ಕನಸುಗಳು ಕೈ ಜಾರಿ ಹೋಗದಂತೆ
ಗಟ್ಟಿಯಾಗಿ ಹಿಡಿದಿಕೋ ಅವನ್ನು
ಏಕೆಂದರೆ ಕನಸುಗಳಿಲ್ಲದ ಜೀವನ
ರೆಕ್ಕೆ ಮುರಿದ ಹಕ್ಕಿಯಂತೆ
ಮೇಲೆ ಹಾರಲಾರದದು!
ಕನಸುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡು
ಏಕೆಂದರೆ ಕನಸುಗಳೇ ಹೋದ ಮೇಲೆ
ಜೀವನವೊಂದು ಬಂಜರು ಭೂಮಿ
ಹೆಪ್ಪುಗಟ್ಟಿದ ಹಿಮದ ನೆಲದಂತೆ!
ಇಂಗ್ಲೀಷ ಮೂಲ: ಲ್ಯಾಂಗ್ಸ್ಟನ್ ಹ್ಯೂಸ್
ಕನ್ನಡಕ್ಕೆ: ಉದಯ ಇಟಗಿ
ಚಿತ್ರ: http://www.flickr.com/ by Alison Lyons
ಕಥನ ಮಥನ
1 ವಾರದ ಹಿಂದೆ
5 ಕಾಮೆಂಟ್(ಗಳು):
tumba channagide
ಉದಯ್ ಮತ್ತೊಂದು ಅನುವಾದಿತ ಕವನ ಬಂದಿದೆ. ಸೊಗಸಾದ ಅನುವಾದ ಎಂದು ನಾನು ಹೇಳಲಾರೆ ಕಾರನ ನಾನು ಮೂಲವನ್ನು ಓದಿಲ್ಲ. ಆದ್ದರಿಂದ ನನಗೆ ಇದು ನಿಮ್ಮದೇ ಕವಿತೆ! ಎರಡು ಸಾಲುಗಳಂತೂ ಬಹಳ ಇಷ್ಟವಾದವು. ಅವೆಂದರೆ ಕನಸುಗಳು ಕೈ ಜಾರಿ ಹೋಗದಂತೆ
ಗಟ್ಟಿಯಾಗಿ ಹಿಡಿದಿಕೋ
ಮತ್ತು
ಕನಸುಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡು
ಕನಸುಗಳಿಲ್ಲದ ದೇಶಕ್ಕೆ ಭವಿಷ್ಯವೇ ಇಲ್ಲ ಎಂಬ ಮಾತೂ ಇದೆ. ರಾತ್ರಿ ನಿದ್ದೆಯಲ್ಲಿ ಬರುವ ಕನಸ್ಸು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ಹಗಲುಗನಸು ನಮಗೆ ಬೇಕಾದ್ದನ್ನು ಕಾಣಬಹುದಲ್ಲವೇ? ಅದಕ್ಕೂ ಏಕೆ ಚಿಂತಸಬೇಕು. ನಾನಂತೂ ಒಬ್ಬನೇ ಇದ್ದಾಗ ಕನಸುಗಳಲ್ಲೇ ವಿಹರಿಸುತ್ತಿರುತ್ತೇನೆ. ನಿಮ್ಮ ಕವಿತೆಯ ಕಾರಣದಿಂದ ಬಹುಶಃ ಇನ್ನೂ ಹೆಚ್ಚು ಹೆಚ್ಚು ಕನಸು ಕಾಣುತ್ತೇನೆ ಅನ್ನಿಸುತ್ತೆ. ಧನ್ಯವಾದಗಳು.
ಅಂದ ಹಾಗೆ ಮತ್ತೆ ಲಿಬಿಯಾ ವಾಸ; ಏನನ್ನಿಸುತ್ತದೆ.
ನಿಜ.. ಕನಸುಗಾಣದ ವ್ಯಕ್ತಿಯ ಜೀವನ ಬಲು ಜೀವನ. ಯವುದೇ ಕನಸುಗಾಣದೇ ಬದುಕಬಹುದು. ಆದರೆ ಜೀವನವನ್ನು ಜೀವಿಸಲು ಕನಸು ಕಾಣಲೇ ಬೇಕು. ಆಗಲೇ ನನಸು ಮಾಡುವ ಗುರಿಯೊಂದಿಗೆ ಆಶಾವಾದಿಯಾಗಿ ಮುನ್ನಡೆಯಬಹುದು. ಅಲ್ಲವೇ? ಸುಂದರ ಕವನ.
ಉದಯ್ ಸರ್,
ತುಂಬಾ ಸೊಗಸಾಗಿದೆ, ಅನುವಾದಿತ ಎಂದೆನಿಸುವುದೇ ಇಲ್ಲ, ಶಬ್ದ ಜೋಡಣೆ ಅದ್ಭುತ.
ಅಭಿನಂದನೆಗಳು
ಉದಯ್ ಸರ್,
ಕವನ ಅನುವಾದಿತವಾದರೂ...ನನಗಂತೂ ತುಂಬಾ ಇಷ್ಟವಾಯಿತು...
ಕನಸುಗಳಿಲ್ಲದೇ ನಾನು ಬದುಕಲಾರೆ....ನಾನಂತೂ ಮುಂದಿನ ವರ್ಷ ವಿದೇಶಿ ಫೋಟೋಗ್ರಫಿ ಕನಸು ಕಾಣುತ್ತಿದ್ದೇನೆ...ಅದಕ್ಕೆ ನಿಮ್ಮ ಲೇಖನ ಸ್ಪೂರ್ತಿ..
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ