ಕಾಲ ಕೆಳಗೆ ತಣ್ಣನೆಯ ಭೂಮಿ
ಮೇಲೆ ಉರಿವ ಚಪ್ಪರ
ನಾಲ್ಕು ಗೋಡೆಗಳು
ನಾಲ್ಕೂ ಕಡೆಯಿಂದ ನನ್ನನ್ನಾವರಿಸಿವೆ.
ಈ ಜೀವನ ಪರ್ಯಂತ ಶಿಕ್ಷೆಗೆ
ಕೊನೆ ಎಂದು?
ಗೊತ್ತಿಲ್ಲ.
ನನ್ನ ದಣಿದ ಮನಸ್ಸಿಗೆ
ಭಾರವಾದ ಕಣ್ಣುಗಳಿಗೆ
ಹಗಲ್ಯಾವುದು ರಾತ್ರಿ ಯಾವುದು
ಎಂದು ಗೊತ್ತಾಗುವುದಿಲ್ಲ.
೧೨x೧೨ ಕೋಣೆಯೊಳಗೆ ಕುಳಿತುಕೊಂಡೇ
ದೂರ ದೂರ ಸಾಗುವ
ಸಾವಿರ ಮೈಲಿಗಳನ್ನು ಎಣಿಸುತ್ತೇನೆ.
ಎರಡಡಿ ಅಂಗುಲದ ಕಿಟಕಿಗೆ
ಇಡಿ ಆಕಾಶ ತೋರಿಸೆಂದು ಬೇಡುತ್ತೇನೆ
ಚಪ್ಪರದ ಕಿಂಡಿಯೊಳಗಿಂದ
ನೆಳಲು-ಬೆಳಕಿನಾಟವನ್ನು ನೋಡುತ್ತೇನೆ.
ಅಯ್ಯೋ! ಇದೆಂಥಾ ನಿರ್ದೆಯೆಯುಳ್ಳ ಮನೆ
ಹೃದಯ ಭಾರವಾಗುತ್ತದೆ
ನಾನು ಸುಮ್ಮನೆ ಬಿಕ್ಕತೊಡಗುತ್ತೇನೆ
ನಿಶ್ಯಬ್ದದಲ್ಲಿ.
ಮೂಲ ಮರಾಠಿ: ಇಂದಿರಾ ಸಂತ
ಇಂಗ್ಲೀಷಗೆ: ವಿಲಾಸ ಸಾರಂಗ
ಕನ್ನಡಕ್ಕೆ: ಉದಯ ಇಟಗಿ
ಭಾಮೆಯರೆಲ್ಲಾ ಬರಬೇಕಂತೆ
2 ದಿನಗಳ ಹಿಂದೆ
2 ಕಾಮೆಂಟ್(ಗಳು):
"ಇಡೀ ಆಕಾಶ ತೋರಿಸೆಂದು ಬೇಡುತ್ತೇನೆ,
ಚಪ್ಪರದ ಕಿಂಡಿಯೊಳಗಿಂದ."
Beautiful lines.
Thanks for showing the beautiful lines in my translation.
ಕಾಮೆಂಟ್ ಪೋಸ್ಟ್ ಮಾಡಿ