ಕಾವೇರಿದಾಸ್ ಎಂಬ ಗಂಡೊಬ್ಬನ ಹೆಣ್ಗವಿತೆ ಇದು. ಓದಿ, ನಿಮ್ಮೊಳಗೊಂದು ತಂತು ಅಲುಗುತ್ತದೆ. ಅವನು ನನ್ನ ಪ್ರತಿ ತಿಂಗಳ ಮುಟ್ಟನ್ನು ಸಂಭ್ರಮಿಸುತ್ತಿದ್ದ... ಗುಟ್ಟಾಗಿಯೇನು ಅಲ್ಲ ನನ್ನ ಜೊತೆಗೆ ಅವನು ಸಹ ಮುಟ್ಟಾದವನಂತೆ..... ಅವನ ಕ್ಯಾಲೆಂಡರನಲ್ಲಿ ನನ್ನ ಮುಟ್ಟಿನ ಡೇಟನ್ನು ರೆಡ್ ಇಂಕಿನಿಂದ ಗುರುತು ಮಾಡಿರುತ್ತಿದ್ದ... ನಾನು ಹೊರ ಚೆಲ್ಲುವ ರಕ್ತದ ನೋವನ್ನು ಹೆಚ್ಚು ಬಲ್ಲವನಾಗಿದ್ದ..... ಮುಟ್ಟಾಗುವ ಮೊದಲೇ ಮಾರ್ಕೆಟಿನಿಂದ ಸ್ಯಾನಿಟರಿ ಪ್ಯಾಡ್ಗಳನ್ನು ಖರೀದಿಸಿರುತ್ತಿದ್ದ... ತರ ತರವಾದ ಚಾಕೊಲೇಟ್, ಹಣ್ಣುಗಳನ್ನು ತಂದು ತಿನ್ನಿಸುತ್ತಿದ್ದ.. ದಿನ ಮುಂಜಾನೆ ಬೆಚ್ಚನೆಯ ಕಾಫಿಯ ಜೊತೆ ಹಣೆಯ ಮೇಲೊಂದು ಮುತ್ತನಿಟ್ಟು ದಿನ ಶುರು ಮಾಡಿಸುವಾತ.... ನಾನು ಮುಟ್ಟಾದ ದಿನ ಅದೇ ಕಾಫಿ, ಅದೇ ಮುತ್ತು ಕೊಡುತ್ತಾನೆ ಅದರೆ ಅದರಲ್ಲೇನೋ ಅದ್ಭುತವನ್ನಿಟ್ಟುರುತ್ತಾನೆ... ಬಿಸಿ ನೀರ ಕಾಯಿಸಿರುತ್ತಾನೆ.. ಬೆನ್ನ ಉಜ್ಜಲು ಕಾಯ್ದಿರುತ್ತಾನೆ... ಕೂದಲನ್ನು ಆರಿಸಿ ಜಡೆ ಕಟ್ಟಿ ದೃಷ್ಟಿಯಾಗಬಾರದೆಂದು...... ಗಲ್ಲಕ್ಕೆ ಬಟ್ಟನಿಟ್ಟು ದೃಷ್ಟಿ ತೆಗೆಯುತ್ತಾನೆ... ಅವನೇ ಮುಟ್ಟಾದವನಂತೆ ನನ್ನ ಮುಟ್ಟನ್ನು ಸಂಭ್ರಮಿಸುತ್ತಾನೆ.. ಅವ ನನ್ನ ಜೊತೆಗೂಡಿ ಅಡುಗೆ ಮಾಡುವುದು ಪ್ರತಿ ದಿನದ ರೂಢಿ.. ಆದರೆ ತಿಂಗಳ ಮೂರು ದಿನ ಮಾತ್ರ ಅಡುಗೆ ಮನೆ ಅವನದೇ ನೋಡಿ.... ನನ್ನ ಕಾಲುಗಳನ್ನು ಒತ್ತುತ್ತಾ ಪದ್ಯಗಳನ್ನು ಕಟ್ಟುತ್ತಾನೆ... ನನ್ನ ಕಂಗಳನ್ನೇ ನೋಡುತ್ತಾ ಕೆಲ ಪದಗಳಿಗೆ ಜೀವ ತುಂಬುತ್ತಾನೆ.... ದಿನ ಪೂರ್ತಿ ಹರೆಟೆ ಹೊಡೆಯುತ್ತಾ ಕಾಲ ಕಳೆಯಲು ಬಯಸುವ ಅವನಿಗೆ ನಾನೇ ಆಫೀಸನ್ನು ನೆನೆಸುತ್ತೇನೆ ಒಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗುತ್ತಾನೆ.... ಸಂಜೆಯಾಗುವುದರೊಳಗೆ ಮಲ್ಲಿಗೆ ಜೊತೆ ಹಾಜರಿರುತ್ತಾನೆ ಮುಟ್ಟಿನ ಈ ಮೂರು ದಿನಗಳನ್ನು ಬೇಗ ಕಳೆಯಲು ಬೇಸರ ನನಗೆ... ನೋವಾಗದಂತೆ ಮುಟ್ಟನ್ನು ಸಂಭ್ರಮಿಸುವ ಕ್ಷಣ ನೀಡಲು ಕಾತುರ ಅವನಿಗೆ... ನಾನು ಮುಟ್ಟಾದಾಗ ಅವನು ಸಂಭ್ರಮಿಸುತ್ತಾನೆ.... ಗುಟ್ಟಾಗಿಯೇನು ಅಲ್ಲ... ಅವನು ಸಹ ಮುಟ್ಟಾದವನಂತೆ... -ಕಾವೇರಿದಾಸ್ ಲಿಂಗನಾಪುರ |
During my menstrual period… He celebrates My every month’s menstruation Not secretly… But as though he himself Has menstruated along with me…
On his calendar He keeps my menstrual date marked With a red ink... And he would understand my bleeding pains Better than anybody else...
Even before menstruation He would rather buy the sanitary pads From the market and keep them ready He would also bring Fruits and chocolates of various kinds And make me eat fondly
Every morning He would offer me a cup of hot coffee With a kiss on my forehead And make my day…. Even now The day whenever I menstruate He offers me The same coffee, the same kiss And he does all that amazingly...
He would keep the hot water ready And keep himself waiting eagerly To sponge off my back He would also dry my hair And keep them tied in a braid Besides, he would also keep A black spot on my cheeks So as to keep the evil spirits away In short, he celebrates My menstrual period As though he himself has menstruated
Cooking along with me Is his daily routine anyway… But those three days in a month Kitchen’s responsibility will be of his entirely…
Pressing my legs He recites the poems... And looking into my eyes He gives life to some words…
For him who wants to while away The whole day in a chit-chat with me I myself only will have to Remind him of his office Eventually, he goes to the office reluctantly.. But before it gets evening He will turn up in front of me With jasmines in his hands…
These three days of menstruation I'm tired of spending them... But without letting me to feel The pinch of menstrual pain He would rather keep me happy by making Those moments awesome…. Anyway, whenever I menstruate He will celebrate it Not secretly But as though He himself has menstruated Along with me
From
Kannada: Kaveri Das To English:
Uday Itagi
|