ನಾವು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನಮಗಿನ್ನೂ ಇಲ್ಲಿ ಪ್ರಸಾರವಾಗುವ ಟೀವಿ ಚಾನಲ್‍ಗಳ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಹೀಗಿರುವಾಗ ನಾವು ಮನೆಯಿಂದ ಹೊರಗಡೆ ಹೋದಾಗಲೆಲ್ಲಾ ನಮಗೆ ಹೊಸದಾಗಿ ಸಿಗುವ ಯಾವುದೇ ಲಿಬಿಯನ್ ನಮ್ಮನ್ನು ನೋಡಿ “ಓ. ಹಿಂದ್ ಹಿಂದ್! (ಓ, ಇಂಡಿಯನ್!)” ಎಂದು ಉದ್ಗಾರ ತೆಗೆಯುತ್ತಾ ಹತ್ತಿರ ಬಂದು “ಕೆಫೆಹಲಾಲ್? (ಹೇಗಿದ್ದೀರಿ?) ಎಂದು ಉಭಯಕುಶಲೋಪಾರಿಯನ್ನು ವಿಚಾರಿಸುತ್ತಾ ನಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬೆನ್ನಹಿಂದೆಯೇ ನೇರವಾಗಿ ನಮ್ಮನ್ನು ಹಿಂದಿ ಸಿನಿಮಾಕ್ಕೆ ಸಂಬಂಧಪಟ್ಟಹಾಗೆ “ನಿಮಗೆ ಅಮಿತಾಬ್ ಬಚ್ಚನ್ ಗೊತ್ತೆ? ಶಾರುಖ್ ಖಾನ್ ನಿಮ್ಮ ಮನೆಯ ಪಕ್ಕದಲ್ಲಿಯೇ ಇರುವನೆ? ಐಶ್ಚರ್ಯಾ ರೈ ಅಮಿತಾಬ್ ಬಚ್ಚನ್ ಸೊಸೆಯಂತೆ, ಹೌದೆ? ಕತ್ರಿನಾ ಕೈಫ್ ಅದೆಷ್ಟು ಸುಂದರವಾಗಿದ್ದಾಳೆ? ಧರ್ಮೇಂದರ್ ಈಗಲೂ ನಟಿಸುತ್ತಾನೆಯೇ? ಹೇಮಾ ಮಾಲಿನಿ ಹೇಗಿದ್ದಾಳೆ? ಸಲ್ಮಾನ್ ಖಾನ್ ಯಾಕಿನ್ನೂ ಮದುವೆಯಾಗಿಲ್ಲ? ನಿಮ್ಮ ಬಳಿ ಹಿಂದಿ ಸಿನಿಮಾ ಹಾಡುಗಳಿದ್ದರೆ ನಮ್ಮ ಫ್ಲ್ಯಾಶ್ (ಪೆನ್ ಡ್ರೈವ್) ನಲ್ಲಿ ಹಾಕಿಕೊಡುತ್ತೀರಾ?” ಹೀಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮುಂತಾದವರೆಲ್ಲಾ ನಮ್ಮ ಮನೆಯ ಪಕ್ಕದಲ್ಲಿರುವರೇನೋ, ಅಥವಾ ಅವರೆಲ್ಲಾ ನಮ್ಮ ಸ್ನೇಹಿತರೋ, ನೆಂಟರೇನೋ ಎಂಬಂತೆ ಕೇಳುತ್ತಿದ್ದರೆ ನಾವೆಲ್ಲಾ ಆಶ್ಚರ್ಯ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದೆವು. ಮಾತ್ರವಲ್ಲ ಅವರಿಗೆ ರೇಖಾ ಗೊತ್ತು, ಜಿತೆಂದ್ರ್ ಗೊತ್ತು, ಕರೀನಾ ಕಪೂರ್ ಗೊತ್ತು, ಸೈಫ್‍ಅಲಿ ಖಾನ್ ಗೊತ್ತು, ಪ್ರಿಯಾಂಕಾ ಚೋಪ್ರಾ ಗೊತ್ತು...........ಹೀಗೆ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತದೆ.
ನನಗೋ ಭಾರೀ ಕುತೂಹಲ ನಮ್ಮ ಹಿಂದಿ ಸಿನಿಮಾ ನಟ ನಟಿಯರೆಲ್ಲಾ ಇವರಿಗೆ ಹೇಗೆ ಗೊತ್ತೆಂದು? ಈ ಹಿನ್ನೆಲೆಯಲ್ಲಿ ನಾನು ಕುತೂಹಲ ತಡೆಯಲಾರದೆ ಒಂದು ಸಾರಿ ಅವರನ್ನು ಕೇಳಿಯೇ ಬಿಟ್ಟೆ, “ನಿಮಗೆ ಇವರೆಲ್ಲಾ ಹೇಗೆ ಗೊತ್ತು? ಇವರೆಲ್ಲಾ ನಿಮಗೆ ತುಂಬಾ ವರ್ಷದಿಂದ ಪರಿಚಯವಿರೋ ತರ ಕೇಳುತ್ತೀರಲ್ಲ?“ ಅದಕ್ಕವರು “ಅವರೆಲ್ಲಾ ಇಲ್ಲಿ ಪ್ರಸಾರವಾಗುವ Zee Aflam, ಮತ್ತು B4U Aflam ಎನ್ನುವ ಹಿಂದಿ ಸಿನಿಮಾ ಚಾನಲ್‍ಗಳ ಮೂಲಕ ಪರಿಚಯ.” ಎಂದು ಹೇಳಿದ್ದರು. ಮುಂದುವರಿದು “ಹಿಂದ್ (ಇಂಡಿಯನ್) ಫಿಲ್ಮ್ಸ್ ಕೋಯಿಸ್ (ಚನ್ನಾಗಿದೆ), ಮಿಯ್ಯಾ ಮಿಯ್ಯಾ (ಅತ್ಯುತ್ತಮ)” ಎಂದು ಹೇಳುತ್ತಾ ಹಿಂದಿ ಸಿನಿಮಾಗಳನ್ನು ಬಾಯಿತುಂಬಾ ಹೊಗಳಿದ್ದರು. ಪರ್ವಾಗಿಲ್ಲ ನಮ್ಮ ಬಾಲಿವುಡ್ ನಟ-ನಟಿಯರು ಇಲ್ಲಿಯವರಿಗೂ ತಮ್ಮ ಜನಪ್ರೀಯತೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಖುಷಿಯಾಗಿತ್ತು. ನನಗಿಂತ ಮೊದಲೇ ಇಲ್ಲಿ ಸುಮಾರು ವರ್ಷಗಳಿಂದ ಇದ್ದ ಭಾರತೀಯರನ್ನು ನಾನು ಒಮ್ಮೆ ಹೀಗೆ ಕೇಳಿದ್ದೆ “ನೀವು ಇಲ್ಲಿಗೆ ಬಂದ ಹೊಸತರಲ್ಲಿ ಅವರು ನಿಮ್ಮನ್ನೂ ಇದೇ ರೀತಿ ಹಿಂದಿ ಸಿನಿಮಾಗಳ ಕುರಿತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ?” ಅವರು ಹೌದೆಂದು ತಲೆಯಲ್ಲಾಡಿಸುತ್ತಾ “ಇಲ್ಲಿಯವರಿಗೆ ಹಿಂದಿ ಸಿನಿಮಾಗಳೆಂದರೆ ಅದೇನೋ ಒಂಥರಾ ಹುಚ್ಚು” ಎಂದು ಹೇಳಿದ್ದರು. ಇವರಿಗೇಕೆ ಇಷ್ಟೊಂದು ಹಿಂದಿ ಸಿನಿಮಾಗಳ ಹುಚ್ಚು? ಇವರ (ಅರೇಬಿಕ್) ಭಾಷೆಯಲ್ಲಿ ಸಿನಿಮಾಗಳು ಬರುವದಿಲ್ಲವೆ? ಬಂದರೂ ಅವು ಅಷ್ಟೊಂದು ಚನ್ನಾಗಿರುವದಿಲ್ಲವೆ? ಯಾಕೆ? ಏನು? ಹೇಗೆ? ಅಂತೆಲ್ಲಾ ಬೆನ್ಹತ್ತಿ ಹೋದಾಗ ಗೊತ್ತಾಗಿದ್ದು ಈ ದೇಶದಲ್ಲಿ ಸಿನಿಮಾಗಳೇ ತಯಾರಾಗುವದಿಲ್ಲ ಎನ್ನುವ ಸಂಗತಿ. ಇಲ್ಲಿ ಮಾತ್ರವಲ್ಲ ಈಜಿಪ್ಟ್ ವೊಂದನ್ನು ಬಿಟ್ಟರೆ ಬಹಳಷ್ಟು ಅರೇಬಿಕ್ ದೇಶಗಳಲ್ಲಿ ಸಿನಿಮಾಗಳು ತಯಾರಾಗುವದಿಲ್ಲವೆಂದರೆ ನೀವು ನಂಬಲೇಬೇಕು. ತಯಾರಾದರೂ ಎರಡ್ಮೂರು ವರ್ಷಕ್ಕೊಮ್ಮೆ ಒಂದೋ ಅಥವಾ ಎರಡು ಸಿನಿಮಾಗಳು ತಯಾರಾಗುತ್ತವೆ. ಆದರೆ ಅವು ನಮ್ಮ ಹಿಂದಿ ಚಲನಚಿತ್ರಗಳಿಗೆ ಯಾವ ರೀತಿಯಲ್ಲೂ ಸಾಟಿಯಾಗುವದಿಲ್ಲ. ಹಾಗೆಂದೇ ನಮ್ಮ ಸಿನಿಮಾಗಳಿಗಿಲ್ಲಿ ಅಧಿಕ ಜನಪ್ರಿಯತೆಯಿದೆ.
ಹಾಗೆ ನೋಡಿದರೆ ಅರಬ್ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದ್ದೇ ತೀರಾ ಇತ್ತೀಚಿಗೆ. ಅದೂ ಅಲ್ಜಿರಿಯಾ, ಲೆಬನಾನ್, ಪ್ಯಾಲೆಸ್ತಿನಿಯಾ, ತುನಿಶಿಯಾ, ಹಾಗೂ ಸಿರಿಯಾಗಳಲ್ಲಿ ಮಾತ್ರ. ಅತಿ ಹೆಚ್ಚು ಅರಬ್ ಸಿನಿಮಾಗಳ ನಿರ್ಮಾಣದ ಕೀರ್ತಿ ಈಜಿಪ್ಟ್ ದೇಶಕ್ಕೆ ಸಲ್ಲುತ್ತದೆ. ಏಕೆಂದರೆ ಮುಕ್ಕಾಲು ಪಾಲು ಅರಬ್ ಸಿನಿಮಾಗಳು ತಯಾರಾಗುವದು ಈಜಿಪ್ಟ್ ದೇಶದ ರಾಜಧಾನಿ ಕೈರೋದಲ್ಲಿಯೇ. ಲಿಬಿಯಾ ಸೇರಿದಂತೆ ಬಹುತೇಕ ಅರೇಬಿಕ್ ದೆಶಗಳಲ್ಲಿ ಸಿನಿಮಾಗಳ ನಿರ್ಮಾಣ ಬಹುತೇಕ ಕಿರುಚಿತ್ರಗಳಿಗೆ ಮತ್ತು ಟೀವಿ ಚಿತ್ರಗಳಿಗೆ ಮಾತ್ರ ಸೀಮಿತವಾಗಿದೆ. ಜೋರ್ಡಾನ್, ಲೆಬನಾನ್, ಇರಾಕ್ ದೇಶಗಳು ಸಿನಿಮಾಗಳನ್ನು ನಿರ್ಮಿಸಿವೆಯಾದರೂ ಅವು ಕೇವಲ ಬೆರಳಣಿಕೆಯಷ್ಟಾಗಿವೆ. 19ನೇ ಶತಮಾನದಲ್ಲಿ ಅಂದರೆ ಸಿನಿಮಾ ಆಗಷ್ಟೆ ಆವಿಷ್ಕಾರಗೊಂಡ ಸಂದರ್ಭದಲ್ಲಿ ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಬ್ರಿಟಿಷ್ ಮತ್ತು ಫ್ರೆಂಚ್‍ರ ಅಧೀನಕ್ಕೆ ಒಳಪಟ್ಟಿದ್ದವು. ಸಿನಿಮಾ ಆವಿಷ್ಕಾರಗೊಂಡು ಎರಡು ದಶಕಗಳ ನಂತರ ಈ ಎರಡು ಬಲಾಢ್ಯ ದೇಶಗಳು ‘ಸೈಕ್ಸ್-ಪೈಕಾಟ್’ ಒಪ್ಪಂದದ ಮೂಲಕ ಅರಬ್ ರಾಷ್ಟ್ರಗಳನ್ನು ಎರಡು ಭಾಗ ಮಾಡಿಕೊಂಡು ಆಳತೊಡಗಿದವು. ಪರಿಣಾಮವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇನ್ನೂ ಸ್ವತಂತ್ರವಾಗಿರದ ಅರಬ್ ರಾಷ್ಟ್ರಗಳಿಗೆ ಸಿನಿಮಾಗಳ ತಯಾರಿಕೆಯಲ್ಲಿ ಅಡಚಣೆಯುಂಟಾಯಿತು. ಆದರೆ ಈಜಿಪ್ಟ್ ಮಾತ್ರ ಇದಕ್ಕೆ ಹೊರತಾಗಿತ್ತು. ಆ ಸಮಯದಲ್ಲಿಯೇ ಅರಬ್ ಮಾರುಕಟ್ಟೆ ಯೂರೋಪಿನ ವ್ಯಾಪಾರ ಸಗಟುಗಳಿಂದ ತುಂಬಿಹೋಗಿದ್ದರಿಂದ ಸಹಜವಾಗಿ ಯೂರೋಪಿಯನ್ನರು ಬಂಡವಾಳ ಹೂಡಿಕೆದಾರರಾದರು ಹಾಗೂ ಸ್ಥಳೀಯ ಉದ್ದಿಮೆದಾರರು ಹಿಂದೆ ಸರಿದರು. ಅರಬ್‍ರ ಮೇಲೆ ರಾಜಕೀಯ ದಬ್ಬಾಳಿಕೆ ನಡೆದುದಷ್ಟೇ ಅಲ್ಲದೆ ಸಾಂಸ್ಕೃತಿಕ ದಬ್ಬಾಳಿಕೆಯೂ ನಡೆಯಿತು. ಮೊದಲಿಗೆ ಇಲ್ಲಿನ ಸಿನಿಮಾ ಥೇಟರ್ ಗಳು ವಿದೇಶಿಯರ ಒಡೆತನದಲ್ಲಿದ್ದುದರಿಂದ ಅವರು ತಮ್ಮ ಭಾಷೆಯ ಚಿತ್ರಗಳನ್ನು ಮಾತ್ರ ತಯಾರಿಸಿದರು. ಆದರೆ ಅವು ಸ್ಥಳೀಯರನ್ನು ತಲುಪವಲ್ಲಿ ವಿಫಲವಾದ್ದರಿಂದ ಸಿನಿಮಾ ತಯಾರಿಕೆಯಿಂದ ಅವರಿಗೆ ಅಪಾರ ನಷ್ಟವುಂಟಾಯಿತು. ಆದರೆ ವಸಾಹತುಕಾಲದಲ್ಲಿ ತಕ್ಕಮಟ್ಟಿಗೆ ಸ್ವತಂತ್ರವಾಗಿದ್ದ ಈಜಿಪ್ಟ್ ನ್ಯಾಷನಲ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಹಂತದವರೆಗೂ ತಲುಪಿತು. 1909 ರಲ್ಲಿ ತಮ್ಮ ನಾಯಕನ ಅಂತ್ಯಕ್ರಿಯೆಯ ಮೆರವಣಿಗಿಯನ್ನು ಚಿತ್ರಿಕರಿಸುವದರ ಮೂಲಕ ಆರಂಭವಾದ ಅವರ ಸಿನಿಮಾ ನಿರ್ಮಾಣ 1934 ರಲ್ಲಿ ಈಜಿಪ್ಸಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ಸ್ಥಾಪಿಸುವ ಮಟ್ಟಕ್ಕೂ ಬೆಳೆಯಿತು. ಅಲ್ಲಿಂದಾಚೆ ಅನೇಕ ಅರೇಬಿಕ್ ಸಿನಿಮಾಗಳನ್ನು ತಯಾರಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
ಅಂದಹಾಗೆ ಇಲ್ಲಿಯವರಿಗೆ ನಮ್ಮ ಹಿಂದಿ ಸಿನಿಮಾಗಳ ಹುಚ್ಚು ಹಿಡಿಸಿದ ಎರದು ಚಾನಲ್‍ಗಳೆಂದರೆ ಒಂದು Zee Aflam, ಇನ್ನೊಂದು B4U Aflam. Zee Aflam ಎನ್ನುವದು ಇಂಡಿಯಾ-ಬೇಸ್ಡ್ ಚಾನಲ್ ಆಗಿದ್ದು Zee Entertainment Enterprises ಒಡೆತನದಲ್ಲಿ ದುಬೈನಲ್ಲಿ ಆರಂಭವಾದ ಚಾನಲ್. ಸೌದಿ ಅರೇಬಿಯಾವನ್ನು ಒಳಗೊಂಡಂತೆ ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಪಡೆದುಕೊಂಡ ಚಾನಲ್ ಇದು. ನೈಲ್ ಸ್ಯಾಟ್‍ನಿಂದ ದಿನದ ಇಪ್ಪತ್ನಾಲ್ಕು ಘಂಟೆ ಬರೀ ಹಿಂದಿ ಸಿನಿಮಾಗಳನ್ನು ಮಾತ್ರ ಪ್ರಸಾರ ಮಾಡುವ ಚಾನಲ್ ಇದು. ಇದು ಮೊದಮೊದಲು ಹಿಂದಿ ಸಿನಿಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಿತ್ತು. ಆದರೆ ಇದೀಗ ಬಹುತೇಕ ಹಿಂದಿ ಸಿನಿಮಾಗಳನ್ನು ಅರೇಬಿಕ್ ಭಾಷೆಗೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ. ಹೀಗಾಗಿ ಅವು ಇನ್ನೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರ ಜೊತೆಗೆ ಅದೇ ನೈಲ್ ಸ್ಯಾಟ್‍ನಲ್ಲಿ ಅರೇಬಿಕ್ ಸಬ್‍ಟೈಟಲ್‍ಗಳೊಂದಿಗೆ ಹಿಂದಿ ಸಿನಿಮಾಗಳನ್ನು ಪ್ರಸಾರ ಮಾಡುವ ಮತ್ತೊಂದು ಚಾನೆಲ್ ಎಂದರೆ B4U Aflam. ಇದರಲ್ಲೂ ದಿನದ ಇಪ್ಪತ್ನಾಲ್ಕು ಘಂಟೆ ಹಿಂದಿ ಸಿನೆಮಾಗಳನ್ನು ಅರೇಬಿಕ್ ಸಬ್‍ಟೈಟಲ್ಸ್ ಸಮೇತ ಪ್ರಸಾರ ಮಾಡುತ್ತಾರೆ.
ಇಲ್ಲಿನವರು ಅದೆಷ್ಟು ತಮ್ಮ ಸಿನಿಮಾಗಳನ್ನು ನೋಡುತ್ತಾರೋ ಗೊತ್ತಿಲ್ಲ! ಆದರೆ ಅದಕ್ಕಿಂತ ಹೆಚ್ಚಾಗಿ ಈ ಎರಡು ಚಾನಲ್‍ಗಳಲ್ಲಿ ಪ್ರಸಾರವಾಗುವ ಹಿಂದಿ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹಾಗೆಂದೇ ಇಲ್ಲಿನವರಿಗೆ ನಮ್ಮ ಹಿಂದಿ ಚಲನಚಿತ್ರಗಳ ನಟ-ನಟಿಯರೆಲ್ಲಾ ಗೊತ್ತು. ನಮ್ಮ ಅನೇಕ ಹಿಂದಿ ಚಿತ್ರಗೀತೆಗಳು ಗೊತ್ತು. ನನ್ನ ಬಹಳಷ್ಟು ವಿದ್ಯಾರ್ಥಿಗಳು ಹಿಂದಿ ಸಿನಿಮಾಗಳ ಹಾಡುಗಳನ್ನು ತಮ್ಮ ಮೊಬೈಲ್‍ನಲ್ಲಿ ಹಾಕಿಕೊಂಡು ಆಗಾಗ್ಗ ಕೇಳುತ್ತಿರುತ್ತಾರೆ. ಇನ್ನು ನನ್ನ ವಿದ್ಯಾರ್ಥಿನಿಯರಂತೂ ಐಶ್ಚರ್ಯ್ ರೈ ಫ್ಯಾನ್ ಮಾತ್ರವಲ್ಲ ಆಕೆ ಹಾಕಿಕೊಳ್ಳುವ ಬಳೆ, ಡ್ರೆಸ್‍ಗಳ ಫ್ಯಾನ್ ಕೂಡ ಆಗಿದ್ದಾರೆ. ಆಕೆ ಅಭಿನಯಿಸಿದ “ಹಮ್ ದಿಲ್ ದೇ ಚುಕೆ ಸನಮ್” ಚಿತ್ರದ “ಆಖೋ ಕಿ.......” ಹಾಡೆಂದರೆ ಅವರಿಗೆ ಪಂಚಪ್ರಾಣ. “ಆ ಹಾಡಿನಲ್ಲಿ ಅದೆಷ್ಟು ಚನ್ನಾಗಿ ಕಾಣುತ್ತಾಳೆ? ಆ ಹಾಡಿನಲ್ಲಿ ಆಕೆ ಹಾಕಿಕೊಂಡಿರುವ ಡ್ರೆಸ್ಸ್‍ಗೆ ನಿಮ್ಮಲ್ಲಿ ಏನನ್ನುತ್ತಾರೆ? ಅಂಥದೊಂದು ಡ್ರೆಸ್ ನಮಗೂ ಒಂದು ತಂದುಕೊಡುತ್ತೀರಾ? How beautiful she is! We wish we were like Aishwarya Rai.” ಎಂದು ಆಕೆಯ ಬಗೆಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಅಂದಮೇಲೆ ಅವರಿಗೆ ಹಿಂದಿ ಸಿನಿಮಾಗಳ ಹುಚ್ಚು ಅದೆಷ್ಟಿರಬಹುದೆನ್ನುವದನ್ನು ನೀವೇ ಲೆಕ್ಕ ಹಾಕಿ! ನಾನು ಒಮ್ಮೆ ಅವರನ್ನು “ನಿಮಗೇಕೆ ಹಿಂದಿ ಸಿನಿಮಾಗಳೆಂದರೆ ಅಷ್ಟು ಇಷ್ಟ? ಅದರಲ್ಲಿ ಯಾವ ಅಂಶವನ್ನು ಇಷ್ಟಪಡುತ್ತೀರಿ?” ಎಂದು ಕೇಳಿದ್ದೆ. ಮುಖ್ಯವಾಗಿ ಹಾಡುಗಳು, ಡ್ಯಾನ್ಸ್, ಸೆಟ್ಟಿಂಗ್ಸ್, ಕಥೆ, ಮತ್ತು ಅವುಗಳಲ್ಲಿ ನವಿರು ನವಿರಾಗಿ ನಿರೂಪಿತವಾಗುವ ಪ್ರೀತಿ ಎಂದು ಮೈ ಕುಣಿಸುತ್ತಾ ಹುಬ್ಬು ಹಾರಿಸುತ್ತಾ ಹೇಳಿದ್ದರು. ಅಷ್ಟೇ ಅಲ್ಲ ನಮ್ಮ ಎಷ್ಟೋ ಹಿಂದಿ ಸಿನಿಮಾಗಳ ಲವ್ ಸೀನ್‍ಗಳು ಅವರ ಪ್ರೀತಿಗೂ ಪ್ರೇರಣೆಯಾಗಿವೆ ಎಂದು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.
ಇದರಿಂದಲೇ ಗೊತ್ತಾಗುತ್ತದಲ್ಲವೇ ಅವರಿಗೆ ನಮ್ಮ ಹಿಂದಿ ಸಿನಿಮಾಗಳೆಂದರೆ ಅದೆಷ್ಟು ಹುಚ್ಚು ಅಂತಾ? ಎತ್ತಣ ಹಿಂದಿ ಸಿನಿಮಾಗಳು, ಎತ್ತಣ ಲಿಬಿಯನ್‍ರು? ಎತ್ತಣದಿಂದೆತ್ತ ಸಂಬಂಧವಯ್ಯಾ?
-ಉದಯ್ ಇಟಗಿ

ವಿವಿಧ ಅರೇಬಿಕ್ ದೇಶಗಳಿಂದ ಪ್ರಸಾರವಾಗುವ ಅರೇಬಿಕ್ ಟೀವಿ ಚಾನಲ್‍ಗಳು ಹೆಚ್ಚಾಗಿ ಕೈರೋದಲ್ಲಿ ತಯಾರಾಗುವ ಸಿನಿಮಾಗಳನ್ನೇ ಪ್ರಸಾರ ಮಾಡುತ್ತವೆ. ಅದು ಬಿಟ್ಟರೆ ಅರೇಬಿಕ್ ಮೆಗಾ ಧಾರಾವಾಹಿಗಳನ್ನು ಹಾಗೂ ಡಾಕುಮೆಂಟರಿಗಳನ್ನು ಪ್ರಸಾರಮಾಡುತ್ತವೆ. ಹೀಗಾಗಿ Zee Aflam ಮತ್ತು B4U Aflam ಎನ್ನುವ ಎರಡು ಚಾನಲ್‍ಗಳು ಇಲ್ಲಿಯವರಿಗೆ ಹುಚ್ಚು ಹಿಡಿಸಿವೆ. ನಾನು ಮೊದಮೊದಲು ಲಿಬಿಯನ್‍ರಿಗೆ ಮಾತ್ರ ನಮ್ಮ ಹಿಂದಿ ಚಿತ್ರಗಳ ಬಗ್ಗೆ ಕ್ರೇಜ್ ಇರಬಹುದೆಂದುಕೊಂಡಿದ್ದೆ. ಆದರೆ ಯಾವಾಗ ನನ್ನ ಜೋರ್ಡಾನಿ, ಸಿರಿಯನ್, ಸುಡಾನಿ ಸಹೋದ್ಯೋಗಿಗಳು ಸಹ ಹಿಂದಿ ಫಿಲ್ಮ್ಸ್ ಬಗ್ಗೆ ಮಾತನಾಡತೊಡಗಿದರೋ ಆಗ ನನಗೆ ಗೊತ್ತಾಯಿತು ಈ ಅರಬ್‍ರಿಗೆ ನಮ್ಮ ಚಿತ್ರಗಳೆಂದರೆ ತುಂಬಾ ಇಷ್ಟ ಎಂದು. ಆದರೆ ನಾ ಕಂಡಂತೆ ಈಜಿಪ್ಸಿಯನ್ನರು ಮಾತ್ರ ಅಷ್ಟಾಗಿ ನಮ್ಮ ಹಿಂದಿ ಚಿತ್ರಗಳತ್ತ ಒಲವು ಬೆಳೆಸಿಕೊಂಡಿಲ್ಲ. ಬಹುಶಃ, ನಮ್ಮಲ್ಲಿ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿ ಇದ್ದಂತೆ ಅವರಲ್ಲೂ ಸಹ ಅವರದೇ ಆದ ಅರೇಬಿಕ್ ಫಿಲ್ಮ್ ಇಂಡಸ್ಟ್ರಿ ಇರುವದೇ ಅದಕ್ಕೆ ಕಾರಣವಿರಬಹುದು.