“A hypocrite is a person who--but who isn't?” ಹಾಗಂತ ಖ್ಯಾತ ಇಂಗ್ಲೀಷ್ ಲೇಖಕ ಡಾನ್ ಮಾರ್ಕ್ವಿಜ್ ಒಂದು ಕಡೆ ಹೇಳುತ್ತಾನೆ. ಈ ಮಾತು ಪ್ರತಿಯೊಬ್ಬ ಮನುಷ್ಯನ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅಂದರೆ ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಆಷಾಡಭೂತಿಗಳೇ! ಸದಾ ನಮ್ಮ ಅನುಕೂಲಕ್ಕೆ, ನಮ್ಮ ಸೌಕರ್ಯಕ್ಕೆ ತಕ್ಕಂತೆ ಒಳಗೊಂದು ಹೊರಗೊಂದರಂತೆ ಬದುಕುವವರು! ಹೀಗಿದ್ದೂ ನಾವು ಆಗಾಗ ಸಭ್ಯರಂತೆ, ಪ್ರಾಮಾಣಿಕರಂತೆ, ಯೋಗ್ಯರಂತೆ ಮುಖವಾಡ ಹಾಕಿಕೊಳ್ಳಲು ಪ್ರಯತ್ನಿಸುತ್ತೆವೆ. ಆದರೆ ಬೇರೆಯವರನ್ನು ಮಾತ್ರ hypocrite ಅಂತ ಕರೆಯುತ್ತಲೇ ಇರುತ್ತೇವೆ.
ಮೊನ್ನೆ ಏನಾಯಿತೆಂದರೆ ಸ್ನೇಹಿತನೊಬ್ಬ ನನ್ನ ಮನೆಗೆ ಬಂದಿದ್ದ. ಬರುವಾಗ ಆತ ಅರೆಬೆತ್ತಲೆ ಮಾಡೆಲ್‍ಗಳು ಇರುವ ಮಾಡೆಲಿಂಗ್ ಕ್ಯಾಲೆಂಡೆರೊಂದನ್ನು ನನಗೆ ತಂದುಕೊಟ್ಟ. ನಾವಿಬ್ಬರೂ ಕುಳಿತು ಬಿಕನಿ ತೊಟ್ಟ ಆ ಮಾಡೆಲ್‍ಗಳ ಫೋಟೋಗಳನ್ನೇ ಮತ್ತೆ ಮತ್ತೆ ನೋಡಿ ಖುಶಿಪಟ್ಟೆವು. ಅವರ ವಿವರಗಳನ್ನು ಕುರಿತು ಚರ್ಚಿಸಿದೆವು. ಅವರ ಜೊತೆ ವಿವಿಧ ಭಂಗಿಗಳಲ್ಲಿ ನಿಂತು ಪೋಸು ಕೊಟ್ಟ ಗಂಡು ಮಾಡೆಲ್‍ಗಳು ಕೂಡ ಇದ್ದರು. ಆಹಾ, ಎಂಥ ಅದೃಷ್ಟವಂತರು ಅವರು! ಎಂತೆಂಥ ಒಳ್ಳೊಳ್ಳೆ ಮಾಡೆಲ್‍ಗಳ ಜೊತೆ ನಿಂತೊ ಫೋಟೋ ತೆಗೆಸಿಕೊಳ್ಳುವ ಅವಕಾಶ ಲಭಿಸಿದೆ ಅವರಿಗೆಲ್ಲ! ಒಂದು ಕ್ಷಣ ಅವರ ಬಗ್ಗೆ ಈರ್ಷೆ ಕಾಡಿತು.
ಮರುಕ್ಷಣ ಅನಿಸಿತು ನಾವಿಬ್ಬರೂ ಟ್ರೆಡಿಷನಲ್ ಕುಟುಂಬದಿಂದ ಬಂದವರು. ಈ ವಿಷಯದಲ್ಲಿ ಕನ್ಸರ್ವೇಟಿವ್ ಆಗಿ ಥಿಂಕ್ ಮಾಡುವವರು. ಈ ವೃತ್ತಿಯ ಬಗ್ಗೆ ಕಸಿವಿಸಿ ಬೆಳೆಸಿಕೊಂಡವರು. ನಮ್ಮ ಮನೆಯ ಹೆಣ್ಣುಮಕ್ಕಳೇನಾದರು ಈ ಮಾಡೆಲಿಂಗ್ ವೃತ್ತಿಗೆ ಹೋಗುತ್ತೇನೆಂದರೆ ವಿರೋಧಿಸುವವರು. ಕಮ್ಮಿ ಬಟ್ಟೆ ತೊಟ್ಟು ಮೈ ಪ್ರದರ್ಶಿಸುವದು ಎಷ್ಟೊಂದು ಅಸಹ್ಯ? ಎಂದು ಮೂಗು ಮುರಿಯುವವರು. ಆದರೆ ನಾವೀಗ ಇಲ್ಲಿ ಮಾಡುತ್ತಿರುವದೇನು? ಆ ಮಾಡೆಲ್‍ಗಳ ಫೋಟೋ ನೋಡುತ್ತಾ ಅವರ ವಿಷಯವನ್ನು ಚರ್ಚಿಸುತ್ತಾ ಅದನ್ನು ಪರೋಕ್ಷವಾಗಿ ಪ್ರೋತ್ಶಾಹಿಸುತ್ತಿಲ್ಲವೆ? ಅಂದರೆ ಏನು? ಯಾರದೋ ಮನೆಯ ಹೆಣ್ಣುಮಕ್ಕಳು ಹೇಗಾದರು ಕಾಣಿಸಲಿ; ನಮಗೇನೂ ಅನಿಸುವದಿಲ್ಲ. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳು ಮಾತ್ರ ಹಾಗೆ ಅಗಬಾರದು. ಇದು ಹಿಪೊಕ್ರಸಿ ಅಲ್ಲದೆ ಮತ್ತೇನು?
ಡಾನ್ ಮಾರ್ಕ್ವಿಜ್ ಹೇಳಿದ್ದು ಸರಿ: A hypocrite is a person who-but who isn't?
ಬ್ರಾಹ್ಮೀ ಮತ್ತು ನಾಗರೀ ಲಿಪಿ ಕಲಿಯಿರಿ
2 ದಿನಗಳ ಹಿಂದೆ
0 ಕಾಮೆಂಟ್(ಗಳು):
ಕಾಮೆಂಟ್ ಪೋಸ್ಟ್ ಮಾಡಿ