ಪ್ರೀತಿಯ ಧರ್ಮ
ಪ್ರೀತಿಯ ಕ್ಯಾರವ್ಯಾನರು
ನನ್ನನ್ನು ಯಾವ ಗಡಿನಾಡಿಗೆ
ಬೇಕಾದರೂ ಕೊಂಡೊಯ್ಯಲಿ, ಚಿಂತೆಯಿಲ್ಲ.
ನಾನು ನಿಶ್ಚೆಂತೆಯಿಂದ
ಬದುಕಬಲ್ಲೆ;
ಏಕೆಂದರೆ ಪ್ರೀತಿಯ ಧರ್ಮಕ್ಕೆ
ಗಡಿಯ ಹಂಗೂ ಇಲ್ಲ
ನಾಡಿನ ಹಂಗೂ ಇಲ್ಲ.
ಏಕೆ?
ನನ್ನೊಲವಿನ ಒಲವೇ!
ಎಷ್ಟೋ ಸಾರಿ ನಾನು ನಿನ್ನ
ಹೆಸರಿಡಿದು ಕರೆದಿದ್ದೇನೆ,
ಆದರೆ ನಾನು ಯಾವತ್ತೂ ನಿನಗೆ
ಕೇಳಿಸಲೇ ಇಲ್ಲ.
ಎಷ್ಟೋ ಸಾರಿ ನಾನು ನಿನ್ನ
ಕಣ್ಣೆದುರೇ ಬಂದು ನಿಂತಿದ್ದೇನೆ,
ಆದರೆ ಯಾವತ್ತೂ ನೀನು ನನ್ನ
ನೋಡಲೇ ಇಲ್ಲ.
ಎಷ್ಟೋ ಸಾರಿ ಗಾಳಿಯಲ್ಲಿ
ಪರಿಮಳವಾಗಿ ತೇಲಿಬಂದು ನಿನ್ನ ಬಳಿಯೇ ಸುಳಿದಾಡಿದ್ದೇನೆ,
ಆದರೆ ನೀನು ಯಾವತ್ತೂ ನನ್ನ
ವಾಸನೆಯನ್ನು ಗ್ರಹಿಸಲೇ ಇಲ್ಲ.
ಎಷ್ಟೋ ಸಾರಿ ನೀನು ಆಸ್ವಾದಿಸಲೆಂದು
ನಾನು ಪಾಕವಾಗಿ ನಿನ್ನ ತಟ್ಟೆಯಲ್ಲಿಯೇ ಕೂತಿದ್ದೆನೆ,
ಆದರೆ ನೀನು ಯಾವತ್ತೂ ನನ್ನ
ರುಚಿಯನ್ನು ನೋಡಲೇ ಇಲ್ಲ.
ಹೋಗಲಿ, ನೀನಾದರೂ ನನ್ನ
ಕರೆಯಬಾರದೇ? ಕಣ್ಣೆದುರು ಬಂದು ನಿಲ್ಲಬಾರದೇ?
ಪರಿಮಳವಾಗಿ ನನ್ನ ಬಳಿ ತೇಲಿ
ಬರಬಾರದೇ?
ಹೇಳು, ಏಕಿಷ್ಟು
ಸತಾಯಿಸುತ್ತಿರುವಿ? ಏಕಿಷ್ಟು ಪೀಡಿಸುತ್ತಿರುವಿ?
ಏಕೆ? ಏಕೆ? ಏಕೆ?
ಮೂಲ ಅರೇಬಿ: ಇಬ್ನ್ ಅರೇಬಿ
ಕನ್ನಡಕ್ಕೆ: ಉದಯ್ ಇಟಗಿ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ