Demo image Demo image Demo image Demo image Demo image Demo image Demo image Demo image

ಇರಾಕಿ ಕವನ

  • ಬುಧವಾರ, ಸೆಪ್ಟೆಂಬರ್ 11, 2019
  • ಬಿಸಿಲ ಹನಿ
  • ಒಮರ್ ಆಲ್-ಜಫಲ್ ಒಬ್ಬ ಇರಾಕಿ ಕವಿ ಮತ್ತು ಪತ್ರಕರ್ತ. ಈತ ಈಗಾಗಲೇ 2009 ಮತ್ತು 2016 ರಲ್ಲಿ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾನೆ. ಈತ ಸದ್ದಾಂ ಹುಸೇನ್ ನಂತರದ ಇರಾಕಿನ ವಸ್ತುಸ್ಥಿತಿಯನ್ನು ಕಟ್ಟಿಕೊಡುತ್ತಾನೆ. ಅದಕ್ಕೆ ಕೆಳಗಿನ ಕವನವೇ ಸಾಕ್ಷಿ, ಇದು ಬರೀ ಸಧ್ಯದ ಇರಾಕಿನ ಸ್ಥಿತಿಯನ್ನು ಮಾತ್ರ ಹೇಳುತ್ತಿಲ್ಲ. ಲಿಬಿಯಾ, ಈಜಿಪ್ಟ್, ಇನ್ನೂ ಮುಂತಾದ ದೇಶಗಳಲ್ಲಿನ ವಾಸ್ತು ಚಿತ್ರಣವನ್ನು ಹೇಳುತ್ತದೆ.. 

    ಅವರು
    ನಗರದ ಮಧ್ಯಭಾಗದಲ್ಲಿದ್ದ
    ಸರ್ವಾಧಿಕಾರಿಯ ಮೂರ್ತಿಯನ್ನು
    ಕಿತ್ತೆಸೆದರು
    ಆದರೆ ಇದೀಗ ಅಲ್ಲಿ
    ಅವರೆಲ್ಲರ ಮೂರ್ತಿಗಳು ಸ್ಥಾಪನೆಯಾಗಿವೆ.
    ಮೂಲ ಅರೇಬಿ: ಓಮರ್ ಆಲ್-ಜಫಲ್ (ಇರಾಕಿ ಕವಿ)
    ಇಂಗ್ಲೀಷಿಗೆ: ಜಾವದ್ ವಾದಿ
    ಕನ್ನಡಕ್ಕೆ: ಉದಯ್ ಇಟಗಿ