Demo image Demo image Demo image Demo image Demo image Demo image Demo image Demo image

The Effect

  • ಶನಿವಾರ, ಆಗಸ್ಟ್ 01, 2020
  • ಬಿಸಿಲ ಹನಿ
  • ಪರಿಣಾಮ

     

    ಅಪ್ಪ ಹಸಿದಾಗ

    ಅಮ್ಮನ ಕಡೆ ನೋಡುತ್ತಾನೆ

    ಅಮ್ಮ ಊಟ ಬಡಿಸೊಲ್ಲ

    ತುಟಿಯಂಚಿನಲಿ ಕಿಸಕ್ಕನೆ ನಗುತ್ತಾಳೆ

    ನನಗೆ ಭಯವಾಗುತ್ತದೆ

    ನಾನು ರಗ್ಗಿನೊಳಗೆ ನುಸುಳಿಕೊಳ್ಳುತ್ತೇನೆ

     

    ಒಂದು ದಿನ

     

    ಅಮ್ಮ ವಾಕರಿಸುತ್ತಾಳೆ

    ಅಪ್ಪ ಹಸಿರು ಮಾವಿನ ಕಾಯಿ

    ಹಿಡಿದು ಬರುತ್ತಾನೆ

     

    ಮತ್ತೊಂದು ದಿನ

     

    ದನದ ಕೊಟ್ಟಿಗೆಯಲ್ಲಿ

    ಅಂಬಾ ಧ್ವನಿಯೊಡನೆ

    ಅಮ್ಮನ ಧ್ವನಿಯೊಡನೆ

    ಮಾಂಸದ ಮುದ್ದೆಯೊಂದು ಚೀರಾಡುತ್ತದೆ

     

    ಒಂದಷ್ಟು ದಿನ ಬಿಟ್ಟು

     

    ನನ್ನ ತಟ್ಟೆಯಲ್ಲಿನ ಹಿಟ್ಟು

    ಸಣ್ಣಗಾಗುತ್ತದೆ

     

    -ಡಾ. ಟಿ.ಯಲ್ಲಪ್ಪ

     

    The Effect

     

    When my dad is hungry

    He looks at mom's side

    Mom doesn’t feed him

    Instead, she giggles at him

    I get scared and

    I sneak beneath the rug

     

    One day

     

             Mom vomits

             And dad comes home

             With an unripe mango

     

     Another day

     

    A lump of flesh

    In the cow-shed

    Comes out yelling

    Along with the cow’s moo  

    And mom’s groan

     

    Some days later


               The food in my plate

    Turns  smaller

     

    From Kannada:  Dr. T. Yellappa

    To English: Uday Itagi