In prison cells...
ಜೈಲಿನ ಕೋಣೆಗಳಲ್ಲಿ...
**
ಕೋಣೆ ಒ೦ದು :
ಈ ಕೋಣೆಯೊಳಗೆ ಒಂದು ಪುಸ್ತಕವಿತ್ತು.
ಕೇಳಿದೆ ನಾನು -
"ಏನಿದು ಕೋಣೆಯೊಳಗೆ ಪುಸ್ತಕ?
ಯಾರೋ ಕೈದಿ ಓದಿ ಮರೆತು ಹೋಗಿರಬೇಕು..”
ಜೈಲಧಿಕಾರಿ ಉತ್ತರಿಸಿದ -
"ಇಲ್ಲ.. ಈ ಪುಸ್ತಕ ಬರೆದ ಮಹಾನ್ ಸಾಹಿತಿಗೆ
ಆಯ್ಕೆ ಕೊಡಲಾಗಿತ್ತು -
’ಒಂದೋ ನೀನು ಜೈಲಲ್ಲಿರಬೇಕು
ಅಥವಾ ನೀನು ಬರೆದ ಈ ಪುಸ್ತಕ’
ಸಾಹಿತಿ ಪುಸ್ತಕವನ್ನು ನಮಗೆ ಒಪ್ಪಿಸಿದ
ನಿಮಗೂ ಗೊತ್ತಲ್ವಾ -
ಸಾಹಿತಿಗಳು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ”
**
ಕೋಣೆ ಎರಡು :
ಈ ಕೋಣೆಯೊಳಗೊಂದು ಪಂಜರ
ಅದರೊಳಗೊಂದು ಕಾಗೆ!
ಕೇಳಿದೆ ನಾನು -
“ಅರೆ ಈ ಕಾಗೆಯನ್ಯಾಕೆ ಬಂಧಿಸಿದ್ದೀರಿ?
ಯಾರನ್ನಾದರೂ ಕುಕ್ಕಿ ಕುಕ್ಕಿ ಕೊಲೆ ಮಾಡಿತೆ?”
ಜೈಲಧಿಕಾರಿ ಉತ್ತರಿಸಿದ -
“ಇಲ್ಲ, ನಮ್ಮ ನಾಯಕ ಸುಖದ ನಶೆಯಲ್ಲಿ ತೇಲುತ್ತಿದ್ದಾಗ
ತನ್ನ ಒಡೆದು ಹೋದ ಮೊಟ್ಟೆಗಾಗಿ
ಈ ಕಾಗೆ ಕರ್ಕಶವಾಗಿ ಕೂಗುತ್ತಿತ್ತು
ಅದಕ್ಕಾಗಿ ಬಂಧಿಸಿದ್ದೇವೆ...”
ನಿಮಗೀಗ ಅರ್ಥ ಆಗಿರಬಹುದು
ಈ ದುರಂತದ ಕಾಲದಲ್ಲೂ
ಊರಿನ ಕೋಗಿಲೆಗಳೆಲ್ಲಾ
ಏಕೆ ಇಷ್ಟೊಂದು ಮಧುರವಾಗಿ ಹಾಡುತ್ತಿವೆ ಎಂದು!
**
ಕೋಣೆ ಮೂರು :
ಈ ಕೋಣೆ ಇನ್ನೂ ವಿಚಿತ್ರ!
ಒಂದು ವೇಷಭೂಷಣವನ್ನು
ಹ್ಯಾಂಗರಿಗೆ ಜೋತು ಹಾಕಲಾಗಿತ್ತು
ಕೇಳಿದೆ ನಾನು -
“ಏನಿದರ ವಿಷಯ?”
ಜೈಲಧಿಕಾರಿ ಉತ್ತರಿಸಿದ -
"ನಮ್ಮ ನಾಯಕನ ಭಾಷಣದಲ್ಲಿ ದ್ವೇಷವಿದೆ
ಎಂದು ಯಾರೋ ದಾವೆ ಹೂಡಿದ್ದರು.
ನಮ್ಮ ಪರ ವಕೀಲ
’ಆ ಭಾಷಣವೆಲ್ಲಾ ಈ ವೇಷದ ಪ್ರಭಾವ.
ಆದ್ದರಿಂದ ಈ ವೇಷಕ್ಕಷ್ಟೆ ಶಿಕ್ಷೆಯಾಗಬೇಕು’
ಎಂದು ವಾದಿಸಿ ಗೆದ್ದಿದ್ದರಿಂದ
ಈ ವೇಷ ಈಗ ಶಿಕ್ಷೆಯನ್ನು ಅನುಭವಿಸುತ್ತಿದೆ!
**
ಕೋಣೆ ನಾಲ್ಕು :
ಈ ಕೋಣೆಯ ಗೋಡೆಯ ಮೇಲೆ
ಕೆಲವೊಂದು ಅಂಕೆ ಸಂಖ್ಯೆಗಳನ್ನು ಗೀಚಲಾಗಿತ್ತು.
ಕುತೂಹಲದಿಂದ ಕೇಳಿದೆ –
“ಏನಿದರ ಮರ್ಮ?”
ಜೈಲಧಿಕಾರಿ ಉತ್ತರಿಸಿದ -
“ಇವು ಬರೀ ಸಂಖ್ಯೆಗಳಲ್ಲ ಸಂವಿಧಾನದ ಕಲಮ್ಮುಗಳು
ನಿಮಗೆ ಗೊತ್ತಲ್ಲ..
ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧವೆಂದು.
ಅದಕ್ಕಾಗಿಯೇ ಜನರ ಕೈಗೆ ಸಿಗದಂತೆ
ಕೆಲವು ಕಾನೂನುಗಳನ್ನು ಬಂಧಿಸಿಟ್ಟಿದ್ದೇವೆ!"
**
ಕೊನೆಯ ಕೋಣೆ :
ಅರೆ ಈ ಕೋಣೆ ಖಾಲಿ!
ದಿಗ್ಭ್ರಮೆಯಿಂದ ಕೇಳಿದೆ ನಾನು -
"ಈ ಕೋಣೆಯಲ್ಲಿರಬೇಕಿದ್ದ
ಅತಿ ಕ್ರೂರಿ ಕೊಲೆಗಡುಕ ಅಪರಾಧಿ ಎಲ್ಲಿ?”
ಜೈಲಧಿಕಾರಿ ನಗುತ್ತಾ ಉತ್ತರಿಸಿದ -
“ನಿನಗೆ ಗೊತ್ತಿಲ್ವಾ?
ಅವನು ಈಗಗಲೇ ಬಿಡುಗಡೆಗೊಂಡು
ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿದ್ದಾನೆ..
ನೀನು ಆತನನ್ನು ಜೈಲೊಳಗೆ ಹುಡುಕಿ ಬಂದ ಈ ಹೊತ್ತು
ಆತ ಮತಕ್ಕಾಗಿ ನಿನ್ನ ಮನೆಯ ಬಾಗಿಲು ತಟ್ಟುತ್ತಿರಬಹುದು..
***
ವಿಲ್ಸನ್ ಕಟೀಲ್
In prison cells...
***
Cell one:
A book was lying inside the room
I asked -
"Why is this book lying over here?
Some prisoner must have read and forgotten to take it with him.”
The jailer replied –
"No. To the great writer who wrote this book
A choice was given –
You should either be in jail
Or this book you wrote”
The writer handed over this book to us
You know very well
‘Litterateur always likes freedom.’
***
Cell two:
Inside this room there is a cage
And a crow in it!
I asked -
“Why did you put this crow over here?
Has it murdered someone?”
The jailer replied –
“No, when our leader was floating in the intoxication of happiness
This crow was crowing hoarsely
For its cracked egg
So it was arrested...”
You may have understood now
Why are the cuckoos in the town
Singing so sweetly even in this bad time!
***
Cell three:
This cell is still strange!
A dress was hung on a hanger
I asked -
"What’s the news about this dress?"
The jailer replied –
"There was hatred in our leader's speech
And someone had filed a case against him.
Our lawyer advocated
‘All that speech is because of the influence of this dress. So it should be punished”
Just because he argued and won the case
This costume is now being punished.
***
Cell four:
On the wall of this cell
Some numbers were scratched.
I curiously asked –
"What is the secret of this?"
The jailer replied –
“These are not just numbers but articles of the constitution.
You know that
Taking the law into one's hands is a crime.
So only we have jailed some laws over here
To ensure that they are not reachable for the common people!"
***
Last cell:
Oh, this room is empty!
Bewildered I asked -
“Where is the most brutal murderous criminal who was supposed to be in this cell?”
The jailer smiled and replied -
“You know?
He is now released
He is currently in the election campaign.
The time when you come to find him in the prison
He might be knocking on your door for votes.”
***
From Kannada: Wilson Kateel
To English: Uday Itagi
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Facebook Badge
ಭೇಟಿ ಕೊಟ್ಟವರು
ಒಟ್ಟು ಪುಟವೀಕ್ಷಣೆಗಳು
ನನ್ನ ಬಗ್ಗೆ
- ಬಿಸಿಲ ಹನಿ
- ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು “ಕೆಂಡಸಂಪಿಗೆ” ಸೇರಿದಂತೆ ಬೇರೆ ಬೇರೆ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಕೆಲವು ಅನುವಾದಿತ ಕಥೆಗಳು “ಉದಯವಾಣಿ”ಯಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
“ಕೆಂಡಸಂಪಿಗೆ”ಯಲ್ಲಿ ನನ್ನ ಬ್ಲಾಗ್ ಬಗ್ಗೆ
ಜಿತೇಂದ್ರ
ಶನಿವಾರ, 7 ಫೆಬ್ರವರಿ 2009 (06:24 IST)
ಉದಯ್ ಬರೆಯುವ ಬಿಸಿಲ ಹನಿ
ಕ್ಲಾಸ್ ರೂಮಿನಲ್ಲಿ ಡಾಕ್ಟರ್ ಇದ್ದಾರೆಯೆ? ಹಾಗಂತ ಪ್ರಶ್ನೆ ಹಾಕುತ್ತಿದ್ದಾರೆ ಉದಯ್ ಇಟಗಿ. ಈ ಡಾಕ್ಟರ್ ಅಂದರೆ ವೈದ್ಯರಲ್ಲ , ಪಿಎಚ್ ಡಿ ಪದವೀಧರರು. ಕೇವಲ ಇಂತಹದ್ದೊಂದು ಪದವಿ ಇಟ್ಟುಕೊಂಡು ಮೆರೆಯುತ್ತಿರುವ ಕೆಲ ಅಧ್ಯಾಪಕರು ಹಾಗು ಈ ಪದವಿಯ ವಿಚಾರವೇ ಅಧ್ಯಾಪಕರ ನಡುವೆ ಅಡ್ಡಗೋಡೆಯಾಗುತ್ತಿರುವ ವಿಚಾರವನ್ನ ವಿಶ್ಲೇಷಿಸಿ ಬರೆದಿದ್ದಾರೆ ಉದಯ್. ಸ್ವತಃ ಅಧ್ಯಾಪಕರಾಗಿರುವ ಅವರು, ತಮ್ಮೀ ಅನುಭವವನ್ನೇ ಉದಾಹರಣೆಯಾಗಿಟ್ಟುಕೊಂಡು ಎಲ್ಲವನ್ನೂ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಲಿಬಿಯಾ ದೇಶದ ವಿಶ್ವವಿದ್ಯಾಲಯವೊಂದರಲ್ಲಿ ಉದ್ಯೋಗದಲ್ಲಿರುವ ಉದಯ್, ದೂರ ದೇಶದಿಂದ ಬ್ಲಾಗಿಸುತ್ತಿದ್ದಾರೆ. ಬಿಸಿಲಹನಿ ಅವರ ಬ್ಲಾಗ್ ಹೆಸರು. "ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ. ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು. ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ. ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ, ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ. ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ. ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ. ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು. ನೆನಪಿರಲಿ, ಬಿಸಿಲು ಕೊನೆಯಾದರೆ ಭೂಮಿ ಕೊನೆ. ಭೂಮಿ ಕೊನೆಯಾದರೆ ಮಾನವ ಕೊನೆ." ಇದು ತಮ್ಮೀ ಬ್ಲಾಗಿನ ಬಗ್ಗೆ ಬರೆದುಕೊಂಡ ಮಾತುಗಳು. ಉದಯ್ ತಮ್ಮ ಅನುಭವ, ನೆನಪು-ನೇವರಿಕೆಗಳನ್ನೇ
ಮೂಲವಾಗಿಟ್ಟುಕೊಂಡು ಒಂದಿಷ್ಟು ಲೇಖನ ಬರೆದಿದ್ದಾರೆ. ಜೊತೆಗೆ ಓದತಕ್ಕ ಅನುವಾದಗಳಿವೆ. ಒಟ್ಟಾರೆ, ಇಲ್ಲಿ ಎಲ್ಲ ತರಹದ ಹನಿಗಳೂ ಇವೆ. ಒಮ್ಮೆ ಓದ ಬನ್ನಿ.
ಅನುಚರರು
ಬಿಸಿಲಹನಿ ಕಲರವ
ಕನ್ನಡ ಬ್ಲಾಗರ್ಸ್
ಬಿಸಿಲು, ಮಳೆ,ಗಾಳಿಗಳ ಆಲಾಪ
-
-
ಪುಸ್ತಕ ಬಿಡುಗಡೆ -ಮುಚ್ಚಿಟ್ಟ ಕರ್ನಾಟಕ ಚರಿತ್ರೆ1 ದಿನದ ಹಿಂದೆ
-
ನಿಮ್ಮ ಕವಿತೆಗೆ ʼಬಹುಮಾನʼ ಗೆಲ್ಲುವ ಅವಕಾಶ...4 ವಾರಗಳ ಹಿಂದೆ
-
ಕನ್ನಡ ಸಾರಸ್ವತ ಲೋಕಕ್ಕೊಂದು ಹೊಸ ಓದು1 ತಿಂಗಳ ಹಿಂದೆ
-
ಬಿಟ್ಟುಹೋದ ಚಪ್ಪಲಿ1 ತಿಂಗಳ ಹಿಂದೆ
-
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ4 ತಿಂಗಳುಗಳ ಹಿಂದೆ
-
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ7 ತಿಂಗಳುಗಳ ಹಿಂದೆ
-
-
ಹೊಸವರ್ಷದ ಶುಭಾಶಯಗಳು10 ತಿಂಗಳುಗಳ ಹಿಂದೆ
-
-
ಗಿಳಿಯು ಮಾತನಾಡುವುದಿಲ್ಲ!1 ವರ್ಷದ ಹಿಂದೆ
-
ನಿನ್ನೆದೆಯ ತಂತಿಯ1 ವರ್ಷದ ಹಿಂದೆ
-
ಭಕ್ತಿ: ಭವಸಾಗರ ಪಾರು ಮಾಡುವ ನೌಕೆ2 ವರ್ಷಗಳ ಹಿಂದೆ
-
-
Pic by Hengki Lee3 ವರ್ಷಗಳ ಹಿಂದೆ
-
ದಡ್ಡ - ಬುದ್ದಿವಂತ3 ವರ್ಷಗಳ ಹಿಂದೆ
-
-
ದೂರ ‘ತೀರದ ‘ ಯಾನ!!!4 ವರ್ಷಗಳ ಹಿಂದೆ
-
ಉಲ್ಲಾಳ್ದಿ4 ವರ್ಷಗಳ ಹಿಂದೆ
-
Resume4 ವರ್ಷಗಳ ಹಿಂದೆ
-
ಮೊದಲ ರಾತ್ರಿಯ ಅನುಭವ!4 ವರ್ಷಗಳ ಹಿಂದೆ
-
ಸಾತ್ವಿಕರು ಎಲ್ಲಿಗೆ ಹೋಗಬೇಕು?4 ವರ್ಷಗಳ ಹಿಂದೆ
-
’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?5 ವರ್ಷಗಳ ಹಿಂದೆ
-
ಮೈಸೂರಿನಲ್ಲಿ ನವೆಂಬರ್ 10 ರಂದು ಬಿಡುಗಡೆ5 ವರ್ಷಗಳ ಹಿಂದೆ
-
-
-
ಒಂದು ಮಡಚಿಟ್ಟ ಪುಟ : Draft Mail – 56 ವರ್ಷಗಳ ಹಿಂದೆ
-
ಹದಿನೆಂಟನೇ ಶಿಬಿರ ಮುಂದೂಡಿಕೆ6 ವರ್ಷಗಳ ಹಿಂದೆ
-
ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ6 ವರ್ಷಗಳ ಹಿಂದೆ
-
-
ಸುಮ್ನೆ ತಮಾಷೆಗೆ -೮7 ವರ್ಷಗಳ ಹಿಂದೆ
-
-
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ7 ವರ್ಷಗಳ ಹಿಂದೆ
-
ಹಾಗೆ ಹೋದ ಜೀವವೇ ಹೇಳು ಬಂದ ಕಾರಣ7 ವರ್ಷಗಳ ಹಿಂದೆ
-
ಅನುಸಂಧಾನ-೪7 ವರ್ಷಗಳ ಹಿಂದೆ
-
-
-
ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ8 ವರ್ಷಗಳ ಹಿಂದೆ
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:8 ವರ್ಷಗಳ ಹಿಂದೆ
-
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ9 ವರ್ಷಗಳ ಹಿಂದೆ
-
ಕತ್ತಲೆ.................9 ವರ್ಷಗಳ ಹಿಂದೆ
-
ಮಳಿ ಬರದ ಚಿತ್ರಗಳು..9 ವರ್ಷಗಳ ಹಿಂದೆ
-
ಆಟೋ ಮಹಾತ್ಮೆ9 ವರ್ಷಗಳ ಹಿಂದೆ
-
-
ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!9 ವರ್ಷಗಳ ಹಿಂದೆ
-
-
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...10 ವರ್ಷಗಳ ಹಿಂದೆ
-
ಗಾಜಿನ ಲೋಟದಲ್ಲಿ ರಸ್ನಾ10 ವರ್ಷಗಳ ಹಿಂದೆ
-
ಕಾಡುವಂಥ ಸ್ವಪ್ನ ಸಾಕೇ10 ವರ್ಷಗಳ ಹಿಂದೆ
-
-
ಮೇಲೂರಿನ ಅಪ್ಪಟ ಕನ್ನಡ ಪ್ರೇಮ11 ವರ್ಷಗಳ ಹಿಂದೆ
-
ಜೀವನ ಮತ್ತು ತೂಕ11 ವರ್ಷಗಳ ಹಿಂದೆ
-
ನಿಮ್ಮ ಆನ್ಲೈನ್ ವ್ಯವಹಾರ ಹೆಚ್ಚಿಸಿಕೊಳ್ಳುವುದು ಹೇಗೆ?11 ವರ್ಷಗಳ ಹಿಂದೆ
-
-
ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ11 ವರ್ಷಗಳ ಹಿಂದೆ
-
ಸ್ವ ಸಹಾಯ ಪುಸ್ತಕಗಳು11 ವರ್ಷಗಳ ಹಿಂದೆ
-
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ12 ವರ್ಷಗಳ ಹಿಂದೆ
-
-
ಗಣಕಿಂಡಿ - ೧೬೩ (ಜುಲೈ ೦೨, ೨೦೧೨)12 ವರ್ಷಗಳ ಹಿಂದೆ
-
(ಮಹಿಳಾ)ವಾದ:12 ವರ್ಷಗಳ ಹಿಂದೆ
-
-
ಬಾಜೀ ರಾವತ್ ಎ೦ಬ ಧೀರ ತರುಣ12 ವರ್ಷಗಳ ಹಿಂದೆ
-
ಒಂದು ಲೋಟ ಹಾಲು ಮತ್ತು…12 ವರ್ಷಗಳ ಹಿಂದೆ
-
ಕೂರ್ಮಾವತಾರ ವಿಮರ್ಶೆ12 ವರ್ಷಗಳ ಹಿಂದೆ
-
ಬೆಳಕು ಕಂಡ ಆ ಕ್ಷಣದಲಿ...12 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ13 ವರ್ಷಗಳ ಹಿಂದೆ
-
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್13 ವರ್ಷಗಳ ಹಿಂದೆ
-
ಕಫನ್13 ವರ್ಷಗಳ ಹಿಂದೆ
-
ಜೋಗಿ ಪುಸ್ತಕ ಬಿಡುಗಡೆಯ ಹೊತ್ತು …13 ವರ್ಷಗಳ ಹಿಂದೆ
-
ನನ್ನ ಜಡೆ13 ವರ್ಷಗಳ ಹಿಂದೆ
-
ಕೇಳಿ-೫14 ವರ್ಷಗಳ ಹಿಂದೆ
-
ಹೊವಿನಂತ ಹುಡುಗ ನಾನು ತುಂಬ ಮೃದು14 ವರ್ಷಗಳ ಹಿಂದೆ
-
ಊರಿನ ಕೃಷಿಗೆ ಊರಿನದೇ ನೀರು, ಅಲ್ಲೇ ಕಟ್ಟಿದ ಜಲಸೂರು14 ವರ್ಷಗಳ ಹಿಂದೆ
-
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದೊಳು...14 ವರ್ಷಗಳ ಹಿಂದೆ
-
ಅಳಿಯಲಾರದ ನೆನಹು: ೧14 ವರ್ಷಗಳ ಹಿಂದೆ
-
ನಿಮ್ಮೊಳಗಿದ್ದೂ ನಿಮ್ಮಂತಾಗದೇ14 ವರ್ಷಗಳ ಹಿಂದೆ
-
ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ15 ವರ್ಷಗಳ ಹಿಂದೆ
-
-
ಕ್ಯಾಲೆಂಡರ್ ಮೇಲಿನ ಗುರುತುಗಳು15 ವರ್ಷಗಳ ಹಿಂದೆ
-
-
ಕೆಲವು ಪ್ರಶ್ನೆಗಳು15 ವರ್ಷಗಳ ಹಿಂದೆ
-
ಏನ ಹೇಳಲಿ ನಾನು?15 ವರ್ಷಗಳ ಹಿಂದೆ
-
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !15 ವರ್ಷಗಳ ಹಿಂದೆ
-
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...17 ವರ್ಷಗಳ ಹಿಂದೆ
-
ನನ್ನ ವಿಹಾರ
ಪ್ರಚಲಿತ ಪೋಸ್ಟ್ಗಳು
- Dr. G. S. Shivarudrappa's poem in my English translation...
- ಕೋಲಾರದ ನನ್ನ ಆತ್ಮೀಯ ಬರಹಗಾರ ಮಿತ್ರ ಮತ್ತು ಕೇಂದ್ರ ಯುವ ಸಾಹಿತ್ಯ ಅಕ್ಯಾಡೆಮಿ ವಿಜೇತ ಆನಂದ ಲಕ್ಕೂರಗೆ ಒಂದು ನುಡಿನಮನ.
- ಪ್ರೀತಿ ಈ ದಿನಗಳಲ್ಲಿ ಹೇಗೆ ಸಾಯುತ್ತದೆ?
- The verse she wrote...
- Whore!
- ಲಿಬಿಯಾ ತಪ್ಪಿದ್ದೆಲ್ಲಿ? ತಪ್ಪಿದ್ದಕ್ಕೆ ಪರಿಹಾರವಿದೆಯೇ?
- In prison cells...
- Chethana Teerthahalli's Poem in my English Translation...
- ಪ್ರೀತಿಗಿಂತ ಬದುಕು ದೊಡ್ದದು ಕಣೇ.....................!
- ಗಿರೀಶ ಹಂದಲಗೆರೆಯವರ ಹಾಡು ನನ್ನ ಸಬ್ ಟೈಟಲ್ಸನೊಂದಿಗೆ.....
ಉತ್ತರ ಕರ್ನಾಟಕ ಆಹಾರ ಮಳಿಗೆಗಳು
1.ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. 2.ಉತ್ತರ ಕರ್ನಾಟಕ ಆಹಾರ ಮಳಿಗೆ, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ 3.ಮಿಶ್ರಾ ಪೇಡಾದ ರೊಟ್ಟಿ ಮೆಸ್ಸು, ಎನ್ನಾರ್ ಕಾಲನಿ ಬಸ್ ನಿಲ್ದಾಣದ ಹತ್ತಿರ. (ಇದೊಂದು no-frill ಖಾನಾವಳಿ) 4.ಉತ್ತರ ಕರ್ನಾಟಕ ಆಹಾರ ಮಳಿಗೆ,ವಿ.ವಿ.ಪುರ (9900554361) 5.ಕಾಮತ ಬ್ಯೂಗಲ್ ರಾಕ್, ಬಸವನಗುಡಿ (ಬಿಎಮ್ಮೆಸ್ ಇಂಜನೀಯರಿಂಗ್ ಕಾಲೇಜಿನ ಹತ್ತಿರ) (080-26605734) 6.ಕಾಮತ ಮಿನರ್ವ , ಮಿನರ್ವ ವೃತ್ತ, ಜೆಸಿ ರಸ್ತೆ. 7.ನಮ್ಮೂರ ಹೋಟೆಲ್, ಮಾರೇನಹಳ್ಳಿ, ಜೇಪಿ ನಗರ ( ಇಲ್ಲಿ ಕಡಕ ರೊಟ್ಟಿಗಳು ಮಾತ್ರ ಸಿಗುತ್ತವೆ.) 8.ಉತ್ತರ ಕರ್ನಾಟಕ ಆಹಾರ ಮಳಿಗೆ,ಜಯನಗರ ೯ನೇ ಬ್ಲಾಕ (9986388278,9901439994) 9.ಉತ್ತರ ಕರ್ನಾಟಕ ಆಹಾರ ಮಳಿಗೆ,ಕೋರಮಂಗಲ ಚೈನಾ ಪರ್ಲ್-ವಿಜಯಾ ಬ್ಯಾಂಕ್ ಹತ್ತಿರ (ಫೊನ್ ನಂ : 9448261201) 10.ಅನ್ನಪೂರ್ಣ ಮೆಸ್ಸ್, 7ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಮಾರುತಿ ನಗರ, ಮಡಿವಾಳ (ಇದೊಂದು no-frill ಖಾನಾವಳಿ, ಫೊನ್ ನಂ 9986193650 11.ಕಾಮತ ಲೋಕರುಚಿ, ಜಾನಪದ ಲೋಕದ ಹತ್ತಿರ, ರಾಮನಗರ, ಮೈಸೂರು ರಸ್ತೆ. 12.ಉತ್ತರ ಕರ್ನಾಟಕ ಆಹಾರ ಮಳಿಗೆ, #496, 54ನೇ ಅಡ್ಡ ರಸ್ತೆ ಭಾಶ್ಯಂ ವೃತ್ತದ ಹತ್ತಿರ, ರಾಜಾಜಿ ನಗರ (ಫೋನ್ ನಂ: 23209840,9448261201,23236236 ) ಕೆಳಗಿನ 8 ಮಳಿಗೆಗಳು ಇವರವೇ ಶಾಖೆಗಳು 13.ನಿಸರ್ಗ, 1197, 5ನೇ ಬ್ಲಾಕ್ , ೧೮ ನೇ ಮುಖ್ಯರಸ್ತೆ, ಧೋಬಿ ಘಾಟ್,ರಾಜಾಜಿನಗರ.(ಫೊನ್ ನಂ: 9448542268 ) 14.ನಳಪಾಕ, ನವರಂಗ ವೃತ್ತದ ಹತ್ತಿರ, ರಾಜಾಜಿ ನಗರ. 15.ಉತ್ತರ ಕರ್ನಾಟಕ ಆಹಾರ ಮಳಿಗೆ, ವಿಜಯ ನಗರ (9845369642) 16.ಉತ್ತರ ಕರ್ನಾಟಕ ಆಹಾರ ಮಳಿಗೆ, #೨೭೩, ೩ನೆ ಸ್ಟೇಜ್ ೩ನೇ ಬ್ಲಾಕ್, ೫ನೇ ಮೆನ್, ಬಸವೇಶ್ವರ ನಗರ.(9741189392) 17.ಉತ್ತರ ಕರ್ನಾಟಕ ಆಹಾರ ಮಳಿಗೆ, ಮಲ್ಲೇಶ್ವರ (9900938365) 18.ಉತ್ತರ ಕರ್ನಾಟಕ ಆಹಾರ ಮಳಿಗೆ,ಆರ್.ಟಿ. ನಗರ (9880733220) 19.ಕಾಮತ ಯಾತ್ರಿನಿವಾಸ, ಗಾಂಧಿ ನಗರ(080-26703813) 20.ವಿಜಯ್ ದರ್ಶನಿ(??) ಸ್ಟೇಟ್ಸ್ ಚಿತ್ರಮಂದಿರದ ಹತ್ತಿರ, ಕೆಂಪೇಗೌಡ ರಸ್ತೆ, ಗಾಂಧಿನಗರ. 21.ಪೈ ವಿಹಾರ್, ಆನಂದರಾವ್ ವೃತ್ತ 22.ಪಾಟೀಲ್ ಎಂಬ ವ್ಯಕ್ತಿಯೊಬ್ಬರು (ಫೊನ್ ನಂ 9986271116) ಜೋಳದ ರೊಟ್ಟಿಗಳನ್ನು ಮನೆ-ಮನೆಗೆ ಒದಗಿಸುತ್ತಾರಂತೆ. 23.ಗದಿಗೆಪ್ಪ ಅನ್ನಪೂರ್ಣ ಜೋಳದ ರೊಟ್ಟಿ ಖಾನಾವಳಿ, ಆನಂದರಾವ್ ವೃತ್ತ
Pages
Labels
ಕನ್ನಡ ಡಿಕ್ಷನರಿ
Blogger ನಿಂದ ಸಾಮರ್ಥ್ಯಹೊಂದಿದೆ.
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ