Demo image Demo image Demo image Demo image Demo image Demo image Demo image Demo image

Chethana Teerthahalli's Poem in my English Translation...

 • ಸೋಮವಾರ, ಜನವರಿ 31, 2022
 • ಬಿಸಿಲ ಹನಿ
 • ಒಬ್ಬರಿಗೊಬ್ಬರು ಸ್ವರ್ಗ ಕಾಣಿಸಿದ ಬಳಿಕ ಒಬ್ಬರಲೊಬ್ಬರು ನರಕ ಕಂಡುಕೊಂಡೆವು. "ನಿನಗೇನು ಬೇಕು?" ಕೇಳಿದೆ. ವಿರಹದ ಮುಳ್ಳು ಹಾಸು, ನೆನಪಿನ ರಝಾಯಿ - ಅಂದ. "ತೊಲಗಿಹೋಗು" ಅನ್ನೋದನ್ನ ಅದೆಷ್ಟು ಕಾವ್ಯಮಯವಾಗಿ ಹೇಳಿದ್ದ! "ನನಗೇನು ಕೊಡ್ತೀ?" ಕೇಳಿದೆ. ಜಗದ ಹೆಣ್ಣುಗಳೆಲ್ಲ ಕರಬುವ ಹಾಗೆ ಮಾಡ್ತೀನಿ - ಅಂದ. ಅಂವ ನನ್ನ ನೆನಪಲ್ಲಿ ನೊಂದು ರಾಶಿ ಪದ್ಯ ಬರೀತಾನಂತೆ! "ಕೊನೆಯದಾಗೊಮ್ಮೆ ಜಗಳಾಡೋಣವಾ?" ಕೇಳಿದ. ವಾಚಾಮಗೋಚರ ಬೈದುಕೊಂಡೆವು. ಮಾತು, ಮುತ್ತುಗಳಡಿ ಹುದುಗಿದ್ದ ಹೊಲಸೆಲ್ಲ ಉಕ್ಕಿ ರಾಚಿತು; ಒಬ್ಬರೊಳಗೊಬ್ಬರು ಇರುವ ಬಗೆ ನಿಚ್ಚಳ ತೋರಿ ಬಂತು. * ಈಡನ್ನಿನಲ್ಲಿ ಸೈತಾನ ಹಾವು ಕೇಕೆ ಹಾಕಿ ಕೇಳುತ್ತಿದೆ; - ಹೆಣ್ಣೇ! ನಿಷೇಧಿತ ಹಣ್ಣು ತಿನ್ನಲಷ್ಟೆ ಹೇಳಿದ್ದು ನಾನು. ಭೂಮಿ ತುಂಬ ಅದರ ಬೀಜ ಬಿತ್ತಿದ್ದೇಕೆ ನೀನು? - ಚೇತನಾ ತೀರ್ಥಹಳ್ಳಿ After sharing the heavenly pleasure with each other We found the hell in each other. "What do you want?" I asked him “A thorn bed of wrench and a quilt of your beautiful memories” Instead of saying "Get lost” How poetically he had put it across and asked me to quit myself! "What do you give me?" I asked him He said, “Out of pain in your memory I will write thousands of poems on you And thereby make all the women of the world feel envy about you.” "Shall we quarrel for the last time?” he asked me As a result we fell foul on each other All the dirt hidden under Our words and kisses Spilled all over the surface And it seemed obvious to both of us about our being inside each other A Satan snake in the Eden garden is asking me by laughing boisterously, “Oh, woman! I just told you to eat the forbidden fruit only But why did you sow its seeds on the earth?” From Kannada: Chetana Theerthahalli To English: Uday Itagi

  As an English Subtitler

 • ಶುಕ್ರವಾರ, ಜನವರಿ 07, 2022
 • ಬಿಸಿಲ ಹನಿ

 • This is thev short movie for which I have worked as an English subtitler.
  https://youtu.be/7hpvfg-9i6o

  The Monologues of Mandodari…

 • ಸೋಮವಾರ, ಜನವರಿ 03, 2022
 • ಬಿಸಿಲ ಹನಿ
 •  

   

  ಮಂಡೋದರಿಯ ಸ್ವಗತ ...

   

  ಹತ್ತು ಬಾರಿ ತಲೆ ಕಡಿದಾಗಲೂ

  ಹತ್ತೂ ಬಾರಿ ಅವನು ಚೀತ್ಕರಿಸಿದ್ದು ನನ್ನ ಹೆಸರನ್ನೇ...

  ಸೀತೆಯೆಂದಲ್ಲ   !!!

  ಅವನ ಎದೆಯಲ್ಲಿ ಅಮೃತ ಕಳಶವಿದೆಯೆಂದು

  ನನ್ನೊಬ್ಬಳಿಗೆ ಮಾತ್ರ ಗೊತ್ತಿತ್ತು.

  ರಾಮಬಾಣ  ಆಕಸ್ಮಿಕವಷ್ಟೇ !.

   

  ದಂಡಕಾರಣ್ಯದ  ಪ್ರಶಾಂತತೆಯಲ್ಲಿ

  ಮುದ್ದು ಶೂರ್ಪನಖಿಯ ನರಳಾಟ

  ನನ್ನವನಿಗಷ್ಟೇ ಗೊತ್ತು.

  ರಾಮನಿಗೆ ತಂಗಿಯೂ ಇಲ್ಲ ..... !!

  ತಂಗಿಯ ಪ್ರೀತಿಯೂ ಇಲ್ಲ !!!

   

  ಬೆಂಕಿಯುಂಡೆಯ ತಂದು

  ಅಶೋಕ ವನದಲ್ಲಿಟ್ಟ  ರಾತ್ರಿ ,

  ಅಂತಃಪುರದಲ್ಲಿ ತಣ್ಣನೆಯ ದೀಪವುರಿದಿತ್ತು.

  ಅಜಾನುಬಾಹು ಬರಸೆಳೆದು ಪಿಸುಗುಟ್ಟಿದ್ದ

  " ಎದೆಯಲ್ಲಿರುವುದು ಸೇಡಷ್ಟೇ, ಸೀತೆಯಲ್ಲ !.....ಅಕ್ಷಯನ ಮೇಲಾಣೆ ".

  ಹತ್ತೂ ತಲೆಗಳನ್ನ ನೇವರಿಸಿ ಸಂತೈಸಿದ್ದೆ.

   

  ನೇಗಿಲ ಕುಳದಿಂದ ಮೇಲೆದ್ದವಳು

  ಮೇಗಲ ಕುಲದಿಂದ ಮೇಲೆದ್ದವಳ

  ಸವತಿಯಾಗುವುದುಂಟೆ  ಛೇ......

  ಲಂಕೆಯ ಸಾಮಾನ್ಯ ರಕ್ಕಸಿಯಷ್ಟೂ

  ಸುಖಪಡದ ಸೀತೆಯ ಬಗ್ಗೆ ಮರುಕವಿದೆ.

   

  ಈಗ ರಾಮ ರಾಜ್ಯದಲ್ಲಿ ದಿನಃಪ್ರತಿ

   ನೂರು ಸೀತೆಯರ ಅಗ್ನಿಪರೀಕ್ಷೆ.

  ಗೆದ್ದವರಾರೂ ಇಲ್ಲ, ಬೂದಿಯಾದವರೇ ಎಲ್ಲಾ.....!

   

  ಸ್ತ್ರೀಮೇಧದ ಕಟು ಕಮಟು

  ದೂರದ ಲಂಕೆಗೆ ಅಡರಿ

  ಗೋರಿಯೊಳಗೆ ಉಸಿರುಗಟ್ಟಿ

  ಸರ್ರನೆ ಎದ್ದು ಕುಂತು ಉಸುರಿದ್ದಾಳೆ ಮಂಡೋದರಿ

  ರಾವಣನ ರಾಜ್ಯದಲ್ಲಿ ಹೀಗೆಂದೂ ಆಗಿರಲಿಲ್ಲ…. ಪ್ಚ್

   

  - ಗಂಧರ್ವ ರಾಯರಾವುತ್

   

  The Monologue of Mandodari…

   

  Ten times

  whenever his head was cut off

  ten times also

  he yelled my name only…

  but not Sita’s!!

  I knew myself that

  there was an elixir in his chest

  Ramabana was just a coincidence!  

   

  Only my husband knew

  the groaning of his dear sister Shurpanakhi 

  that was heard all over against the serenity of Dandakaranya

  Rama had neither a sister..... !!

  nor had he felt the sisterly love!!

   

  The night when he brought the fire ball

  and kept it at the Ashoka Vana

  a cold lamp was burning there in the harem.

  the long-armed man drew me closer to his chest and whispered into my ears

  “Swear on Akshaya,

  Only revenge is there in my heart

  but not Sita!”

  I consoled him by rubbing all his ten heads gently.

   

  To a woman who rose from the plough

  and from an upper caste too,

  how could I become a co-wife? 

  Alas!

  I feel pity for Sita

  for not enjoying the happiness

  not even as much worth as

  a common demoness of Lanka did 

   

  Now that in the state of Rama

  every day hundreds of Sita

  are being tested by fire

  but none succeded in it,

  Instead, every one turned into ashes only...!

   

  The pungent smell of women’s burning alive

  reached the distant Lanka even

  and feeling suffocated in the grave

  Mandodari woke up speedily and uttered

  “Never ever happened like this in the state of Ravana…. 

  Oops!”

   

  Froma Kannada: Gandharva Raya Rawuth

  To English: Uday Itagi