Demo image Demo image Demo image Demo image Demo image Demo image Demo image Demo image

ಏನ ಹೇಳಲಿ ನಾನು?

  • ಭಾನುವಾರ, ಜನವರಿ 04, 2009
  • ಬಿಸಿಲ ಹನಿ
  • ಏನ ಹೇಳಲಿ ನಾನು
    ಪಕ್ಕದ ಮನೆಯವರು
    ನಮ್ಮನ್ನು ಚಹಾಕ್ಕೆ ಕರೆಯಲು ಬಂದರೆ?
    ಅವರಿಗೆ ಗೊತ್ತಿಲ್ಲ ನನ್ನೊಂದಿಗೆ ನಿನಿಲ್ಲವೆಂದು.
    ಏನ ಹೇಳಲಿ ನಾನು?

    ಏನ ಹೇಳಲಿ ನಾನು
    ಫೋನು ರಿಂಗಣಿಸಿ ಯಾರಾದರು
    ನಿನ್ನ ಕೇಳಿದರೆ?
    ಅವರಿಗೆ ಗೊತ್ತಿಲ್ಲ ನಾನೂ ಸಹ ನಿನ್ನ ಕೇಳುತ್ತಿದ್ದೇನೆಂದು.
    ಏನ ಹೇಳಲಿ ನಾನು?

    ಏನ ಹೇಳಲಿ ನಾನು
    ಯಾರಾದರು ನನ್ನ
    ಸುರಿಯುವ ಕಣ್ಣೀರನ್ನು ನೋಡಿದರೆ?
    ಹೇಗೆ ಹೇಳಲಿ ಅವರಿಗೆ ನೀನಿಲ್ಲದೆ
    ನನ್ನ ಹೃದಯ ನಿಡುಸುಯ್ಯುತ್ತಿದೆ ಎಂದು?

    ಏನ ಹೇಳಲಿ ನಾನು
    ಯಾರಾದರು ನಿನ್ನ ಕೇಳಿದರೆ?
    ಹೇಳಬಲ್ಲೆ ವಾರದ ಮಟ್ಟಿಗೆ ಹೊರಗೆ ಹೋಗಿದ್ದೀಯ ಎಂದು.
    ಆದರೆ ವಾರ ಕಳೆದ ಮೇಲೆ
    ಏನ ಹೇಳಲಿ ನಾನು?

    ಇಂಗ್ಲೀಷ ಮೂಲ: ಪೀಟರ್ ಟಿಂಟುರಿನ್
    ಕನ್ನಡ ರೂಪಾಂತರ: ಉದಯ ಇಟಗಿ


    2 ಕಾಮೆಂಟ್‌(ಗಳು):

    sunaath ಹೇಳಿದರು...

    ಬರೀ ಉರ್ದು ಶಾಯರಿ ಅಂದುಕೊಂಡಿದ್ದೆ. ಇಂಗ್ಲಿಶ್ ಶಾಯರಿಯನ್ನೂ ಕೊಡುತ್ತಿದ್ದೀರಿ.
    ಅಭಿನಂದನೆಗಳು.

    ಬಿಸಿಲ ಹನಿ ಹೇಳಿದರು...

    Sir, thank you very much for your opinion.ಇಂಥದೇ ಭಾಷೆಯಂತಲ್ಲ.ಚೆಂದವಾಗಿರೋದನ್ನ ಕನ್ನಡಕ್ಕೆ ತರುವ ಆಸೆ.