ಒಗಟಿಗೆ ಉತ್ತರ
ಒಗಟು
ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬೀಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ ಪ್ರಸಿದ್ಧ ಅರೇಬಿ ಕವನ "ಒಗಟು"ನಲ್ಲಿ ವಿವರಿಸುತ್ತಾನೆ.
ನಾನು ಎಲ್ಲಿಂದ ಬಂದೆನೋ ಗೊತ್ತಿಲ್ಲ, ಆದರೆ ಬಂದೆ.
ನನ್ನ ಮುಂದೆ ಹಾದಿ ಹಾಸಿತ್ತು, ನಡೆದೆ.
ನನಗೆ ಬೇಕೋ ಬೇಡವೋ ನಡೆಯುತ್ತಲೇ ಇರಬೇಕು, ನಡೆಯುತ್ತಿದ್ದೇನೆ.
ನಾನು ಹೇಗೆ ಬಂದೆ? ಯಾಕೆ ಬಂದೆ?
ನನ್ನ ದಾರಿಯನ್ನು ಹೇಗೆ ಕಂಡೆ?
ನನಗೆ ಗೊತ್ತಿಲ್ಲ!
ಈ ಹುಡುಕಾಟದಲ್ಲಿ
ನಾನುಹೊಸಬನೋ? ಹಳಬನೋ?
ಸ್ವತಂತ್ರನೋ? ಬಂಧಿಯೋ?
ನಡೆಯುತ್ತಿದ್ದೇನೆಯೋ? ನಡೆಸಲ್ಪಡುತ್ತಿದ್ದೇನೆಯೋ?
ಉತ್ತರ ತಿಳಿಯುವ ಆಸೆ,
ಆದರೆ ತಿಳಿಯುತ್ತೇನೆಯೇ?
ಗೊತ್ತಿಲ್ಲ!
ನನ್ನ ಹಾದಿ, ಯಾವುದದು?
ದೂರವಿದೆಯೋ? ಹತ್ತಿರವಿದೆಯೋ?
ಮೇಲೇರುತ್ತಿದ್ದೇನೆಯೋ? ಕೆಳಗಿಳಿಯುತ್ತಿದ್ದೇನೆಯೋ?
ಸಾಗುತ್ತಿರುವದು ನಾನೋ? ದಾರಿಯೋ?
ಅಥವಾ ನಾವಿಬ್ಬರು (ನಾನು ಮತ್ತು ಹಾದಿ) ನಿಂತಿದ್ದೇವೆಯೋ?
ಓಡುತ್ತಿರುವದು ಕಾಲ ಮಾತ್ರವೋ?
ನನಗೆ ಗೊತ್ತಿಲ್ಲ!
ನಾನು ಹುಟ್ಟುವ ಮುನ್ನ ನಾನು ನಾನಾಗಿದ್ದೆನೆ?
ಅಥವಾ ಬೇರೇನಾದರಾಗಿದ್ದೆನೆ?
ಈ ಒಗಟಿಗೆ ಉತ್ತರವಿದೆಯೆ?
ಅಥವಾ ಇಲ್ಲವೇ ಇಲ್ಲವೋ?
ನನಗೆ ಗೊತ್ತಿಲ್ಲ! ಯಾಕೆ ಗೊತ್ತಿಲ್ಲ?
ಗೊತ್ತಿಲ್ಲ ಅಷ್ಟೇ!
ಅರಬಿ ಮೂಲ: ಇಲ್ಯಾ ಅಬು ಮಾದಿ
ಇಂಗ್ಲೀಷಗೆ: ಮುಸ್ತಾಫಾ ಮಲೈಖಾ
ಕನ್ನಡಕ್ಕೆ: ಉದಯ ಇಟಗಿ
ಶೇಕ್ಷಪೀಯರನ ತಂಗಿ
ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ. ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು. ಅವಳ ಹೆಸರು ಜುಡಿತ್.
ಶೇಕ್ಷಪಿಯರ್ ವ್ಯಾಕರಣದ ಶಾಲೆಗೆ ತಾನೇ ಹೋದ. ಅಲ್ಲಿ ಲ್ಯಾಟಿನ್, ವರ್ಜಿಲ್, ಹೋರೆಸ್ ಮತ್ತು ತರ್ಕಶಾಸ್ತ್ರ ಕಲಿತನು. ಎಲ್ಲರಿಗೂ ತಿಳಿದಿರುವಂತೆ ಶೇಕ್ಷಪಿಯರ್ ಒಬ್ಬ ಸಾಹಸಿ ಹುಡುಗನಾಗಿದ್ದ. ಯಾವಾಗಲೂ ಮೊಲಗಳನ್ನು ಹಿಡಿಯುವದು, ಜಿಂಕೆಗಳನ್ನು ಬೇಟೆಯಾಡುವದು ಅವನ ಕೆಲಸವಾಗಿತ್ತು. ಮುಂದೆ ಪಕ್ಕದ ಊರಿನ ಹುಡುಗಿಯನ್ನು ಮದುವೆಗೆ ಮುನ್ನ ಬಸಿರು ಮಾಡಿದ್ದರಿಂದ ಅವಳನ್ನೇ ಮದುವೆಯಾಗಬೇಕಾಗಿ ಬಂತು. ಅವಳಿಂದ ಮಗುವನ್ನೂ ಪಡೆದ. ಈ ಮಧ್ಯೆ ಅವರಪ್ಪನ ವ್ಯಾಪಾರ ನಷ್ಟಕ್ಕೀಡಾಗಿ ಮನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿತು. ಧುತ್ತೆಂದು ಎರಗಿದ ಈ ಎಲ್ಲ ಅವಘಡಗಳಿಂದಾಗಿ ಆತ ಲಂಡನ್ ಗೆ ಕೆಲಸ ಹುಡುಕಿ ಹೋಗಬೇಕಾಯಿತು. ಅಲ್ಲಿ ರಂಗಮಂದಿರವೊಂದರಲ್ಲಿ ನಾಟಕ ನೋಡಲು ಬರುವಾಗ ಶ್ರೀಮಂತ ಜನರು ತರುವ ಕುದರೆಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿದ. ಅವನಿಗೆ ನಾಟಕಗಳಲ್ಲಿ ತುಂಬಾ ಆಸಕ್ತಿಯಿದ್ದುದರಿಂದ ಮುಂದೆ ಬಹಳ ಬೇಗನೆ ನಟನಾಗಿ, ನಾಟಕಕಾರನಾಗಿ ಭಡ್ತಿ ಪಡೆದ. ಇದರಿಂದ ಅವನಿಗೆ ಪ್ರಚಾರವೂ ಸಿಕ್ಕಿ ವಿಶ್ವದ ಅಗ್ರಮಾನ್ಯ ನಾಟಕಕಾರೆಂದೆನಿಸಿಕೊಂಡ.
ಈ ಮಧ್ಯ ಅವನ ಅಸಾಧಾರಣ ಪ್ರತಿಭಾವಂತ ತಂಗಿ ಮನೆಯಲ್ಲಿ ಹಾಗೆ ಉಳಿದಳು. ಅವಳು ಅವನಷ್ಟೇ ಸಾಹಸಿ, ಕಲ್ಪನಾತೀತ ಮತ್ತು ಉತ್ಸಾಹದ ಚಿಲುಮೆಯಾಗಿದ್ದಳು. ಆದರೆ ಅವಳನ್ನು ಶಾಲೆಗೆ ಕಳಿಸಲಿಲ್ಲ. ಅವಳಿಗೆ ವ್ಯಾಕರಣ, ತರ್ಕಶಾಸ್ತ್ರ ಓದಲು ಅವಕಾಶವಿರಲಿಲ್ಲ. ಬರಿ ಹೊರೇಸ್ ಮತ್ತು ವರ್ಜಿಲ್ ಓದಬಹುದಿತ್ತು. ತನ್ನ ಅಣ್ಣನ ಪುಸ್ತಕಗಳನ್ನು ಆಗಾಗ್ಗೆ ತೆಗೆದು ಓದುತ್ತಿದ್ದಳು. ಹೀಗೆ ಓದಲು ಕುಳಿತಾಗಲೆಲ್ಲ ಅವಳ ತಂದೆ ತಾಯಿ ಅವಳಿಗೆ ಕಾಲುಚೀಲಗಳನ್ನು ಹೆಣೆಯಲು ಅಥವಾ ಅಡಿಗೆ ಮಾಡಲು ಹೇಳುತ್ತಿದ್ದರು. ಜೊತೆಗೆ ಪುಸ್ತಕಗಳೊಂದಿಗೆ ಕಾಲ ಕಳೆಯಬೇಡೆಂಬ ಎಚ್ಚರಕೆಯ ಮಾತು ಬೇರೆ ಇರುತ್ತಿತ್ತು. ಇದನ್ನು ಅವಳಿಗೆ ನೋವಾಗದಂತೆ ಸಾವಧಾನವಾಗಿ ಹೇಳಿದರೂ ಅದರ ತೀಕ್ಷ್ಣತೆ ಅವಳನ್ನು ತಟ್ಟದೆ ಬಿಡುತ್ತಿರಲಿಲ್ಲ. ತಂದೆತಾಯಿಗಳಿಗೆ ಮಗಳ ಮೇಲೆ ಪ್ರಿತಿಯಿದ್ದರೂ ಅಂದಿನ ಸಾಮಾಜಿಕ ಕಟ್ಟುಪಾಡುಗಳಿಗೆ ಹೆದರಿ ಸುಮ್ಮನಿರಬೇಕಾಯಿತು. ಇದೆಲ್ಲದರ ನಡುವೆ ಅವಳು ಆಗೊಮ್ಮೆ ಈಗೊಮ್ಮೆ ಏನನ್ನೋ ಗೀಚುತ್ತಿದ್ದಳು. ಗೀಚಿದ್ದನ್ನು ಜಾಗೂರುಕತೆಯಿಂದ ಬಚ್ಚಿಡಬೇಕಾಗುತ್ತಿತ್ತು ಅಥವಾ ಸುಡಬೇಕಾಗುತ್ತಿತ್ತು.
ಪ್ರಾಯಕ್ಕೆ ಕಾಲಿಡುವ ಮುನ್ನವೇ ಅವಳನ್ನು ಒಬ್ಬ ಉಣ್ಣೆ ವ್ಯಾಪಾರಿಗೆ ಮದುವೆ ಮಾಡಿಕೊಟ್ಟರು. ಅವಳಿಗೆ ಮದುವೆ ಇಷ್ಟವಿರಲಿಲ್ಲ. ಬೇಡವೆಂದು ಅತ್ತಳು. ಅದಕ್ಕೋಸ್ಕರ ಅವಳಪ್ಪನಿಂದ ಒದೆ ತಿಂದಳು. ಅವನು ಮದುವೆ ವಿಚಾರದಲ್ಲಿ ತನ್ನನ್ನು ನೋಯಿಸುವದಾಗಲಿ, ಅವಮಾನಿಸುವದಾಗಲಿ ಮಾಡಬೇಡೇಂದು ಕೇಳಿಕೊಂಡ. ಕಣ್ಣಲ್ಲಿ ನೀರಿತ್ತು. ವಿಧಿಯಿಲ್ಲದೆ ಒಪ್ಪಬೇಕಾಯಿತು. ಬೇಸಿಗೆಯ ಒಂದು ರಾತ್ರಿ ಸಣ್ಣಪೆಟ್ಟಿಗೆಯೊಳಗೆ ತನ್ನ ಸಾಮಾನುಗಳನ್ನು ತುಂಬಿಕೊಂಡು ಯಾರಿಗೂ ಹೇಳದೆ ಮನೆಯನ್ನು ಬಿಟ್ಟು ಲಂಡನ್ ಕಡೆಗೆ ನಡೆದಳು. ಆಗ ಅವಳಿಗಿನ್ನೂ ಹದಿನೇಳು ತುಂಬಿರಲಿಲ್ಲ. ಆದರೂ ಅವಳಿಗೆ ಪದಗಳ ಜೋಡಣೆಯಲ್ಲಿ ಅಣ್ಣನಷ್ಟೇ ತೀಕ್ಷ್ಣ ಗ್ರಹಿಕೆ, ಚಾಕಚಕ್ಯತೆಯಿತ್ತು. ಒಮ್ಮೊಮ್ಮೆ ಅವನನ್ನೂ ಮೀರಿಸುತ್ತಿದ್ದಳು. ಅವನಂತೆ ಅವಳಿಗೂ ನಾಟಕದಲ್ಲಿ ಆಸಕ್ತಿಯಿತ್ತು. ರಂಗಮಂದಿರದ ಬಾಗಿಲಲ್ಲಿ ನಿಂತು ನಾನು ನಟಿಸುತ್ತೇನೆ ಎಂದಳು. ಅವಳನ್ನು ನೋಡಿ ನಕ್ಕರು. ಮ್ಯಾನೇಜರ್ ಅವಳನ್ನು ಅಪಹಾಸ್ಯ ಮಾಡಿದ. ಸ್ತ್ರಿ ನಟರ ಬಗ್ಗೆ ಕುಹಕವಾಡಿದ. ಯಾವ ಹೆಣ್ಣೂ ನಟಿ ಆಗುವದಕ್ಕೆ ಸಾಧ್ಯವಿಲ್ಲವೆಂದ. ಅವಳಿಗೆ ಇಷ್ಟವಾದ ರಂಗದಲ್ಲಿ ತರಬೇತಿ ಸಿಗಲಿಲ್ಲ. ಊಟಕ್ಕಾಗಿ ಬೀದಿ ಬೀದಿ ಅಲೆದಳು. ಆದರೂ ನಾಟಕ ಬರೆಯುವದರಲ್ಲಿ ಅವಳ ಆಸಕ್ತಿ ಕುಂದಲಿಲ್ಲ.
ಅವಳ ಮುಖದಲ್ಲಿ ಶೇಕ್ಷಪಿಯರನ ಕಳೆಯಿತ್ತು. ಅದೇ ಬೂದುಗಣ್ಣುಗಳು, ದುಂಡಗಿನ ಹುಬ್ಬುಗಳು. ಜೊತೆಗೆ ಪುಟಿಯುವ ತಾರುಣ್ಯವಿತ್ತು. ಕೊನೆಗೆ ನಾಟಕ ಕಂಪನಿಯ ಮ್ಯಾನೇಜರ್ ನಿಕ್ ಗ್ರೀನ್ ಅವಳಿಗೆ ನಾಟಕದಲ್ಲಿ ಅವಕಾಶ ನೀಡುತ್ತೇನೆಂದು ನಂಬಿಸಿ ಮಗುವೊದನ್ನು ಕರುಣಿಸಿ ಕೈ ಬಿಟ್ಟ. ಬರಿ ಹೆಂಗಸಿನ ದೇಹದ ಮೇಲೆ ಆಸೆಯಿದ್ದವನಿಗೆ ಅವಳ ಕವಿ ಹೃದಯ ಹೇಗೆ ಕಂಡೀತು? ಮುಂದೆ ಜೀವನದಲ್ಲಿ ಹತಾಶೆಗೊಂಡು ಚಳಿಗಾಲದ ಒಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಶವವನ್ನು ಇಂದು ಲಂಡನ್ನಲ್ಲಿರುವ ಪ್ರಸಿದ್ಧ ಮಧ್ಯದಂಗಡಿ "ಆನೆ ಮತ್ತು ಅರಮನೆ"ಯ ಕೆಳಗೆ ಹೂಳಲಾಗಿದೆ.
ಜುಡಿತ್ ಗೆ ಎಲ್ಲ ಪ್ರೊತ್ಷಾಹ ಸಿಕ್ಕಿ ಬದುಕುಳಿದಿದ್ದರೆ ಬಹುಶಃ ಅವಳು ಶೇಕ್ಷಪಿಯರನ ಹೆಸರನ್ನೂ ಅಳಿಸಿ ಹಾಕುತ್ತಿದ್ದಳೇನೊ! [ಆಧಾರ-Verginia Woolf's Shakespeare's Sister]
ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ
ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ!
ಅವನು ನಿನಗೆ ಮೋಡ ತಂದು ಕೊಟ್ಟರೆ
ನಾನು ನಿನಗೆ ಮಳೆ ಹನಿಯಾಗಿ ಸುರಿಯುವೆ
ಅವನು ನಿನಗೆ ಉರಿವ ದೀಪ ಕೊಟ್ಟರೆ
ನಾನು ನಿನಗೆ ಹೊಳೆವ ಚಂದಿರನನ್ನು ತರುವೆ
ಅವನು ನಿನಗೆ ಮರದ ಹೂಗಳನ್ನು ಕಿತ್ತುಕೊಟ್ಟರೆ
ನಾನು ನಿನಗೆ ಮರವಾಗಿ ನೆರಳನಿಡುವೆ
ಅವನು ನಿನಗೆ ಹಡಗನ್ನು ಕೊಟ್ಟರೆ
ನಾನದರ ನಾವಿಕನಾಗಿ ಜೊತೆಯಲ್ಲಿ ಸಾಗುವೆ.
ಅರೇಬಿ ಮೂಲ: ನಿಜಾರ್ ಖಬ್ಬಾನಿ
ಕನ್ನಡಕ್ಕೆ: ಉದಯ ಇಟಗಿ
’ಗಂಡುಹಕ್ಕಿ’, ಸ್ತ್ರೀಯರು, ಪ್ರಸ್ತುತ ಸಮಾಜ ಮತ್ತು ನಾನು.
ಕಾಲ ಬದಲಾದಂತೆ ಹೆಣ್ಣಿನ ಸ್ಥಾನ ಮಾನ ಬದಲಾದದ್ದು ನಿಜ. ಆದರೆ ಎಷ್ಟು ಬದಲಾಗಿವೆಯೆಂದರೆ ಇವತ್ತಿನ ಹೆಂಗಸರು ಬರಿ ಹಕ್ಕು, ಸ್ವಾತಂತ್ರ್ಯ, ಅಧಿಕಾರದ ಬಗ್ಗೆ ಮಾತನಾಡುತ್ತಾ (ಎಲ್ಲ ಹೆಂಗಸರು ಅಂತ ನಾನು ಹೇಳುತ್ತಿಲ್ಲ. ಆದರೆ ಹಾಗೆ ಮಾತನಾಡುವವರ ಸಂಖ್ಯೆ ಜಾಸ್ತಿಯಿದೆ.) ತಮ್ಮ ಮೂಲ ಕರ್ತವ್ಯ, ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಮರೆತು ತಾವಾಯಿತು ತಮ್ಮ ಗಂಡ, ಮಕ್ಕಳಾಯಿತು ಎಂದು ಸ್ವಾರ್ಥಿಗಳಾಗುತ್ತಿದ್ದಾರೆ. ಗಂಡ ಮಕ್ಕಳ ವಿಷಯದಲ್ಲೂ ಕೂಡ ಸರಿಯಾಗಿ ಒದಗಿಸಬೇಕಾದ ನ್ಯಾಯ ಒದಗಿಸುತ್ತಿಲ್ಲ. ಆ ಮಾತು ಬೇರೆ.
ನಾನು ಈ ಮೊದಲು ಸ್ತ್ರೀಪರ ಖಾಳಜಿಗಳನ್ನು ಹೊಂದಿದ್ದೆ. ಆದರೆ ದಿನ ಕಳೆದಂತೆ ವಿವಾಹಿತ ಪುರುಷರ ಆತ್ಮಹತ್ಯೆ ಮತ್ತು ಅವರ ಮೇಲಿನ ದಬ್ಬಾಳಿಕೆ ಹೆಚ್ಚುತ್ತಿರುವದನ್ನು ಕಂಡು ಈ ಮದುವೆಯೆಂಬ ವ್ಯವಸ್ಥೆಯಲ್ಲಿ ಹೆಚ್ಚಾಗಿ ನಲುಗುತ್ತಿರುವದು ಹೆಣ್ಣಲ್ಲ ಗಂಡೆಂದು ಗೊತ್ತಾಯಿತು. ಅದಕ್ಕೆ ಪೂರಕ ಎನ್ನುವಂತೆ ಪೂರ್ಣಿಮಾರವರ ಕತೆ ವಿವಾಹಿತ ಗಂಡಸಿನ ತೊಳಲಾಟ, ನಲುಗಾಟ ಮತ್ತು ಅವನ ಅಸಹಾಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಇವತ್ತು ಗಂಡನಿಗೆ ಪ್ರೀತಿಯಿಂದ ಕುಡಿಯಲಿಕ್ಕೆ ನೀರು ಕೊಡುವದು ಕೂಡ ತಮ್ಮ ಅಹಂಗೆ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಷಯವೆಂದು ಭಾವಿಸುತ್ತಿದ್ದಾರೆ. ಇನ್ನು ಅತ್ತೆ ಮಾವಂದಿರ ವಿಷಯವಂತು ದೂರವೇ ಉಳಿಯಿತು.
ಮಂಜುವಿಗೆ
ಅಪ್ಪ
ಅಜ್ಜ ನೆಗೆದು ಬೀಳುವ ಮೊದಲೇ
ಅವ್ವನ್ನು ಮದುವೆಯಾಗಿ
ಇದ್ದ ಹೊಲ ಗದ್ದೆಗಳಲ್ಲಿ
ಮೈ ಕೈ ಕೆಸರು ಮಾಡಿಕೊಳ್ಳದೇ
ಅವ್ವ ಮಾಡಿಕೊಟ್ಟ ಬಿಸಿ ಬಿಸಿ ರೊಟ್ಟಿಯನ್ನು
ಗಡದ್ದಾಗಿ ತಿಂದು ತೇಗಿ
ಎಲ್ಲ ಭಾರವನ್ನು ಅವಳ ತಲೆ ಮೇಲೆ ಹಾಕಿ
ತಾನು ಮಾತ್ರ ಇಸ್ಪೀಟಾಡುತ್ತ
ಹೆಸರಿಗೆ ಮಾತ್ರ ಮನೆ ಯಜಮಾನನಾದ.
ದುಡಿಯಲು ಗೊತ್ತಿರದ ಷಂಡ
ಮೂರು ಮಕ್ಕಳನ್ನು ಹೆತ್ತು ಗಂಡಸೆನಿಸಿಕೊಂಡ.
ಹುಟ್ಟಿಸಿದ ಮಕ್ಕಳನ್ನೂ ಸಾಕಲಾಗದೆ
ಅವರಿವರ (ಬಂಧುಗಳ) ಮನೆಯಲ್ಲಿ ಬಿಟ್ಟು
ತಾನು ಮಾತ್ರ ತನ್ನದೇ ಗೂಡಿನಲ್ಲಿ
ಹಚ್ಚಗೆ ತಿಂದು ಬೆಚ್ಚಗೆ ಮಲಗಿ
ಅವ್ವನ ಪ್ರೀತಿಯನ್ನೂ ನಮ್ಮಿಂದ ಕಸಿದುಕೊಂಡು
ಅವಳನ್ನೂ ತನ್ನ ಜೊತೆಯಲ್ಲಿ ನಮ್ಮ ತಿರಸ್ಕಾರಕ್ಕೆ ಗುರಿಮಾಡಿದ.
ಅಪ್ಪ ಏನೂ ಕಿಸಿಯದಿದ್ದರೂ
ಅವ್ವನ ಮೇಲೆ ಸದಾ ಇವನ ರುದ್ರನರ್ತನ
ಅವ್ವ ಇವನ ಆರ್ಭಟಕ್ಕೆ ಹೆದರಿ ಹಿಕ್ಕೆ ಹಾಕುತ್ತಾ
ಒಳಗೊಳಗೆ ಎಲ್ಲವನ್ನು ನುಂಗುತ್ತಾ ಬೇಯುತ್ತಾ
ಹೊಲದಲ್ಲೂ ದುಡಿದು ಮನೆಯಲ್ಲೂ ಮಾಡಿ
ಸದಾ ಇವನ ಸೇವೆಗೆ ನಿಂತಳು.
ಹೊತ್ಹೊತ್ತಿಗೆ ಚಾ ಕುಡಿದು
ಬುಸ್ ಬುಸ್ ಎಂದು ಚುಟ್ಟ ಸೇದಿ
ಗೊರ ಗೊರ ಕೆಮ್ಮಿ
ಮೈಯೆಲ್ಲ ಗೂರಿ ಬಂದವರ ತರ
ಪರಾ ಪರಾ ಕೆರೆದು
ಆಗೊಮ್ಮೆ ಈಗೊಮ್ಮೆ ಜಡ್ಡಿಗೆ ಬಿದ್ದು
ಸತ್ಹಾಂಗ ಮಾಡಿ
ಒಮ್ಮಿಂದೊಮ್ಮೆಲೆ ಮೆಲೆದ್ದು
ಗುಟುರು ಹಾಕುವ ಮುದಿ ಗೂಳಿ ಇವನು.
ಅವರಿವರ ಹಂಗಿನ ಮಾತುಗಳನ್ನು ಕೇಳುತ್ತಾ
ಮಕ್ಕಳೆಲ್ಲ ಕಷ್ಟಬಿದ್ದು ಓದಿ
ಕೈಗೆ ಬಂದ ಮೇಲೆ
ಅರವತ್ತರ ಅರಳು ಮರಳೆಂಬಂತೆ
ಅಥವಾ ಕೆಟ್ಟ ಮೇಲೆ ಬುದ್ಧಿ ಬಂತೆಂಬಂತೆ
ಹೊಲಕ್ಕೆ ದುಡಿಯಲು ಹೋಗಿ "ಹೀರೋ" ಆಗಲೆತ್ನಿಸಿದ್ದೂ ಇದೆ.
ಅಲ್ಲಿ ದುಡಿದಿದ್ದೆಷ್ಟೋ
ಆ ಖರ್ಚು ಈ ಖರ್ಚೆಂದು
ಹಕ್ಕಿನಿಂದ ಮಕ್ಕಳ ಹತ್ತಿರ ಕಾಸು ಪೀಕುತ್ತ
ಅsssಬ್ಬ ಎಂದು ಡೇಗು ಹೊಡೆದು
ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುವದು
ಮುಂದುವರಿದೇ ಇದೆ!
ಇದೀಗ ಯಾರಾದರು "ಎಲ್ಲಿ ನಿನ್ನ ಮಕ್ಕಳು?"
ಎಂದು ಕೇಳಿದರೆ ಮೈ ಕುಣಿಸಿ ಎದೆಯುಬ್ಬಿಸಿ
"ಇವರೇ" ಎಂದು ನಮ್ಮೆಡೆಗೆ ತೋರಿಸುತ್ತಾನೆ.
ನಾವೂ ಅಷ್ಟೇ "ಯಾರು ನೀವು?’ ಎಂದು
ಯಾರಾದರು ಕೇಳಿದರೆ
"ಮಲ್ಲೇಶಪ್ಪನ ಮಕ್ಕಳು" ಎಂದು ಹೇಳುತ್ತೇವೆ.
-ಉದಯ ಇಟಗಿ
ಅವ್ವ
ಇರೋ ನನ್ನವ್ವ
ಅಂಥಾ ಗಂಡನ್ನ ಕಟಗೊಂಡು
ಪಡಬಾರದ್ದ ಪಟ್ಟು
ಏಗಬಾರದ್ದ ಏಗಿ
ಅಂಥಾ ಎಡಾ ಹೊಲದಾಗ
ದುಮು ದುಮು ಬಿಸಿಲಾಗ
ಬೆವರು ಹರಿಸಿ ಬಂಗಾರ ಬೆಳಿತೇನಿ
ಅಂತ ಹೋದಾಕಿ.
ಬಂಗಾರ ಇಲ್ದ ಬೆಳ್ಳಿ ಇಲ್ದ
ಬರೆ ಎರಡು ಸೀರ್ಯಾಗ
ಜೀವನಾ ಕಂಡಾಕಿ.
ಹೊಲ್ದಾನ ಹ್ವಾರೆನೂ ಮಾಡಿ
ಮನ್ಯಾಂದೂ ನೋಡಿ
ಯಾವಾಗ್ಲೂ ಮಾರಿ ದುಮು ದುಮು ಉರಿಸ್ಕೋಂತ
ಮನ್ಯಾಗ ಕೂತ್ಗೊಂಡು ತಿನ್ನೋ ಗಂಡನ್ನೂ ಸಂಭಾಳಿಸಿ
ಹಾಡ ಹಾಡತಾ ಹಾಡಾದಾಕಿ.
ಇಂಥಾ ಗಂಡನ್ನ ಕಟಗೊಂಡ ಮ್ಯಾಲೆ
ಮಕ್ಕಳ್ನ ಹಂತ್ಯಾಕ ಇಟಗೊಂಡು
ಜ್ವಾಪಾನ ಮಾಡಲಾರದ
ದೈನೇಸಿಪಟಗೊಂಡು
ಬ್ಯಾರೆದವರ ಹತ್ರ ಇಟ್ಟು
ವಿಲ ವಿಲ ಅಂತ ಒದ್ದಾಡದಕಿ.
ಮಕ್ಕಳು ಕೈಗೆ ಬಂದ ಮ್ಯಾಲೆ
ಅವರಂತ್ಯಾಕಿದ್ದು ಜೀವನದ ಸುಖ ಕಾಣತೇನಿ
ಅಂತ ಆಸೆ ಪಟ್ಟಾಕಿ.
ಕಟಗೊಂಡ ಗಂಡ
ತನ್ನ ಜೊತಿ ಮಕ್ಕಳ ಹತ್ರ ಇರಲಾರದಕ
ಬಿಡಲಾರದ್ದ ಕರ್ಮ ಅನ್ಕೊಂಡು
ಹೊಳ್ಳಿ ಊರಿಗೆ ಹೋದಾಕಿ.
ಬರೆ ಬಿಸಿಲಾಗ ದುಡ್ಕೊಂತ
ಬಿಸಿಲುಂಡು ಬೆಳದಿಂಗಳ
ನಗಿ ನಕ್ಕು ಬೆಳಕು ಹರಿಸಿದಾಕಿ.
ಮಣ್ಣಾಗ ಹುಟ್ಟಿ
ಮಣ್ಣಾಗ ಬೆಳೆದು
ಮಣ್ಣಾಗಿ ಹೋದಾಕಿ.
-ಉದಯ ಇಟಗಿ
ಅಂತರಂಗದ ಪಿಸುಮಾತುಗಳು
ಪ್ರೀತಿಯ ಮಂಜು,
ಡಿಸೆಂಬರ್ ೨೪ ಕ್ಕೆ ನಿನಗೆ ೨೭ ವಸಂತಗಳು ತುಂಬುತ್ತವೆ.ನಿನ್ನ ಹುಟ್ಟು ಹಬ್ಬದಂದು ಶುಭಹಾರೈಕೆಗಳೊಡನೆ ನಾ ನಿನಗೆ ಹೇಳಲೇಬೇಕಾದ ಮಾತುಗಳಿವೆ.ಅವು ಬರಿ ಮಾತುಗಳಲ್ಲ ಅಂತರಂಗದ ಪಿಸುಮಾತುಗಳು.ಕೇಳಿಸಿಕೊ ನಿನ್ನ ಎದೆ ಕದವ ತೆರೆದು.
ಹನಿಹನಿಯಾಗಿ ಸೋರಿಹೋಗುತ್ತಿತ್ತು
ಹವಣಿಕೆಯಿತ್ತು ನಿನ್ನಲ್ಲಿ ಬದುಕನ್ನು
ಬೊಗಸೆಯಲ್ಲಿ ಹಿಡಿದಿಡುವ ಹವಣಿಕೆ
ಬಿಕ್ಕುಗಳಿದ್ದವು ಸಾಂತ್ವನವಿಲ್ಲದ ಬಿಕ್ಕುಗಳು
ಕನಸುಗಳಿದ್ದವು ಖಾಲಿ ಖಾಲಿ ಕನಸುಗಳು
ಅಸೆಗಳಿದ್ದವು ಅರಳದ ಆಸೆಗಳು
ಬಯಕೆಗಳಿದ್ದವು ಬಂಜರದ ಬಯಕೆಗಳು
ಆದರೂ ಏರಿ ಬಂದೆ ನೀ
ಬದುಕು ಎಸೆದ ಹರಿದ ಹಗ್ಗವನ್ನು ಹಿಡಿದು
ಕೈ ಬೀಸಿ ಕರೆದಿತ್ತು ಬದುಕು
ಹರಿದು ಹೋದೆ ನೀ
ಝರಿಯಾಗಿ ತೊರೆಯಾಗಿ
ಬದುಕು ಗೆಲ್ಲುವ ಛಲಗಾರನಾಗಿ
ಇದೀಗ ಬದುಕ ತುಂಬಾ ಶ್ರಾವಣದ ಮಳೆ
ಕತ್ತಲು ಕರಗಿ ಫಳ್ ಫಳ್ ಎಂದು
ಹೊಳೆಯುವ ಬೆಳ್ಮಿಂಚು
ಆಗಸದ ತುಂಬಾ ನೂರು ಹಕ್ಕಿಗಳ ಸಡಗರದ ಸದ್ದು
ಬೆಳ್ಳಿಚುಕ್ಕಿ ಬೆಳಗು ಬಾಗಿಲ ಸರಿಸಿ
ನಗುವ ಹೊತ್ತು
ಬಿಚ್ಚಿಕೊಂಡು ನಿಂತಿದೆ ನಿನ್ನೆದುರಿಗೆ
ಚಿತ್ತಾರದ ಬದುಕು
ಮೊಗೆದುಕೋ ಅಲ್ಲಿ ನಿನ್ನದೇ ಜೀವಜಲವನ್ನು
ನನಸಾಗಿಸು ಸವಿಯದೇ ಬಿಟ್ಟ ಸವಿಗನಸುಗಳನ್ನು
ಪ್ರೀತಿಸದೆ ಬಿಟ್ಟ ಆಸೆ ಆಕಾಂಕ್ಷೆಗಳನ್ನು
ಅರೆಬರೆ ಗೆಲವುಗಳನ್ನು
ನಾಳೆ ಬದುಕು ನೆನಪುಗಳ
ಕನಸುಗಳ ಬುದ್ಭದಗಳ
ಪುಳಕಗಳ ಹೂಬನವನ್ನು ಹೊತ್ತು ಬರಲಿ
ಮತ್ತೆ ಬದುಕು ನಿತ್ಯ ಸಂತಸವಾಗಲಿ
ನಿತ್ಯ ವಸಂತವಾಗಲಿ.
ಮಂಜು,
ಹುಟ್ಟು ಹಬ್ಬದ ಉಡುಗೂರೆಯಾಗಿ
ಕೊಡುತ್ತಿದ್ದೇನೆ ನಿನಗೆ
ನನ್ನ-ನಿನ್ನ ಸಾಂಗತ್ಯದ ನೆನಪುಗಳನ್ನು
ಒಂದು ಸ್ನೇಹದ ಸಿಹಿ ಸುಖವನ್ನು
ಕೊಟ್ಟಷ್ಟು ಕೊನರಿ ಅಕ್ಷಯವಾಗುವ ಪ್ರೀತಿಯನ್ನು
ಕವನವಾಗಿಸಿದ ನನ್ನ ಅಂತರಂಗದ ಪಿಸುಮಾತುಗಳನ್ನು.
ನಿನ್ನ ಪ್ರೀತಿಯ
ಉದಯ ಇಟಗಿ
೨೪.೧೨.೨೦೦೦
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
ಮಕ್ಕಳ ರಂಗ ಶಿಬಿರ4 ದಿನಗಳ ಹಿಂದೆ
-
-
ಕನ್ನಡದ ಮೂರು ಅನನ್ಯ ಸಾಹಿತ್ಯ ಕೃತಿಗಳು5 ವಾರಗಳ ಹಿಂದೆ
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ2 ತಿಂಗಳುಗಳ ಹಿಂದೆ
-
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ5 ತಿಂಗಳುಗಳ ಹಿಂದೆ
-
-
ಹೊಸವರ್ಷದ ಶುಭಾಶಯಗಳು8 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
ಈ ಶೆಟ್ಟರ್, ‘ಆ ಶೆಟ್ಟರ್’ಗಳಂತಲ್ಲ!1 ವರ್ಷದ ಹಿಂದೆ
-
ನಿನ್ನೆದೆಯ ತಂತಿಯ1 ವರ್ಷದ ಹಿಂದೆ
-
ದೇವರು ಕಾಣೆಯಾಗಿದ್ದಾನೆ..!2 ವರ್ಷಗಳ ಹಿಂದೆ
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ2 ವರ್ಷಗಳ ಹಿಂದೆ
-
-
Pic by Hengki Lee3 ವರ್ಷಗಳ ಹಿಂದೆ
-
ದಡ್ಡ - ಬುದ್ದಿವಂತ3 ವರ್ಷಗಳ ಹಿಂದೆ
-
-
ದೂರ ‘ತೀರದ ‘ ಯಾನ!!!4 ವರ್ಷಗಳ ಹಿಂದೆ
-
ಉಲ್ಲಾಳ್ದಿ4 ವರ್ಷಗಳ ಹಿಂದೆ
-
Resume4 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ!4 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?4 ವರ್ಷಗಳ ಹಿಂದೆ
-
’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?4 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ4 ವರ್ಷಗಳ ಹಿಂದೆ
-
-
-
ಒಂದು ಮಡಚಿಟ್ಟ ಪುಟ : Draft Mail – 55 ವರ್ಷಗಳ ಹಿಂದೆ
-
ಹದಿನೆಂಟನೇ ಶಿಬಿರ ಮುಂದೂಡಿಕೆ6 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ6 ವರ್ಷಗಳ ಹಿಂದೆ
-
-
ಸುಮ್ನೆ ತಮಾಷೆಗೆ -೮7 ವರ್ಷಗಳ ಹಿಂದೆ
-
-
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೪7 ವರ್ಷಗಳ ಹಿಂದೆ
-
-
-
ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ8 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:8 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!9 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ10 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ10 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ11 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು11 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ12 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…12 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ12 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...12 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್13 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …13 ವರ್ಷಗಳ ಹಿಂದೆ
-
ನನ್ನ ಜಡೆ13 ವರ್ಷಗಳ ಹಿಂದೆ
-
ಕೇಳಿ-೫13 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು13 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ14 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !15 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-