ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ
ನಿನ್ನ ಕಣ್ಣು ಕಣ್ಣಷ್ಟೇ, ಮುಖ ಚಂದ್ರ ಹೇಗಾದೀತು?
ನಿನ್ನ ಹೆರಳು ಕಾಲದೊಂದಿಗೆ ಬೆಳ್ಳಗಾಗುವ,
ಚಿತ್ರಾನ್ನದ ನಡುವೆ ಸಿಕ್ಕರೆ ಅಸಹ್ಯವೆನಿಸುವ ಒಂದು ಕ್ಷುಲ್ಲಕ ವಸ್ತುವಷ್ಟೇ.
ಇನ್ನು ಮೈಮಾಟವೋ...
ಇರಲಿ ಬಿಡು ಆ ಜೋಡಿಮೊಲೆಗಳು, ವಿಶೇಷವೇನು ಅವುಗಳಲ್ಲಿ?
ಒಂದಿಷ್ಟು ಸಾರಿ ಸೂರ್ಯ ಮುಳುಗಿ ಹುಟ್ಟಿದರೆ ಜೋತು ಬೀಳುತ್ತವೆ
ತೊಟ್ಟು ಕಳಚಿ ನೆಲಕ್ಕೆ ಬಿದ್ದ ಮಾವಿನಂತೆ, ಬೇರು ಸತ್ತ ಕಮಲದಂತೆ
ನಿನ್ನ ಹೊಕ್ಕುಳ ವರ್ಣಿಸುವ ಹಾದರಕ್ಕಿಳಿಯಲಾರೆ ಹುಡುಗಿ;
ನಿನ್ನ ಹೆತ್ತವಳ ಗುರುತಿಹುದಲ್ಲಿ... ಇಗೋ ಕೈ ಮುಗಿದೆ.
ನಿನ್ನ ಬಳುಕು ಸೊಂಟ ಬಳುಕಲಿ ಬಿಡು,
ಗಂಡಸರ ಸೊಂಟ ಬಳುಕಲು ಸಾಧ್ಯವೇ?
ಆ ತುಂಬಿದ ತೊಡೆಗಳಿಗೆ ಒಮ್ಮೆ ತುಟಿ ತಾಕಿಸಿ ಸಡಿಲಿಸಿದರಾಯಿತು,
ವರ್ಷ ತುಂಬುವುದರೊಳಗೆ
ಅವುಗಳ ಮೇಲೆ ಕೂಸು ಸೂಸು ಮಾಡುತ್ತದೆ,
ನಿನ್ನ ತಾಯ್ತನ ಅರಳುತ್ತದೆ ರಸಿಕತೆಯ ಗೋರಿ ಮೇಲೆ...
ಇನ್ನದು ಯೋನಿಯಲ್ಲ ಬಿಡು:
ಬುದ್ಧ, ಬಸವ, ಶಂಕರ, ರಾಮಾನುಜ, ಮಧ್ವರೇ
ಅಲ್ಲಿಂದ ಬಂದರೆಂದಮೇಲೆ ಅದು ದೈವಸನ್ನಿಧಿ-
ಭೋಗತಾಣವೆಂದವನ ಬಾಯಿ ಹೊಲೆದುಬಿಡಬೇಕು ಹುಡುಗಿ,
ಇಲ್ಲವೇ ನಪುಂಸಕನನ್ನಾಗಿಸಿ ಗಲ್ಲಿಗೇರಿಸಬೇಕು...
ಇಗೋ ಇನ್ನೊಮ್ಮೆ ಕೈಮುಗಿಯುತ್ತೇನೆ
ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ
ನಾ ಪದಕ ಪಡೆಯಬೇಕಿಲ್ಲ ವೃಥಾ ನಿನ್ನ ಸುಳ್ಳುಸುಳ್ಳಾಗಿ ಚಿತ್ರಿಸಿ
ನೀನೊಂದು ಮಾಮೂಲಿ ಹೆಣ್ಣಷ್ಟೇ
ಅಮಲಿನ ಬೆವರಘಮ ಸೂಸುವ ನಿನ್ನ ಶರೀರದಲ್ಲೇ ಮಲಮೂತ್ರಗಳು ಹುಟ್ಟುತ್ತವೆ
ಮೆಲ್ಲುಸಿರ ಚೆಲ್ಲುವ ನಿನ್ನ ನಾಸಿಕ ನಿಷ್ಕ್ರಿಯಗೊಂಡಾಗ
ಎರಡೂ ಹೊಳ್ಳೆಗೂ ಹತ್ತಿ ಇಡುವ ಜನ ದಡ್ಡರಲ್ಲ ಬಿಡು
ಜಗತ್ತು ನಿನ್ನ ಕೋಮಲ ತ್ವಚೆಯ ಬಗ್ಗೆ ಹೊಗಳುತ್ತದೆ ಹುಡುಗಿ
ನನಗೋ
ರಕ್ತ, ಮಾಂಸಗಳಾಚೆಗಿನ ನಿನ್ನ ಅಸ್ಥಿಗೂಡು ಇಷ್ಟವಾಗುತ್ತದೆ
ಅದನ್ನೊಮ್ಮೆ ಅಪ್ಪಿ ಮಲಗಬೇಕೆನ್ನಿಸುತ್ತದೆ ಮಣ್ಣಿನಾಳದಲ್ಲಿ.
ನನ್ನ ಕವಿತೆಗಳಲ್ಲಿ ಬಹುಪರಾಕ್ ಇರುವುದಿಲ್ಲ ಕ್ಷಮಿಸು ಹುಡುಗಿ,
ನಾನೊಬ್ಬ ಮೂಢ, ಕವಿಯೆಂದವರ ಪಾಲಿನ ಅಪ್ಪಟ ಭ್ರಮೆ.
-ಹೃದಯಶಿವ
Please forgive me dear, you can’t find any praiseworthy notes in my poems….
Your eyes are just eyes,
How can your face be the moon?
Your hair will turn grey with time,
It is just a trivial object and becomes a disgusting matter
If it is found in your meals.
Then your physique issue….
Let the two breasts be there on your chest,
What’s so special about them?
Over some time
As the time passes on
They will also hang down and fall flat finally on the ground
Like a mango with its stem detached
And like a lotus with its roots dead
I can’t debauch of describing your navel, dear;
Your mother’s resemblance is very much seen over there….
Look! I folded my hands to it.
Let your balletic waist keep dancing,
Can men’s waist be balletic?
If those full thighs are kissed and loosened by me
Within a year when the baby will piss on them
Your motherhood will bloom on the graveyard of sensualism …
Then your vagina is not a vagina:
It’s a divine place
Which gave birth to
Buddha, Basava, Shankara, Ramanuja, and Madhwa-
Let the mouth of those who call it as a place of pleasure be paralysed forever, dear!
Or they should be castrated and hanged...
Here again, I am folding my hands
And ascertaining that there won’t be any praiseworthy notes in my poems
Please forgive me, dear!
I don't want to get a medal
By portraying you falsely
You are just an ordinary woman
Faeces are born in your body that drips with intoxicating sweat
When your nostrils that shed fresh breath become inactive
People who put cotton in both holes are not stupid
The world will praise your soft skin, girl!
But I like your skeleton beyond flesh and blood
I feel like sleeping with it in the mud with my hands holding it tightly.
There won’t be any praiseworthy notes in my poems, please forgive me, girl!
I am a fool, a true illusion on the part of those who consider me a poet.
-From Kannada: Hrudayashiva
To English: Uday Itagi
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ