Demo image Demo image Demo image Demo image Demo image Demo image Demo image Demo image

Please procreate the human beings and send them to my hometown

  • ಗುರುವಾರ, ಅಕ್ಟೋಬರ್ 13, 2022
  • ಬಿಸಿಲ ಹನಿ
  • ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ಹೂವಿನ ಮೇಲೆ ಕೈಇಟ್ಟಾಗೆಲ್ಲಾ ಅಚಾನಕ್ಕಾಗಿ ಗೀರುವ ಮುಳ್ಳುಗಳು ಈಗೀಗ ನೋವನ್ನೀಯುವುದಿಲ್ಲ ನಿತ್ಯ ನರಕ ರ್ಶನ ಪಡೆಯುವ ಖಾಲಿ ಕಣ್ಣುಗಳಿಗೆ ಮುಳ್ಳು, ಹೂವಿನ ವ್ಯತ್ಯಾಸ ಗೊತ್ತಾಗುವುದಾದರೂ ಹೇಗೆ? ನನ್ನೂರಿನ ಬೀದಿಗಳು ಸಂಕೋಲೆ ತೊಡಿಸಿಕೊಂಡು ದಶಕಗಳೇ ಕಳೆಯಿತು ಈಗಿಲ್ಲಿ ಸದ್ದುಗಳಿರುವುದು ರ್ಮಗಳಿಗೆ ಮಾತ್ರ ಕಡ್ಡಿಯಿಂದ ಬೆಂಕಿ ಮತ್ತು ದೀಪ ಎರಡೂ ಹಚ್ಚಬಹುದು ಎನ್ನುವುದೆಲ್ಲಾ ಹಳೆಯ ಕ್ಲೀಷೆ ಇಲ್ಲಿ ತುರುಸಿನ ಸ್ರ್ಧೆಯಿರುವುದು ಬಡ ಅಮ್ಮಂದಿರ ಮಡಿಲು ಬರಿದುಗೊಳಿಸುವುದರಲ್ಲಿ ಮಾತ್ರ ಗದ್ದುಗೆಗೆ ಒಂದಾದರೂ ದಾರಿ ಬೇಡವೇ? ಬುದ್ಧಿವಂತರು, ವಿದ್ಯಾವಂತರುಗಳೆಂಬ ತಲೆಭಾರದ ಕಿರೀಟಗಳೆಲ್ಲಾ ಸಾಕು ದಯವಿಟ್ಟು ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು ದೇವಾ ಕನಿಷ್ಠಪಕ್ಷ, ನೆತ್ತರಿನ ಕಮಟು, ಬಣ್ಣ ಮೂಗು, ಕಣ್ಣೊಳಗೆ ಇಳಿಯದಂತೆ ಮಾಡು ಉಸಿರಿರುವಷ್ಟು ಕಾಲ ತಣ್ಣಗೆ ಬದುಕುತ್ತೇನೆ - ಫಾತಿಮಾ ರಲಿಯಾ ಹೆಜ್ಮಾಡಿ Please procreate the human beings and send them to my hometown Unexpectedly every time whenever I put my hand on the flower the scratching thorns will not hurt now The empty eyes which receive eternal hellish radiation daily can’t make out the difference between the thorn and the flower now Decades have passed since the streets of my hometown are shackled now there the sounds of religion only are heard Both fire and lamp can be lit from just a match stick but it is an old cliché now There is a heavy competition only in draining the poor mothers’ lap Don't you want at least one way to the throne? Tired of wearing the crowns of intelligent and educated Oh God, procreate the human beings and send them to my hometown At least, make the rancid blood and colour not to get into the nose and eyes so that I will live cold as long as I have breath From Kannada: Fathima Raliya Hejamady To English: Uday Itagi