Demo image Demo image Demo image Demo image Demo image Demo image Demo image Demo image

ಓ, ಪ್ರಿಯೆ

  • ಶನಿವಾರ, ಜನವರಿ 10, 2009
  • ಬಿಸಿಲ ಹನಿ
  • ಓ, ಪ್ರಿಯೆ
    ನನ್ನ ಬದುಕಿನ ಕತ್ತಲಲ್ಲಿ ಮಿನುಗುವ ನಕ್ಷತ್ರ ನೀನು
    ನನ್ನ ಬೆಳಗಿನ ಬಾಗಿಲು ಸರಿಸಿ ನಗುವ ಬೆಳ್ಳಿಚುಕ್ಕಿ ನೀನು
    ನನ್ನ ಸಾಗರದಲ್ಲಿನ ಭೋರ್ಗರೆವ ಅಲೆಗಳು ನೀನು
    ನನ್ನ ದಾರಿಗೆ ಬೆಳಕ ತೋರುವ ದಾರಿ ದೀಪ ನೀನು
    ನನ್ನ ಕಂಗಳಲ್ಲಿನ ಹೊಳೆಯುವ ಕಾಂತಿ ನೀನು
    ನನ್ನ ಮುಂಗುರುಳಲ್ಲಿ ಸರಿದಾಡುವ ತಂಗಾಳಿ ನೀನು
    ನನ್ನ ಹೃದಯದ ಏರಿಳಿತಗಳ ಬಡಿತ ನೀನು
    ನನ್ನ ಜೀವದ ಜೀವವಾಗಿ ಇರುವ ಜೀವ ನೀನು.

    ಇಂಗ್ಲೀಷ ಮೂಲ: ಆಂಡಿ ಹ್ಯೂಸ್
    ಕನ್ನಡ ರೂಪಾಂತರ: ಉದಯ ಇಟಗಿ

    6 ಕಾಮೆಂಟ್‌(ಗಳು):

    sunaath ಹೇಳಿದರು...

    ಈಗಿನ ಇಂಗ್ಲಿಶ್ ಕವನಗಳು ಉರ್ದು ಶಾಯರಿಯಂತಾಗಿವೆಯೆ!

    ಬಿಸಿಲ ಹನಿ ಹೇಳಿದರು...

    ಸುನಾಥ್ ಸರ್,
    ಬಹುಶಃ ಅನುವಾದಿಸುವಾಗ ನನಗೇ ಗೊತ್ತಿಲ್ಲದಂತೆ ಅವು ಶಾಯರಿ ರೂಪ ತಾಳುತ್ತಿರಬಹುದು.Thanks for your compliment & encouragement.

    ಚಂದ್ರಕಾಂತ ಎಸ್ ಹೇಳಿದರು...

    ಎರಡು ಇಂಗ್ಲೀಷ್ ಕವನಗಳ ನಿಮ್ಮ ಅನುವಾದವನ್ನು ನೋಡಿದೆ.ಇಷ್ಟವಾಯಿತು. ನಮ್ಮದೇ ನೆಲದ ಕವನಗಳಂತೆ ಕಂಡವು. ಅನುವಾದಗಳ ಜೊತೆ ಮೂಲ ಕವನವನ್ನೂ ಕೊಟ್ಟರೆ ಅಲ್ಲಿಯ ಸ್ವಾರಸ್ಯವನ್ನೂ ನಾವು ನೋಡಬಹುದು.

    ಬಿಸಿಲ ಹನಿ ಹೇಳಿದರು...

    ಮೇಡಮ್,
    ನಿಜಕ್ಕೂ ನನ್ನ ಅನುವಾದಗಳು ನಮ್ಮ ನೆಲದ ಕವನಗಳಂತೆ ಕಂಡವೇ? ಹಾಗಿದ್ದರೆ ನನ್ನ ಪ್ರಯತ್ನ ಸಾರ್ಥಕವಾಯಿತು ಅನಿಸುತ್ತದೆ. ಮೂಲ ಕವನಗಳನ್ನು ಕೊಡಬಹುದು. ಆದರೆ ಬಹಳಷ್ಟು ಜನಕ್ಕೆ ಅವನ್ನು ಓದುವ ತಾಳ್ಮೆಯಿರುವದಿಲ್ಲವಾದ್ದರಿಂದ ಅವನ್ನು ಕೊಟ್ಟಿಲ್ಲ.ನಿಮ್ಮ ಈಮೇಲ್ ಕೊಟ್ಟರೆ ನಿಮ್ಮ ಅವಗಾಹನೆಗಾಗಿ ಕಳಿಸಿಕೊಡುವೆ.

    ಚಂದ್ರಕಾಂತ ಎಸ್ ಹೇಳಿದರು...

    ನಿಮ್ಮ ಕವನಗಳು ನಮ್ಮ ನೆಲದ ಕವನಗಳಂತೆ ಕಂಡಿವೆ. ಆದ್ದರಿಂದಲೇ ಮೂಲ ಓದಬೇಕೆಂದಿದ್ದು. ಬೇರೆಯವರು ಓದಲಿ ಬಿಡಲಿ ನಿಮ್ಮ ಅನುವಾದದ ಜೊತೆಯೇ ಮೂಲ ಕವನವಿದ್ದರೆ ಬಲು ಚನ್ನಾಗಿರುತ್ತದೆ. ಇದು ನನ್ನ ಅನಿಸಿಕೆ ಅಷ್ಟೆ.

    ಬಿಸಿಲ ಹನಿ ಹೇಳಿದರು...

    ಚಂದ್ರಕಾಂತ ಮೇಡಂ,
    ಹಾಗಿದ್ದರೆ ಇನ್ನು ಮುಂದೆ ಮೂಲ ಕವನಗಳನ್ನೂ ಕೊಡಲು ಪ್ರಯತ್ನ ಪಡುವೆ.