Demo image Demo image Demo image Demo image Demo image Demo image Demo image Demo image

ಸಹವಾಸ ದೋಷ

 • ಮಂಗಳವಾರ, ಮೇ 12, 2009
 • ಬಿಸಿಲ ಹನಿ
 • ನನಗೆ ಆ ಕೊಳಕು ಜನರೆಂದರೆ ಇಷ್ಟವೇ ಇಲ್ಲ
  ಬೆರೆಯಲಾರೆ ನಾ ಆ ನೀಚರೊಂದಿಗೆ ಅವರಂತೆ
  ಮಾತು ಮಾತಿಗೂ ಆಣೆಯಿಡುತ್ತಾ ಶಪಿಸುತ್ತಾ
  ಹೊಲಸು ಮಾತಾಡುತ್ತಾ ಕಾದಾಡುವವರ ಜೊತೆ

  ನನ್ನ ಸಿಟ್ಟು ನೆತ್ತಿಗೇರಿ ನೆಮ್ಮದಿ ಕೆಡುವದರಿಂದ
  ಕೇಳಲಾರೆ ನಾ ಅವರಾಡುವ ಹೊಲಸು ಮಾತುಗಳನ್ನು
  ಹೊಲಸು ಮಾಡಿಕೊಳ್ಳಲಾರೆ ನನ್ನ ನಾಲಗೆಯನ್ನು
  ಅವರಂತೆ ಹೊಲಸು ಹೊಲಸು ಮಾತಾಡಿ

  ಮೂರ್ಖರ ಸಹವಾಸ ಮೂರ್ಖನನ್ನಾಗಿಸುವದರಿಂದ
  ಮಾಡಲಾರೆ ಅಂಥವರ ಸಹವಾಸವನ್ನು
  ಜಾಣರ ಸಹವಾಸ ಜಾಣನನ್ನಾಗಿ ಮಾಡುವದರಿಂದ
  ಹುಡುಕಿ ಹೊರಡುವೆನು ಅಂಥವರ ಗುಂಪೊಂದನ್ನು

  ಕಲಿಯುವರು ಒಬ್ಬನ ಗೇಲಿ ಮಾತುಗಳಿಂದ
  ಹತ್ತು ಜನ ಹತ್ತು ಗೇಲಿ ಮಾತುಗಳನ್ನು
  ಜಡ್ಡಾದ ಕುರಿಯೊಂದು ಇಡಿ ಮಂದೆಯನ್ನು ಕೆಡಿಸಿದಂತೆ
  ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು

  ಇಂಗ್ಲೀಷ ಮೂಲ: ಐಸಾಕ್ ವ್ಯಾಟ್ಸ್
  ಕನ್ನಡಕ್ಕೆ: ಉದಯ ಇಟಗಿ

  12 ಕಾಮೆಂಟ್‌(ಗಳು):

  ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

  ಉದಯ ಇಟಗಿ ಅವರೆ...
  ಚೆಂದವಿದೆ ಕವಿತೆ. ಸುಂದರವಾಗಿ ಕನ್ನಡಕ್ಕಿಳಿಸಿದ್ದೀರಿ.
  ಇಷ್ಟವಾಯಿತು.

  PARAANJAPE K.N. ಹೇಳಿದರು...

  ಉದಯಜೀ
  ಕವನ, ಅದರೊಳಗೆ ಅಡಗಿರುವ ನೀತಿ, ಕವನದ ಹರಿವಿನ ರೀತಿ - ತು೦ಬಾ ಚೆನ್ನಾಗಿದೆ.

  shivu.k ಹೇಳಿದರು...

  ಉದಯ್ ಸರ್,

  ಸೊಗಸಾದ ಅನುವಾದ. ನೀವು ಅದನ್ನು ಅನುವಾದಿಸಿದ್ದೀರಿ ಅಂತ ಗೊತ್ತಾಗೊಲ್ಲ...ನಿಮ್ಮದೇ ಶೈಲಿಯಲ್ಲಿ ಬರೆದಿದ್ದೀರಿ...

  ಮುಂದುವರಿಯಲಿ...ಧನ್ಯವಾದಗಳು

  sunaath ಹೇಳಿದರು...

  ಸುಂದರವಾದ ಕವನವನ್ನು ಸುಂದರವಾಗಿ ಅನುವಾದಿಸಿದ್ದೀರಿ.

  ಶಿವಪ್ರಕಾಶ್ ಹೇಳಿದರು...

  ತುಂಬಾ ಚನ್ನಾಗಿದೆ ಉದಯ್

  ಬಿಸಿಲ ಹನಿ ಹೇಳಿದರು...

  ಶಾಂತಲಾ ಭಂಡಿಯವರೆ,
  ಬಹಳ ದಿವಸಗಳ ನಂತರ ಭೇಟಿಕೊಟ್ಟಿರುವಿರಿ. ಇರಲಿ, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ತುಂಬಾ ಥ್ಯಾಂಕ್ಸ್.

  ಬಿಸಿಲ ಹನಿ ಹೇಳಿದರು...

  ಪರಾಂಜಪೆ ಸರ್. ಸುನಾಥ್ ಸರ್, ಶಿವು, ಹಾಗೂ ಶಿವಪ್ರಕಾಶ್‍ವರೆ,
  ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್!

  Unknown ಹೇಳಿದರು...

  ಉದಯ್
  ಮತ್ತೊಂದು ಚೆಂದದ ಕವಿತೆ ಕೊಟ್ಟಿದ್ದೀರಿ. ಬೆಳಿಗ್ಗೆ ಒಂದು ಒಳ್ಳೆಯ ಕವಿತೆ ಓದಿ ದಿನಚರಿ ಆರಂಬಿಸುವುದಕ್ಕೆ ಖುಷಿಯಾಗುತ್ತಿದೆ.

  Ittigecement ಹೇಳಿದರು...

  ಉದಯ್....

  ಎಷ್ಟು ಚಂದವಾಗಿ ಅನುವಾದಿಸಿದ್ದೀರಿ...

  ಇಷ್ಟವಾಯಿತು...

  ಇನ್ನಷ್ಟು ಕವನಗಳನ್ನು ಪರಿಚಯಿಸಿರಿ....

  ಅಭಿನಂದನೆಗಳು...

  ಬಿಸಿಲ ಹನಿ ಹೇಳಿದರು...

  ಸತ್ಯನಾರಾಯಣ ಸರ್, ಹಾಗೂ ಪ್ರಕಾಶ್ ಸರ್,
  ನಿಮ್ಮ ಪ್ರತಿಕ್ರಿಯೆಗೆ ಥಾಂಕ್ಸ್.

  Unknown ಹೇಳಿದರು...

  ಕವನ ಚೆನ್ನಾಗಿದೆ... ನಮ್ಮ ಕನ್ನಡದಲ್ಲೂ ಇಂಥ ಗಾದೆ ಮಾತಿಲ್ವೆ... ಮೂರ್ಖರ ಕೂಡೆ ಸ್ನೇಹಕ್ಕಿಂತ , ಪಂಡಿತರ ಕೂಡೆ ಜಗಳವೇ ಲೇಸು ಅಂತ... :-)

  ಬಿಸಿಲ ಹನಿ ಹೇಳಿದರು...

  ರವಿಕಾಂತವರೆ,
  ನೀವು ಹೇಳಿದ್ದು ಸರಿ. ಕನ್ನಡದಲ್ಲೂ ಈ ತರದ ಉಕ್ತಿಯಿದೆ. ಸಾಮಾನ್ಯವಾಗಿ ಜನಪ್ರಿಯ ಉಕ್ತಿಗಳು ಎಲ್ಲ ಭಾಷೆಗಳಲ್ಲೂ ಇವೆ ಎಂಬುದು ನನ್ನ ಅಭಿಪ್ರಾಯ. ನಿಮ್ಮ ಪ್ರತಿಕ್ರಿಯಿಗೆ ವಂದನೆಗಳು.