕುಳಿತು ಒಂದೊಂದೇ
ಹೂಗಳಿಂದ ನನ್ನ ಮುಚ್ಚುತ್ತಾ ಹೇಳುತ್ತಾನೆ
"ಇವೆಲ್ಲ ನಿನಗೆ, ನಿನಗೊಬ್ಬಳಿಗೆ ಮಾತ್ರ
ಏಕೆಂದರೆ ನೀನು ಹೋಗುತ್ತಿದ್ದೀಯ"
ಆ ಹೂಗಳ ತಣ್ಣನೆಯ ಸ್ಪರ್ಶ
ಹನಿ ಹನಿಯಾಗಿ ಜಿನುಗತೊಡಗಿತ್ತು.
ಎಷ್ಟೊಂದು ಹೊಸದು?
ಈ ಮೊದಲು ಅನುಭವಿಸಿಯೇ ಇರಲಿಲ್ಲ.
ನೀನು ಸಹ ಅಪರಿಚತನೆ!
ಹರಿದು ಹೋಗುವ ಕಣ್ಣೀರನ್ನು ತಡೆಗಟ್ಟುತ್ತಾ
ಅವ ಹೂ ಹಿಡಿದು ಹೇಳುತ್ತಾನೆ.
"ಅಪರಿಚತನೆ?
ಅಲ್ಲ ನಾನಲ್ಲ, ಹುಟ್ಟಿನಿಂದ ನಿನ್ನವನೇ,
ಬಹಳ ದಿನಗಳಿಂದ ಬೆಸೆದ ಬಾಂಧವ್ಯ ನಮ್ಮಿಬ್ಬರದು"
ನಾನು ಅವನೆಡೆಗೆ ನೋಡಿದೆ
ಮಂಜಲ್ಲಿ, ಮಂಜಾಗಿ ಕರಗಿ ಎಷ್ಟೊಂದು ಹೊತ್ತಾಗಿತ್ತು
ಆದರೆ ನಾನು ಮಾತ್ರ ಒಂಟಿಯಾಗಿರಲಿಲ್ಲ!
ಮೂಲ ಮರಾಠಿ:ಇಂದಿರಾ ಸಂತ
ಇಂಗ್ಲೀಷಗೆ:ಶಾಂತಾ ಗೋಖಲೆ
ಕನ್ನಡಕ್ಕೆ:ಉದಯ ಇಟಗಿ
2 ಕಾಮೆಂಟ್(ಗಳು):
"ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ".
ಎಂತಹ ಸುಂದರವಾದ ಸಾಲಿದು!
ಮರಾಠಿ ಸಾಹಿತ್ಯದ ಒಳ್ಳೆಯ ಕವನಗಳನ್ನು ದಯವಿಟ್ಟು ನಮಗೆ ನೀಡುತ್ತ ಹೋಗಿರಿ.
Thanks ಸಾರ್.ಖಂಡಿತ ಅ ಕೆಲಸ ಮಾಡುವೆ.
ಕಾಮೆಂಟ್ ಪೋಸ್ಟ್ ಮಾಡಿ