Demo image Demo image Demo image Demo image Demo image Demo image Demo image Demo image

“ಲಿಬಿಯಾ ಡೈರಿ” ಪುಸ್ತಕದ ಒಂದು ಸಂವಾದ ಕಾರ್ಯಕ್ರಮ

 • ಶನಿವಾರ, ಡಿಸೆಂಬರ್ 19, 2020
 • ಬಿಸಿಲ ಹನಿ
 •  ಇವತ್ತಿನ 'ಲಿಬಿಯಾ ಡೈರಿ" ಸಂವಾದ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ಕಾರ್ಯಕ್ರಮವಂತೂ ಅದ್ಬುತವಾಗಿ ಮೂಡಿ ಬಂತು. F M Rainbow ದ ರೇಡಿಯೋ ಜಾಕಿಯಾದಂಥ ಶ್ರೀವಿದ್ಯಾ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಭಾಗವಹಿಸಿದ ಎಲ್ಲರೂ ಬಹಳ ಚನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಯಶ್ರೀ ಕಾಸರವಳ್ಳಿ, ನಟರಾಜ ತಲಘಟ್ಟಪುರ, ಗಿರೀಶ್ ರೇವಡಿಗಾರ ಎಲ್ಲರೂ ಸಮತೂಕದಿಂದ ಮಾತನಡಿದರು. ಎಲ್ಲರಿಗೂ ಧನ್ಯವಾದಗಳು. ವಿಶೇಷವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ 'ಆಲಿಸಿರಿ" ಮುಖ್ಯಸ್ಥರಾದ ಶ್ರೀಹರ್ಷ ಸಾಲಿಮಠ ಅವರಿಗೆ ಮತ್ತು "ಲಿಬಿಯಾ ಡೈರಿ"ಯನ್ನು ಆಡಿಯೋ ರೂಪದಲ್ಲಿ ತರಲು ಸಾಕಷ್ಟು ಶ್ರಮವಹಿಸಿದ ಶ್ರೀ ಉಮಾಮೂರ್ತಿಯವರಿಗೆ ಧನ್ಯವಾದಗಳು. ನೀವು ಫೇಸ್‌ಬುಕ್‌ ಲೈವ್‌ ನೋಡಿಲ್ಲವಾದರೆ ಈ ಲಿಂಕ್ ಬಳಸಿ ಇಲ್ಲಿ ನೋಡಬಹುದು. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

  Kanaka and Krishna

 • ಗುರುವಾರ, ಡಿಸೆಂಬರ್ 03, 2020
 • ಬಿಸಿಲ ಹನಿ
 •  

  ಕನಕ-ಕೃಷ್ಣ

  **********

   

  ಕನಕ ಕುರಿ ಕಾಯುತ್ತಿದ್ದ

  ಕೃಷ್ಣ ದನ ಮೇಯಿಸುತ್ತಿದ್ದ

  ಪರಿಚಯವಾಯಿತು  ಹೆಚ್ಚೇನಿಲ್ಲ....

   

  ಕನಕ ರೊಟ್ಟಿ  ಒಯ್ಯುತ್ತಿದ್ದ

  ಕೃಷ್ಣ ಬೆಣ್ಣೆ  ಹಚ್ಚುತ್ತಿದ್ದ

  ಹಂಚಿಕೊಂಡು  ಉಂಡರು ಹೆಚ್ಚೇನಿಲ್ಲ...

   

  ಕನಕನಿಗೆ ಹಾಡು ಕಟ್ಟುವ ಹುಚ್ಚು

  ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು

  ಗೆಳೆತನ ಕುದುರಿತು ಹೆಚ್ಚೇನಿಲ್ಲ....

   

  ಕನಕ 'ಬ್ಯಾ' ಬ್ಯಾ' ಎಂದೂ

  ಕೃಷ್ಣ 'ಅಂಬಾ' ಎಂದೂ

  'ಕಿರ್ ಕಿರ್' ' ' ಮುರ್ ಮುರ್ ' ಕೂಗು ಹಾಕಿ

  ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ..      

                  

  ಕೃಷ್ಣ ಮಹಾತುಂಟ, ತುಡುಗ

  ತರಲೆ, ಜಗಳಗಂಟ

  ಕನಕ ಅವನ ಭಂಟ,ನೆಂಟ,ಸರ್ವಸ್ವ....

  ಇಬ್ಬರೂ  ಬದುಕಿ ಬಾಳಿದರು ಹೆಚ್ಚೇನಿಲ್ಲ....

   

  ಕುಲದ ನೆಲೆಯಿಲ್ಲ...ಕಾಲದ ಹಂಗಿಲ್ಲ....

  ಕನಕ ಮಣ್ಣಾದ ಕೃಷ್ಣ ಕಲ್ಲಾದ....

  ಇದೊಂದು ಕಲ್ಲು  ಮಣ್ಣಿನ. ಕತೆ ಹೆಚ್ಚೇನಿಲ್ಲ....

                      

  - ಸವಿತಾ ನಾಗಭೂಷಣ

   

  Kanaka and Krishna

   

  While Kanaka was feeding the sheep

  Krishna was grazing the cattle

  Both became acquainted with each other

  Just that and nothing else….

   

  While Kanaka was carrying the bread

  Krishna was buttering it

  They ate it up together by sharing

  Just that and nothing else….

   

  While Kanaka was mad after the song-composition

  Krishna was engrossed in playing the flute

  A friendship bloomed between the two

  Just that and nothing else….

   

  While Kanaka brayed ‘bya bya’

  Krishna crunched ‘amba’

  They enjoyed playing together by uttering ‘kir kir’and ‘mur mur’ sounds

  Just that and nothing else….

   

  While Krishna was mischievous,   

  Messy playful and a thief,

  Kanaka  was his right-hand, a bosom friend and everything else ...

  They both lived and died unconditionally

  Just that and nothing else….

   

  Neither they had an inclination of caste ...

  Nor the obligation of time

  Eventually, Kanaka turned into soil

  And Krishna became a stone....

  This is a story of stone and soil

  Just that and nothing else….

   

  From Kannada: Savitha Nagabhushan

  To English: Uday Itagi

   


  During my menstrual period…

 • ಸೋಮವಾರ, ನವೆಂಬರ್ 30, 2020
 • ಬಿಸಿಲ ಹನಿ
 •  

  ಕಾವೇರಿದಾಸ್ ಎಂಬ ಗಂಡೊಬ್ಬನ ಹೆಣ್ಗವಿತೆ ಇದು. ಓದಿ, ನಿಮ್ಮೊಳಗೊಂದು ತಂತು ಅಲುಗುತ್ತದೆ.

   

  ಅವನು

  ನನ್ನ ಪ್ರತಿ ತಿಂಗಳ ಮುಟ್ಟನ್ನು 

  ಸಂಭ್ರಮಿಸುತ್ತಿದ್ದ...

  ಗುಟ್ಟಾಗಿಯೇನು ಅಲ್ಲ 

  ನನ್ನ ಜೊತೆಗೆ ಅವನು ಸಹ

  ಮುಟ್ಟಾದವನಂತೆ..... 

   

  ಅವನ ಕ್ಯಾಲೆಂಡರನಲ್ಲಿ

  ನನ್ನ  ಮುಟ್ಟಿನ ಡೇಟನ್ನು

  ರೆಡ್ ಇಂಕಿನಿಂದ ಗುರುತು ಮಾಡಿರುತ್ತಿದ್ದ...

  ನಾನು ಹೊರ ಚೆಲ್ಲುವ 

  ರಕ್ತದ ನೋವನ್ನು ಹೆಚ್ಚು ಬಲ್ಲವನಾಗಿದ್ದ..... 

   

  ಮುಟ್ಟಾಗುವ ಮೊದಲೇ 

  ಮಾರ್ಕೆಟಿನಿಂದ 

  ಸ್ಯಾನಿಟರಿ ಪ್ಯಾಡ್ಗಳನ್ನು ಖರೀದಿಸಿರುತ್ತಿದ್ದ...

  ತರ ತರವಾದ ಚಾಕೊಲೇಟ್‌, ಹಣ್ಣುಗಳನ್ನು ತಂದು ತಿನ್ನಿಸುತ್ತಿದ್ದ.‌.‌

   

  ದಿನ ಮುಂಜಾನೆ ಬೆಚ್ಚನೆಯ ಕಾಫಿಯ 

  ಜೊತೆ ಹಣೆಯ ಮೇಲೊಂದು ಮುತ್ತನಿಟ್ಟು

  ದಿನ ಶುರು ಮಾಡಿಸುವಾತ‌....

  ನಾನು ಮುಟ್ಟಾದ ದಿನ 

  ಅದೇ ಕಾಫಿ, ಅದೇ ಮುತ್ತು ಕೊಡುತ್ತಾನೆ

  ಅದರೆ ಅದರಲ್ಲೇನೋ ಅದ್ಭುತವನ್ನಿಟ್ಟುರುತ್ತಾನೆ...

   

  ಬಿಸಿ ನೀರ ಕಾಯಿಸಿರುತ್ತಾನೆ..

  ಬೆನ್ನ ಉಜ್ಜಲು ಕಾಯ್ದಿರುತ್ತಾನೆ...

  ಕೂದಲನ್ನು ಆರಿಸಿ ಜಡೆ ಕಟ್ಟಿ

  ದೃಷ್ಟಿಯಾಗಬಾರದೆಂದು......

  ಗಲ್ಲಕ್ಕೆ ಬಟ್ಟನಿಟ್ಟು ದೃಷ್ಟಿ ತೆಗೆಯುತ್ತಾನೆ...

  ಅವನೇ ಮುಟ್ಟಾದವನಂತೆ 

  ನನ್ನ ಮುಟ್ಟನ್ನು ಸಂಭ್ರಮಿಸುತ್ತಾನೆ..‌

   

  ಅವ ನನ್ನ ಜೊತೆಗೂಡಿ 

  ಅಡುಗೆ ಮಾಡುವುದು ಪ್ರತಿ ದಿನದ ರೂಢಿ..

  ಆದರೆ ತಿಂಗಳ ಮೂರು ದಿನ ಮಾತ್ರ 

  ಅಡುಗೆ ಮನೆ ಅವನದೇ ನೋಡಿ....

   

  ನನ್ನ ಕಾಲುಗಳನ್ನು ಒತ್ತುತ್ತಾ

  ಪದ್ಯಗಳನ್ನು ಕಟ್ಟುತ್ತಾನೆ...

  ನನ್ನ ಕಂಗಳನ್ನೇ ನೋಡುತ್ತಾ

  ಕೆಲ ಪದಗಳಿಗೆ ಜೀವ ತುಂಬುತ್ತಾನೆ....

   

  ದಿನ ಪೂರ್ತಿ ಹರೆಟೆ ಹೊಡೆಯುತ್ತಾ

  ಕಾಲ ಕಳೆಯಲು ಬಯಸುವ ಅವನಿಗೆ

  ನಾನೇ ಆಫೀಸನ್ನು ನೆನೆಸುತ್ತೇನೆ

  ಒಲ್ಲದ ಮನಸ್ಸಿನಿಂದ 

  ಆಫೀಸಿಗೆ ಹೋಗುತ್ತಾನೆ....

  ಸಂಜೆಯಾಗುವುದರೊಳಗೆ  

  ಮಲ್ಲಿಗೆ ಜೊತೆ ಹಾಜರಿರುತ್ತಾನೆ

   

  ಮುಟ್ಟಿನ  ಮೂರು ದಿಗಳನ್ನು 

  ಬೇಗ ಕಳೆಯಲು ಬೇಸರ ನನಗೆ...

  ನೋವಾಗದಂತೆ

  ಮುಟ್ಟನ್ನು ಸಂಭ್ರಮಿಸುವ ಕ್ಷಣ ನೀಡಲು

  ಕಾತುರ ಅವನಿಗೆ‌...

  ನಾನು ಮುಟ್ಟಾದಾಗ ಅವನು

  ಸಂಭ್ರಮಿಸುತ್ತಾನೆ....

  ಗುಟ್ಟಾಗಿಯೇನುಅಲ್ಲ...

  ಅವನು ಸಹ ಮುಟ್ಟಾದವನಂತೆ...

   

  -ಕಾವೇರಿದಾಸ್  ಲಿಂಗನಾಪುರ

   

   

  During my menstrual period…

  He celebrates

  My every month’s menstruation

  Not secretly…

  But as though he himself

  Has menstruated along with me…

   

  On his calendar

  He keeps my menstrual date marked

  With a red ink...

  And he would understand my bleeding pains

  Better than anybody else...

   

  Even before menstruation

  He would rather buy the sanitary pads

  From the market and keep them ready

  He would also bring 

  Fruits and chocolates of various kinds

  And make me eat fondly

   

  Every morning

  He would offer me a cup of hot coffee

  With a kiss on my forehead

  And make my day….

  Even now

  The day whenever I menstruate

   He offers me 

  The same coffee, the same kiss

  And he does all that amazingly...

   

  He would keep the hot water ready

  And keep himself waiting eagerly

  To sponge off my back

  He would also dry my hair

  And keep them tied in a braid

  Besides, he would also keep

  A black spot on my cheeks

  So as to keep the evil spirits away

  In short, he celebrates

  My menstrual period

  As though he himself has menstruated

   

  Cooking along with me

  Is his daily routine anyway…

  But those three days in a month

  Kitchen’s responsibility will be of his entirely…

   

  Pressing my legs

  He recites the poems...

  And looking into my eyes

  He gives life to some words…

   

  For him who wants to while away

  The whole day in a chit-chat with me

  I myself only will have to

  Remind him of his office

  Eventually, he goes to the office reluctantly..

  But before it gets evening

  He will turn up in front of me

  With jasmines in his hands…

   

  These three days of menstruation

  I'm tired of spending them...

  But without letting me to feel

  The pinch of menstrual pain

  He would rather keep me happy by making

  Those moments awesome….

  Anyway, whenever I menstruate

  He will celebrate it

  Not secretly

  But as though

  He himself has menstruated

  Along with me

   

  From Kannada: Kaveri Das

  To English: Uday Itagi