Demo image Demo image Demo image Demo image Demo image Demo image Demo image Demo image

Deepada Malli's poem in my English Translation

  • ಬುಧವಾರ, ಜುಲೈ 10, 2024
  • ಬಿಸಿಲ ಹನಿ
  • ಕಾಲಗರ್ಭದೊಳಗೆ ಸತ್ಯ ಹೂತುಹೋದ ಭಗ್ನಭಾವ! ಒಳಗೊಳಗೆ ಮುಲುಕುತ್ತೇನೆ 'ನದಿ' ನನ್ನ ಹೆಸರು... ಸುಮ್ಮನೆ ಹರಿಯುತ್ತಲಿದ್ದೆ ಕಟ್ಟಿದ ಒಡ್ಡುಗಳಿಗೆಲ್ಲಾ ಸೆಡ್ಡುಹೊಡೆದು ಸಾಗುತ್ತಲೇ ಇದ್ದೆ ಒರಟುಗಲ್ಲುಗಳು ಬೆಣಚುಗಳಾದವು ಬಂಡೆಗಳು ಇದ್ದಲ್ಲೇ ಕಂಗೆಟ್ಟವು ದಾರಿ ಬಳಸಿದೆ ಏರಿ ಇಳಿದೆ ಇಳಿದು ಕೂಡಿದೆ ಕೂಡಿ ಮತ್ತೆ ಕಳೆದೆ ಈಗಲೂ ಕೆಲವರು ಮೀಯುತ್ತಾರೆ ಹಲವರು ಹಾಯುತ್ತಾರೆ ಕೆಲವರು ದಾಹ ತೀರಿಸಿಕೊಳ್ಳುತ್ತಾರೆ ನಾನು ಹರಿಯುತ್ತಲೇ ಇದ್ದೇನೆ ಈಜಿ ದಡ ಸೇರಿದವರೆಷ್ಟೋ ಮುಳುಗಿ ಸತ್ತವರೆಷ್ಟೋ ಇಳಿಯಲಂಜಿ ಈಜಲಂಜಿ ಬರಿದೆ ಕಲ್ಲ ತೂರಿ ಅಲೆಯ ಉಗುಂರುಂಗುರಕೆ ಗೆದ್ದೆವೆಂದು ಕೇಕೆ ಹಾಕಿದವರೆಷ್ಟೋ ನಾನು ಹರಿಯುತ್ತಲೇ ಇದ್ದೇನೆ ಕಿಲುಬು ಕಾಸು ಇತ್ತವರ ಬೇಡಿಬಂದು ಸತ್ತವರ ಹರಕಲು ಚೆಡ್ಡಿ ಮುರುಕಲು ಮಡಕೆ ಅಸ್ಥಿ ಭಸ್ಮ ಕದಡಿ ಕಲಸಿ ಉಸಿರುಚೆಲ್ಲಿ ಹೋದವರ ಲೆಕ್ಕವಿಡದೆ ನಾನು ಹರಿಯುತ್ತಲೇ ಇದ್ದೇನೆ ಅನ್ಯಾಯವಾಗಿದೆಯಂತೆ ನನಗೆ! ನಿಲ್ಲಿಸಿ ನಿಲ್ಲಿಸಿ ಮಲಿನ ಮಾಡುವುದ ನಿಲ್ಲಿಸಿ! ಬಂದವರೆಲ್ಲಾ ಹೇತು, ಬಾವುಟಗಳ ಹೂತು ಹೋದದ್ದೇ ಬಂತು ನಾನು ಹರಿಯುತ್ತಲೇ ಇದ್ದೇನೆ ಊರು ಮನೆ ಜನ ಬದುಕಿಬಾಳಿದರು ಸಮೃದ್ಧಿಯ ಫಲಸನ್ನುಂಡರು ಗಡಿ ಗುಡಿ ಬೇಲಿ ಎಳೆದರು ಹೊಗೆ ಧೂಳು ಕೊಳಚೆ ನೀರು ಹೆಸರಿಗಿಷ್ಟು ಮಸಿಯ ಹಚ್ಚಿ ಉಡಿತುಂಬಿ ಕಳುಹಿದರು ನಾಗರಿಕತೆ ಕಟ್ಟಿ ನದಿಯ ನೆನಪ ಮರೆತರು ನಾನು ಹರಿಯುತ್ತಲೇ ಇದ್ದೇನೆ ಈಗೀಗ ಬಹಳವೇ ದಣಿದಿದ್ದೇನೆ ಖಾಯಿಲೆ ಬಿದ್ದಿದ್ದೇನೆ ಕೃಶಳಾಗಿದ್ದೇನೆ ಭೋರ್ಗರೆತದ ಸದ್ದಡಗಿದೆ ಒಂದು ಕಾಲದಲ್ಲಿ ಅಗಾಧ ಹರಿವಿಗೆ ಹೆಸರಾಗಿದ್ದ ನನ್ನೊಳಗನ್ನು ಜನ ಇಂದು ಮಗುವಿನ ಉಚ್ಚೆಗೆ ಹೋಲಿಸುತ್ತಿದ್ದಾರೆ ಒಣ ಒಣ ಕಾದ ಬಂಡೆಗಳ ನಡುವೆ ನಾನು ಹರಿಯುತ್ತಲೇ ಇದ್ದೇನೆ. ಹುಡುಕಬಲ್ಲಿರೇನು ನದಿಯ ಮೂಲ ಸಾಗಿಬರುವಿರೇನು ದಾರಿದೂರ ತಲುಪುವ ಗಮ್ಯ ಹೆಜ್ಜೆ ಭಾರ ಅಸ್ಮಿತೆಯ ಅಳಿಸಿ ಅಮಲಲ್ಲಿ ಮೆರೆವ ಲೋಕದೃಷ್ಠಿಯಲಿ ಹೆಚ್ಚೇನೂ ಹೇಳಲಾರೆ ಬರೆದುಕೊಳ್ಳಲಿ ಲೋಕ ತನ್ನದೇ ಶರಾ ~ ದೀಪದ ಮಲ್ಲಿ Time holds the secrets And it brings the ache of a shattered heart I silently grieve within My identity is 'River' I continuously flowed By breaking down man-made barriers I persevered through changes As I navigated my path Cobblestones became pebbles And the rocks crumbled Rising and falling And merging with other streams I constantly followed the give-and-take policy Even now, some still bathe in me Others cross over And some quench their thirst Despite this, I continue to flow. I am unsure of how many have successfully crossed over and settled down on the other side of the riverbank Or how many have perished and drifted away. I also do not know how many have triumphantly shouted while throwing stones across my ripples. Nevertheless, undeterred by those who claim to have defeated me, I continue to flow forward. Despite not recording The individuals who threw the coins, And those who submerged themselves in me while praying And those who deposited ripped underwear, a shattered jug, and remnants into me after completing their loved ones' last rites I still continue to flow. To me, it appears unjust! Cease the act of polluting first! Every person who attended the event Polluted the place and planted their flags there What was taken away returned. I continue to move forward. The people of the village survived And enjoying the benefits of success A dividing line was drawn Between borders and borders And temples and temples Fumes, dirt, and waste Sent me with my lap filled By applying ink to me As society flourished in the name of civilization they disregarded the past of the river I continue to move. Now I am feeling extremely tired and unwell. I am physically weak And my roaring sound has been silent Once I was known for my great strength, But now I am compared to a newborn baby. Despite being surrounded by dry rocks, I still continue to flow. Can you locate where a river begins? Have you travelled a long distance? It is challenging to reach our goals But if we let go of our identity, We can see the world in a different light. I cannot express any further Let the world create its own laws. From Kananda: Deepada Malli To English: Uday Itagi

    ಕೋಲಾರದ ನನ್ನ ಆತ್ಮೀಯ ಬರಹಗಾರ ಮಿತ್ರ ಮತ್ತು ಕೇಂದ್ರ ಯುವ ಸಾಹಿತ್ಯ ಅಕ್ಯಾಡೆಮಿ ವಿಜೇತ ಆನಂದ ಲಕ್ಕೂರಗೆ ಒಂದು ನುಡಿನಮನ.

  • ಸೋಮವಾರ, ಮೇ 20, 2024
  • ಬಿಸಿಲ ಹನಿ
  • ಆನಂದ ಲಕ್ಕೂರು ಇನ್ನಿಲ್ಲವೆಂಬ ಸುದ್ದಿ ಬಂದಿದೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಲೇ ನಾನಿದನ್ನು ಬೇರೆಯವರ ಹತ್ತಿರ ಇದು ನಿಜವೇ ಎಂದು ಖಾತ್ರಿಪಡಿಸಿಕೊಂಡ ಮೇಲೆ ಇದನ್ನು ವಿಷಾದದಿಂದ ಬರೆಯುತ್ತಿದ್ದೇನೆ. ನಿಜ ಹೇಳಬೇಕೆಂದರೆ ನನಗೆ ಆನಂದ ಯಾರೂ ಎಂದು ಸರಿಯಾಗಿ ಗೊತ್ತಿರಲಿಲ್ಲ. ಒಂದು ಸಾರಿ ಅವರ "ಒಂದು ಕಪ್ ಕಾಫಿ" ಕವನವನ್ನು ಯಾರೋ ಫೇಸ್ಬ್ಕುಕ್‍ನಲ್ಲಿ ಹಾಕಿದ್ದರು. ನಾನಾಗ ಲಿಬಿಯಾದಲ್ಲಿದ್ದೆ. ನನಗೆ ಆ ಕವನವನ್ನು ಓದಿದ ತಕ್ಷಣ ತುಂಬಾ ಇಷ್ಟವಾಗಿ ಇಂಗ್ಲೀಷಿಗೆ ಅನುವಾದಿಸಿದ್ದೆ. ಆಮೇಲೆ ನಾನದನ್ನು ಮರೆತೂಬಿಟ್ಟಿದ್ದೆ. ಇಬ್ಬರು ಪ್ರೇಮಿಗಳು ಇಷ್ಟು ಚನ್ನಾಗಿ ವಿದಾಯ ಹೇಳಬಹುದೆ? ಎಂದು ಬೆರಗು ಮೂಡಿಸಿದ ಕವನವದು. ಹಾಗಾಗಿ ನಾನದನ್ನು ಇಂಗ್ಲಿಶಷಿಗೆ ತಕ್ಷಣ ಅನುವಾದಿಸಿದ್ದೆ.
    ನಾನು ಮರಳಿ ಇಂಡಿಯಾಗೆ ಬಂದ ಮೇಲೆ ಗೊರವರ ಅವರ "ಸಂಗಾತ"ದ ಒಂದು ಸಂಚಿಕೆಗೆ ಒಂದಿಷ್ಟು ಅಸ್ಸಾಮಿ ಕವನಗಳನ್ನು ಅನುವಾದಿಸಿಕೊಟ್ಟಿದ್ದೆ.  ಅದು ಪ್ರಿಂಟಾಗಿ ಹೆಚ್ಚುಕಮ್ಮಿ ಎಂಟು ತಿಂಗಳ ನಂತರ ಅಲ್ಲಿ ನನ್ನ ಫೋನ್ ನಂಬರ್ ತೆಗೆದುಕೊಂಡು ತಮ್ಮ ಪರಿಚಯ ಮಾಡಿಕೊಂಡು ದಿನವೂ ಮಾತನಾಡಲು ಶುರುಮಾಡಿದರು. ಅವರಿಗೆ ಸಾಹಿತ್ಯ ವಲಯದ ಅನೇಕ ದಿಗ್ಗಜರ ಸಂಪರ್ಕವಿತ್ತು. ಗಂಟೆಗಟ್ಟಲೆ ಸಾಹಿತ್ಯದ ಕುರಿತು‌ ಮಾತನಾಡುತ್ತಿದ್ದರು. ನನಗೆ ಬರುಬರುತ್ತಾ ದಿನವೂ ಮಾತನಾಡುವಂಥದ್ದು ಏನಿದೆ ಎಂದು ರೇಜಿಗೆ ಎನಿಸಿದರೂ ಅವಾಯ್ಡ್ ಮಾಡಲಿಲ್ಲ. ಅವರು ನನ್ನೊಂದಿಗೆ ಮಾತ್ರವಲ್ಲ ಅನೇಕ ಬರಹಗಾರರ ಜೊತೆ ಹೀಗೆ ಮಾತನಾಡುತ್ತಿದ್ದರು ಎಂದು ಆಮೇಲೆ ಗೊತ್ತಾಯಿತು. ಮುಂದೆ ಅವರು ಕುವೆಂಪು ಭಾಷಾ ಭಾರತಿಯಿಂದ ನನ್ನ ಅಸ್ಸಾಮಿ ಅನುವಾದಿತ ಕವನಗಳು ಹೊರಬರಲು ಪರೋಕ್ಷವಾಗಿ ಕಾರಣರಾದರು. ಮುಂದೆ ಅವರು ಬ್ರೆಕ್ಟ್ ನ The Pearl ಎನ್ನುವ ಇಂಗ್ಲೀಷ್ ಕಾದಂಬರಿಯನ್ನು ಅನುವಾದಿಸಿದಾಗ ಅವರ ಕೋರಿಕೆಯ ಮೇರೆಗೆ ಮುನ್ನುಡಿ ಬರೆದುಕೊಟ್ಟಿದ್ದೆ.
    ಆನಂದ ಬಗ್ಗೆ ಸಾಹಿತ್ಯ ವಲಯದಲ್ಲಿ ಗುಸುಗುಸು ಸುದ್ದಿಗಳು ಹರಿದಾಡುತ್ತಲೇ ಇದ್ದರೂ ಸಾಕ್ಷಿ ಸಮೇತ ಅವರು ನನ್ನ ಕೈಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸಾಹಿತ್ಯ ವಲಯದಲ್ಲಿ ಆನಂದ ಲಕ್ಕೂರು ಅವರ ಒಡನಾಟದಲ್ಲಿದ್ದವರೆಲ್ಲಾ ಕೃತಿಚೌರ್ಯ ಮಾಡುವವರು ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿದ್ದಿದುರಿಂದ ಬಹಳಷ್ಟು ಜನ ಅವರ ಒಡನಾಟವನ್ನು ಇಷ್ಟಪಡುತ್ತಿರಲಿಲ್ಲ. ಆನಂದ ಒಬ್ಬ ಭಾವನಾ ಜೀವಿ. ಆದರೆ ಅಶಿಸ್ತಿನ ಮನುಷ್ಯ. ಬಹಳಷ್ಟು ಜನ ಹುಶಾರಾಗಿರಿ. ಅವರು ಯಾವಾಗ ಬೇಕಾದರೂ ದುಡ್ದು ಕೇಳಬಹುದು ಎಂದಿದ್ದರು. ಆದರೆ ಆನಂದ ಯಾವತ್ತೂ ನನ್ನನ್ನು ಒಂದು ಪೈಸೆಯೂ ಕೇಳದೆ ಪ್ರಾಮಾಣಿಕತೆಯನ್ನು ಮೆರೆದ ಮನುಷ್ಯ.
    ಆದರೆ ತೀರಾ ಇತ್ತೀಚಿಗೆ ಅವರು ಒಂದು ಸ್ಥಿರವಾದ ಉದ್ಯೋಗವನ್ನು ಹೊಂದಿಲ್ಲದ ಮನುಷ್ಯ ಎನ್ನುವದು ಗೊತ್ತಾಯ್ತು. ಕುಡಿತದಿಂದ ಅವರ ಆರೋಗ್ಯ ಹದೆಗೆಟ್ಟಿದೆ ಎನ್ನುವದು ಕೂಡಾ ಗೊತ್ತಾಯಿತು.  ಈಗ್ಗೆ ಒಂದು ತಿಂಗಳ ಹಿಂದೆ ನನಗೆ ಫೋನ್ ಮಾಡಿ ನಾನೀಗ ಗುಲ್ಬರ್ಗಾದಲ್ಲಿ ಪಿ.ಎಚ್ಡಿ. ಮಾಡುತ್ತಿರುವೆ ನನಗೆ ಸ್ಟೈಫಂಡ್ ಬರುತ್ತಿದೆ ಖುಷಿಯಾಗಿದ್ದೇನೆ ಎಂದು ಹೇಳಿದರು. ನಾನು ಹಾಗೆ ಖುಷಿಯಾಗಿ ಇರಿ ಎಂದು ಹರಿಸಿದ್ದೆ. ಈಗ ನೋಡಿದರೆ ಅವರು ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಹೋಗಿ ಬಾ ಗೆಳೆಯ. ಆದರೆ ಮತೊಮ್ಮೆ ಈ ನಾಡಿನಲ್ಲಿ ಹುಟ್ಟಿಬಾರದಿರು.ನೀನೊಬ್ಬ ದಲಿತ ಕವಿಯಾಗಿದ್ದರೂ ಬೇರೆ ಕೆಲವು ದಲಿತ ಲೇಖಕರಿಗೆ ಸಿಕ್ಕಷ್ಟು ಮನ್ನಣೆಗಳು ನಿನಗೆ ಸಿಗಲಿಲ್ಲ. ಅದಕ್ಕೆ ನಿನ್ನ ಹೊಗಳಿ ಭಟ್ಟಂಗಿತನವೂ ಕಾರಣವಿರಬಹುದು. ಆದರೆ ನಿನ್ನ ಕವನಗಳು ನಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ. 

    ನಾನು ಹಿಂದೆ ಇಂಗ್ಲೀಷಿಗೆ ಅನುವಾದ  ಮಾಡಿದ ಅವರ ಒಂದು ಕವನವನ್ನು ಇಲ್ಲಿ ಹಾಕುವದರ ಮೂಲಕ ಅವರಿಗೆ ನುಡಿನಮನವನ್ನು ಹಮ..ಸಲ್ಲಿಸುತ್ತಿದ್ದೇನೆ. ನಾನು ದೆಹಲಿಯಿಂದ ವಾಪಾಸಾಗುತ್ತಿರುವದರಿಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎನ್ನುವ ದುಃಖವಿದೆ. 

    *ಒಂದು ಕಪ್ ಕಾಫಿ*

    ಕೊನೆಯ ಸಾರಿ
    ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
    ನಾನು ತಪ್ಪು ಮಾಡಿದೆನೊ,
    ನೀನು ತಪ್ಪು ಮಾಡಿದೆಯೊ,
    ಬಿಟ್ಟು ಬಿಡೋಣ:
    ಕೊನೆಯ ಸಾರಿ
    ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
    ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
    ಯಾರಿಗೆ ಗೊತ್ತು?
    ಅದು ಇಲ್ಲೇ ತಿರುವು ಪಡೆಯಬಹುದು !
    ಇಲ್ಲ ನಾವಿಬ್ಬರು ಬೇರೆಯಾಗಬಹುದು!

    ಯಾರು ಊಹಿಸಿರುತ್ತಾರೆ?
    ನಾನೊಂದು ಹೇಳುವುದು
    ನೀನೊಂದು ಹೇಳುವುದು
    ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
    ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
    ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
    ಯಾರಿಗೆ ಗೊತ್ತು
    ನಮ್ಮೆದುರಿಗೆ ವಿಶಾಲ ವನಗಳಿರಬಹುದು,
    ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
    ನೆಲಕ್ಕೆ ಬಾಗಿದ ಮೋಡಗಳಾಗಬಹುದು.
    ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
    ಆದರೆ ಏನು ಲಾಭ?
    ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ...

    ಇಬ್ಬರ ಗುಂಡಿಗೆಯ ಮೂಲೆಯಲ್ಲೂ
    ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
    ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
    ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
    ದ್ವೇಷವಿಲ್ಲ,
    ಅಸೂಯೆಯಿಲ್ಲ, ಕೋಪವಿಲ್ಲ;
    ಅಲ್ಲಿರುವುದು ಬರೀ ಪ್ರೀತಿಯೇ
    ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
    ಈಗಲೂ ಕೂಡಾ

    ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
    ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
    ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
    ನಾವಿಬ್ಬರೂ ಕಾಯಬೇಕಷ್ಟೆ!

    ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
    ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.

    ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
    ಕರಗಿಹೋಗಿವೆ
    ರೆಕ್ಕೆಮುರಿದ ಹಕ್ಕಿಗಳೆರೆಡು
    ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.

    ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
    ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
    ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
    ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
    ಮೆತ್ತಗೆ ನನ್ನನ್ನು ತಾಕುತ್ತಿದೆ
    ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
    ಶವಯಾತ್ರೆಯೂ ಕೂಡಾ
    ಇಷ್ಟು  ನಿಶಬ್ದವಾಗಿರುವುದಿಲ್ಲ!
    ಇದು ನಮ್ಮಿಬ್ಬರ ಕೊನೆಯ ಭೇಟಿ
    ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
    ಈ ಹಿಂದೆ ಇವೇ ಒನ್ ಬೈ ಟೂಗಳು,
    ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
    ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
    ನೆನ್ನೆಯೆಂಬ ಚೂರು,
    ನಮ್ಮಿಬ್ಬರ ಪರಿಚಯಗಳು
    ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ

    - ಲಕ್ಕೂರು ಆನಂದ

    A Cup of Coffee

    For the last time
    Would you like  to drink a cup of coffee with me?
    No matter
    Whether I erred
    Or you erred,
    Let's  forget it:
    For the last time
    Would you drink only one cup of coffee with me?
    I will make this moment memorable
    Who knows
    It can take turn here itself!
    Or we can split up!
    Who could guess that?
    I say something
    And you something else

    The speech rams are fighting with each other
    The grief is frozen
    On all the speech ways down to us
    Who knows
    We may have vast forests in front of us,
    The grapes,
    Being unable to bear the weight
    May turn into clouds
    By hanging down to the ground

    Even the rare rivers  can orbit around us,
    But what is the benefit?
    We both are not feeling thirsty ....
    In the corner of our heart
    There lies a breaking sound of a small branch
    And also the falling  sound of heartbreak tears 

    Each one’s grief
    Is becoming
    Unbearable burden for each other
    There is no hatred
    No jealousy and no anger at all
    It's just love
    Will really kindness be this much cruel?

    Even now
    A layer of kindness is seen
    In your eyes
    But unfortunately
    It doesn’t mean to both of us
    We both have to wait
    Until the sheath of despair dissipates
    You are not be seen to my eyes
    And I am not to be seen to your eyes
    The dreams of past
    Have dissolved in both of us
    The two birds
    With their wings broken
    Have sat on each other's heads.
    Probably, this may be our last meeting!

    Why should we drink coffee by sitting so closely?
    All yesterdays are turning out to be as the long sighs of today
    An oscillating confusion within you
    Is softly touching me

    Why should we drink coffee so quietly?
    Even the funeral ceremony also
    Won’t be this much silent!
    This is our last visit

    Come on, let’s have a cup of coffee at least
    For the memory of our last visit
    Earlier, these were just one by two cups

    And now are two anonymous coffee cups
    Should you peep inside this coffee cup
    You will find the pieces of yesterday
    And also the Introductions of ours
    That are fighting like two very different dolls.

    From Kannada: Anand Lakkuru
    To English: Uday Itagi

    Please forgive me dear, you can’t find any praiseworthy notes in my poems…

  • ಶುಕ್ರವಾರ, ಏಪ್ರಿಲ್ 19, 2024
  • ಬಿಸಿಲ ಹನಿ
  • ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ ನಿನ್ನ ಕಣ್ಣು ಕಣ್ಣಷ್ಟೇ, ಮುಖ ಚಂದ್ರ ಹೇಗಾದೀತು? ನಿನ್ನ ಹೆರಳು ಕಾಲದೊಂದಿಗೆ ಬೆಳ್ಳಗಾಗುವ, ಚಿತ್ರಾನ್ನದ ನಡುವೆ ಸಿಕ್ಕರೆ ಅಸಹ್ಯವೆನಿಸುವ ಒಂದು ಕ್ಷುಲ್ಲಕ ವಸ್ತುವಷ್ಟೇ. ಇನ್ನು ಮೈಮಾಟವೋ... ಇರಲಿ ಬಿಡು ಆ ಜೋಡಿಮೊಲೆಗಳು, ವಿಶೇಷವೇನು ಅವುಗಳಲ್ಲಿ? ಒಂದಿಷ್ಟು ಸಾರಿ ಸೂರ್ಯ ಮುಳುಗಿ ಹುಟ್ಟಿದರೆ ಜೋತು ಬೀಳುತ್ತವೆ ತೊಟ್ಟು ಕಳಚಿ ನೆಲಕ್ಕೆ ಬಿದ್ದ ಮಾವಿನಂತೆ, ಬೇರು ಸತ್ತ ಕಮಲದಂತೆ ನಿನ್ನ ಹೊಕ್ಕುಳ ವರ್ಣಿಸುವ ಹಾದರಕ್ಕಿಳಿಯಲಾರೆ ಹುಡುಗಿ; ನಿನ್ನ ಹೆತ್ತವಳ ಗುರುತಿಹುದಲ್ಲಿ... ಇಗೋ ಕೈ ಮುಗಿದೆ. ನಿನ್ನ ಬಳುಕು ಸೊಂಟ ಬಳುಕಲಿ ಬಿಡು, ಗಂಡಸರ ಸೊಂಟ ಬಳುಕಲು ಸಾಧ್ಯವೇ? ಆ ತುಂಬಿದ ತೊಡೆಗಳಿಗೆ ಒಮ್ಮೆ ತುಟಿ ತಾಕಿಸಿ ಸಡಿಲಿಸಿದರಾಯಿತು, ವರ್ಷ ತುಂಬುವುದರೊಳಗೆ ಅವುಗಳ ಮೇಲೆ ಕೂಸು ಸೂಸು ಮಾಡುತ್ತದೆ, ನಿನ್ನ ತಾಯ್ತನ ಅರಳುತ್ತದೆ ರಸಿಕತೆಯ ಗೋರಿ ಮೇಲೆ... ಇನ್ನದು ಯೋನಿಯಲ್ಲ ಬಿಡು: ಬುದ್ಧ, ಬಸವ, ಶಂಕರ, ರಾಮಾನುಜ, ಮಧ್ವರೇ ಅಲ್ಲಿಂದ ಬಂದರೆಂದಮೇಲೆ ಅದು ದೈವಸನ್ನಿಧಿ- ಭೋಗತಾಣವೆಂದವನ ಬಾಯಿ ಹೊಲೆದುಬಿಡಬೇಕು ಹುಡುಗಿ, ಇಲ್ಲವೇ ನಪುಂಸಕನನ್ನಾಗಿಸಿ ಗಲ್ಲಿಗೇರಿಸಬೇಕು... ಇಗೋ ಇನ್ನೊಮ್ಮೆ ಕೈಮುಗಿಯುತ್ತೇನೆ ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ ನಾ ಪದಕ ಪಡೆಯಬೇಕಿಲ್ಲ ವೃಥಾ ನಿನ್ನ ಸುಳ್ಳುಸುಳ್ಳಾಗಿ ಚಿತ್ರಿಸಿ ನೀನೊಂದು ಮಾಮೂಲಿ ಹೆಣ್ಣಷ್ಟೇ ಅಮಲಿನ ಬೆವರಘಮ ಸೂಸುವ ನಿನ್ನ ಶರೀರದಲ್ಲೇ ಮಲಮೂತ್ರಗಳು ಹುಟ್ಟುತ್ತವೆ ಮೆಲ್ಲುಸಿರ ಚೆಲ್ಲುವ ನಿನ್ನ ನಾಸಿಕ ನಿಷ್ಕ್ರಿಯಗೊಂಡಾಗ ಎರಡೂ ಹೊಳ್ಳೆಗೂ ಹತ್ತಿ ಇಡುವ ಜನ ದಡ್ಡರಲ್ಲ ಬಿಡು ಜಗತ್ತು ನಿನ್ನ ಕೋಮಲ ತ್ವಚೆಯ ಬಗ್ಗೆ ಹೊಗಳುತ್ತದೆ ಹುಡುಗಿ ನನಗೋ ರಕ್ತ, ಮಾಂಸಗಳಾಚೆಗಿನ ನಿನ್ನ ಅಸ್ಥಿಗೂಡು ಇಷ್ಟವಾಗುತ್ತದೆ ಅದನ್ನೊಮ್ಮೆ ಅಪ್ಪಿ ಮಲಗಬೇಕೆನ್ನಿಸುತ್ತದೆ ಮಣ್ಣಿನಾಳದಲ್ಲಿ. ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ, ನಾನೊಬ್ಬ ಮೂಢ, ಕವಿಯೆಂದವರ ಪಾಲಿನ ಅಪ್ಪಟ ಭ್ರಮೆ. -ಹೃದಯಶಿವ Please forgive me dear, you can’t find any praiseworthy notes in my poems…. Your eyes are just eyes, How can your face be the moon? Your hair will turn grey with time, It is just a trivial object and becomes a disgusting matter If it is found in your meals. Then your physique issue…. Let the two breasts be there on your chest, What’s so special about them? Over some time As the time passes on They will also hang down and fall flat finally on the ground Like a mango with its stem detached And like a lotus with its roots dead I can’t debauch of describing your navel, dear; Your mother’s resemblance is very much seen over there…. Look! I folded my hands to it. Let your balletic waist keep dancing, Can men’s waist be balletic? If those full thighs are kissed and loosened by me Within a year when the baby will piss on them Your motherhood will bloom on the graveyard of sensualism … Then your vagina is not a vagina: It’s a divine place Which gave birth to Buddha, Basava, Shankara, Ramanuja, and Madhwa- Let the mouth of those who call it as a place of pleasure be paralysed forever, dear! Or they should be castrated and hanged... Here again, I am folding my hands And ascertaining that there won’t be any praiseworthy notes in my poems Please forgive me, dear! I don't want to get a medal By portraying you falsely You are just an ordinary woman Faeces are born in your body that drips with intoxicating sweat When your nostrils that shed fresh breath become inactive People who put cotton in both holes are not stupid The world will praise your soft skin, girl! But I like your skeleton beyond flesh and blood I feel like sleeping with it in the mud with my hands holding it tightly. There won’t be any praiseworthy notes in my poems, please forgive me, girl! I am a fool, a true illusion on the part of those who consider me a poet. -From Kannada: Hrudayashiva To English: Uday Itagi

    ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!

  • ಭಾನುವಾರ, ಮಾರ್ಚ್ 10, 2024
  • ಬಿಸಿಲ ಹನಿ
  • ನನ್ನ ಕೆಂಗುಲಾಬಿಯೇ,
    ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ಆರಂಭವಾಗಿತ್ತು. ಇಂಥ ಚಳಿಗಾಲದಲ್ಲಿಯೇ ಒಟ್ಟಿಗಿರಬೇಕಾದ ನಾವು ಬೇರ್ಪಟ್ಟಿದ್ದೆವು. ಅಲ್ಲಲ್ಲ, ಬದುಕಿನ ಅವಶ್ಯಕತೆಗಳು, ಅನಿವಾರ್ಯತೆಗಳು ನಮ್ಮಿಬ್ಬರನ್ನು ಬೇರ್ಪಡಿಸಿದ್ದವು. ನನಗೆ ವಿದೇಶದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನು ಹೋಗಲೇಬೇಕಿತ್ತು. ಹೋಗದೇ ಬೇರೆ ದಾರಿಯಿರಲಿಲ್ಲ. ಏಕೆಂದರೆ ನಮ್ಮ ಆಗಿನ ಹಣಕಾಸಿನ ಸ್ಥಿತಿ ಹೇಳಿಕೊಳ್ಳುವಷ್ಟಿರಲಿಲ್ಲ. ನಾವಿಬ್ಬರು ತರುವ ಸಂಬಳ ಬೆಂಗಳೂರಂಥಾ ಊರಲ್ಲಿ ಮನೆ ಬಾಡಿಗೆ, ಗಾಡಿ ಲೋನ್, ಮನೆ ಖರ್ಚು, ಅದು ಇದು ಅಂತಾ ಅಲ್ಲಿಗಲ್ಲಿಗೆ ಸರಿಹೋಗಿ ತಿಂಗಳ ಕೊನೆಯಲ್ಲಿ ಕೈಯಲ್ಲಿ ಅಬ್ಬಬ್ಬಾ ಅಂದರೆ ಒಂದು ಸಾವಿರ ಉಳಿದರೆ ಹೆಚ್ಚು. ಹೀಗಾದರೆ ಮುಂದಿನ ಬದುಕು ಹೇಗೇ? ಮಗಳ ಭವಿಷ್ಯದ ಗತಿಯೇನು? ಬೆಂಗಳೂರಿನಲ್ಲಿ ನಾವೂ ಒಂದು ಸ್ವಂತ ಮನೆ ಅಂತಾ ಮಾಡಿಕೊಳ್ಳುವದು ಹೇಗೆ? ಎಲ್ಲರಂತೆ ನಾವು ಕಾರಲ್ಲಿ ಓಡಾಡುವದು ಯಾವಾಗ? ಈ ನಿಟ್ಟಿನಲ್ಲಿ ನಾನು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯಾಯಯುತವಾಗಿ ಹೇಗೆ ಸುಧಾರಿಸುವದು ಎಂದು ಯೋಚಿಸುತ್ತಿರುವಾಗಲೇ ನನಗೆ ಈ ಅವಕಾಶ ಒದಗಿಬಂದಿತ್ತು. ನಾನು ಹೊರಟು ನಿಂತೆ.
    ನಾವಿಬ್ಬರೂ ಪ್ರೀತಿಸಿ ಮದುವೆಯಾದವರು. ಪ್ರೀತಿಯಲ್ಲಿರುವಾಗ ಏನೆಲ್ಲಾ ಆಣೆ ಪ್ರಮಾಣಗಳನ್ನು ಮಾಡಿದ್ದೆವು! ನಾವಿಬ್ಬರು ಸದಾ ಕಾಲ ಒಟ್ಟಿಗಿರುತ್ತೇವೆ. ಒಬ್ಬರೊನ್ನೊಬ್ಬರು ಒಂದು ಘಳಿಗೆಯೂ ಬಿಟ್ಟಿರುವದಿಲ್ಲ. ಸತ್ತರೆ ಇಬ್ಬರೂ ಒಟ್ಟಿಗೆ ಸಾಯೋಣ. ಪ್ರೀತಿಯ ಲೋಕವೇ ಅಂಥದಲ್ಲವೇ? ಅಲ್ಲಿ ಎಲ್ಲವೂ ಇಂಪು-ತಂಪು, ನಾದ-ನಿನಾದ, ಮಧುರ-ಅಮರ. ಅದೊಂದು ಅದ್ಭುತ ಗಂಧರ್ವ ಲೋಕ. ಅಲ್ಲಿ ಬರೀ ಗಂಧರ್ವ ಕನ್ಯೆ, ಕಿನ್ನರ-ಕಿಂಪುರುಷರಿಗೆ ಮಾತ್ರ ಪ್ರವೇಶ. ಸ್ವರ್ಗಲೋಕದಲ್ಲಿ ಸುಖದಲೋಲಪತೆಗಳೇನು ಕೊರತೆಯೇ? ಈ ಸುಖದಲೋಲುಪತೆಗಳನ್ನು ಶಾಶ್ವತವಾಗಿ ನಮ್ಮದಾಗಿಸಿಕೊಳ್ಳೋಣವೆಂದೇ ನಾವು ಮದುವೆಯಾಗುತ್ತೇವೆ. ಆದರೆ ಮದುವೆಯೆಂಬ ಚೌಕಟ್ಟಿನಲ್ಲಿ ಅವೆಲ್ಲಾ ಬರೀ ಭ್ರಮೆಗಳು ಎಂದು ಗೊತ್ತಾಗಲು ಹೆಚ್ಚು ಕಾಲ ಬೇಕಾಗುವದಿಲ್ಲ. ಪ್ರೀತಿಯಲ್ಲಿನ ಬದುಕೇ ಬೇರೆ. ಮದುವೆ ನಂತರದ ಬದುಕೇ ಬೇರೆ ಎನ್ನುವ ವಾಸ್ತವ ಸತ್ಯದ ಜೊತೆಗೆ ಬದುಕಲು ಬರೀ ಪ್ರೀತಿಯೊಂದೇ ಸಾಲದು ಅದರ ಜೊತೆಗೆ ಹಣವೂ ಬೇಕಾಗುತ್ತದೆ ಎನ್ನುವ ಕಟುಸತ್ಯವೂ ಗೋಚರಿಸುತ್ತಾ ಹೋಗುತ್ತದೆ. ಅದಕ್ಕೇ ಇರಬೇಕು ದೊಡ್ದವರು ಹೇಳಿದ್ದು- ಪ್ರೀತಿ ಕುರುಡು, ಮದುವೆ ಕಣ್ಣು ತೆರೆಸುವ ಆಟ ಎಂದು. 

    ನಾನು ಕೂಡಾ ನಿನ್ನನ್ನು ಪ್ರೀತಿಸುವಾಗ ಒಮ್ಮೆ ನಿನಗೆ ಹೇಳಿದ್ದೆ; ‘ಉದಯ’ಗಳ ಊರೇ ನಾನಾಗಿ ಬೆಳಕಿಡುವೆ ನಿನಗಾಗಿ’ ಎಂದು. ಆದರೆ ದಾಂಪತ್ಯದಲ್ಲಿ ನಿನಗೆ ನಾನು, ನನಗೆ ನೀನು ಬರೀ ಬೆಳಕನ್ನೇ ಇಡುತ್ತಾ ಕೂರಲಾಗುವದಿಲ್ಲವಲ್ಲ? ಹಾಗಾಗಿ ನಾನು ಹೊರಟು ಬಂದೆ. ನಾನು ಹೊರಡುವ ದಿನ ನಿನ್ನ ಕಂಗಳ ತುಂಬಾ ಕಣ್ಣಿರು. ಮನಸ್ಸಿನ ತುಂಬಾ ದುಗುಡ. ನಾನು ಆ ಕ್ಷಣಕ್ಕೆ ಹೆಚ್ಚು-ಕಮ್ಮಿ ಖ್ಯಾತ ಇಂಗ್ಲೀಷ್ ಕವಿ ಜಾನ್ ಡನ್ ನಿಂತ ಜಾಗದಲ್ಲಿ ನಿಂತಿದ್ದೆ. ಜಾನ್ ಡನ್ ಇಂಗ್ಲೀಷಿನ ಅದ್ಭುತ ಪ್ರೇಮಕವಿ ನಿನಗೆ ಗೊತ್ತಲ್ಲ? ಪ್ರಿತಿಯನ್ನು ಲೌಕಿಕ ನೆಲಗಟ್ಟಿನಲ್ಲಿ ನಿಂತು ನೋಡುತ್ತಲೇ ಅಲೌಕಿಕ ಲೋಕದಲ್ಲಿ ಲೀನವಾದವ. ಆತ ವೃತ್ತಿಯಿಂದ ಒಬ್ಬ ವ್ಯಾಪಾರಿ. ಆದರೆ ಪ್ರವೃತ್ತಿಯಿಂದ ಕವಿ. ಅಗಾಧ ಪ್ರೇಮಿ! ಆತನ ಪ್ರೇಮಕಾವ್ಯದ ಕುಂಚ ಸದಾ ಅದ್ಭುತ ಕಲ್ಪನೆಗಳ ಬಣ್ಣಗಳಲ್ಲಿ ಅದ್ದಿ ತೆಗೆದಂತಿರುತ್ತಿತ್ತು. ಆದರವನ ಬದುಕು ವಾಸ್ತವದಲ್ಲಿ ನೆಲೆಯೂರಿರಿತ್ತಿತ್ತು.

    ಆತ ಒಂದು ಸಾರಿ ಈಗಾಗಲೇ ಇದ್ದ ಅಲ್ಪ-ಸ್ವಲ್ಪ ವ್ಯಾಪಾರವನ್ನು ಇನ್ನಷ್ಟು ಕುದುರಿಸಿಕೊಳ್ಳುವದಕ್ಕಾಗಿ ತನ್ನ ಪ್ರಿಯತಮೆಯನ್ನು ತನ್ನೂರಿನಲ್ಲಿ ಬಿಟ್ಟು ದೂರದ ದೇಶವೊಂದಕ್ಕೆ ಹೋಗಬೇಕಾಗುತ್ತದೆ. ಹೋಗುವಾಗ ಅವನ ಪ್ರಿಯತಮೆ ನನ್ನೊಬ್ಬಳನ್ನೇ ಬಿಟ್ಟುಹೋಗಬೇಡ ಎಂದು ಕಂಬನಿಗರೆಯುತ್ತಾ ಅಕ್ಷರಶಃ ಆ ಸಮಯವನ್ನು ಸೂತಕದ ಸಮಯವನ್ನಾಗಿ ಮಾಡುತ್ತಾಳೆ. ಆದರೆ ಆತ ಇದ್ಯಾವುದನ್ನು ಲೆಕ್ಕಿಸದೇ ಹೊರಟು ನಿಲ್ಲುತ್ತಾನೆ. ಏಕೆಂದರೆ ಅವನಿಗೆ ಈಗಿನದಕ್ಕಿಂತ ಇನ್ನಷ್ಟು ಸುಂದರವಾದ ಬದುಕನ್ನು ಕಟ್ಟಿಕೊಳ್ಳುತವಕ. ಹೋಗುವಾಗ ಅವನ ಪ್ರಿಯತಮೆ ವಿರಹವೇದನೆಯಿಂದ ಬಳಲುತ್ತಾಳೆ. ಆಗವನು ಅವಳನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ; ಛೀ ಹುಚ್ಚಿ! ನೀನು ಅಳುವದಾದರೂ ಏಕೆ? ಹೀಗೆ ಅಳುತ್ತಾ ಕೂರಲು ನಾವೇನು ಶಾಶ್ವತವಾಗಿ ಅಗಲುತ್ತಿದ್ದೇವೆಯಾ? ಅಷ್ಟಕ್ಕೂ ನಾವಿಬ್ಬರೂ ಯಾವತ್ತೂ ಅಗಲುವದೇ ಇಲ್ಲ. ಏಕೆಂದರೆ ನಾವಿಬ್ಬರೂ ಒಂದು ಕೈವಾರವಿದ್ದಂತೆ. ಅದರ ಒಂದು ಕೈ ಹೇಗೆ ಇನ್ನೊಂದು ಕೈಯಿಲ್ಲದೆ ಚಲಿಸುವದಿಲ್ಲವೋ ಹಾಗೆಯೇ ನಾವು ಕೂಡಾ. ನೀನು ಕೇಂದ್ರಬಿಂದುವಾದರೆ ನಾನು ಅದರ ಸುತ್ತ ಸುತ್ತುವ ಒಂದು ವೃತ್ತ. ಒಂದು ಇಲ್ಲದೇ ಇನ್ನೊಂದಿಲ್ಲ.    
     
    ನಾನು ಹೊರಟು ನಿಂತ ದಿನ ನಿನ್ನ ಕಂಗಳ ತುಂಬಾ ಕಂಬನಿಗಳು. ನನ್ನ ಕಂಗಳ ತುಂಬಾ ಕನಸುಗಳು. ನೀನು ಒಂದೇ ಸಮನೆ ಅಳುತ್ತಲಿದ್ದೆ. ಹಾಗೆ ನೋಡಿದರೆ ನಿನಗಿಂತ ಹೆಚ್ಚಾಗಿ ನನಗೆ ಕಸಿವಿಸಿಯಾಗಿತ್ತು. ಆ ಕಸಿವಿಸಿಯ ಭಾರವನ್ನು ಹೊತ್ತುಕೊಂಡೇ ನಾನಿಲ್ಲಿಗೆ ಹಾರಿ ಬಂದೆ. ಇಲ್ಲಿಗೆ ಬಂದ ಮೇಲೆ ನನಗೆ ನಿನ್ನದೇ ಯೋಚನೆ! ನಾನಿಲ್ಲದೆ ಇಲ್ಲಿ ನೀನೊಬ್ಬಳೇ ಎಲ್ಲವನ್ನೂ ಹೇಗೆ ನಿಭಾಯಿಸುತ್ತಿರುವಿ ಎಂದು.  ಪ್ರತಿಸಾರಿ ನಿನ್ನ ನೆನಪಾದಾಗಲೆಲ್ಲಾ ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿರುವ ನನ್ನನ್ನು ಕಚ್ಚುವ ಸೊಳ್ಳೆಗಳಿಗೆ ಹೇಳಿಕಳಿಸುತ್ತೇನೆ; ಹೋಗಿ ದೂರದ ಇಂಡಿಯಾದಲ್ಲಿರುವ ನನ್ನವಳನ್ನು ಕಚ್ಚಿ ಅವಳ ರಕ್ತದಲ್ಲಿ ನನ್ನ ರಕ್ತವನ್ನು ಬೆರಸಿ ನಮ್ಮಿಬ್ಬರನ್ನು ಒಂದಾಗಿಸೆಂದು. ನನ್ನ ಹೃದಯ ನಿನಗಾಗಿ ಮಿಡಿದಾಗಲೆಲ್ಲಾ ಇಲ್ಲಿನ ನೊಣಗಳಿಗೆ ಹೇಳುತ್ತೇನೆ; ನನ್ನ ಸುತ್ತ ಸುತ್ತುವ ಬದಲು ಹೋಗಿ ನನ್ನವಳ ಕೆನ್ನೆಗೊಂದು ಮುತ್ತು ಕೊಡಿ ಎಂದು. ಸಹರಾ ಮರಳುಗಾಡಿನ ಗುಡ್ಡಗಳ ಹಿಂದೆ ಚಕ್ಕಂದ ಆಡುವ ಚಂದಿರನಿಗೆ ಹೇಳಿ ಕಳಿಸಿದ್ದೇನೆ; ಇಂಡಿಯಾದಲ್ಲಿರುವ ನನ್ನವಳೊಂದಿಗೆ ನನ್ನ ಪರವಾಗಿ ಪ್ರೀತಿಯ ಪಲಕುಗಳನ್ನಾಡಬಹುದೆಂದು. ಆಗಸದ ನಕ್ಷತ್ರಗಳನ್ನು ಬೇಡಿಕೊಂಡಿದ್ದೇನೆ; ಹೋಗಿ, ನನ್ನ ಕೊರಗಿನಲ್ಲಿರುವ ನನ್ನವಳ ಮನದಂಗಳದಲ್ಲಿ ನಿಮ್ಮ ಒಂದಷ್ಟು ಪ್ರಭೆಯನ್ನು ಚೆಲ್ಲಿ ಅವಳ ಮನವನ್ನು ಬೆಳಗಿಯೆಂದು. ಇಲ್ಲಿನ ತಂಗಾಳಿಯ ಕಿವಿಯಲ್ಲಿ ಉಸುರಿ ಕಳಿಸಿದ್ದೇನೆ; ಅವಳಿಗೆ ಲಾಲಿ ಹಾಡುತ್ತಾ ಅವಳನ್ನು ಕನಸಿನರಮನೆಯಲ್ಲಿ ಮಲಗಿಸೆಂದು. ಗಾಳಿಯಲ್ಲಿ ತೇಲಿ ಹೋಗುವ ಮರಳು ಕಣಗಳಿಗೆ ಹೇಳಿದ್ದೇನೆ; ಹಾರಿ ಹೋಗಿ ಇಂಡಿಯಾದಲ್ಲಿರುವ ನನ್ನವಳಿಗೆ ನನ್ನ ಬೆಚ್ಚಗಿನ ನೆನಪುಗಳ ಗೂಡೊಂದನ್ನು ಕಟ್ಟಿಕೊಡೆಂದು.  

    ಕೊರಗದಿರು, ಕರಗದಿರು ಕಳಕೊಂಡ ಪ್ರೀತಿಯ ಬಗ್ಗೆ. ನಾನು ಬಂದು ಬಿಡುವೆ ಬೇಗ. ಹೇಗಿದ್ದರೂ ನಮ್ಮ ಬದುಕು ಆರ್ಥಿಕವಾಗಿ ಭದ್ರವಾಯಿತಲ್ಲ? ಇನ್ನೇನಿದ್ದರೂ ಕಳಕೊಂಡ ಪ್ರೀತಿಯ ಕನಸುಗಳನ್ನು ಮತ್ತೆ ಕೂಡಿಟ್ಟು ನನಸಾಗಿಸಿಕೊಳ್ಳುವದಷ್ಟೇ ಕೆಲಸ. ನಾನಲ್ಲಿಗೆ ಬಂದ ಮೇಲೆ ಸಂಜೆ ಮಲ್ಲಿಗೆಯ ಸವಿಗಂಪಿನಲ್ಲಿ ನಾಳೆಗಳನ್ನು ಕುರಿತು ಹರಟೋಣ. ರಾತ್ರಿ ಆಗಸದ ನಕ್ಷತ್ರಗಳನ್ನು ಬಾಚಿ ತಬ್ಬಿಕೊಳ್ಳೋಣ. ನವಿಲು ಗರಿಯನ್ನು ಹೆಕ್ಕುತ್ತಾ ಸವಿನೆನಪುಗಳನ್ನು ಕಟ್ಟಿಕೊಳ್ಳೋಣ. ಇಬ್ಬರೂ ಸೇರಿ ಒಮ್ಮೆ ತಾಜ್‍ಮಹಲ್‍ಗೆ ಭೇಟಿಕೊಟ್ಟು ಬರೋಣ. ಅಲ್ಲಿ ಗೋರಿಯಲ್ಲಿರುವ ಮಮ್ತಾಜ್ ಮಹಲ್‍ಳಿಗೆ ಒಮ್ಮೆ ಕೂಗಿ ಹೇಳುವಿಯಂತೆ; ನಿನ್ನ ಗಂಡನೇನೋ ರಾಜ. ನಿನಗಾಗಿ ಮಹಲೊಂದನ್ನು ಕಟ್ಟಿಸಿದ. ಆದರೆ ನನ್ನ ಗಂಡ ಬಡಪಾಯಿ. ನನಗಾಗಿ ಒಂದು ಮನೆಯನ್ನೇ ಕಟ್ಟಿಸಿಕೊಟ್ಟ. ನಿಮ್ಮಿಬ್ಬರ ಪ್ರೀತಿಗಿಂತ ನಮ್ಮಬ್ಬಿರ ಪ್ರೀತಿಯೇ ಅಜರಾಮರವೆಂದು. ಆಗ ನಾನು ನಿನ್ನನ್ನು ಪ್ರೀತಿಸಿದ್ದು ಮತ್ತು ಆ ಪ್ರೀತಿಯನ್ನು ಭದ್ರ ಬುನಾದಿಯ ಮೇಲೆ ಕಟ್ಟಿದ್ದು ಸಾರ್ಥಕವೆನಿಸುತ್ತದೆ.

    ಮತ್ತೆ ಹೇಳುತ್ತಿದ್ದೇನೆ; ಇಷ್ಟು ದಿನಗಳನ್ನೇ ಕಾದಿರುವಿಯಂತೆ. ಇನ್ನಾರು ತಿಂಗಳು ಕಾದು ಬಿಡು. ಬೇಗ ಬಂದು ಬಿಡುವೆ. ಅಲ್ಲಿಯವರೆಗೆ ಬೈ….ಬೈ…..ಸ್ವೀಟ್ ಕಿಸ್ಸಸ್ ಡಾರ್ಲಿಂಗ್!
    ಇತಿ
    `ನಿನಗಷ್ಟೇ ಸೀಮಿತನಾದವನು’

    http://avadhimag.com/2015/02/14/%E0%B2%AE%E0%B2%A1%E0%B2%A6%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B3%8D%E0%B2%AF%E0%B2%BE%E0%B2%AA%E0%B2%BF-%E0%B2%B5%E0%B3%8D%E0%B2%AF%E0%B2%BE%E0%B2%B2%E0%B3%86%E0%B2%82/







    Objection

  • ಬಿಸಿಲ ಹನಿ
  • Objection I have inherited some of my father's qualities in me And I feel proud of it. However, I cannot blame him for any of my flaws! Similarly, I have noticed some of my qualities are found in my son And I am responsible for his mistakes too Even though he sometimes hurts me, I tend to pamper him a lot. Poor fellow my husband- the one who held my hand in marriage! He doubts if I am left behind Insults if I go ahead of him Feels primness to be together with me! He happens to be mine but still not mine Disputes when we spend time together. Why is it like this to deal with? From Kannada: Savitha Nagabhushan To English: Uday Itagi ತಕರಾರು ಒಂದಂಶ ಅಪ್ಪನದು ನನ್ನಲ್ಲಿದೆ ನನ್ನಲ್ಲಿರುವ ಗಂಡು ಗುಣ ಅವನದೆ ಹೆಮ್ಮೆ ನನಗೆ.... ಹಾಗೆ ಅವನ ದೂರಲಾರೆ! ಒಂದಂಶ ನನ್ನದು ಮಗನಲ್ಲಿದೆ ಅವನ ತಪ್ಪುಒಪ್ಪುಗಳಿಗೆ ನನ್ನದೂ ಕೊಡುಗೆ ಇದೆ ಅರೆ! ಒದ್ದರೂ ಮುದ್ದುಗರೆಯುವೆ! ಪಾಪ ಇವನು....ಕೈ ಹಿಡಿದವನು ಹಿಂದುಳಿದರೆ ಅನುಮಾನ? ಮುಂದೋಡಿದರೆ ಅವಮಾನ? ಜತೆಗಿರು ಎನ್ನಲು ಬಿಗುಮಾನ! ನನ್ನವನಾದರೂ ನನ್ನವನಲ್ಲವೆ? ಬೆರೆತರೂ ಕಲೆತರೂ ಭಿನ್ನಮತ, ಯಾಕೆ ಹೀಗೆ ? -ಸವಿತಾ ನಾಗಭೂಷಣ

    Let's talk a little about love

  • ಶನಿವಾರ, ಮಾರ್ಚ್ 02, 2024
  • ಬಿಸಿಲ ಹನಿ
  • ಸ್ವಲ್ಪ ಪ್ರೇಮದ ಬಗ್ಗೆ ಮಾತಾಡೋಣ ಅಂದ, ವಯಸಾಯ್ತು ಅಂದೆ. ಪ್ರೇಮಕ್ಕೆ ವಯಸಿಲ್ಲ ಅಂದ, ಮಾತಾಡುತ್ತ ಕೂರಲು ವಯಸಾಯ್ತು ಅಂದೆ. ಸರಿ, ಪ್ರೇಮಿಸೋಣ ಅಂದ. ನೀರು ಕುಡಿಯಲು ಮೀನಿಗೆ ಬಟ್ಟಲು ಬೇಕೇ? ನನ್ನ ಪ್ರಶ್ನೆ. ಪ್ರೇಮವನ್ನ ಉಸಿರೆಂದುಕೋ ಅಂದ. ಉಸಿರು ಹಿಡಿದಿಡಲಾಗದು, ಉಸಿರ ಗಾಳಿ ಪ್ರತಿಯೊಬ್ಬರದ್ದೂ; ನನ್ನ ಉತ್ತರ. ಪ್ರೇಮವೇ ಬದುಕೆಂದ. ಬದುಕು ಪ್ರೇಮವಷ್ಟೇ ಅಲ್ಲವೆಂದೆ. ಸ್ಪರ್ಶ ಕೊಡು, - ವಿಷಯಕ್ಕೆ ಬಂದ. ಇರು, ಸ್ವಲ್ಪ ಮಾತಾಡೋಣ ಅಂದೆ. ಪತ್ತೆ ಇಲ್ಲ! “Let's talk a little about love,” he said “I am getting older," I replied “Bye the bye, love knows no age limits,” he uttered. "I am too old to sit and talk” I murmured “Well, let's make love,” he expressed his inner feelings “Does a fish need a cup to drink water?” I threw a question at him “Think that love is breathing,” he said “Breathe can’t be held back, Breathing air is everyone's” I muttered “Love is life,” he opined “Life is not only love” I asserted “Give me a touch” - now he came to the point. “Wait, let's talk for a while” Since then no traces about his whereabouts! From Kannada: Chethana Teerthahalli To English: Uday Itagi

    ಡಾ. ಮಂಗಳಾ ಪ್ರಿಯದರ್ಶಿನಿ ಕಣ್ಣಲ್ಲಿ ನನ್ನ "ಶೇಕ್ಸಪಿಯರನ ಶ್ರೀಮತಿ" ನಾಟಕದ ವಿಮರ್ಶೆ

  • ಬುಧವಾರ, ಫೆಬ್ರವರಿ 21, 2024
  • ಬಿಸಿಲ ಹನಿ
  • ನಾಲ್ಕು ದಿನಗಳ ಹಿಂದೆ ದಾವಣಗೆರೆಯಿಂದ ಉದಯ್ ಇಟಗಿಯವರು ತಮ್ಮ “ಶೇಕ್ಸ್ ಪಿಯರನ ಶ್ರೀಮತಿ” ನಾಟಕದ ಪ್ರಯೋಗವಾಗುತ್ತಿದ್ದು, ನಾನು ಬರಲೇಬೇಕೆಂಬ ಪ್ರೀತಿಯ ಒತ್ತಾಯವನ್ನು ಹೇರಿದ್ದೇ ಅಲ್ಲದೆ ಮನೆಗೇ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿದರು. ಇದಕ್ಕೆ ಕಾರಣ, ಇಟಗಿಯವರ ಈ ಕೃತಿಯನ್ನು ಪ್ರಕಟಣೆಗೆ ಮೊದಲೇ ಪಿಡಿಎಫ್ನಲ್ಲಿಯೇ ಓದಿ ಮೆಚ್ಚಿದ್ದ ಮೊದಮೊದಲ ಓದುಗಳಾಗಿದ್ದೆ. ಈಗ ರಂಗ ಪ್ರದರ್ಶನವನ್ನು ನೋಡಬೇಕೆಂಬ ಆಸೆಯೂ ಇದ್ದು, ಅದಾಗಲೇ ರಂಗಶಂಕದಲ್ಲಿ ಪ್ರದರ್ಶನಗೊಂಡು ದಾವಣಗೆರೆಯನ್ನೂ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನ ಗೆದ್ದ ನಾಟಕವಾಗಿತ್ತು. ಇಟಗಿಯವರ ಈ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸುತ್ತ ಶನಿವಾರ ವರ್ಲ್ಡ್ ಕಲ್ಚರ್ಗೆ ಉತ್ಸಾಹದಿಂದಲೇ ಹೊರಟಿದ್ದೆ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು ನಾಯಕಿ, ಕನ್ನಡದ ಅಪ್ರತಿಮ ಅಭಿನೇತ್ರಿ ಶ್ರೀಮತಿ ಲಕ್ಷ್ಮಿ ಚಂದ್ರ ಶೇಖರ್ ಅವರು. ಯಾವ ಪಾತ್ರವನ್ನು ಕೊಟ್ಟರೂ ಪರಕಾಯ ಪ್ರವೇಶ ಮಾಡಿ ತಾವೇ ಆ ಪಾತ್ರವಾಗಿಬಿಡುವ ನಟಿ. ಗೃಹಭಂಗದ ಗಂಗಮ್ಮ, ಮಾಯಾಮೃಗದ ಶಾಸ್ತ್ರಿಗಳ ಮುಗ್ಧ ಹೆಂಡತಿ …. ಇಲ್ಲಿ ಅವರನ್ನು ಶೇಕ್ಸ್ಯರನ ಹೆಂಡತಿಯಾಗಿ ನೋಡುವ ಕೂತೂಹಲವಿತ್ತು . ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕಿಯೇ ಆಗಿದ್ದ ಲಕ್ಷ್ಮೀ ಅವರಿಗೆ ಶೇಕ್ಸ್ ಪಿಯರನ ಬಗೆಗೆ ಪ್ರವೇಶಿಕೆ ಇರುವುದರಿಂದ ಈ ಪಾತ್ರವನ್ನು ಅತ್ಯಂತ ನಿಖರವಾಗಿ ನಿರೂಪಿಸುವರೆಂಬ ನಿರೀಕ್ಷೆ ನನ್ನಂತೆ ತುಂಬಿದ ಗೃಹದಲ್ಲಿ ಕುಳಿತಿದ್ದ ಎಲ್ಲ ಪ್ರೇಕ್ಷಕರಿಗೂ ಇದ್ದದ್ದೆ. ಈ ನಾಟಕದಲ್ಲಿ ಇರುವುದು ಒಂದೇ ಪಾತ್ರ. ಅದು ಶೇಕ್ಸ ಪಿಯರನ ಹೆಂಡತಿ ಆನಾ ಹ್ಯಾಥ್ ವೇ ಳದು. ಒಂದೇ ಅಂಕದಲ್ಲಿ ಅಡೆ ತಡೆಯಿಲ್ಲದೆ, ಹೆಚ್ಚು ಪ್ರಸಾದನಗಳಿಲ್ಲದೆ, ಒಂದೇ ಓಘದಲ್ಲಿ ಓಡುವ ನಾಟಕದಲ್ಲಿ ಶೇ ಕ್ಸ್ ಪಿಯರನ ಹೆಂಡತಿಯ ಪಾತ್ರದಲ್ಲಿ ಅವನ ಬದುಕು, ಬರಹಗಳ ಬಗೆಗೆ ಬದುಕಿನ ಸಂಜೆಯಲ್ಲಿ ಬಹು ಹತ್ತಿರದಿಂದ ಕಂಡ ಆತನ ಹೆಂಡತಿಯ ಸ್ವಗತಗಳಲ್ಲಿಯೇ ನಾಟಕ ಪ್ರಾರಂಭವಾಗುತ್ತದೆ. ಇದು ಸ್ತ್ರೀ ವಾದೀ ನೆಲೆಯಿಂದ ಶೇಕ್ಸ್ ಪಿಯರ್ ನನ್ನು ವ್ಯಾಖ್ಯಾನಿಸುವ ನಾಟಕವೂ ಆಗಿದೆ. ಹದಿನೆಂಟು ವರ್ಷದ ಶೇಕ್ಸ್ ಪಿಯರ್ ಇಪ್ಪತ್ತಾರು ವರ್ಷದ ಆನೆ ಹ್ಯಾಥ್ ಳ ಪ್ರೇಮಕ್ಕೆ, ಅವಳೇ ಹೇಳಿಕೊಳ್ಳುವಂತೆ ಕಾಮಕ್ಕೆ ಬಿದ್ದು ಆಕೆ ಮದುವೆಗೆ ಮುಂಚೆ ಬಸಿರಾದದ್ದು, ಮನೆಯವರು ಪಂಚಾಯಿತಿ ಸೇರಿಸಿ ಮದುವೆ ಮಾಡಿದ್ದ್ದು, ಮೂರು ಮಕ್ಕಳು, ಈತ ಮನೆ ಬಿಟ್ಟು ಲಂಡನ್ನಿಗೆ ಬಂದದ್ದು, ಅಲ್ಲಿ ತೆರೆಯ ಹಿಂದೆ ಪಾತ್ರಗಳಿಗೆ ಮಾತು ಹೇಳಿಕೊಡುವ ಉದ್ಯೋಗ ಹಿಡಿದದ್ದು, ತಾನೇ ಕಷ್ಟ ಪಟ್ಟು ದುಡಿಯುತ್ತಾ ಮಕ್ಕಳಲ್ಲದೆ ಅತ್ತೆ, ಮಾವಂದಿರನ್ನೂ ಸಲಹಿದ್ದು, ಅವಳಿ ಮಕ್ಕಳಲ್ಲಿ ಒಬ್ಬ ಮಗ ಹನ್ನೊಂದು ವರ್ಷಕ್ಕೆ ತೀರಿಕೊಂಡದ್ದು, ಗಂಡನ ಸುಳಿವೇ ಇಲ್ಲದಂತೆ ಒಂಟಿಯಾಗಿ ಬದುಕಿದ್ದು, ಆಗೀಗ ಬರುವ ಪತ್ರಗಳೇ ಅವಳನ್ನು ಬದುಕಿಸಿದ್ದು, ಲಂಡನ್ನಿನಲ್ಲಿ ಅವನ ಇತರೆ ಹೆಣ್ಣುಗಳ ಸಹವಾಸ, ಅಲ್ಲೊಬ್ಬ ಗೆಳೆಯನ ಸಹವಾಸ, ಕೊನೆಗೆ ಖಾಯಿಲೆ ಅಂಟಿಸಿಕೊಂಡು ಮನೆಗೆ ಬಂದು ತನ್ನ ಐವ್ವತ್ತೆರಡನೆಯ ವಯಸ್ಸಿನಲ್ಲಿ ಸಾಯುವುದು …. ಈ ಎಲ್ಲ ವಿವರಗಳನ್ನು ಪ್ರೇಕ್ಷಕರ ಮುಂದೆ ಆತ್ಮೀಯವಾಗಿ ಹಂಚಿಕೊಳ್ಳುತ್ತಾಳೆ. ಶೇಕ್ಸ್ ಪಿಯರ್ ಜಗತ್ತಿನ ಅತ್ಯಂತ ಶ್ರೇಷ್ಠ, ಪ್ರಸಿದ್ಧ ನಾಟಕಕಾರ ಎಂದು ಬಗೆದ ಲೋಕಕ್ಕೆ, ಪರಿಚಯವಿಲ್ಲದ ಶೇಕ್ಸ್ ಪಿಯರನ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಾ ಹೋಗುವ ಆನಾ, ಮುಗ್ಧವಾಗಿ ತನ್ನನ್ನು ಅವನ ವ್ಯಕ್ತಿತ್ವದ ಪಕ್ಕ ಪಕ್ಕದಲ್ಲಿಟ್ಟು ಅವನಿಗೆ ತಕ್ಕ ಹೆಂಡತಿ ನಾನಾಗಿದ್ದೆನೆ? ಎಂದು ಪ್ರಾಮಾಣಿಕವಾಗಿ ಪ್ರಶ್ನಿಸಿಕೊಳ್ಳುತ್ತಾಳೆ. ಗಂಡ ಪ್ರೇಮ ಕವನಗಳನ್ನು ಬರೆದಿದ್ದು ತನಗೆ ಎಂದು ಭಾವಿಸಿಕೊಂಡಿರುವಾಗಲೇ ಅದು ಬರೆದದ್ದು ಅವನ ಗೆಳೆಯನಿಗೆ ಎಂದು ಗೊತ್ತಾದಾಗ, ನನ್ನ ವೈರು ಕೂದಲನ್ನು ಯಾರು ಮೆಚ್ಚುತ್ತಾರೆ ಎಂದು ಸಮಾಧಾನವಾಗಿಯೇ ಕಟು ವಾಸ್ತವವನ್ನು ಸ್ವೀಕರಿಸುತ್ತಾಳೆ. ಅನಾಳಲ್ಲಿ ಗಂಡನ ಬಗೆಗೆ ಎಲ್ಲೂ ವಿಷಾದವಿಲ್ಲ, ಬೇಸರವಿಲ್ಲ. ಬದುಕನ್ನು ಬಂದ ಹಾಗೇ ಸ್ವೀಕರಿಸುವ ಮನೋಭಾವವಿದೆ. ಇದೆಲ್ಲದರ ನಡುವೆ ಪ್ರಖ್ಯಾತರ ಹೆಂಡಂದಿರ ಪಾಡೇ ಇಷ್ಟು, ಎಂಬ ತಾತ್ವಿಕ ನಿರ್ಲಿಪ್ತತೆ ಇದೆ. ಒಂದೂವರೆ ಗಂಟೆ ನಿರರ್ಗಳವಾಗಿ ಮಾತನಾಡುವ ನಟಿ ನಮಗೆ ಪರಿಚಯವಿಲ್ಲದ ಹಾಗೂ ಇರುವ ಶೇಕ್ಸ್ ಪಿಯರನನ್ನು ಅದ್ಭುತವಾಗಿ ವ್ಯಾಖ್ಯಾನಿಸುತ್ತಾರೆ. ವೇದಾಂತಿಯಂತೆ ಇಹದ ಬದುಕಿನ ಕಾಯಕದೊಳಗೆ ಒಬ್ಬಳೇ ದುಡಿಯುತ್ತ ಅದರೊಳಗೇ ತನ್ನ ದುಃಖಗಳನ್ನು ಮರೆಯುವ ಆನಾಳನ್ನು ಆಪ್ತವಾಗಿಸುತ್ತಾರೆ. ಎಲ್ಲೋ ಒಂದು ಕಡೆ ಅವಳ ಬಗ್ಗೆ ಕನಿಕರ ಉಂಟಾಗದೆ ಇರುವುದಿಲ್ಲ. ಲಕ್ಷ್ಮಿ ಅವರ ಅಭಿನಯ ನಾಟಕಕ್ಕೆ ಜೀವ ತುಂಬುವಂತಹದು. ಶೇಕ್ಸ್ ಪಿಯರನ ಹಸಿರು ಕೋಟಿನೊಂದಿಗೆ ಮಾತನಾಡುವುದು, ‘ಅವನ ತಲೆ ಮೇಲೆ ಮೊಟುಕಿದೆ’ ಎಂದು ಹೇಳುತ್ತಾ ಆತ ಎಷ್ಟಾದರೂ ತನಗಿಂತ ಚಿಕ್ಕವನು ಎಂದು ಹೆಮ್ಮೆ ಪಡುವ ಭಾವವನ್ನು ಹೇಳುವಲ್ಲಿ ಲಕ್ಷ್ಮಿ ಅವರ ಅಭಿನಯ ಪರಕಾಷ್ಠತೆಯನ್ನು ಮುಟ್ಟುತ್ತದೆ . ಶೇಕ್ಸ್ ಪಿಯರನ ಕಾಲದ ಹಿನ್ನೆಲೆ ಸಂಗೀತ , ವಸ್ತ್ರ ವಿನ್ಯಾಸ , ರಂಗ ಸಜ್ಜಿಕೆ , ಪ್ರಾಪ್ಸ್ - ಬಕೆಟ್ಟಿನಿಂದ ಹಿಡಿದು ಲಂಡನ್ ಬ್ರಿಡ್ಜ್ ವರೆಗೆ ತುಂಬ ಅಥೆಂಟಿಕ್ ಆಗಿದೆ. ಲಕ್ಷ್ಮೀ ಚಂದ್ರ ಶೇಖರ್ ಅಂತಹ ಅಮೋಘ ನಟಿ , ನಮ್ಮ ಕನ್ನಡದ ನಟಿ ಎಂದು ಗರ್ವದಿಂದ ಹೇಳುವಲ್ಲಿ ಹೆಮ್ಮೆಯ ಕೋಡು ಮೂಡುತ್ತದೆ. ಲಕ್ಷ್ಮಿಯವರ ಮತ್ತೊಂದು ಸಾಧನೆ ಎಂದರೆ ಇದೇ ನಾಟಕದ ಇಂಗ್ಲೀಷ್ ಅವತರಣಿಕೆಯಲ್ಲೂ ಅಷ್ಟೇ ನಿರ್ಗಳವಾಗಿ ಅಭಿನಯಿಸುವುದು, ಅದೂ ಕನ್ನಡ ನಾಟಕ ಪ್ರದರ್ಶನವಾದ ಅರ್ಧ ಗಂಟೆಯಲ್ಲೇ. ಅವರ ಅಸಾಧಾರಣ ನೆನಪಿನ ಶಕ್ತಿ, ರಂಗ ನಿರ್ವಹಣೆ ಅನನ್ಯವಾದುದು. ಇಂಥ ಆಕರ್ಷಕ ವಸ್ತುವನ್ನು ಕನ್ನಡಕ್ಕೆ ತಂದುಕೊಟ್ಟ ಉದಯ್ ಇಟಗಿಯವರಿಗೆ ಹಾರ್ದಿಕ ಅಭಿನಂದನೆಗಳು. ಈ ನಾಟಕವನ್ನು ಹೆಚ್ಚು ಹೆಚ್ಚು ಅಭಿಮಾನಿಗಳು ನೋಡಿ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. - ಡಾ ಮಂಗಳಾ ಪ್ರಿಯದರ್ಶಿನಿ