Demo image Demo image Demo image Demo image Demo image Demo image Demo image Demo image

ನನ್ನ’ಲಿಬಿಯಾ ಡೈರಿ’ ಕುರಿತು ಖ್ಯಾತ ವಿಮರ್ಶಕಿ ಡಾ. ಮಂಗಳಾ ಪ್ರಿಯದರ್ಶಿನಿ ಮೇಡಮ್ ಬರೆದ ಪತ್ರ

  • ಬುಧವಾರ, ಏಪ್ರಿಲ್ 08, 2020
  • ಬಿಸಿಲ ಹನಿ
  • ಸನ್ಮಾನ್ಯ ಇಟಗಿಯವರೇ,
     ನೀವು ಪ್ರೀತಿಯಿಂದ ಕಳಿಸಿದ ನಿಮ್ಮ ಕೃತಿ ಲಿಬಿಯಾ ಡೈರಿ ನನ್ನ ಕೈ ಸೇರಿ ತಿಂಗಳ ಮೇಲಾದರೂ ನನ್ನಿಂದ ಪ್ರತಿಕ್ರಿಯೆ ಬಾರದಿರುವುದಕ್ಕೆ ನಿಮಗೆ ಬೇಸರವಿರಬಹುದು ದಯಮಾಡಿ ಕ್ಷಮಿಸಿ. ನನ್ನದೇ ಆದ ಕಾರ್ಯ ವರ್ತುಲದೊಳಗೆ ನಾನು ಬಂಧಿಯಾಗಿದ್ದರಿಂದ ಈ ತಡೆ .
    ನಿಮ್ಮ ಪುಸ್ತಕವನ್ನು ಕೈಗೆ ಹಿಡಿದ ಕೆಲವೇ ಗಂಟೆಗಳಲ್ಲಿ ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಕೆಳಗಿಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶವೇ ನೀಡದಂತೆ ಹಠ ಮಾಡಿ ಓದಿಸಿಕೊಳ್ಳುವ ಗುಣ ಖಂಡಿತ ನಿಮ್ಮ ಕೃತಿಗಿದೆ. ಕಾಲುಜ್ಜಿಹಠ ಮಾಡಿ ತನಗೆ ಬೇಕಾದುದನ್ನು ಪಡೆವ ಮಗುವಿನಂತ ಗುಣ ನಿಮ್ಮ ಕೃತಿಗೆ ಮತ್ತು ಅದರ ವಿಚಾರಗಳಿಗೆ ಇದೆ. 
    ನನಗೇಕೆ ನಿಮ್ಮ ಕೃತಿಯ ನಾಯಕ ಮಹಮ್ಮದ್ ಗಡಾಫಿಯ ಬಗೆಗೆ ಅಷ್ಟೊಂದು ಕುತೂಹಲ ಎಂದರೆ  ಅವನ ರಾಜಕೀಯ ಕರ್ತೃತ್ವ ಶಕ್ತಿ , ಅವನು ಪಾಲಿಸಿದ ಆರ್ಥಿಕ ನೀತಿ, ಆಫ್ರಿಕನ್ ಸಮುದಾಯವನ್ನೇ ಒಗ್ಗೂಡಿಸಬೇಕೆಂಬ ಆತನ ಮಹತ್ವದ ಹಂಬಲ ಹಾಗೂ ನೆರೆ ರಾಷ್ಟ್ರಗಳೊಂದಿಗೆ ಕಾಯ್ದುಕೊಂಡ ಸಂಬಂಧಗಳು, ಜೊತೆಗೆ ಆತನ ರಾಷ್ಟ್ರಗಳಾದ ತಾಂಜಾನಿಯಾ, ಉಗಾಂಡಾ, ರುವಾಂಡಾ ದೇಶಗಳಲ್ಲಿ ನಿರ್ಮಿಸಿರುವ ಬೃಹತ್ ಮಸೀದಿಗಳ ಕಾರಣದಿಂದ. ನಾನು ಇವುಗಳನ್ನು ಕಣ್ಣಾರೆ ಕಂಡು, ಆ ದೇಶದ ಜನತೆ ಆತನ ಬಗ್ಗೆ ಹೇಳುವ ಮಾತುಗಳ ಕಾರಣದಿಂದ.  
    ನಾನು ಪೂರ್ವ ಆಫ್ರಿಕಾದ ಅನೇಕ ರಾಷ್ಟ್ರಗಳನ್ನು ನೋಡಿದ್ದೇನೆ. ಅದರಲ್ಲೂ ಉಗಾಂಡಾ, ರುವಾಂಡಾ ದೇಶಗಳಲ್ಲಿ ಕೆಲವು ಕಾಲ ವಾಸ ಮಾಡಿದ್ದೇನೆ. ಆ ಜನಗಳ ಬದುಕಿನಲ್ಲಿ ಕೆಲ ಕಾಲ ಸಂಪರ್ಕವನ್ನು ಹೊಂದಿದ್ದೇನೆ. ಮುಖ್ಯವಾಗಿ ನಾನು ಕಂಡಂತೆ ಗಡಾಫಿ ತಾಂಜಾನಿಯಾ, ಉಗಾಂಡಾ, ರುವಾಂಡಾ ದೇಶಗಳಲ್ಲಿಯೂ ಜನಪ್ರಿಯ ಧರ್ಮವೊಂದೇ ತಮ್ಮನ್ನೆಲ್ಲ ಬೆಸೆಯುವ ಸಾಧನ ಎಂದು ಭಾವಿಸಿದ್ದರಿಂದ ತನ್ನ ನೆರೆ ರಾಷ್ಟ್ರಗಳಲ್ಲಿ ಧರ್ಮ ಸಂಘಟನೆ ಮಾಡಲೆಂದೇ ಈ ಮೂರೂ ದೇಶಗಳಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾನೆ.

    ಈ ದೇಶಗಳು ಅವು ತಮಗೆ ನೀಡಿದ ಅತ್ಯಮೂಲ್ಯ ಕಾಣಿಕೆಗಳು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ. ನನಗೆ ಈ ಮೂರೂ ಮಸೀದಿಗಳನ್ನು ನೋಡುವ ಅವಕಾಶ ಒದಗಿತ್ತು.
    ತಾಂಜಾನಿಯಾದ ರಾಜಧಾನಿ ದೊಡಾಮವಲ್ಲಿರುವ ನ್ಯಾಷನಲ್ ಮಾಸ್ಕ್ ತಾನ್ಜಾನಿಯ ದೇಶದ ಅತಿದೊಡ್ಡ ಮಸೀದಿ. ಹಾಗೇ ಇದು ಪೂರ್ವ ಆಫ್ರಿಕಾ ದೇಶದ ಎರಡನೇ ಅತಿದೊಡ್ಡ ಮಸೀದಿ. ಸುಮಾರು ಮೂರು ಸಾವಿರ ಜನ ಏಕಕಾಲದಲ್ಲಿ ಪ್ರಾರ್ಥಿಸುವ ಸ್ಥಳಾವಕಾಶವಿದೆ ಇದನ್ನು 2010ರಲ್ಲಿ ಗಡಾಫಿ ತನ್ನ ದೇಶದ ಜನತೆಗೆ ಇಸ್ಲಾಂ ಧರ್ಮದ ಕಾಣಿಕೆಯಾಗಿ ನೀಡಿದ. ಇದರ ಬಗ್ಗೆ ನನ್ನ ತಾಂಜಾನಿಯ ಪ್ರವಾಸ ಕಥನದಲ್ಲಿ ಹೇಳಿದ್ದೇನೆ. ತಾಂಜಾನಿಯಾ ದೇಶಭಾಷೆಯಾದ ಸ್ವಹೇಲಿಯಲ್ಲಿ ಇದನ್ನು Mskite Wa Gaddffi ಎಂದು ಕರೆಯಲಾಗಿದೆ. ಇದು ಹಾಲು ಬಣ್ಣದ ಮಿನಾರುಗಳನ್ನೊಳಗೊಂಡ ಇಸ್ಲಾಂ ಧರ್ಮ ಸ್ಮಾರಕವೂ ಆಗಿದೆ.
    ಇನ್ನು ಗಡಾಫಿ ಉಗಾಂಡಾದ ಪೂರ್ವ ಆಫ್ರಿಕಾ ದೇಶದ ಅತ್ಯಂತ ದೊಡ್ಡ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ, ಇದು ರಾಜಧಾನಿ ಕೆಂಪಾಲದ ಬೆಟ್ಟದ ಮೇಲೆ ಇದೆ, ಇದರ ವಾಸ್ತು ಶೈಲಿಯಂತೂ ಅಭೂತಪೂರ್ವಬಾದುದು. ಕೆಂಪಾಲದ ಅತಿ ಮಖ್ಯ ಹಾಗೂ ಪ್ರಶಸ್ತ ಜಾಗದಲ್ಲಿರುವಂತದು. 2006 ರಲ್ಲಿ ನಿರ್ಮಾಣಗೊಂಡ ಮಸೀದಿಗೆ ಕಾರಣವಾದದ್ದು ಈದಿ ಆಮೀನ್ನನ ಸ್ನೇಹ. ಈ ಸ್ನೇಹ ಸ್ಮಾರಕವಾಗಿ, ದರ್ಮದ ಸಂಕೇಟವಾಗಿ ತಲೆ ಎತ್ತಿತು. ಆದರೆ ಇದು ನಿರ್ಮಾಣಗೊಳ್ಳುವ ಮೊದಲೇ ಈದಿ ಆಮಿನ್ ತೀರಿಕೊಂಡಿದ್ದನು.
    ಇದು ಬೆರಗುಗೊಳಿಸುವಷ್ಟು ವಿಸ್ತಾರವಾಗಿರುವ ಮಸೀದಿ. ನೆಲಅಂತಸ್ತಿನಲ್ಲಿ ಹದಿಮೂರು ಸಾವಿರ, ಟೆರೆಸಿನಲ್ಲಿ ಮೂರುವರೆ ಸಾವಿರ ಹಾಗೂ ಗ್ಯಾಲರಿಯಲ್ಲಿ ಸುಮಾರು ಸಾವಿರ ಜನರು ಪ್ರಾರ್ಥಿಸುವಷ್ಟು ಅವಕಾಶವಿದೆ. ಇದು ಕೂಡ ಉಗಾಂಡಾ ದೇಶಕ್ಕೆ ಗಡಾಫಿ ನೀಡಿದ ಅಮೂಲ್ಯ ಕಾಣಿಕೆಯಾಗಿದೆ. ಗಡಾಫಿಯ ಮರಣದ ನಂತರ ಗಡಾಫಿ ನ್ಯಾಷನಲ್ ಮಾಸ್ಕಎಂಬ ಹೆಸರನ್ನು ಬದಲು ಮಾಡಿ ಈಗ ಇದು ತಾಂಜಾನಿಯಾದಂತೆಯೇ ಉಗಾಂಡಾ ನ್ಯಾಷನಲ್ ಮಾಸ್ಕ್ಆಗಿದೆ.
    ಯಾವ ರಾಷ್ಟ್ರಗಳು ಮಿತ್ರ ರಾಷ್ಟ್ರಗಳು ಎಂದು ಭಾವಿಸಿದ್ದನೋ, ಅವನ ಹೆಸರಿನಲ್ಲಿ ಕಟ್ಟಲ್ಪಟ್ಟ ಭವ್ಯ ಮಸೀದಿಗಳು ಮತ್ತು ಅವನ ಹೆಸರನ್ನು ತಮ್ಮ ಚರಿತ್ರೆಯಲ್ಲಿ ಅಳಿಸಿ ಹಾಕುವಂತೆ ಹೆಸರು ಬದಲಾಯಿಸಿದವು.
    ರುವಾಂಡಾ ದೇಶದ ಕಿಗಾಲಿಯಲ್ಲಿನ ಗಡಾಫಿ ನಿರ್ಮಿಸಿದ ಮಸೀದಿಯೂ ಇದೇ ಹಾದಿಯಲ್ಲಿರುವಂತಹದು. ಆದರೆ ಸುಮಾರು ದೇಶಗಳಲ್ಲಿ ಮಸೀದಿ ನಿರ್ಮಿಸಿ ಇಸ್ಲಾಂ ಧರ್ಮದ ಮೂಲಕ ಧರ್ಮವನ್ನು, ದೇಶವಾಸಿಗಳನ್ನು, ಆ ಮೂಲಕ ಮುಸ್ಲಿಂ ಮೂಲಭೂತವಾದಿಗಳನ್ನು ಗೆಲ್ಲುವ ತಂತ್ರಗಾರಿಕೆಯೊಂದನ್ನು ರೂಪಿಸಿಕೊಂಡಿದ್ದು ಸುಳ್ಳಲ್ಲ

    ನಾನು 2011 ಡಿಸೆಂಬರ್ನಲ್ಲಿ ತಾಂಜಾನಿಯಾಕ್ಕೆ ಭೇಟಿ ನೀಡಿದಾಗ, ಆಗತಾನೆ ಗಡಾಫಿಯ ಹತ್ಯೆಯಾಗಿತ್ತು. ತಮ್ಮ ದೇಶದ ಹೆಮ್ಮೆಯ ಮಸೀದಿಗೆ ಕಾರಣನಾ  ದೇಶಸ್ನೇಹಿಯಾದ ಗಡಾಫಿ ಸಾವಿಗೆ ದೇಶದ ಕಂಗಳಲ್ಲಿ ತ್ತದ ಕಣ್ಣೀರಿತ್ತು. ತುಂಬಾ ಒಳ್ಳೆಯ ಆದರ್ಶಗಳನ್ನು ಹೊತ್ತು, ತನ್ನ ನಾಡನ್ನು ನಂದನವನವನ್ನಾಗಿ ಮಾಡುತ್ತೇನೆಂದು ಹೊರಟ ಗಡಾಫಿ, ಅವನ ದೇಶದಲ್ಲಿ ಉಂಟಾದ ಕ್ಷಿಪ್ರಕ್ರಾಂತಿ- ಇತ್ಯಾದಿಗಳ ಬಗ್ಗೆಯಷ್ಟೇ ತಿಳಿವಳಿಕೆ ಇದ್ದ ನನಗೆ ಉಗಾಂಡದಲ್ಲಾಗಲಿ, ತಾಂಜಾನಿಯಾದಲ್ಲಾಗಲಿ ಆತನ ಬಗ್ಗೆ ಒಂದೂ ಅಪಶಬ್ಧ ಬರಲಿಲ್ಲ. ಜೊತೆಗೆ ಆತ ಈ ನಾಡಿನ ಜನತೆಗೆ, ಸರಕಾರಕ್ಕೆ ಮಾಡಿದ ಉಪಕಾರಗಳ ಪಟ್ಟಿಯನ್ನೇ ನನಗೆ ತಿಳಿದ ತಾಂಜಾನಿಯನ್ನರು ಹಾಗೂ ಉಗಾಂಡಿಯನ್ನರು ನೀಡಿ, ನನ್ನ ಮುಂದೆ ಬಹಳ ಪ್ರೀತಿ, ಕೃತಜ್ಞತೆ, ಹೆಮ್ಮೆಯಿಂದ ಹೇಳಿಕೊಂಡಿದ್ದರು. ಗಡಾಫಿ ಡೈರಿಯನ್ನು, ಲಿಬಿಯಾ ಡೈರಿಯನ್ನು ನೀವು ಬರೆದಿದ್ದೀರಿ ಎಂದಾಗ ನನಗೆ ಸಹಜವಾಗಿ ಕುತೂಹಲ ಉಂಟಾಗಿತ್ತು.ನ್ನೆಲ್ಲ ಕುತೂಹಲಗಳಿಗೆ ಉತ್ತರ, ಸಮರ್ಥನೆಗಳನ್ನು ನೀಡುವ ರೀತಿಯಲ್ಲಿ ಕೃತಿ ಕಳಿಸಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

    ಈ ಕೃತಿಯನ್ನು ಯಾವ ಸಾಹಿತ್ಯ ಪ್ರಕಾರದಡಿ ಗುರುತಿಸಬೇಕು? ಇದು ಚರಿತ್ರೆಯೋ? ವ್ಯಕ್ತಿ ಚಿತ್ರಣವೋ? ಪ್ರವಾಸಕಥನವೋ? ರಾಜಕೀಯ ವಿದ್ಯಮಾನಗಳ ದಾಖಲೆಯೋ? ಯಾವ ಪ್ರಕಾರಕ್ಕೂ ಇದು ಇಂಥದೇ, ಹೀಗೆ ಎಂದು ಸುಲಭವಾಗಿ ಸೇರಿಕೊಳ್ಳದೆ ಎಲ್ಲ ಪ್ರಕಾರಗಳಲ್ಲೂ ತನ್ನ ಪ್ರಾತಿನಿಧಿಕತೆಯನ್ನು ಕಾಪಾಡಿಕೊಳ್ಳಲು ಹಂಬಲಿಸುವ ಕೃತಿ ಎನ್ನಬಹುದೇನೋ?

    ಮುಖ್ಯವಾಗಿ ಸಾಮ್ರಾಜ್ಯಶಾಹಿ ವಿರೋಧಿಯಾಗಿ, ತನ್ನ ಪುಟ್ಟ ದೇಶ ಲಿಬಿಯಾವನ್ನು ಕಾಪಾಡಲು, ಅದನ್ನು ಆರ್ಥಿಕವಾಗಿ, ಸಮಾಜಿಕವಾಗಿ ಸದೃಢಗೊಳಿಸಲು ಹೋರಾಡಲು ಹೊರಟು ತನ್ನ ದೇಶದ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಅಸ್ತ್ರವಾಗಿ, ವಸಾಹತು ಸಾಮ್ರಾಜ್ಯದ ಆಡಳಿತದ ವಿರುದ್ಧ ಹೋರಾಡಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪರದಾಡಿ, ಕೊನೆಗೆ ಆತ ಮಾಡಿದ ಯಾವ ಸಾಧನೆಯೂ ನೆನಪಿನಲ್ಲ ಉಳಿಯದಂತೆ ಏಕಾಂಗಿಯಾಗಿ ಕೊನೆಗೊಂಡ ಮಹತ್ವಕಾಂಕ್ಷೆಯ ಮಹಾವೀರನ ಬದುಕನ್ನು ಇಟಗಿಯವರ ಎಳೆಎಳೆಯಾಗಿ ಬಿಡಿಸಲು. ಪ್ರಯತ್ನಿಸಿದ್ದಾರೆ. ಕೃತಿಯ ಮುಖ್ಯ ಉದ್ದೇಶ ಇಂತಹ ಮಹಾನ್ ನಾಯಕನ ಹತ್ಯೆ ಹಿಂದೆ ನಡೆದಂತಹ ರಹಸ್ಯ ಕಾರ್ಯಾಚರಣೆಗಳು,  ಧಾರ್ಮಿಕ ಮೂಲಭೂತವಾದಿಗಳ ಸಹಕಾರ-ಮೂಲಕ ಆಫ್ರಿಕಾದಲ್ಲಿ ಭರವಸೆಯ ಬೆಳಕಾಗಿದ್ದ ಗಡಾಫಿಯ ಅಂತ್ಯ-ಮಹಾಪತನ. ಲೇಖಕರೇ ಹೇಳುವಂತೆ, ಅದು ಲಿಬಿಯಾದ ಪತನವೂ ಹೌದು.  2011 ರಲ್ಲಿ ಪತನಗೊಂಡ ಲಿಬಿಯಾ ಇಂದಿಗೂ ಏಳುವ ಸ್ಥಿತಿಯಲ್ಲಿಲ್ಲ.
    ಗಡಾಫಿಯಂತಹ ವ್ಯಕ್ತಿತ್ವಗಳನ್ನು ಅಮೆರಿಕವನ್ನೂ ಒಳಗೊಂಡಂತೆ ಮುಂದುವರೆದ ರಾಷ್ಟ್ರಗಳು ಜಗತ್ತಿಗೆ ಬಿಂಬಿಸುವ ರೀತಿಯೇ ಬೇರೆ. ಅವುಗಳಿಗೆ ಸಹಕಾರ ನೀಡುವ ಮಾಧ್ಯಮ ಜಗತ್ತು, ಲೇಖಕರ ಅಭಿಪ್ರಾಯದಂತೆ ಚರಿತ್ರೆಯನ್ನು ತಿರುಚಿ ಹೇಳಿವೆ, ಪ್ರತಿ ವ್ಯಾಖ್ಯಾನಗಳನ್ನು ಸೃಷ್ಟಿ ಮಾಡಿವೆ.  ಇಡೀ ಜಾಗತಿಕ ಮನಸ್ಸಿನ ಮೇಲೆ, ಇಂತಹ ಮೂಲಗಳು ಕಟ್ಟಿಕೊಟ್ಟ ಅಭಿಪ್ರಾಯಗಳು ಬಲವಾಗಿ ಸತ್ಯ ಎಂಬಂತೆ ಬೇರರಿದಾಗ, ಅವುಗಳ ಬಲವಾದ ವ್ಯಾಖ್ಯಾನ, ರಚನೆಗಳನ್ನು ವಿರೂಪಗೊಳಿಸು ಕೆಲಸಕ್ಕೆ ಇಟಗಿಯವರು ಮುಂದಾಗುತ್ತಾರೆ. ಹೀಗಾಗಿ ನಾಯಕನ,ಹುಮತ ಒಪ್ಪದಂತ ಚರ್ಚೆಯನ್ನು ಮುಂದಿಟ್ಟುಕೊಂಡು ಗಡಾಫಿಯ ಬಗೆಗೆ ಪುನರ್ ವ್ಯಾಖ್ಯಾನ ಮಾಡಲು ತೊಡಗುತ್ತಾರೆ.
     ಗಡಾಫಿಯ ಆಡಳಿತ ವೈಖರಿ, ಅವ ಸಿದ್ಧಾಂತಗಳು, ಆರ್ಥಿಕ ನೀತಿ, ಅರಬ್ ಜಗತ್ತಿಗೆ ಬಹುಮುಖ್ಯ ನಾಯಕ ಎಂಬ ಅಂಶಗಳನ್ನು ಒಪ್ಪಿಕೊಂಡೇ ಕೃತಿರಚನೆಗೆ ಇಳಿಯುತ್ತಾರೆ. ಗಡಾಫಿಯ ಆರ್ಥಿಕ ನೀತಿ, ತನ್ನ ನೆರೆರಾಷ್ಟ್ರಗಳೊಂದಿಗಿದ್ದ ಅವನ ಸೌಹಾರ್ದ ಸಂಬಂಧಗಳು-ಇವುಗಳ ಬಗ್ಗೆ ಲೇಖಕರಿಗೆ ಅತೀವ ಅಭಿಮಾನ. ಹಾಗೆಂದ ಮಾತ್ರಕ್ಕೆ ಅವನಲ್ಲಿ ತಪ್ಪುಗಳೇ ಇರಲಿಲ್ಲವೆಂದಲ್ಲ. ನ್ನು ತುಂಬಾ ಸಕಾರಣವಾಗಿ ವಿವರಿಸುತ್ತಾರೆ. ಗಡಾಫಿ ಮಾಡಿದ ಒಂದಿಷ್ಟು ತಪ್ಪುಗಳು, ಲಿಬಿಯಾ ತಪ್ಪಿದ್ದೆಲ್ಲಿ? ಎಂಬ ಭಾಗಗಳಲ್ಲಿ ಕೃತಿಕಾರ  ’ಪೂರ್ವಾಗ್ರಹ ಪೀಡಿಎಂಬ ಮನೋಭಾವನೆಯನ್ನ ಖಂಡಿತ ಅಳಿಸಿ ಹಾಕಿ ನಿಷ್ಪಕ್ಷಪಾತ ವಿಮರ್ಶೆ ಮೂಡಿಬರುತ್ತದ.
    ಗಡಾಫಿ ಗರ್ಲ್ಸ್ ಭಾಗದಲ್ಲಿ ಲೇಖಕರು ಗಡಾಫಿಯ ಹೆಣ್ಣುಗಳನ್ನು ಪರಿಚಯ ಮಾಡಿಕೊಡುತ್ತಾರೆ. ಜಗತ್ತಿನ ಯಾವ ರಾಷ್ಟ್ರದಲ್ಲೂಅಬಲೆಎಂದು ಭಾವಿಸಲ್ಪಟ್ಟ ಹೆಣ್ಣು ಅಂಗರಕ್ಷಕಿಯಾದ ಉದಾಹರಣೆಯೇ ಇಲ್ಲ. ಆದರೆ ಗಡಾಫಿ ಮುನ್ನೂರು ಹೆಣ್ಣುಮಕ್ಕಳು ತನ್ನ ಅಂಗರಕ್ಷಕ ಪಡೆಯಲ್ಲಿ ನೇಮಿಸಿಕೊಂಡಿದ್ದ. ಇದು ಸ್ವಾಗತಾರ್ಹ ವಿಚಾರವಾದರೂ ಅವರು ಸುಮ್ದರಿಯರೇ ಆಗಿರಬೇಕು, ಕನ್ಯೆಯರೇ ಆಗಿರಬೇಕು, ಸದಾ ಆಧುನಿಕ ಪೋಷಾಕಿನಲ್ಲಿರಬೇಕು, ಮೇಕಪ್ ನಲ್ಲಿರಬೇಕು ಅವನ ಆತ್ಮೀಯರಾಗಿರಬೇಕು ಇತ್ಯಾದಿಗಳು ಮೇಲ್ನೋಟಕ್ಕೆ ಹುಸಿ ಎನ್ನಿಸಿ ಅವನ ಹೆಣ್ಣುಬಾಕತನವನ್ನು ಎತ್ತಿಹಿಡಿಯುತ್ತದೆ. ಅವನ ಆರೋಗ್ಯ ತಪಾಸಣೆಗೆ ಉಕ್ರೇನಿಯನ್ ಚೆಲುವಿನ ಖಣಿಗಳಾದ ನರಸಮ್ಮರೇ ಬೇಕು ಎಂಬ ವಿಚಾರಗಳು, ಸ್ತೀ ಬಗೆಗೆ ಗಡಾಫಿಯ ನಿಲುವನ್ನು ಸೂಚಿಸುತ್ತದೆ. ಎಲ್ಲೋ ಲೇಖಕರು ಸ್ತ್ರೀ ಲೋಕವನ್ನು ಕಾಣುವಷ್ಟು ಪಾವಿತ್ರ್ಯದ ನೆಲೆಯಲ್ಲಿ ಗಡಾಫಿ ಕಾಣುವುದಿಲ್ಲ ಎಂಬುದು ಸಾಬೀತಾಗುತ್ತದೆ. ಹಾಗೇ ಮೊರೆಟ್ಯಾನಿಯನ್ ಚೆಲುವೆಯರ ಬಗೆಗಿನ ರಂಜಕತೆಗಿಂತ ಅವರ ಅಸಹಾಯಕತೆ ನಮಗೆ ಮುಖ್ಯವಾಗುತ್ತದೆ. ಬಲವಾದ ಕಾರಣಗಳು ಇರುವುದಿಂದಲೇ  ಸ್ತ್ರೀಯರು ಆ ದೇಶದಲ್ಲಿ ಸುರಕ್ಷಿತರಾಗಿದ್ದಾರೆ ಎಂಬ ಸತ್ಯ ಬಿಂಬಿತವಾಗುತ್ತದೆ. 
    ಸಹರಾ ಮರುಭೂಮಿಯಲ್ಲಿ ಒಂದು ಕವಿಗೋಷ್ಠಿಯಲ್ಲಿ ಇಟಲಿಯಿಂದ ಬಂದ ಕವಯತ್ರಿಯ ಬಗೆಗಿನ ದೈಹಿಕ ವಿವರಣೆಗಳು, ಬಿಚ್ಚಮ್ಮ’, ’ಮುಚ್ಚಮ್ಮ’ ’ಸೆಕ್ಷಿಯಾಗಿ ಕಾಣಿಸುತ್ತಿದ್ದಳು- ರೀತಿಯ ಹೆಣ್ಣನ್ನು ಕುರಿತಾದ ವ್ಯಾಖ್ಯಾನಗಳು ಎಲ್ಲೋ ಕಸಿವಿಸಿ ಹುಟ್ಟಿಸುತ್ತವೆ. ಕ್ರಾಂತಿಯಾದ ಅಷ್ಟು ವರ್ಷಗಳ ನಂತರವೂ ಹೆಣ್ಣನ್ನು ಕುರಿತ ಮನೋಭಾವ, ನಿಲುವುಗಳು- ಇನ್ನು ಅಲ್ಲಿನ ಹೆಣ್ಣುಮಕ್ಕಳು ನಮಗೂ ಇಂತ ಅವಕಾಶವಿರಬಾರದಿತ್ತೆ? ಎಂದು ಯೋಚಿಸುವ ರೀತಿ- ಬಹುಭಾಷಾ ಗೋಷ್ಠಿಯಲ್ಲಿ ಯಾವ ವಿಚಾರಗಳು ಯಾವ ಭಾಷೆಯಲ್ಲಿ ಹೇಗೆ ಮುಖ್ಯವಾದವು, ಎಂಬ ಅಂಶಗಳನ್ನೇ ಮರೆತು ಒಬ್ಬ ವಿದೇಶಿ ಹೆಣ್ಣುಮಗಳ ಬಟ್ಟೆಬರೆಗಳು, ತುಂಡು ಬಟ್ಟೆ ತೊಟ್ಟು ಕಾಲು ಮೇಲೆ ಕಾಲು ಹಾಕಿ ಪ್ರದರ್ಶಿಸಿದ ರೀತಿ, ಸಿಗರೇಟಿನ ಸೇದುವಿಕೆ- ಕಡೆಗೆ ಹೋಗುತ್ತದೆ. ಅವಳು ಮಂಡಿಸಿದ ಕವನ, ಅದಕ್ಕೆ ಅವಳು ಆಯ್ಕೆ ಮಾಡಿಕೊಂಡಿದ್ದ ವಸ್ತು, ನಿರೂಪಿಸಿದ ಪರಿ- ಇವುಗಳ ಬಗೆಗೆ ಚರ್ಚಿಸಿದ್ದರೆ ಸಮಾಧಾನವಾಗುತ್ತಿತ್ತು. ಕವಿಗೋಷ್ಠಿಯಲ್ಲಿದ್ದ ಉಳಿದ ಕವಿಗಳು ಯಾರು? ಅವರ ಕಾವ್ಯ ಲ್ಲಣಗಳನು?  ಕವಿಗೋಷ್ಠಿಗೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗ ಪ್ರತಿಕ್ರಿಯೆ, ವಿಮರ್ಶೆ ಎಂಥದಾಗಿತ್ತು? ಬಹುಶಃ ಇದರ ಕಡೆಗೆ ಗಮನ ಹರಿಸಿದ್ದರೆ ಸಮಕಾಲೀನ ಲಿಬಿಯನ್ ಸಾಹಿತ್ಯ, ವಿಮರ್ಶೆಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭಿಸುತ್ತಿದ್ದವೇನೋ!
    ಇಡೀ ಕೃತಿಯಲ್ಲಿ ತುಂಬಾ ಭಿನ್ನವಾಗಿ ನಿಲ್ಲುವ ಭಾಗ- ಸಹರಾ ಮರಭೂಮಿಯ ವರ್ಣನೆಅವಿನಾತ್ ಶಿಲೆಯಲ್ಲಿ ಅರಳಿರುವ ಪ್ರಾಕೃತಿಕ ಲೆ, ಓಬಾರಿಯಾದ ಗೆಬ್ರಾನ್ ಸರೋವರ.ಕಾಕುಸ್ ಪರ್ವತಗ ವರ್ಣನೆ ಹಾಗೂ ಚಿತ್ರಗಳು ಮನಸ್ಸಿಗೆ ಮುಟ್ಟುತ್ತವೆ.  ಮರುಭೂಮಿ ಸುಂದರವಾಗಿರುತ್ತದೆ, ಅಂತರಗಂಗೆ ಇರುತ್ತಾಳೆ, ಮರಭೂಮಿಯಲ್ಲೂ ಹಸಿರು ಚಿಮ್ಮುತ್ತದೆ, ಚಳಿಗಾಲದಲ್ಲಂತೂ ಮರುಭೂಮಿ ಅತಿ ಶೀತಲ- ಇತ್ಯಾದಿಗಳ ವಿವರಣೆಗಳು ಸುಂದರವಾಗಿವೆ, ವಿಶೇಷವಾಗಿವೆ.
    ಮಳೆಯಲ್ಲಿ ಸಿಕ್ಕ ಅವರಿಬ್ಬರ ಮರುಭೂಮಿಯ ಓಯಸಿಸ್ ಗಳಂತೆ ಲೇಖಕ ಕಷ್ಟದ ಸಂದರ್ಭದಲ್ಲಿ ಪ್ರತ್ಯಕ್ಷರಾಗಿ ತಮ್ಮ ಸಹಾಯಹಸ್ತ ಚಾಚುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಉದ್ಯೋಗಸ್ಥ ಹೆಣ್ಣುಮಗಳಾಗಲಿ, ಸಣ್ಣ ಸಂಬಳದ ಕ್ಯಾಬ್ ಡ್ರೈವರ್ನಾಗಲಿ, ಒಂದೇ ಮಟ್ಟದ ಮಾನವೀಯತೆ ಇರುವುದನ್ನು ಲೇಖಕರು ಗುರುತಿಸಿಕೊಳ್ಳುವಂತಹ ಸೂಕ್ಷ್ಮಮನಸ್ಸಿನವರಾಗಿದ್ದಾರೆ. ಬಹುಶಃ ವರ ನಡವಳಿಕೆಗಳು ಅವರ ರಾಜಕೀಯ ನಾಯಕನಾದ ಗಡಾಫಿಯಿಂದಲೇ ರೂಪಗೊಂಡಿರಬಹುದು ಅಥವಾ ಸಹಜವಾಗಿಯೇ ಅವರೊಳಗಿರುವ ಮಾನವೀಯ ಭಾವನೆಗಳಿಗೆ ಗಡಾಫಿಯ ರಾಜಕೀಯ ಚಿಂತನೆಗಳು ಪುಷ್ಟಿ ನೀಡಿರಬಹುದು. ಏಕೆಂದರೆ ಗಡಾಫಿಯ ರಾಜ್ಯದಲ್ಲಿದ್ದಿದ್ದು ಒಂದೇ ಸೂತ್ರ ಸಮಾನತೆ’. ಅದು ಗಂಡು-ಹೆಣ್ಣುಗಳ ನಡುವಿನ ಸಮಾನತೆ ಆಗಿರಬಹುದು ದ್ಯೋಗಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿನ ಸಮಾನತೆ ಇರಬಹುದು. ಲೇಖಕರು ತಮ್ಮ ಬದುಕಿನಲ್ಲಿಯೇ ಕಾಣಬರುವ ಇಂತಹ ಅಪರೂಪದ ಘಟನೆಯನ್ನು ಸುಂದರವಾಗಿ ನಿರೂಪಿಸುತ್ತಾರೆ.
     ಇಟಗಿಯವರು ಏಳೆಂಟು ವರ್ಷಗಳ ಕಾಲ ಆ ನಲದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ್ದು, ವಿದ್ಯಾರ್ಥಿಗಳ ನಡುವಿನ ಸಂಬಂಧ, FB, Email ಗಳಿರುವ ಈ ಕಾಲದಲ್ಲಿ ಅವರ ಸಂಬಂದ ಮುಂದುವರೆದದಿಯೇ? ಅಲ್ಲಿನ ವಿದ್ಯಾಪದ್ದತಿ, ಶೈಕ್ಷಣಿಕ ಕ್ಷೇತ್ರದ ಸಾದನೆಗಳು, ಯಾವುದು ವಿದ್ಯಾರ್ಥಿಗಳು ಹೆಚ್ಚು ಬಯಸುವ ವಿಷಯಗಳು, ಅಮೆರಿಕನ್ನರ ಕಾರಣದಿಂದಲೋ, ಅಥವಾ ಪರದೇಶಗಳಿಗೆ ತಮ್ಮ ವದ್ಯಮಾನಗಳು ನುಸಳಬಾರದೆಂದೋ, ಗಡಾಪಯು ಇತರ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳುವ ಸಂಪರ್ಕ ಭಾಷೆಯನ್ನು ಹತ್ತು ವರ್ಷಗಳ ಕಾಲ ನಿಲ್ಲಸಿದಾಗ ವ್ಯಾವಹಾರಿಕ, ಶೈಕ್ಷಣಿಕ ಜಗತ್ತಿನಲ್ಲುಂಟಾದ ತಲ್ಲಣಗಳೇನು? ಯುವ ಜನತೆಯ ಮೇಲುಂಟಾದ ಪರಿಣಾಮಗಳೇನು? ಸ್ತ್ರೀ ಸಮಾನತೆ ಎಂದು ಬೊಬ್ಬಿರಿದ ಗಡಾಫಿಯ ನಾಡಿನಲ್ಲಿ ಸ್ತ್ರೀ ವಿದ್ಯಾಭ್ಯಾಸದ ನೆಲೆಗಳೇನು? ವಿಜ್ಞಾನ ತಂತ್ರಜ್ಞಾನಗಳ ಬಗೆಗೆ ಗಡಾಫಿಯ ನಿಲುವುಗಳೇನಾಗಿದ್ದವು? ಕೇವಲ ತನ್ನನ್ನು ಉಳಿಸಿಕೊಳ್ಳಲು ಅಂಗ ರಕ್ಷಕ ಪಡೆಯನ್ನು ನೇಮಿಸಿಕೊಂಡನೇ? ಕೇವಲ ತನ್ನೊಬ್ಬನ ಆರೋಗ್ಯ ಕಾಪಾಡಿಕೊಳ್ಳಲು ದಾದಿಯರನ್ನು ನೇಮಿಸಿಕೊಂಡನೇ? ದೇಶದ ಆರೋಗ್ಯ ಮಟ್ಟ ಹೇಗಿತ್ತು? ಚಿಕಿತ್ಸಾ ಸೌಲಭ್ಯಗಳಾವವು? ಹೀಗೆ ಓದುಗರ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆ ಲೇಖಕರು ಉತ್ತರ ನೀಡಬಹುದಿತ್ತು.
    ಮುಖ್ಯವಾಗಿ ಹಲವಾರು ವರ್ಷಗಳು ಬೇರೊಂದು ನಾಡಿನಲ್ಲಿ ಬದುಕಿದಾ, ನಾಡಿನ ಜನ ಜೀವನ, ಸಾಂಸ್ಕೃತಿಕ ಬದುಕು, ಸಾಮಾಜಿಕ ಬದುಕು, ಅಡಿಗೆ, ಸಂಗೀತ, ನೃತ್ಯ, ಸಂತೆಯಂತಹ ವಿಷಯಗಳ ಬಗೆಗೂ ಇಟಗಿಯವರು ಲಿಬಿಯಾ ದೇಶದ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳು ಪ್ರಕಟಗೊಳ್ಳುವ ಸಾಧ್ಯತೆಗಳು ಇರುತ್ತಿದ್ದವು.
    ಇವು ನನ್ನ ಕೆಲವು ಅನುಮಾನಗಳು. ಡೈರಿಯನ್ನು ಅವರು ವಿಸ್ತರಿಸುವದಾದರೆ, ಈ ಎಲ್ಲ ಅಂಶಗಳ ಬಗ್ಗೆಯೂ ಬೆಳಕು ಚೆಲ್ಲಿದರೆ, ಲಿಬಿಯಾ ದೇಶದ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಬಹುಶಃ ಲೇಖಕರು ತಮ್ಮ ನೆನಪಿನಲ್ಲುಳಿದಿರುವ ಅನುಭವಗಳನ್ನು, ಸಾಂಸ್ಕೃತಿಕ ಮುಖಾಮುಖಿಗಳನ್ನು, ಇವತ್ತಿನ ಲಿಬಿಯಾದ ಸ್ಥಿತಿಗತಿಗಳು, ಬದಕಿನ ಸಂತೋಷ, ಸಂಘರ್ಷಗಳನ್ನು ಡೈರಿ-2’ ರಲ್ಲಿ ಹೊರಹಾಕಲಿ ಎಂದು ಆಶಿಸುತ್ತೇನೆ. 
    ವಿವಾದಗಳ ವೈಪರಿತ್ಯದ ನೆಲೆಯಲ್ಲಿ ನಿಂತ ಗಡಾಫಿಯ ಸಿದ್ಧ-ವ್ಯಕ್ತಿ ಚಿತ್ರಣವನ್ನು ಒಡೆದು. ಜನಪ, ನಿಷ್ಠಾವಂತ ಜನನಾಯಕನ ಹೊಸ ಚಿತ್ರಣವನ್ನು ಸಕರಾತ್ಮಗುಣಗಳೊಂದಿಗೆ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಜನತೆಯ ಮನೋವಲಯದಲ್ಲಿ ಭದ್ರವಾಗಿ ಕುಳಿತ ಪಾತ್ರವನ್ನು ಹೊರತೆಗೆದು ಅದಕ್ಕೆ ಹೊಸ ವ್ಯಾಖ್ಯಾನವನ್ನು ನೀಡುವಲ್ಲಿ ಇಟಗಿಯವರು ಯಶಸ್ವಿಯಾಗಿದ್ದಾರೆ. ಇಂಥ ಕ್ರಾಂತಿಕಾರಕ ನಾಯಕರ ಸ್ಥಿತಿಯೇ ಹಾಗೆ. ಅವರನ್ನು ಕುರುಡಾಗಿ ಪ್ರೀತಿಸಿ, ಒಪ್ಪಿಕೊಳ್ಳು ಜನಗಳೆಷ್ಟೆದ್ದಾರೋ, ಅವನ ಯಾವ ವಿಚಾರಗಳನ್ನೂ ಒಪ್ಪದೇ, ಅಷ್ಟೇ ತೀವ್ರವಾಗಿ ಆಳದಿಂದ ದ್ವೇಷಿಸುವ, ವಿರೋಧಿಸುವ ಜನಗಳು ಇರುತ್ತಾರೆ. ಇಂತಹ ಸಂಕೀರ್ಣ ವ್ಯಕ್ತಿತ್ವವನ್ನು ಮರುವ್ಯಾಖ್ಯಾನ ಪುನರ್ ವ್ಯಾಖ್ಯಾನ ಮಾಡಲು ತಾರ್ಕಿಕ ಜ್ಞಾನವೂ ಇರಬೇಕು, ಧೈರ್ಯವೂ ಬೇಕು. ಇಟಗಿಯವರಿಗೆ ಎರಡೂ ಗುಣಗಳು ಸಿದ್ಧಿಸಿವೆ ಎಂದೇ ಹೇಳಬಹುದು. 
    ಡಾ, ಡಿ. ಮಂಗಳಾ ಪ್ರಿಯದರ್ಶಿನಿ
    15.12.2019