Demo image Demo image Demo image Demo image Demo image Demo image Demo image Demo image

ನಾನು ಸಾದರ ಪಡಿಸಿದ ಚಂದ್ರಮ ಕರ್ನಾಟಕ ವಾಹಿನಿ ವಾರದ ವ್ಯಕ್ತಿ ಸರಣಿ ಕಾರ್ಯಕ್ರಮದಲ್ಲಿ ರಂಜಾನ ದರ್ಗಾ ಅವರು.........

  • ಗುರುವಾರ, ಮೇ 07, 2020
  • ಬಿಸಿಲ ಹನಿ
  • ಲೇಬಲ್‌ಗಳು:

  • "ಚಂದ್ರಮ"ಕರ್ನಾಟಕ ವಾಹಿನಿಯ ಸಹೃದಯ ಸದ್ಬಾಂಧವರೇ...
    ಈ *"ಚಂದ್ರಮ ವಾರದ ವ್ಯಕ್ತಿ" ಸಾಹಿತ್ಯ ಸರಣಿ- ೪೮* ನೇ ಸಂಚಿಕೆಯಲ್ಲಿ
     *ಶಾಂತಿ,ಸಮಾನತೆ ಮತ್ತು ವಿನಮ್ರತೆ ಇಲ್ಲದ ದೇಶವು ದೀರ್ಘಕಾಲದಲ್ಲಿ ಬಾಳುವುದಿಲ್ಲ.ಕಾಯಕವೇ ಕೈಲಾಸ; ಉದ್ದಂಡ ಕಾಯಕ ಕಾಯಕವೇ ಅಲ್ಲ.ಮಹಾ ಮಾನವತಾವಾದಿ ಬಸವಣ್ಣನವರ ಚಿಂತನೆಗಳ ಕುರಿತು ಇವತ್ತು ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿದ್ದು ಸಮಕಾಲೀನ ಜಗತ್ತಿಗೆ ಬಸವ ತತ್ವಗಳು ದಾರಿದೀಪವಾಗಿವೆ. ಬಸವ ಧರ್ಮ ಜನರ ನಡುವೆ ಸೃಷ್ಟಿಯಾದ ಧರ್ಮ. ಸಾಮಾನ್ಯ ಜನರ ಅನುಭವವೇ ವಚನಗಳಾಗಿ ಇಲ್ಲಿ ದಾಖಲಾದವು. ಭಾರತೀಯ ಸೂಫೀ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕøತಿ,ವರ್ಣವ್ಯವಸ್ಥೆ,ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮತತ್ವದ ಮೂಲಕ ಜಗತ್ತನ್ನು ಪ್ರೀತಿಸಲು ತೋರಿಸಿಕೊಟ್ಟವರು” ಕರ್ನಾಟಕದ ಸೂಫಿಗಳಿಂದ ಕಲಿಯಲು ಬಹಳಷ್ಟಿದೆ. ಎಂದು ರಾಜ್ಯ ರಾಷ್ಟ್ರ ಅಂತಾರಾಷ್ಟ್ರಗಳಲ್ಲೂ ಸಾರುತ್ತಿರುವ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಶರಣರಾದ ಡಾ.ರಂಜಾನ್ ದರ್ಗಾ* ಅವರ ಬಗ್ಗೆ ಸ್ಮರಣೀಯ ವಿಶಿಷ್ಟ ವಿನೋದ ಸಾಹಿತ್ಯ ಹಾಗೂ ಜೀವನ ವಿಚಾರಗಳನ್ನು ಹಂಚಿಕೊಂಡು ಸಂಪನ್ನರಾಗೋಣ.
     *ಹಾಗೆ ಈ ವಾರ ವಿಶೇಷವಾಗಿ ೪೮ ನೇ ಸಂಚಿಕೆಗೆ ಕಿರುಪರಿಚಯ ನೀಡುತ್ತಿರುವ ಶ್ರೀ ಉದಯ್ ಇಟಗಿ ದಾವಣಗೆರೆ* ಅವರ ಸಹೃದಯತೆಗೆ ನಮಸ್ಕಾರಗಳು...
    ವಿಶೇಷವಾಗಿ ರಾಜ್ಯದ ಎಲ್ಲಾ "ಚಂದ್ರಮ"-೧,೨,೩,೪ ಮತ್ತು ಚಂದ್ರಮ ಪ್ರತಿನಿಧಿಗಳ ಬಳಗಗಳ ಸಹೋದರ ಸೋದರಿಯರು ವೀಕ್ಷಿಸಿ ಪಾಲ್ಗೊಳ್ಳುತ್ತಿರುವುದು. ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬುತ್ತಿದೆ ಅವರೆಲ್ಲರಿಗೂ ಧನ್ಯವಾದಗಳು ...ತಮ್ಮ  ಅಮೂಲ್ಯವಾದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ...*ನಿಮ್ಮ ಚಂದ್ರಮ* ಜೊತೆಗೆ ಈ ವಾಟ್ಸಾಪ್ ಗುಂಪುಗಳಲ್ಲಿ ತಮ್ಮ ಸಾಹಿತ್ಯ ಚಟುವಟಿಕೆಗಳೆಲ್ಲವನ್ನು ಹಾಕಬಹುದು ಗುಡ್ ನೈಟ್ ಗುಡ್ ಮಾರ್ನಿಂಗ್ ಗಳನ್ನು ಮತ್ತು ಇತರೆ ಫಾರ್ವರ್ಡ್ ಮಾಹಿತಿಗಳನ್ನು ಬಿಟ್ಟು...
    ಹಿಂದಿನ ವಾರ ಹೆಚ್ಚು ವಿಷಯಗಳನ್ನು ಹಂಚಿದ ಹಂಚಿಕೊಂಡು ಹೆಚ್ಚು ಪ್ರತಿಕ್ರಿಯಿಸಿದ ಸರ್ವರಿಗೂ ಬಳಗದ ಎಲ್ಲರ ಪರವಾಗಿ ಧನ್ಯವಾದಗಳು... 
    ಈ "ವಾರದ ವ್ಯಕ್ತಿ" ಸಾಹಿತ್ಯ ಸರಣಿ -೪೮ನೇ  ಸಾಂಸ್ಕೃತಿಕ ಆತ್ಮ ಚರಿತ್ರೆ ಸಂಚಿಕೆಗೆ
    ಎಲ್ಲರಿಗೂ ಆತ್ಮೀಯ  ಸ್ವಾಗತ......*

    https://youtu.be/y1JrzhE8uhA