ನಾನು ಈ ಹಿಂದೆ ’ಮಿಸೆಸ್ ಶೇಕ್ಷಪಿಯರ್” ಎನ್ನುವ ಕೃತಿಯನ್ನು ಇದೇ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಆದರೆ ಈಗ ಡಾ.ಲಕ್ಷ್ಮಿನಾರಾಯಣ ಭಟ್ಟರು ಅನುವಾದಿಸಿದ ಶೇಕ್ಷಪಿಯರನ ಸುನಿತಗಳನ್ನು ಬಳಸಿಕೊಂಡು ಅದನ್ನು ಮತ್ತಷ್ಟು modify ಮಾಡಿದ್ದೇನೆ. ಅದು ಇತ್ತೀಚಿಗಷ್ಟೇ ’ಅವಧಿ’ ಯಲ್ಲಿ ಪ್ರಕಟಿವಾಗಿತ್ತು. ಅದರ ಪ್ರಕಟಣೆಯ ಭಾಗಗಳು ಇಂತಿವೆ.
ಯ್ಯಾನಿ ಹ್ಯಾಥ್ವೇಯ ಜೀವನದ ಪ್ರಮುಖ ಘಟನೆಗಳು
|
ಜನನ: 1556
ಶಾಟರಿ, ವಾರ್ವಿಕ್ ಶೈರ್,
ಇಂಗ್ಲೆಂಡ್
ತಂದೆ: ರಿಚರ್ಡ್ ಹ್ಯಾಥ್ವೇ
ತಾಯಿ: ನಿಖರವಾದ
ಮಾಹಿತಿ ಲಭ್ಯವಿಲ್ಲ
ಮರಣ: ಆಗಸ್ಟ್ 6, 1623 (ವಯಸ್ಸು
66-67) ಸ್ಟ್ರ್ಯಾಟ್ ಫೋರ್ಡ್-ಅಪಾನ್-ಅವಾನ್,
ವಾರ್ವಿಕ್ ಶೈರ್, ಇಂಗ್ಲೆಂಡ್
ಮದುವೆ: ನವೆಂಬರ್
27,
1582
ಪತಿ: ವಿಲಿಯಂ
ಶೇಕ್ಷಪೀಯರ್ (1582-1616)
ಮಕ್ಕಳು: ಸೂಸನ್ ಹಾಲ್,
ಹ್ಯಾಮ್ನೆಟ್ ಶೇಕ್ಷಪೀಯರ್, ಜುಡಿತ್
ಕ್ವ್ಯೆನಿ
|
ಯ್ಯಾನಿ ಹ್ಯಾಥ್ವೇ ಕಾಟೇಜ್
|
ರಿಚ್ಚರ್ಡ್ ಹ್ಯಾಥ್ವೇಯ ಎಂಟು ಜನ
ಮಕ್ಕಳಲ್ಲಿ ಯ್ಯಾನಿ ಹ್ಯಾಥ್ವೇ ಹಿರಿಯವಳು. ಅವರು
ಸ್ಟ್ರ್ಯಾಟ್ ಪೋರ್ಡ್ ನಿಂದ
ಒಂದು ಮೈಲಿ ದೂರದಲ್ಲಿದ್ದ
ಶಾಟ್ರೆ ಎನ್ನುವ ಊರಿನಲ್ಲಿ
ತಮ್ಮ ಪಾರ್ಮ್ ಹೌಸಿನಲ್ಲಿ
ವಾಸವಾಗಿದ್ದರು. 1581 ರಲ್ಲಿ
ರಿಚ್ಚರ್ಡ್ ಮರಣ ಹೊಂದಿದ
ಮೇಲೆ ಯ್ಯಾನಿ ತನ್ನ
ಸೋದರ, ಸೋದರಿಯರೊಂದಿಗೆ ಮತ್ತು
ತನ್ನ ಮಲತಾಯಿಯೊಂದಿಗೆ ಅದೇ
ಫಾರ್ಮ್ ಹೌಸಿನಲ್ಲಿ ಇರತೊಡಗಿದಳು.
ಈಗದನ್ನು ಯ್ಯಾನಿ ಹ್ಯಾಥ್ವೇ ಕಾಟೇಜ್ ಎಂದೇ
ಕರೆಯುತ್ತಾರೆ. ಹನ್ನೆರೆಡು ಕೋಣೆಗಳನ್ನೊಳಗಂಡ ಮನೆ ಅದಾಗಿದ್ದು
ಇದೀಗ ಅದು ಬಹಳಷ್ಟು
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಮನೆಯ ಸುತ್ತಲೂ ಚಂದದ
ಹೂದೋಟಗಳಿದ್ದವು. ಶೇಕ್ಷಪೀಯರನ ಕಾಲದಲ್ಲಿ
ಅದು ’ನ್ಯೂ ಲ್ಯಾಂಡ್ಸ್
ಫಾರ್ಮ” ಎಂದೇ
ಪ್ರಸಿದ್ಧಿಯಾಗಿತ್ತು. ಆ ಪಾರ್ಮ್
ಹೌಸ್ ಒಟ್ಟು ತೊಂಬೊತ್ತು
ಎಕರೆಯಿಂದ ಕೂಡಿದ್ದು ಅದರಲ್ಲಿನ
ಮನೆ ಟ್ಯೂಡರ್ ವಾಸ್ತು
ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಯ್ಯಾನಿ
ಹ್ಯಾಥ್ವೇಳ
ತಂದೆಯ ಸಾವಿನ ನಂತರ
ಅವಳ ತಮ್ಮ ಬಾರ್ಥೊಲೋಮ್ಯೂ ಅದರ ಉಸ್ತುವಾರಿಯನ್ನು ನೋಡಿಕೊಳ್ಳತೊಡಗಿದ.
1846 ರವರೆಗೆ ಅದು ಹ್ಯಾಥ್ವೇ ಕುಟುಂಬದ ಒಡತನದಲ್ಲಿಯೇ
ಇತ್ತು. ತದನಂತರದಲ್ಲಿ ಆರ್ಥಿಕ
ಮುಗ್ಗುಟ್ಟಿನಿಂದಾಗಿ ಅದನ್ನು
ಮಾರಬೇಕಾಯಿತು. ಈಗದನ್ನು ವಸ್ತುಸಂಗ್ರಾಹಲಯವಾಗಿ ಬದಲಿಸಿದ್ದು ‘ಶೇಕ್ಷಪೀಯರ್
ಬರ್ಥ ಪ್ಲೇಸ್ ಟ್ರಸ್ಟ್’
ನೋಡಿಕೊಳ್ಳುತ್ತಿದೆ
|
ಯ್ಯಾನಿ ಹ್ಯಾಥ್ವೇ ಬದುಕಿನ ಪರಿಚಯ
|
ಯ್ಯಾನಿ ಹ್ಯಾಥ್ವೇ ಹುಟ್ಟಿದ್ದು
1556 ರಲ್ಲಿ
ಇಂಗ್ಲೆಂಡಿನ ಶಾಟ್ರೆ ಎನ್ನುವ ಊರಿನಲ್ಲಿ. ಇದು ಶೇಕ್ಷಪೀಯರನ ಊರಾದ
ಸ್ತ್ರ್ಯಾಟ್ ಫೋರ್ಡಿನಿಂದ ಒಂದು ಮೈಲಿ ದೂರದಲ್ಲಿತ್ತು. ಇವಳ ತಂದೆ ರಿಚ್ಚರ್ಡ್
ಹ್ಯಾಥ್ವೇ ಬಹಳ ದೊಡ್ಡ ಲ್ಯಾಂಡ್ ಲಾರ್ಡ್ ಆಗಿದ್ದ. ಈತನ ಎಂಟು ಜನ
ಮಕ್ಕಳಲ್ಲಿ ಯ್ಯಾನಿ ಹ್ಯಾಥ್ವೇ ಹಿರಿಯವಳು. ಇವಳ ತಾಯಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋಗಿದ್ದರಿಂದ ಯ್ಯಾನಿ ಮಲತಾಯಿಯ
ಆರೈಕೆಯಲ್ಲಿ ಬೆಳೆಯಬೇಕಾಯಿತು. ಅವಳು ತನ್ನ ಯೌವನಾವಸ್ಥೆಯಲ್ಲಿ ಅದ್ಹೇಗೋ
ಶೇಕ್ಷಪೀಯರನ ಸಂಪರ್ಕಕ್ಕೆ ಬಂದು ಮದುವೆಗೆ ಮುಂಚೆಯೇ ಬಸಿರಾಗಿದ್ದರಿಂದ ಅವನನ್ನೇ ಮದುವೆಯಾಗಬೇಕಾಯಿತು.
ಅವಳ ಮುಂದೆ ಬೇರೆ ಆಯ್ಕೆಯಿರಲಿಲ್ಲ. ಏಕೆಂದರೆ ಆ ಕಾಲಕ್ಕೆ
ಇಂಗ್ಲೆಂಡಿನಲ್ಲಿ ಮದುವೆಗಿಂತ ಮೊದಲೇ ಬಸಿರಾಗುವದು ನಿಷಿದ್ಧವಾಗಿತ್ತು. ಒಂದು ವೇಳೆ ಆದರೆ ಆ ಬಸಿರಿಗೆ ಕಾರಣವಾದವನನ್ನೇ ಮದುವೆಯಾಗಬೇಕಿತ್ತು. ಆ ಪ್ರಕಾರ ಶೇಕ್ಷಪೀಯರನನ್ನೇ ಮದುವೆಯಾಗಿ ಮುಂದೆ ಅವನಿಂದ ಮೂರು ಮಕ್ಕಳನ್ನು ಪಡೆದಳು..
ಶೇಕ್ಷಪೀಯರ್ ಕೆಲಸ ಅರಸಿ ಲಂಡನ್ನಿಗೆ ಹೋದ
ಮೇಲೆ ಅವಳು ಸ್ತ್ರ್ಯಾಟ್ ಫೋರ್ಡಿನಲ್ಲಿ ತನ್ನ ಅತ್ತೆ-ಮಾವಂದಿರ
ಜೊತೆಗೆ ಇರತೊಡಗಿದಳು. ಅಲ್ಲಿ
ಲಂಡನ್ನಿನಲ್ಲಿ ಶೆಕ್ಷಪೀಯರ್ ಬರೆದ ನಾಟಕಗಳು ಯಶಸ್ಸನ್ನು ಕಾಣುತ್ತಿದ್ದಂತೆ ಹಣ ಮತ್ತು ಕೀರ್ತಿಗಳೆರೆಡೂ
ಅವನನ್ನು ಬೆನ್ನಟ್ಟಿಬಂದವು. ಪರಿಣಾಮವಾಗಿ
ಶೆಕ್ಶಪೀಯರ್ ಬಹಳ ಬೇಗನೆ ಶ್ರೀಮಂತನಾದನು ಮತ್ತು ಯ್ಯಾನಿ ಮಿಲೆನಿಯರನ ಹೆಂಡತಿಯಾಗಿ
ಪ್ರಸಿದ್ಧಳಾದಳು. ಆ ಕಾಲಕ್ಕೆ
ಯ್ಯಾನಿ ಒಬ್ಬ ಆಗರ್ಭ ಶ್ರೀಮಂತನ ಹೆಂಡತಿಯಾಗಿ ಸಾಮಾಜಿಕ ಅಂತಸ್ತು, ಗೌರವ, ಘನತೆಯನ್ನು
ಅನುಭವಿಸಿದಳು.
1610 ರಲ್ಲಿ
ಶೇಕ್ಷಪೀಯರ್ ನಿವೃತ್ತಿಯನ್ನು ತೆಗೆದುಕೊಂಡ ಮೇಲೆ ಆತ ತನ್ನ ಹುಟ್ಟೂರಿಗೆ ವಾಪಾಸಾಗಿ ತಾನು
ಕಟ್ಟಿಸಿದ ಮನೆಯಲ್ಲಿಯೇ ವಾಸಿಸತೊಡಗಿದ. ಆ ಮನೆಗೆ ’ನ್ಯೂ ಪ್ಲೇಸ್” ಎಂದು
ಹೆಸರಿಡಲಾಗಿತ್ತು. ಅಲ್ಲಿಗೆ
ಸಾಹಿತ್ಯ ಜಗತ್ತಿನ ದಿಗ್ಗಜರೆನ್ನಿಸಿಕೊಂಡ ಬೆನ್ ಜಾನ್ಸನ್, ಮೈಕೆಲ್ ಡ್ರೇಟನ್ ಮತ್ತು ಇನ್ನೂ
ಮುಂತಾದ ದೊಡ್ಡ ದೊಡ್ಡ ವಿದ್ವಾಂಸರು ಭೇಟಿಕೊಡುತ್ತಿದ್ದರಿಂದ ಅವನ ಸಾಮಾಜಿಕ ಜೀವನ
ಮೇಲ್ಸ್ತರದಲ್ಲಿತ್ತು.
1616 ರಲ್ಲಿ
ಶೇಕ್ಷಪೀಯರ್ ಮರಣ ಹೊಂದಿದ ಮೇಲೆ ಯ್ಯಾನಿ ಅದೇ ಮನೆಯಲ್ಲಿ ಶ್ರೀಮಂತ ವಿಧವೆಯಾಗಿ ತನ್ನ
ವಾಸವನ್ನು ಮುಂದುವರಿಸಿದಳು. 1623 ರಲ್ಲಿ
ಅಂದರೆ ತನ್ನ ಅರವತೈದನೇ ವಯಸ್ಸಿನಲ್ಲಿ ಆಕೆ ಅದೇ ಮನೆಯಲ್ಲಿ ಮರಣವನ್ನಪ್ಪಿದಳು. ಸ್ತ್ರ್ಯಾಟ್
ಫೋರ್ಡಿನ ಹೋಲಿ ಟ್ರಿನಿಟಿ ಚರ್ಚಿನಲ್ಲಿ ಹೂಳಲಾಗಿದ್ದ ಅವಳ ಗಂಡ ಶೇಕ್ಷಪೀಯರನ ದೇಹದ
ಪಕ್ಕದಲ್ಲಿಯೇ ಅವಳ ದೇಹವನ್ನು ಹೋಳಲಾಯಿತು.
ಗ್ರಂಥಸೂಚಿ:
1. ರಾಬರ್ಟ್ ನೈ ಬರೆದ “Mrs. Shakespeare” ಎಂಬ ಇಂಗ್ಲೀಷ್ ಕಾದಂಬರಿ.
2. ಈ
ಕಾದಂಬರಿಯ ಮೇಲೆ ನಟರಾಜ್ ಹುಳಿಯಾರವರು ಬರೆದ ಒಂದು ಲೇಖನ (ಗಾಳಿ-ಬೆಳಕು ಕೃತಿಯಿಂದ ಆಯ್ದುಕೊಂಡಿದ್ದು).
3. ಶೇಕ್ಷಪೀಯರನ ಜೀವನದಲ್ಲಿ ಹೀಗ್ಹೀಗೇ ನಡೆದಿರಬಹುದು ಎಂದು ಊಹಿಸಲು ಸಾಧ್ಯವಾದ ಅಂತರ್ಜಾಲದಲ್ಲಿ ಲಭ್ಯವಿರುವ
ಅವನ ಒಂದಿಷ್ಟು ಜೀವನ ಘಟನೆಗಳು.
4. ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರು
ಕನ್ನಡಕ್ಕೆ ಅನುವಾದಿಸಿದ ಶೇಕ್ಷಪೀಯರನ
ಸುನೀತಗಳು.
|