Demo image Demo image Demo image Demo image Demo image Demo image Demo image Demo image

"ಶೇಕ್ಸ್‌ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ

  • ಶನಿವಾರ, ಫೆಬ್ರವರಿ 26, 2022
  • ಬಿಸಿಲ ಹನಿ
  • ನಿನ್ನೆ 'ಯಾವ್ ಪುಸ್ತಕ ಓದ್ತಾ ಇದ್ದೀರಾ? ಕ್ಲಬ್ ಹೌಸ್'' ವತಿಯಿಂದ ಹಮ್ಮಿಕೊಂಡಿದ್ದ ನನ್ನ "ಶೇಕ್ಸ್‌ಪಿಯರನ ಶ್ರೀಮತಿ" ನಾಟಕದ ಓದಿನ ಕಾರ್ಯಕ್ರಮ ಅದ್ಬತವಾಗಿತ್ತು. ಪ್ರತಿಕ್ರಿಯೆ ಕೂಡಾ ತುಂಬಾ ಚನ್ನಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಧ್ಯಾರಾಣಿ ಮೇಡಂ ಶ್ರೀಕಾಂತ್ ಮತ್ತು ಅವಿನಾಶ್ ಕಾಮತ್ ಇನ್ನೂ ಮುಂತಾದವರಿಗೆ ನಮ್ಮ ಕೃತಜ್ಞತೆಗಳು . ಆ ನಾಟಕದ ಓದಿನ ಲಿಂಕ್ ಇಲ್ಲಿದೆ. ಬಿಡುವಾದಾಗ ಕೇಳಿ...
    https://www.clubhouse.com/room/mJXXjyqQ?utm_medium=ch_room_xerc&utm_campaign=tJPuf4D3JqxcCrlJlWFYlw-80416

    Whore!

  • ಮಂಗಳವಾರ, ಫೆಬ್ರವರಿ 08, 2022
  • ಬಿಸಿಲ ಹನಿ
  • Whore! When I was first abused My hair was full of flowers And my age was mostly ten. Dad murmured “You are like a whore” For my tinkling sound of bangles, anklets and for the fragrance of flowers “The mean minds who can’t tolerate the excitements of womanhood will grumble like this”- the first lesson I learned. Whore!! When he abused me first he was so angry For I did not follow the path he chose Not being able to control himself He stood in a state of helplessness. Why will he use such a dirty language? Why anger will come out of anger? For the helpless of not ruling me! - Second lesson I learned. Whore!!! I was shocked when a passerby called me for the first time. Just after tolerating this Again I heard the same cries of “whore” back to back And they infested on me The shock became surprise And gradually that surprise also turned to pity. For this is the howl of those who can’t digest the truth of my inner words- I learned the third lesson. Now ... I have developed a kind of love Towards the word “whore” That tolerates all the fuss, pride, helplessness, oppression and inferiority. That’s why I want to pacify and console the abusers like a baby. I want to get rid of all their evilness and ugliness By feeding them with love meals Whenever they call me “whore” For me it is heard like “Amma” only From Kannada: Chethana Teerthahalli To English: Uday Itagi ಸೂಳೆ! ಮೊದಲ ಸಲ ಬೈಸಿಕೊಂಡಾಗ ಮುಡಿ ತುಂಬ ಹೂವಿತ್ತು. ವಯಸ್ಸು ಹೆಚ್ಚೆಂದರೆ ಹತ್ತು. ಬಳೆ ಸದ್ದಿಗೆ, ಗೆಜ್ಜೆಗೆ, ಹೂ ಘಮಲಿಗೆಲ್ಲ ಅಪ್ಪ "ಸೂಳೇರ ಥರ" ಅನ್ನುತ್ತಿದ್ದರು. "ಹೆಣ್ಣುಸಂಭ್ರಮ ಸಹಿಸದ ಮನಸ್ಸುಗಳು ಹಾಗೆ ಬೈತವೆ" - ಮೊದಲನೆ ಪಾಠ ಕಲಿತೆ. ಸೂಳೆ!! ಮೊದಲ ಸಲ ಅಂವ ಬೈದಾಗ ಪೂರಾ ಕೋಪದಲ್ಲಿದ್ದ. ಅವನು ಆಯ್ದುಕೊಟ್ಟ ದಾರಿ ನಡೆಯಲೊಪ್ಪಲಿಲ್ಲ ನಾನು. ಅಹಮಿಕೆ ಅದುಮಿಕೊಳ್ಳಲಾಗದ ಅಸಹಾಯಕತೆಯಲ್ಲಿ ನಿಂತಿದ್ದ ಅವನು. ಇಂಥ ಬೈಗುಳ ಯಾಕೆ ಹೊರಡುತ್ತೆ? ಕೋಪದಿಂದ. ಕೋಪ ಯಾಕೆ ಬರುತ್ತೆ? ಆಳಲಾಗದ ಅಸಹಾಯಕತೆಗೆ! - ಎರಡನೇ ಪಾಠ ಕಲಿತೆ. ಸೂಳೆ!!! ಮೊದಲ ಸಲ ಗೊತ್ತುಗುರಿ ಇಲ್ಲದ ದಾರಿಹೋಕ ಕೂಗಿದಾಗ ಆಘಾತಗೊಂಡಿದ್ದೆ. ಸಾವರಿಸಿಕೊಂಡ ಬೆನ್ನಿಗೇ ಮತ್ತೆ, ಮತ್ತೆ ಮತ್ತೆ, ಮತ್ತಷ್ಟು ಕೂಗುಗಳು "ಸೂಳೆ" ಅನ್ನುತ್ತ ಮುತ್ತಿಕೊಂಡವು. ಆಘಾತ ಅಚ್ಚರಿಯಾಯ್ತು. ಅಚ್ಚರಿ ಅನುಕಂಪಕ್ಕೆ ತಿರುಗಿತು. ಯಾಕೆಂದರೆ, "ನನ್ನ ನಿಜದ ನುಡಿಗಳನ್ನ ಅರಗಿಸಿಕೊಳ್ಳಲಾಗದವರ ಅರಚಾಟವಿದು" - ಮೂರನೇ ಪಾಠ ಕಲಿತಿದ್ದೆ. ಈಗೀಗ.... ಯಾರೆಲ್ಲರ ಮತ್ಸರ, ಅಹಂಕಾರ, ಅಸಹಾಯಕತೆ, ದಬ್ಬಾಳಿಕೆ, ಕೀಳರಿಮೆ ಎಲ್ಲವನ್ನೂ ಸಹಿಸಿ ಸಂಭಾಳಿಸುವ 'ಸೂಳೆ' ಪದದ ಮೇಲೆ ನನಗೆ ಮಮತೆ ಹುಟ್ಟಿದೆ. ಹಾಗೆಂದು ನಿಂದಿಸುವವರನ್ನ ಮಡಿಲಿಗೆತ್ತಿಕೊಂಡು ಮಗುವಂತೆ ಮುದ್ದಿಸಿ ಸಮಾಧಾನಪಡಿಸಬೇಕನ್ನಿಸುತ್ತೆ. ಅವರೊಳಗಿನ ಏನೆಲ್ಲ ವಿಕೃತಿ ವಿಕಾರಗಳಿಗೆ ತಂಪೆರೆದು ವಾತ್ಸಲ್ಯವುಣಿಸಬೇಕೆನಿಸುತ್ತೆ. ಅವರು ನನ್ನನ್ನು 'ಸೂಳೆ' ಅಂದಾಗೆಲ್ಲಾ ಅದು ನನಗೆ 'ಅಮ್ಮಾ' ಅಂತಲೇ ಕೇಳತೊಡಗಿದೆ.