Demo image Demo image Demo image Demo image Demo image Demo image Demo image Demo image

During my menstrual period…

  • ಸೋಮವಾರ, ನವೆಂಬರ್ 30, 2020
  • ಬಿಸಿಲ ಹನಿ
  •  

    ಕಾವೇರಿದಾಸ್ ಎಂಬ ಗಂಡೊಬ್ಬನ ಹೆಣ್ಗವಿತೆ ಇದು. ಓದಿ, ನಿಮ್ಮೊಳಗೊಂದು ತಂತು ಅಲುಗುತ್ತದೆ.

     

    ಅವನು

    ನನ್ನ ಪ್ರತಿ ತಿಂಗಳ ಮುಟ್ಟನ್ನು 

    ಸಂಭ್ರಮಿಸುತ್ತಿದ್ದ...

    ಗುಟ್ಟಾಗಿಯೇನು ಅಲ್ಲ 

    ನನ್ನ ಜೊತೆಗೆ ಅವನು ಸಹ

    ಮುಟ್ಟಾದವನಂತೆ..... 

     

    ಅವನ ಕ್ಯಾಲೆಂಡರನಲ್ಲಿ

    ನನ್ನ  ಮುಟ್ಟಿನ ಡೇಟನ್ನು

    ರೆಡ್ ಇಂಕಿನಿಂದ ಗುರುತು ಮಾಡಿರುತ್ತಿದ್ದ...

    ನಾನು ಹೊರ ಚೆಲ್ಲುವ 

    ರಕ್ತದ ನೋವನ್ನು ಹೆಚ್ಚು ಬಲ್ಲವನಾಗಿದ್ದ..... 

     

    ಮುಟ್ಟಾಗುವ ಮೊದಲೇ 

    ಮಾರ್ಕೆಟಿನಿಂದ 

    ಸ್ಯಾನಿಟರಿ ಪ್ಯಾಡ್ಗಳನ್ನು ಖರೀದಿಸಿರುತ್ತಿದ್ದ...

    ತರ ತರವಾದ ಚಾಕೊಲೇಟ್‌, ಹಣ್ಣುಗಳನ್ನು ತಂದು ತಿನ್ನಿಸುತ್ತಿದ್ದ.‌.‌

     

    ದಿನ ಮುಂಜಾನೆ ಬೆಚ್ಚನೆಯ ಕಾಫಿಯ 

    ಜೊತೆ ಹಣೆಯ ಮೇಲೊಂದು ಮುತ್ತನಿಟ್ಟು

    ದಿನ ಶುರು ಮಾಡಿಸುವಾತ‌....

    ನಾನು ಮುಟ್ಟಾದ ದಿನ 

    ಅದೇ ಕಾಫಿ, ಅದೇ ಮುತ್ತು ಕೊಡುತ್ತಾನೆ

    ಅದರೆ ಅದರಲ್ಲೇನೋ ಅದ್ಭುತವನ್ನಿಟ್ಟುರುತ್ತಾನೆ...

     

    ಬಿಸಿ ನೀರ ಕಾಯಿಸಿರುತ್ತಾನೆ..

    ಬೆನ್ನ ಉಜ್ಜಲು ಕಾಯ್ದಿರುತ್ತಾನೆ...

    ಕೂದಲನ್ನು ಆರಿಸಿ ಜಡೆ ಕಟ್ಟಿ

    ದೃಷ್ಟಿಯಾಗಬಾರದೆಂದು......

    ಗಲ್ಲಕ್ಕೆ ಬಟ್ಟನಿಟ್ಟು ದೃಷ್ಟಿ ತೆಗೆಯುತ್ತಾನೆ...

    ಅವನೇ ಮುಟ್ಟಾದವನಂತೆ 

    ನನ್ನ ಮುಟ್ಟನ್ನು ಸಂಭ್ರಮಿಸುತ್ತಾನೆ..‌

     

    ಅವ ನನ್ನ ಜೊತೆಗೂಡಿ 

    ಅಡುಗೆ ಮಾಡುವುದು ಪ್ರತಿ ದಿನದ ರೂಢಿ..

    ಆದರೆ ತಿಂಗಳ ಮೂರು ದಿನ ಮಾತ್ರ 

    ಅಡುಗೆ ಮನೆ ಅವನದೇ ನೋಡಿ....

     

    ನನ್ನ ಕಾಲುಗಳನ್ನು ಒತ್ತುತ್ತಾ

    ಪದ್ಯಗಳನ್ನು ಕಟ್ಟುತ್ತಾನೆ...

    ನನ್ನ ಕಂಗಳನ್ನೇ ನೋಡುತ್ತಾ

    ಕೆಲ ಪದಗಳಿಗೆ ಜೀವ ತುಂಬುತ್ತಾನೆ....

     

    ದಿನ ಪೂರ್ತಿ ಹರೆಟೆ ಹೊಡೆಯುತ್ತಾ

    ಕಾಲ ಕಳೆಯಲು ಬಯಸುವ ಅವನಿಗೆ

    ನಾನೇ ಆಫೀಸನ್ನು ನೆನೆಸುತ್ತೇನೆ

    ಒಲ್ಲದ ಮನಸ್ಸಿನಿಂದ 

    ಆಫೀಸಿಗೆ ಹೋಗುತ್ತಾನೆ....

    ಸಂಜೆಯಾಗುವುದರೊಳಗೆ  

    ಮಲ್ಲಿಗೆ ಜೊತೆ ಹಾಜರಿರುತ್ತಾನೆ

     

    ಮುಟ್ಟಿನ  ಮೂರು ದಿಗಳನ್ನು 

    ಬೇಗ ಕಳೆಯಲು ಬೇಸರ ನನಗೆ...

    ನೋವಾಗದಂತೆ

    ಮುಟ್ಟನ್ನು ಸಂಭ್ರಮಿಸುವ ಕ್ಷಣ ನೀಡಲು

    ಕಾತುರ ಅವನಿಗೆ‌...

    ನಾನು ಮುಟ್ಟಾದಾಗ ಅವನು

    ಸಂಭ್ರಮಿಸುತ್ತಾನೆ....

    ಗುಟ್ಟಾಗಿಯೇನುಅಲ್ಲ...

    ಅವನು ಸಹ ಮುಟ್ಟಾದವನಂತೆ...

     

    -ಕಾವೇರಿದಾಸ್  ಲಿಂಗನಾಪುರ

     

     

    During my menstrual period…

    He celebrates

    My every month’s menstruation

    Not secretly…

    But as though he himself

    Has menstruated along with me…

     

    On his calendar

    He keeps my menstrual date marked

    With a red ink...

    And he would understand my bleeding pains

    Better than anybody else...

     

    Even before menstruation

    He would rather buy the sanitary pads

    From the market and keep them ready

    He would also bring 

    Fruits and chocolates of various kinds

    And make me eat fondly

     

    Every morning

    He would offer me a cup of hot coffee

    With a kiss on my forehead

    And make my day….

    Even now

    The day whenever I menstruate

     He offers me 

    The same coffee, the same kiss

    And he does all that amazingly...

     

    He would keep the hot water ready

    And keep himself waiting eagerly

    To sponge off my back

    He would also dry my hair

    And keep them tied in a braid

    Besides, he would also keep

    A black spot on my cheeks

    So as to keep the evil spirits away

    In short, he celebrates

    My menstrual period

    As though he himself has menstruated

     

    Cooking along with me

    Is his daily routine anyway…

    But those three days in a month

    Kitchen’s responsibility will be of his entirely…

     

    Pressing my legs

    He recites the poems...

    And looking into my eyes

    He gives life to some words…

     

    For him who wants to while away

    The whole day in a chit-chat with me

    I myself only will have to

    Remind him of his office

    Eventually, he goes to the office reluctantly..

    But before it gets evening

    He will turn up in front of me

    With jasmines in his hands…

     

    These three days of menstruation

    I'm tired of spending them...

    But without letting me to feel

    The pinch of menstrual pain

    He would rather keep me happy by making

    Those moments awesome….

    Anyway, whenever I menstruate

    He will celebrate it

    Not secretly

    But as though

    He himself has menstruated

    Along with me

     

    From Kannada: Kaveri Das

    To English: Uday Itagi